ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಾಘ ಮಾಸ ಪ್ರಾರಂಭ


ಮಾಘ ಮಾಸದಲ್ಲಿ ಪವಿತ್ರ ಸ್ನಾನ, ಯಥಾಶಕ್ತಿ ದಾನವನ್ನು ಮಾಡಲು ಮರೆಯಬೇಡಿ

ಮಾಘ ಮಾಸ. ಅಂದರೆ ಹಿಂದೂ ಪಂಚಾಂಗದ ಪ್ರಕಾರ ಹನ್ನೊಂದನೆಯ ತಿಂಗಳು. ಪುಷ್ಯ ಮಾಸದ ಬಳಿಕ ಬರುವ ತಿಂಗಳಿದು. ಇಂದಿನಿಂದ ಅಂದರೆ ಜನವರಿ 22ರಿಂದ ಮಾಘ ಮಾಸ ಪ್ರಾರಂಭವಾಗಿದೆ. ಹಿಂದೂ ಧರ್ಮದಲ್ಲಿ ಮಾಘ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಪವಿತ್ರ ಸ್ನಾನ, ಯಥಾಶಕ್ತಿ ದಾನ ಧರ್ಮಾದಿ ಕಾರ್ಯಗಳಿಗೆ ಬಲು ಮಹತ್ವ. ನಿರ್ಮಲ ಮನಸ್ಸಿನಿಂದ ದಾನ ಧರ್ಮಾದಿ ಕಾರ್ಯಗಳನ್ನು ಮಾಡಿದರೆ ಮಂಗಳಕರ ಫಲಿತಾಂಶ ಲಭಿಸುತ್ತದೆ ಎಂಬುದು ಆಸ್ತಿಕರ ನಂಬಿಕೆ.

ಮಾಘ ಮಾಸದ ಆರಂಭ

ಹಿಂದೂ ಧರ್ಮದ ಪಂಚಾಂಗದಲ್ಲಿ ಬರುವ ಪ್ರತಿಯೊಂದು ಮಾಸಗಳಿಗೂ ಅದರದ್ದೇ ಆದ ಮಹತ್ವವಿದೆ. ಪ್ರತಿಯೊಂದು ಮಾಸಗಳೂ ಅದರದ್ದೇ ಆದ ಧಾರ್ಮಿಕ ಪ್ರಾಮುಖ್ಯತೆಯನ್ನೂ ಹೊಂದಿರುತ್ತವೆ. ಅಂತೆಯೇ, ಈಗ ಪುಷ್ಯ ಮಾಸ ಮುಗಿದು ಮಾಘ ಮಾಸದ ಆರಂಭವಾಗುತ್ತಿದೆ. ಜನವರಿ 22ರಿಂದ ಮಾಘ ಮಾಸ ಆರಂಭವಾಗಲಿದೆ. ಫೆಬ್ರವರಿ 20ಕ್ಕೆ ಮಾಘ ಮಾಸ ಮುಗಿಯುತ್ತದೆ. ಉತ್ತರ ಭಾರತದ ಪಂಚಾಂಗಕ್ಕೂ, ದಕ್ಷಿಣ ಭಾರತದ ಪಂಚಾಂಗಕ್ಕೂ ಕೊಂಚ ವ್ಯತ್ಯಾಸ ಇದೆ. ಯಾಕೆಂದರೆ, ಉತ್ತರ ಭಾರತದಲ್ಲಿ ಈಗಾಗಲೇ ಮಾಘ ಮಾಸ ಆರಂಭವಾಗಿದೆ. ಹಿಂದೂ ಧರ್ಮದಲ್ಲಿ ಮಾಘ ಮಾಸವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಸಾಕಷ್ಟು ಧಾರ್ಮಿಕ ಆಚರಣೆಗಳನ್ನೂ ನಡೆಸಲಾಗುತ್ತದೆ. ಅದೂ ಅಲ್ಲದೆ, ಪವಿತ್ರ ನದಿ ಸ್ನಾನ, ಶಕ್ತಿಯಾನುಸಾರ ದಾನ ಧರ್ಮಾದಿ ಕಾರ್ಯಗಳಿಗೆ ಈ ಮಾಸದಲ್ಲಿಯೂ ಬಲು ಮಹತ್ವವಿದೆ.

  ಪ್ರಜಾಕೀಯ - ಸಮಗ್ರ ಗ್ರಾಮ ಪಂಚಾಯಿತಿ

ಧಾರ್ಮಿಕ ಮಹತ್ವ

ಮಾಘ ಮಾಸದಲ್ಲಿ ಗಂಗಾ ಸ್ನಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಹೀಗಾಗಿ, ಪ್ರಯಾಗ, ಹರಿದ್ವಾರ, ವಾರಣಾಸಿ, ನಾಸಿಕ್ ಮತ್ತು ಉಜ್ಜಯಿನಿಯಂತಹ ಪವಿತ್ರ ಸ್ಥಳಗಳಲ್ಲಿ ಜನ ಪವಿತ್ರ ಸ್ನಾನ ಮಾಡಿ ದೇವರನ್ನು ಪೂಜಿಸುತ್ತಾರೆ. ಅದೂ ಅಲ್ಲದೆ, ಗಂಗಾ ಸ್ನಾನದ ನಂತರ ಸೂರ್ಯ ದೇವರನ್ನು ಆರಾಧಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಬ್ರಹ್ಮ, ವಿಷ್ಣು, ಮಹೇಶ್ವರ, ಆದಿತ್ಯ ಮತ್ತು ಇತರ ಎಲ್ಲಾ ದೇವಾನು ದೇವತೆಗಳು ಮಾಘ ಮಾಸದಲ್ಲಿ ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ಇದೇ ಕಾರಣದಿಂದ ಪವಿತ್ರ ಸ್ನಾನಕ್ಕೆ ಬಲು ಮಹತ್ವ ಇರುವುದು. ಮಾಘ ಮಾಸದಲ್ಲಿ ಮೂರು ಬಾರಿ ಗಂಗೆಯಲ್ಲಿ ಸ್ನಾನ ಮಾಡಿದರೆ ಹತ್ತು ಸಾವಿರ ಅಶ್ವಮೇಧ ಯಾಗ ಮಾಡಿದ ಫಲ ಸಿಗುತ್ತದೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ಒಂದೊಮ್ಮೆ ಮಾಘ ಮಾಸದಲ್ಲಿ ಭಕ್ತರಿಗೆ ಯಾವುದೇ ಪುಣ್ಯ ನದಿಗಳಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಮುಂಜಾನೆ ಎದ್ದು ಗಂಗಾಜಲ ಮಿಶ್ರಿತ ನೀರಿನಿಂದ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಮಾಘ ಮಾಸದಲ್ಲಿ ಪುಣ್ಯನದಿಗಳಲ್ಲಿ ಸ್ನಾನ ಮಾಡುವವರಿಗೆ ವಿಶೇಷವಾದ ಶಕ್ತಿಯು ಲಭಿಸುತ್ತದೆ. ಇದು ಭಕ್ತರ ದೇವನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ತುಂಬುತ್ತದೆ ಎಂಬುದು ನಂಬಿಕೆ.

ಭಗವಾನ್ ವಿಷ್ಣುವಿಗೆ ಪ್ರಿಯವಾದ ಮಾಸ

ಮಾಘ ಮಾಸದ ವಿಷ್ಣುವಿನ ಆರಾಧನೆಗೆ ಮಂಗಳಕರವಾದ ತಿಂಗಳು ಎಂದು ಪರಿಗಣಿಸಲಾಗಿದೆ. ಶ್ರೀಕೃಷ್ಣನ ಆರಾಧನೆಯಿಂದ ವಿಶೇಷ ಫಲಗಳು ಲಭಿಸುತ್ತವೆ ಎಂಬುದು ನಂಬಿಕೆ. ಅದೂ ಅಲ್ಲದೇ, ಮಾಘ ಮಾಸದಲ್ಲಿ ಗಂಗೆಯಲ್ಲಿ ಸ್ನಾನ ಮಾಡುವವರಿಗೆ ವಿಷ್ಣುವಿನ ಆಶೀರ್ವಾದ ಲಭಿಸುತ್ತದೆ. ಇವರ ಬದುಕಿನ ಎಲ್ಲಾ ಕಷ್ಟಗಳು ದೂರವಾಗಿ, ಅದೃಷ್ಟ, ಸಮೃದ್ಧಿ ಮನೆ ಮಾಡುತ್ತವೆ ಎಂಬುದು ಭಕ್ತರ ಶ್ರದ್ಧೆ ಮತ್ತು ಭಕ್ತಿಯ ನಂಬಿಕೆ. ಜತೆಗೆ, ಇವರಿಗೆ ಮೋಕ್ಷವೂ ಒದಗಿ ಬರುತ್ತದೆ ಎಂಬ ನಂಬಿಕೆ ಕೂಡಾ ಇದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಮಾಘ ಮಾಸದಲ್ಲಿ ನದಿ ಸ್ನಾನ ಮಾಡುವುದರಿಂದ ಮನುಷ್ಯರ ಪಾಪ, ದುಃಖಗಳು ದೂರವಾಗುತ್ತವೆ.

  ತೆನಾಲಿ ರಾಮ ಹಿಂದೂ ಬ್ರಾಹ್ಮಣ ನಂಬಿಕೆಯ ಕಥೆ

ಮಾಘ ಮಾಸದ ನಿಯಮಗಳು

ಮಾಘ ಮಾಸದಲ್ಲಿ ಸೂರ್ಯನ ಆರಾಧನೆಗೂ ಮಹತ್ವವಿದೆ. ಈ ಮಾಸದಲ್ಲಿ ‌ ದಾನ ಧರ್ಮಾದಿ ಕಾರ್ಯಗಳನ್ನು ಮಾಡಿದವರು ದೇವಾನು ದೇವತೆಗಳ ಆಶೀರ್ವಾದ ಪಡೆಯುತ್ತಾರೆ ಎಂಬುದು ನಂಬಿಕೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಮಾಸದಲ್ಲಿ ಎಲ್ಲರೂ ಬಲು ಕಟ್ಟುನಿಟ್ಟಿನ ಆಚರಣೆಗಳನ್ನು ಪಾಲಿಸುವುದು ಬಹಳ ಮುಖ್ಯ. ಮಾಘ ಮಾಸದಲ್ಲಿ ಸತ್ಯ, ದಯೆ, ಯಥಾಶಕ್ತಿ ದಾನ, ಸ್ವನಿಯಂತ್ರಣ ಮತ್ತು ಬ್ರಹ್ಮಚರ್ಯವನ್ನು ಅನುಸರಿಸಬೇಕು ಎಂಬುದು ನಿಯಮ. ಜೊತೆಗೆ ವ್ಯಸನಗಳನ್ನೂ ಬಿಡಬೇಕು. ಇದರೊಂದಿಗೆ, ತಾಳ್ಮೆ, ಕ್ಷಮೆ, ಸ್ವಾರ್ಥವನ್ನು ತ್ಯಜಿಸುವುದು, ಕೆಟ್ಟ ಕೆಲಸಗಳನ್ನು ಮಾಡದಿರುವುದು, ದೈಹಿಕ ಶುದ್ಧತೆ, ಇಂದ್ರಿಯಗಳ ನಿಯಂತ್ರಣ, ಬುದ್ಧಿವಂತಿಕೆ, ಕಲಿಕೆ, ಸತ್ಯತೆ ಮತ್ತು ಅಹಿಂಸೆಯನ್ನೂ ಪಾಲಿಸಬೇಕು ಎನ್ನುತ್ತದೆ ಶಾಸ್ತ್ರ. ಮಾಘ ಮಾಸದಲ್ಲಿ ಸೂರ್ಯೋದಯಕ್ಕೆ ಮುಂಚೆಯೇ ಸ್ನಾನ ಮಾಡಬೇಕು. ಸೂರ್ಯೋದಯಕ್ಕೆ ಮುಂಚಿತವಾಗಿ, ಆಗಸದಲ್ಲಿ ನಕ್ಷತ್ರಗಳು ಇರುವ ಸಮಯದಲ್ಲಿ ಸ್ನಾನ ಮಾಡುವುದು ಹೆಚ್ಚು ಫಲಪ್ರದವೆಂದು ನಂಬಲಾಗಿದೆ.

  ವೀಳ್ಯದೆಲೆಯ ಮಹತ್ವ

ದೇವರ ಆರಾಧನೆ, ಯಥಾಶಕ್ತಿ ದಾನ

ಸ್ನಾನದ ಬಳಿಕ ಶುಭ್ರ ಬಟ್ಟೆಯನ್ನು ಧರಿಸಿ ಸೂರ್ಯ ಮಂತ್ರವನ್ನು ಪಠಿಸುತ್ತಾ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿದರೆ ಒಳಿತಾಗುತ್ತದೆ ಎಂಬುದು ಭಕ್ತ ನಂಬಿಕೆ. ಜೊತೆಗೆ, ಕಪ್ಪು ಎಳ್ಳು, ಕಪ್ಪು ಉಂಡೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿ. ಕಂಬಳಿಯನ್ನೂ ದಾನ ಮಾಡಬಹುದು. ಈ ಪರಿಹಾರ ಮಾಡುವುದರಿಂದ ಬಡತನ ಕೊನೆಗೊಳ್ಳುತ್ತದೆ ಮತ್ತು ಆರ್ಥಿಕ ಪ್ರಗತಿಯಾಗುತ್ತದೆ ಎಂಬುದು ನಂಬಿಕೆ. ಇದರ ಜೊತೆಗೆ, ಈ ಮಾಸದಲ್ಲಿ ಎಲ್ಲರೂ ಸರಳ ಆಹಾರವನ್ನು ಸೇವಿಸಿದರೆ ಒಳ್ಳೆಯದು ಎಂಬ ನಿಯಮವಿದೆ. ಆಯುರ್ವೇದದಲ್ಲಿ ಮಾಘ ಮಾಸದಲ್ಲಿ ಎಳ್ಳು ಮತ್ತು ಬೆಲ್ಲದ ಸೇವನೆಯು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಇದು ದೇಹದಲ್ಲಿ ಶಾಖ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲಾಗುತ್ತದೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »