ನಿಷ್ಪ್ರಯೋಜಕ ಜೀವನ

ತುಂಬ ವಯಸ್ಸಾದ ಒಬ್ಬ ರೈತ ತನ್ನ ತೋಟ , ಗೆದ್ದೆಗಳಲ್ಲಿ ಕೆಲಸ ಮಾಡಲಾರದಷ್ಟು ನಿಶ್ಯಕ್ತಿಯಾದನು. ಹಾಗಾಗಿ ಅವನು ತನ್ನ ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ದಿನವನ್ನು ಕಳೆಯುತ್ತಿದ್ದನು.
ಅವರ ಮಗ, ಇನ್ನೂ ತೋಟ , ಗೆದ್ದೆಗಳಲ್ಲಿ ಕೆಲಸ ಮಾಡುತ್ತಿದ್ದನು, ಕಾಲಕಾಲಕ್ಕೆ ತನ್ನ ತಂದೆ ಅಲ್ಲಿ ಕುಳಿತುದ್ದುದ್ದುನ್ನು ನೋಡಿ ” ತನ್ನ ತಂದೆಯು ಏನನ್ನೂ ಮಾಡುವುದಿಲ್ಲ!, ಅವನು ಯಾವುದೇ ಉಪಯೋಗವಿಲ್ಲ” ಎಂದು ಮಗನು ತಾನೇ ಯೋಚಿಸಿದನು.
ಈ ರೀತಿ ನಿರಾಶೆಗೊಂಡ ಮಗನು ಒಂದು ದಿನ ಮರದ ಶವಪೆಟ್ಟಿಗೆಯನ್ನು ನಿರ್ಮಿಸಿದನು ಮತ್ತು ಅದನ್ನು ಮನೆಯ ಮುಖಮಂಟಪಕ್ಕೆ ಎಳೆದು ತಂದನು ಮತ್ತು ತಂದೆಗೆ ಅದರ ಒಳಗೆ ಮಲಗಲು ಹೇಳಿದನು.
ತಂದೆ ಮರು ಮಾತಾಡದೆ ಅದರ ಒಳಗೆ ಹತ್ತಿದರು. ಮಗನು ಅದರ ಮುಚ್ಚಳವನ್ನು ಮುಚ್ಚಿದ ನಂತರ ಶವಪೆಟ್ಟಿಗೆಯನ್ನು ಎತ್ತರದ ಬಂಡೆಯೊಂದನ್ನು ಹೊಂದಿದ್ದ ತೋಟದ ಅಂಚಿಗೆ ಎಳೆದು ತಂದನು.
ಮಗನು ಬಂಡೆಯ ತುದಿಯನ್ನು ಸಮೀಪಿಸಿದಾಗ, ಶವಪೆಟ್ಟಿಗೆಯ ಒಳಗಿನಿಂದ ಸಣ್ಣದಾಗಿ
ಮುಚ್ಚಳವನ್ನು ತಟ್ಟಿದ ಶಬ್ದವಾಯಿತು. ಮಗನು ಶವಪೆಟ್ಟಿಗೆಯ ಮುಚ್ಚಳವನ್ನು ತೆಗೆದು ನೋಡಿದನು.
ತಂದೆ ಇನ್ನೂ ಶಾಂತಿಯುತವಾಗಿ ಇದ್ದರು ಮತ್ತು ತನ್ನ ಮಗನ ಕಡೆಗೆ ನೋಡುತ್ತ ಹೇಳಿದರು . “ನೀನು ಬಂಡೆಯ ಮೇಲಿಂದ ನನ್ನನ್ನು ಎಸೆಯಲು ಹೋಗುತ್ತಿದ್ದಿಯ ಎಂದು ನನಗೆ ಗೊತ್ತು, ಆದರೆ ನೀನು ಅದನ್ನು ಮಾಡುವ ಮೊದಲು, ನಾನು ನಿನಗೆ ಏನನ್ನಾದರೂ ಸೂಚಿಸಬಹುದೇ?” ಎಂದು ಮಗನಿಗೆ ಪ್ರಶ್ನಿಸಿದರು. “ಅದು ಏನು?” ಎಂದು ಮಗ ಕೇಳಿದನು.
“ನೀನು ಬಯಸಿದರೆ ಬಂಡೆಯ ಮೇಲಿಂದ ನನ್ನನ್ನು ಎಸೆಯಿರಿ, ಆದರೆ ಈ ಉತ್ತಮ ಮರದ ಶವಪೆಟ್ಟಿಗೆಯನ್ನು ಉಳಿಸಿ. ನಿಮ್ಮ ಮಕ್ಕಳು ಇದನ್ನು ಬಳಸಬೇಕಾಗಬಹುದು ಮುಂದೆ ನಿಮಗೆ ಉಪಯೋಗಕ್ಕೆ ಬರಬಹುದು.” ಎಂದು ತಂದೆ ಹೇಳಿದರು.

Leave a Reply

Your email address will not be published. Required fields are marked *

Translate »