ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಚುನಾವಣಾ ಅಭ್ಯರ್ಥಿಗಳ Nomination ಫೈಲ್ ವಿಧಾನ – ಪ್ರಜಾಕೀಯ

Filing of Election Nomination Form

ಚುನಾವಣಾ ಅಭ್ಯರ್ಥಿಗಳು ತಮ್ಮ Nomination ಫೈಲ್ ಮಾಡುವಾಗ, ಅಭ್ಯರ್ಥಿಯು, ಈ ಫೋಟೋದಲ್ಲಿ ತಿಳಿಸಿದ ಎಲ್ಲಾ ಕಾಗದ ಪತ್ರಗಳನ್ನು ತಯಾರು ಮಾಡಿಕೊಂಡು, ಇಂತಹದೇ ಒಂದು ಚೆಕ್ ಲೀಸ್ಟ್ ತಯಾರಿಸಿ, ಅದನ್ನು ಎಲ್ಲಾ ಕಾಗದ ಪತ್ರದೊಂದಿಗೆ ಲಗತ್ತಿಕರಿಸಿದರೆ, ರಿಟರ್ನಿಂಗ್ ಅಧಿಕಾರಿಗೆ ನಿಮ್ಮ ಕಾಗದ ಪತ್ರವನ್ನು ಕೇವಲ 15 ನಿಮಿಷದಲ್ಲಿ ವೆರಿಫೈ ಮಾಡುವಂತಾಗುವುದು ಹಾಗು ನಿಮಗೂ ಎಲ್ಲಾ ರೀತಿಯ ಖಾತಿರಿ ಇರುವುದು.

ಇದರಲ್ಲಿ ಯಾವುದೇ ರೀತಿಯ ಕಷ್ಟಕರ ಕಾಗದ ಪತ್ರ ಇರುವುದಿಲ್ಲ. ನಿಮ್ಮ ಆಸ್ತಿ -ಹಣದ ವಿಷಯ, ಎಲ್ಲವನ್ನೂ ಇದ್ದದ್ದು ಇದ್ದ ಹಾಗೆ ಫಾರ್ಮ್ ನಂ. 26 ರಲ್ಲಿ ಬರೆದರೆ, ಯಾವ ತೊಂದರೆಯೂ ಇರುವುದಿಲ್ಲ. ಎಲ್ಲಾ ಎಫಿಡೆಬಿಟ್ ಹಾಗು ಎಟೆಸ್ಟೇಷನ್ ನೋಟರಿಯವರಿಂದ ಮಾಡಿಸಿ ಕೊಳ್ಳಿ. ಅದಕ್ಕೆ ಸುಮಾರು 200 ರಿಂದ 500 ರುಪಾಯಿ ಅವರಿಗೆ ಕೊಡಬೇಕಾಗುವುದು.

ನೀವು ರಿಟರ್ನಿಂಗ್ ಆಫೀಸರ್ಗೆ ಕೊಡುವ ಪಾಸ್ ಬುಕ್ ಕೋಪಿಯ ಖಾತೆಯಲ್ಲಿ, ಕೇವಲ ನೀವು ನೋಮಿನೇಷನ್ ಫೈಲ್ ಮಾಡಿದ ದಿನದಿಂದ ಚುಣಾವಣಾ ದಿನದ ತನಕದ ಖರ್ಚು ಮಾಡಲು ಬೇಕಾದಷ್ಟು ಹಣದ ವ್ಯವಹಾರ ತೋರಿಸಿದರೆ ಉತ್ತಮ. ಮುಂದೆ ನೀವು, ನಿಮ್ಮ ಚುನಾವಣಾ ವೆಚ್ಚವನ್ನು ರಿಟರ್ನಿಂಗ್ ಅಧಿಕಾರಿಗೆ ಕೊಡುವಾಗ, ಅವರು ನಿಮ್ಮ ಬ್ಯಾಂಕ್ ಪಾಸ್ ಬುಕ್ ಕೇಳುವರು. ಆವಾಗ, ಅವರಿಗೆ ವೆರಿಫೈ ಮಾಡಲು ಸುಲಭವಾಗುವುದು.

ಇದರಲ್ಲಿ ಮೊದಲ 5 ಫಾರ್ಮ್ ಪಕ್ಷದ ಕಡೆಯಿಂದ ಸಿಗುವುದು. ಉಳಿದ ಎಲ್ಲಾ ಫಾರ್ಮ್ ಗಳು ನಮ್ಮ ವೈಕ್ತಿಕ ಹಾಗು ನಮ್ಮ ಪರವಾಗಿ ನಮ್ಮನ್ನು ಚುನಾವಣಾ ಸಮಯದಲ್ಲಿ ಪ್ರತಿನಿಧಿಸುವ ” Election Agent” ರ ವಿವರಗಳಿರುತ್ತದೆ.

Election Agent, ನಿಮ್ಮ ಸಂಬಂದಿಕರೂ( ಅಣ್ಣ, ಅಕ್ಕ, ತಮ್ಮ , ತಂಗಿ, ಭಾವ, ಮೈದುನ, ತಂದೆ, ತಾಯಿ, ಮಿತ್ರ, ದೂರದ ಸಂಬಂದಿ, ಯಾರು ಕೂಡಾ ) ಆಗಬಹುದು. ನಿಮ್ಮ ಭರವಸೆಯ ಜನ ಆಗಿರಬೇಕು. ನೀವು ಸಂಪರ್ಕಕ್ಕೆ ಸಿಗದಾಗ, ಚುನಾವಣಾ ಸಮಿತಿಯು, ಅವರನ್ನು ಸಂಪರ್ಕಿಸುವುದು.

ಇದೊಂದು ಸಾಮಾನ್ಯ ಪ್ರಕ್ರಿಯೆ ಹಾಗು ಯಾರು ಕೂಡಾ ಇದನ್ನು, ಯಾವುದೇ ಅಡಚಣೆ ಇಲ್ಲದೆ ನೋಮಿನೇಷನ್ ಫೈಲ್ ಮಾಡಬಹುದು.

ಎಲ್ಲರಿಗೂ ಶುಭವಾಗಲಿ.

ಜೈ ಪ್ರಜಾಕೀಯ
ಜೈ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)

Leave a Reply

Your email address will not be published. Required fields are marked *

Translate »