Mauni Amavasya 2023: ಸಾಡೇಸಾತಿ ಕಳೆಯಲು, ಪೂರ್ವಜರ ಆಶೀರ್ವಾದ ಪಡೆಯಲು ಶನಿವಾರದ ಅಮವಾಸ್ಯೆಯಂದು ಈ ಕೆಲಸಗಳನ್ನು ಮಾಡಿ
ಮಾಘ ಮಾಸದಲ್ಲಿ ಬರುವ ಮೌನಿ ಅಮವಾಸ್ಯೆ, ಈ ವರ್ಷದ ಮೊದಲ ಶನಿ ಅಮಾವಾಸ್ಯೆ ಆಗಿದೆ. ಪ್ರತಿ ವರ್ಷ ಬರುವ 12 ಅಮವಾಸ್ಯೆಗಳಲ್ಲಿ ಈ ಮೌನಿ ಅಮವಾಸ್ಯೆ ಬಹಳ ವಿಶೇಷವಾದುದು. ಮೌನಿ ಅಮವಾಸ್ಯೆಯಂದು ಅನೇಕ ಮಂದಿ ಗಂಗಾ ನದಿಯಲ್ಲಿ ಅಥವಾ ಹರಿಯುವ ನೀರಿನಲ್ಲಿ ಸ್ನಾನ ಮಾಡುತ್ತಾರೆ.
ಮೌನಿ ಅಮಾವಾಸ್ಯೆಯನ್ನು ಈ ಬಾರಿ ಜನವರಿ 21 ರಂದು ಆಚರಿಸಲಾಗುತ್ತಿದೆ. ಹಿಂದೂ ಪಂಚಾಂಗದ ಪ್ರಕಾರ ಮೌನಿ ಅಮಾವಾಸ್ಯೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ‘ಮೌನಿ’ ಎಂಬುದು ಸಂಸ್ಕೃತ ಪದ. ಆದ್ದರಿಂದಲೇ ಮೌನಿ ಎಂಬ ಪದವು ಮೌನದಿಂದ ಹುಟ್ಟಿದೆ.
(1 / 7)

ಮೌನಿ ಅಮವಾಸ್ಯೆಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಮಾನವನ ಎಲ್ಲಾ ದೋಷಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಈ ದಿನ ಉಪವಾಸ, ಪವಿತ್ರ ನದಿಗಳಲ್ಲಿ ಸ್ನಾನ ಮತ್ತು ದಾನ ಮಾಡುವುದರಿಂದ ಅಸಾಧ್ಯವಾದ ಕಾರ್ಯಗಳನ್ನು ಕೂಡಾ ಸಾಧಿಸಬಹುದು ಎಂದು ಪುರಾಣಗಳಲ್ಲಿ
(2 / 7)
ಮೌನಿ ಅಮವಾಸ್ಯೆಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಮಾನವನ ಎಲ್ಲಾ ದೋಷಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಈ ದಿನ ಉಪವಾಸ, ಪವಿತ್ರ ನದಿಗಳಲ್ಲಿ ಸ್ನಾನ ಮತ್ತು ದಾನ ಮಾಡುವುದರಿಂದ ಅಸಾಧ್ಯವಾದ ಕಾರ್ಯಗಳನ್ನು ಕೂಡಾ ಸಾಧಿಸಬಹುದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಹಿಂದೂ ಪಂಚಾಂಗದ ಪ್ರಕಾರ, ಮಾಘ ಮಾಸದ ಅಮವಾಸ್ಯೆ ತಿಥಿ, 21 ಜನವರಿ 2023, ಶನಿವಾರ ರಂದು ಬೆಳಗ್ಗೆ 06.17 ರಿಂದ ಪ್ರಾರಂಭವಾಗುತ್ತದೆ ಮತ್ತು 22 ಜನವರಿ 2023 ರಂದು ಮಧ್ಯಾಹ್ನ 02.22 ರವರೆಗೆ ಇರುತ್ತದೆ. ಮೌನಿ ಅಮವಾಸ್ಯೆಯನ್ನು ಮೂಕ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
(3 / 7)

ಸುಮಾರು 20 ವರ್ಷಗಳ ನಂತರ ಶನಿವಾರದಂದು ಈ ಮೌನಿ ಅಮಾವಾಸ್ಯೆ ಬಂದಿದೆ. ಹಾಗೆಯೇ 30 ವರ್ಷಗಳ ನಂತರ ಮೌನಿ ಅಮಾವಾಸ್ಯೆಯ ದಿನ ಶನಿಯು ಕುಂಭ ರಾಶಿಗೆ ಚಲಿಸಲಿದ್ದಾನೆ. ಶನಿವಾರದ ಅಮಾವಾಸ್ಯೆಯನ್ನು ಶನಿಶ್ಚರಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನ ಮೌನಿ ಅಮಾವಾಸ್ಯೆಯಂದು ಮೌನವ್ರತವನ್ನು ಆಚರಿಸಿ, ನದಿಯಲ್ಲಿ ಸ್ನಾನ ಮಾಡಿ ದಾನ ಮಾಡಿದರೆ ಶನಿದೋಷ, ಪಿತೃದೋಷ, ಕಾಳಸರ್ಪ ದೋಷ ದೂರವಾಗುತ್ತದೆ.
(4 / 7)

ಶನಿ ಅಮಾವಾಸ್ಯೆಯಂದು ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಶನಿ ದೇವಸ್ಥಾನಕ್ಕೆ ದಾನ ಮಾಡಿ. ಅಥವಾ ಒಂದು ಬಟ್ಟಲಿನಲ್ಲಿ ಸಾಸಿವೆ ಎಣ್ಣೆ ಹಾಕಿ ಅದರಲ್ಲಿ ನಿಮ್ಮ ಮುಖ ನೋಡಿಕೊಂಡು ಎಣ್ಣೆಯನ್ನು ದಾನ ಮಾಡಿದರೆ ಆ ವ್ಯಕ್ತಿಯ ಎಲ್ಲಾ ತೊಂದರೆಗಳು ನಿವಾರಣೆ ಆಗುತ್ತದೆ ಎಂದು ನಂಬಲಾಗಿದೆ. ದೈಹಿಕ ನೋವಿನಿಂದಲೂ ನೀವು ಮುಕ್ತಿ ಪಡೆಯಬಹುದು. ಶನಿವಾರ, ಶನೈಶ್ಚರ ದೇವಸ್ಥಾನ ಅಥವಾ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಬನ್ನಿ.
(5 / 7)

ಮೌನಿ ಅಮವಾಸ್ಯೆಯಂದು ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಅರಳೀ ಮರಕ್ಕೆ ಅರ್ಪಿಸಿ, ನಂತರ ಎಳ್ಳು ದಾನ ಮಾಡುವುದರಿಂದ ಕೂಡಾ ನಿಮ್ಮ ಬಹುತೇಕ ಸಮಸ್ಯೆ ದೂರಾಗುತ್ತದೆ. ಈ ಶುಭ ದಿನದಂದು ಪೂರ್ವಜರ ಶಾಂತಿಗಾಗಿ ಶ್ರಾದ್ಧ ವಿಧಿಗಳನ್ನು ಮತ್ತು ತರ್ಪಣವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ನಮ್ಮ ಪಿತೃಗಳಿಗೆ ವಿಧಿಗಳನ್ನು ಮಾಡುವ ಕಾರಣದಿಂದ ಈ ಮೌನಿ ಅಮವಾಸ್ಯೆಯಂದು ದೇವರಿಗೆ ಪೂಜೆ ಮಾಡುವಾಗ ಘಂಟಾನಾದ ಮಾಡಬಾರದು.
(6 / 7)

ಸಾಸಿವೆ ಎಣ್ಣೆ, ಉದ್ದಿನ ಕಾಳು, ಕಂಬಳಿ, ಕಬ್ಬಿಣವನ್ನು ದಾನ ಮಾಡುವವನು ಶನಿಯ ಆಶೀರ್ವಾದವನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ, ಅವರಿಗೆ ಎಂದಿಗೂ ಹಣದ ಕೊರತೆ ಬರುವುದಿಲ್ಲ. ಯಾರ ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದಾನೋ ಅವರೆಲ್ಲರೂ ಮೌನಿ ಅಮವಾಸ್ಯೆಯಂದು ಹಸುವಿಗೆ ಮೊಸರನ್ನ ತಿನ್ನಿಸಬೇಕು. ಹೀಗೆ ಮಾಡುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ ಮತ್ತು ಚಂದ್ರನಿಗೆ ಸಂಬಂಧಿಸಿದ ದೋಷಗಳು ದೂರವಾಗುತ್ತವೆ. ಮೌನಿ ಅಮವಾಸ್ಯೆಯ ದಿನ ಬೆಳ್ಳಿ ನಾಗರ ಹಾವಿಗೆ ಪೂಜೆ ಸಲ್ಲಿಸಿ, ಹರಿಯುವ ನೀರಿನಲ್ಲಿ ಬಿಳಿ ಹೂಗಳನ್ನು ಹಾಕಿದರೆ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ.
(7 / 7)