ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಾಮಿಕ ಏಕಾದಶಿ

‌ ‌ ‌
ಕಾಮಿಕ ಏಕಾದಶಿ : ಈ ಏಕಾದಶಿಯ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ಮಂತ್ರ..!

ಕಾಮಿಕ ಏಕಾದಶಿ ವ್ರತವು ಆಷಾಢ ಮಾಸದ ಕೊನೆಯ ಏಕಾದಶಿ ವ್ರತವಾಗಿರುತ್ತದೆ. ಯಾಕೆಂದರೆ ಈ ಏಕಾದಶಿ ವ್ರತದ ನಂತರ ಆಷಾಢ ಮಾಸ ಮುಕ್ತಾಯಗೊಂಡು ಶ್ರಾವಣ ಮಾಸ ಆರಂಭವಾಗುತ್ತದೆ. ಕಾಮಿಕ ಏಕಾದಶಿ ವ್ರತವನ್ನು ಆಚರಿಸುವುದರಿಂದ ಓರ್ವ ವ್ಯಕ್ತಿಯ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಈ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ.

  ಬಲರಾಮ ಜಯಂತಿ ಹಿನ್ನೆಲೆ ಪೂಜೆ ಮುಹೂರ್ತ

ಕಾಮಿಕ ಏಕಾದಶಿಯ ಮಹತ್ವ:
ಈ ಏಕಾದಶಿಯಂದು ಉಪವಾಸ ಮಾಡುವುದರಿಂದ ಅರ್ಧಕ್ಕೆ ಸ್ಥಗಿತಗೊಂಡ ಕೆಲಸಗಳು ಅಥವಾ ಅಪೂರ್ಣಗೊಂಡ ಕೆಲಸಗಳು ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಶ್ರೀ ಹರಿವಿಷ್ಣುವಿನ ಉಪವಾಸ ಮಾಡುವವನ ಪೂರ್ವಜರ ಸಂಕಷ್ಟಗಳನ್ನೂ ದೂರ ಮಾಡುತ್ತಾನೆ. ತೀರ್ಥಸ್ನಾನದ ಫಲ ಹಾಗೂ ಅಶ್ವಮೇಧ ಯಾಗದ ಫಲವು ಈ ಏಕಾದಶಿ ಆಚರಣೆಯಿಂದ ದೊರೆಯುತ್ತದೆ. ಶ್ರೀಹರಿಯನ್ನು ತುಳಸಿಯಿಂದ ಪೂಜಿಸಿ ಕಥೆಯನ್ನು ಕೇಳಿದರೆ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ.

.

ಕಾಮಿಕಾ ಏಕಾದಶಿಯ ಮಂತ್ರ:

  1. ಓಂ ನಮೋ ಭಗವತೇ ವಾಸುದೇವಾಯ
  2. ಓಂ ವಿಷ್ಣವೇ ನಮಃ
  3. ಓಂ ನಮೋ ನಾರಾಯಣ
    ಶ್ರೀ ಮನ್ನಾರಾಯಣ ನಾರಾಯಣ ಹರಿ ಹರಿ
  • ಓಂ ವಾಸುದೇವಾಯ ನಮಃ
  • ಓಂ ಸಂಕರ್ಷಣಾಯ ನಮಃ
  • ಓಂ ಪ್ರದ್ಯುಮ್ನಾಯ ನಮಃ
  • ಓಂ ಅಃ ಅನಿರುದ್ಧಾಯ ನಮಃ
  • ಓಂ ನಾರಾಯಣಾಯ ನಮಃ
  • ಓಂ ಹ್ರೀಂ ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹು ಸಹಸ್ರವಾನ್‌|
    ಯಸ್ಯ ಸ್ಮರಣ ಮಾತ್ರೇಣ ಹ್ರತಂ ನಷ್ಟಂ ಚ ಲಭ್ಯತೇ|
  ಗಜಾನನ ಸಂಕಷ್ಟ ಚತುರ್ಥಿ ಮುಹೂರ್ತ, ಪೂಜೆ ವಿಧಾನ, ಮಹತ್ವ ಹಾಗೂ ಅಷ್ಟೋತ್ತರ ಶತನಾಮಾವಳಿ

ಕಾಮಿಕ ಏಕಾದಶಿ ವ್ರತದ ದಿನಂದು ಭಗವಾನ್‌ ವಿಷ್ಣುವನ್ನು ಆರಾಧಿಸುವುದರಿಂದ, ಉಪವಾಸ ವ್ರತವನ್ನು ಆಚರಿಸುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಕಾಮಿಕ ಏಕಾದಶಿ ವ್ರತವು ಆಷಾಢ ಮಾಸದ ಮುಕ್ತಾಯವನ್ನು ಸೂಚಿಸುತ್ತದೆ.

Leave a Reply

Your email address will not be published. Required fields are marked *

Translate »