ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಧ್ಯಾನದ ಮಾರ್ಗ- ಕಥೆ

ಧ್ಯಾನದ ಮಾರ್ಗ :-

ಒಂದು ಕಾಡು ಅಲ್ಲಿ ಮರದ ಕೆಳಗೆ ಒಬ್ಬ ಸಾಧುಗಳು ಕುಳಿತು ಧ್ಯಾನ ಮಾಡುತ್ತಿದ್ದರು. ಹಳ್ಳಿಯ ಕಟ್ಟಿಗೆ ಕಡಿಯುವವನು ಅದೇ ಮಾರ್ಗದಲ್ಲಿ ಹೋಗಿ ಮರ ಕಡಿದು ತೆಗೆದುಕೊಂಡು ಹೋಗುವುದನ್ನು ಸಾಧುಗಳು ನಿತ್ಯವೂ ಗಮನಿಸುತ್ತಿದ್ದರು. ಒಂದು ದಿನ ಅವನನ್ನು ಕರೆದು ನೀನು ಪ್ರತಿನಿತ್ಯ ಕಟ್ಟಿಗೆ ಕಡಿದು ಮಾರಿ ಜೀವನ ಮಾಡುವೆ. ಇದು ನಿನ್ನ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ಗಂಧದ ಮರಗಳು
ಕಟ್ಟಿಗೆ ಬದಲು ಗಂಧದ ಮರದ ತುಂಡುಗಳನ್ನು ಮಾರಿದರೆ ಕೆಲವು ದಿನಗಳು ಹೊಟ್ಟೆ ತುಂಬ ಊಟ ಮಾಡಬಹುದು ಎಂದರು. ಆದರೆ ಮರ ಕಡಿವಾತ ನಂಬಲಿಲ್ಲ. ಅವನಿಗೆ ಆ ಕಾಡಿನ ಇಂಚಿಂಚು ಜಾಗವು ಗೊತ್ತಿತ್ತು ಅವನ ತಂದೆ ಅಜ್ಜ ಎಲ್ಲರೂ ಅದೇ ಕಾಡಿನಿಂದ ಕಟ್ಟಿಗೆಯನ್ನು ಸಂಗ್ರಹಿಸುತ್ತಿದ್ದರು. ಈ ಸಾಧುಗಳು ಕುಳಿತಲ್ಲೇ ಕುಳಿತು ಜಪ ತಪ ಮಾಡುವವರು ಇವರಿಗೆ ಏನು ಗೊತ್ತು ಕಾಡಿನ ಬಗ್ಗೆ ಎಂದು ಮನದಲ್ಲಿ ಹೇಳಿದರೂ,‌ ಆದರೂ ಸಾಧುಗಳು ಹೇಳಿದ್ದು ನಿಜವಿರಬಹುದು ಒಮ್ಮೆ ಪ್ರಯತ್ನಿಸೊಣ ಎಂದುಕೊಂಡನು.

ಹೀಗೆ ಯೋಚಿಸಿ ಕಾಡಿನೊಳಗೆ ಹೋದನು. ಸಾಧುಗಳು ಹೇಳಿದಂತೆ ಅಲ್ಲಿ ಬೇಕಾದಷ್ಟು ಗಂಧದ ಮರಗಳು ಇದ್ದವು. ಅವುಗಳನ್ನು ಕಡಿದು ತಂದು ಮಾರಿದನು ಹಣವು ಸಾಕಷ್ಟು ಬಂದಿತು. ಒಂದು ತಿಂಗಳು ಆರಾಮಾಗಿ ಕಳೆದನು. ಮತ್ತೆ ಬಂದು ಗಂಧದ ತುಂಡುಗಳನ್ನು ಕತ್ತರಿಸಿ ಮಾರಿ ಹಾಯಾಗಿ ಜೀವಿಸುತ್ತಿದ್ದನು. ಕೆಲವು ದಿನಗಳು ಕಳೆಯಿತು ಸಾಧು ಬಳಿ ಬಂದು, ಸ್ವಾಮಿ ನೀವು ಹೇಳಿದ್ದು ನಿಜ ನನಗೆ ಗೊತ್ತೇ ಇರಲಿಲ್ಲ ನನ್ನ ತಾತ ಮುತ್ತಾ ತಂದಿರು ಇದೇ ಕಾಡಿನಲ್ಲಿ ಓಡಾಡಿದರೂ. ತಿಳಿದಿರಲಿಲ್ಲ ಈಗ ನನ್ನ ಜೀವನ ಸುಖವಾಗಿದೆ ಇದು ಮೊದಲೇ ತಿಳಿದಿದ್ದರೆ ನಾನು ಇಷ್ಟು ದಿನ ಕಷ್ಟ ಪಡಬೇಕಾಗಿರಲಿಲ್ಲ ಎಂದು ಹೇಳಿದನು. ಮನದಲ್ಲೇ ನಕ್ಕ ಸಾಧು ಹೋಗು ಗಂಧದ ಮರವನ್ನು ಕಡಿದು ಮಾರಿ ಆರಾಮವಾಗಿ ಜೀವನ ಸಾಗಿಸು ಎಂದು ಕಳಿಸಿದರು.

ಹೀಗೆ ಕಳೆದು ಮತ್ತೊಂದು ದಿನ ಅಲ್ಲಿ ಹೋಗುತ್ತಿರುವಾಗ ಅದೇ ಸಾಧು ಇವನನ್ನು ಕರೆದು, ನೀನಿನ್ನೂ ಗಂಧದ ಮರವನ್ನೇ ಕಡಿಯುತ್ತಾ ಜೀವನ ಸಾಗಿಸುತ್ತಿರುವೆಯಾ? ಮುಂದೆ ಹೋಗಿ ನೋಡಲಿಲ್ಲವೇ ಎಂದು ಕೇಳಿದರು? ಮರ ಕಡಿಯುವ ಹೇಳಿದ ಇಲ್ಲ ಸ್ವಾಮಿ ಮುಂದೆ ಏನಿದೆ ಈಗ ಬೇಕಾದಷ್ಟು ಸಿಗುತ್ತಿದೆಯಲ್ಲ ಎಂದಾಗ ಸಾಧುಗಳು ಗಂಧದ ಮರದಿಂದ ನಿನಗೆ ಒಂದು ತಿಂಗಳು ಸಾಕಾಗುತ್ತದೆ ಮತ್ತೆ ಬರಬೇಕು. ಇನ್ನೂ ಕಾಡಿನೂಳಗೆ ಹೋದರೆ ಬೆಳ್ಳಿ ತುಂಬಿದ ಖಜಾನೆ ಇದೆ ನೀನು ನೋಡಿಲ್ಲವೇ ?ಒಂದಷ್ಟು ಬೆಳ್ಳಿ ತೆಗೆದುಕೊಂಡು ಹೋಗಿ ಮಾರಿದರೆ ನಿನ್ನ ಜೀವನ ಕೆಲವು ತಿಂಗಳು ಕಳೆಯುತ್ತದೆ ಮತ್ತೆ ಬಂದು ತೆಗೆದುಕೊಂಡು ಹೋಗಬಹುದು ಎಂದರು. ಮರ ಕಡಿವಾತಗೆ ಈ ಸಲ ಸಾಧುಗಳ ಮಾತಿನ ಮೇಲೆ ನಂಬಿಕೆ ಇತ್ತು. ಆತನು ಗಂಧದ ಮರ ತುಂಬಿರುವ ಕಾಡನ್ನು ಬಿಟ್ಟು ಮತ್ತು ಸ್ವಲ್ಪ ಮುಂದೆ ಹೋದನು ಸಾಧುಗಳು ಹೇಳಿದಂತೆ ಅಲ್ಲಿ ಪಳಪಳ ಹೊಳೆಯುತ್ತಿರುವ ಬೆಳ್ಳಿಯ ಖಜಾನೆ ತುಂಬಿತ್ತು. ಆತನು ಸಾಕಷ್ಟು ಬೆಳ್ಳಿ ತುಂಬಿಕೊಂಡು ಬಂದು ಮಾರಿದನು ಕೆಲವು ತಿಂಗಳಗಳು ಸುಖವಾಗಿ ಜೀವನ ಸಾಗಿತು. ಖರ್ಚಾದ ಮೇಲೆ ಮತ್ತೆ ಬಂದು ಬೆಳ್ಳಿ ತುಂಬಿಸಿ ಕೊಂಡು ಹೋಗಿ ಮಾರುತ್ತಿದ್ದನು ಹೀಗೆ ಕೆಲವು ವರ್ಷಗಳೇ ಕಳೆಯಿತು.

  ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ - ಆಟದ ಹಿನ್ನಲೆ ಕಥೆ

ಒಂದು ದಿನ ಕಾಡಿಗೆ ಬರುತ್ತಿದ್ದ ಆತನು ಸಾಧುಗಳನ್ನು ನೋಡಿದನು
ಈ ಸಲ ಕಟ್ಟಿಗೆ ಕಡಿಯುವನೇ ಸಾಧುಗಳ ಬಳಿ ಬಂದು ನಮಸ್ಕರಿಸಿ ನಿಮ್ಮಿಂದ ನನ್ನ ಜೀವನ ಬಂಗಾರವಾಯಿತು ಎಂದನು. ಮತ್ತೆ ಸಾಧುಗಳು ಹೇಳಿದರು. ನೀನು ಇಷ್ಟಕ್ಕೆ ತೃಪ್ತಿ ಪಟ್ಟುಕೊಂಡೇಯಾ? ಇನ್ನು ಸ್ವಲ್ಪ ಮುಂದೆ ಹೋದರೆ ಬಂಗಾರದ ಖಜಾನೆ ಸಿಗುತ್ತದೆ ಎಂದರು. ಕೂಡಲೇ ಆತ ಖುಷಿಯಿಂದ ಕಾಡಿನ ಒಳಗೆ ಹೋದನು ಬೆಳ್ಳಿಯ ಖಜಾನೆ ದಾಟಿ ಮುಂದೆ ಹೋದಾಗ ಅವನಿಗೆ ಕಣ್ಣು ಕೋರೈಸುವ ಬಂಗಾರದ ಬೆಟ್ಟ ದಂಥ ಖಜಾನೆ ಕಂಡಿತು. ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆತ ಬಂಗಾರವನ್ನು ತುಂಬಿಕೊಂಡು ಬಂದನು ಮಾರಿದನು. ಮತ್ತೆ ನಾಲ್ಕು ವರ್ಷಗಳ ನಂತರವೇ ಬಂಗಾರದ ಬೆಟ್ಟಕ್ಕೆ ಬಂದು ಬಂಗಾರ ತುಂಬಿಕೊಂಡು ಹೋಗುತ್ತಿದ್ದನು. ಹೀಗೆ ಅವನ ಜೀವನ ಸುಖ ಸಂಪತ್ತಿನಿಂದ ತುಂಬಿತು. ಹೀಗೆ ಕೆಲವು ವರ್ಷಗಳು ಕಳೆಯಿತು.
ಮತ್ತೆ ಬಂಗಾರ ತೆಗೆದುಕೊಂಡು ಹೋಗುವುದನ್ನು ಸಾಧುಗಳು ನೋಡಿದರು ಕರೆದರು. ಆತ ಬಂಗಾರ ತುಂಬಿಸಿಕೊಂಡು ಹೋಗುವುದನ್ನು ಹೇಳಿದನು. ಸಾಧುಗಳು ಹೇಳಿದರು ಇನ್ನೂ ನೀನು ಬಂಗಾರವನ್ನೇ ತುಂಬಿಸಿಕೊಂಡು ಹೋಗುತ್ತಿದ್ದೀಯಾ? ನಾನು ನಿನಗೆ ಎಷ್ಟು ಸಲ ಹೇಳಿದೆ ಇನ್ನೂ ಮುಂದೆ ಮುಂದೆ ಹೋದರೆ ಬೆಲೆಯುಳ್ಳ ವಸ್ತುಗಳು ಬೇಕಾದಷ್ಟು ಸಿಗುತ್ತದೆ ಎಂದು ನೀನಾಗೇ ತಿಳಿದುಕೊಳ್ಳುವುದಿಲ್ಲ ಏಕೆ ಎಂದು ಕೇಳಿದರು. ಅದಕ್ಕೆ ಆತ ಹೇಳಿದ ಹೌದು ಸ್ವಾಮಿ ನೀವು ಹೇಳಿದಂತೆ ನಾನು ಮುಂದೆ ಯೋಚಿಸುವುದೇ ಇಲ್ಲ ಅಲ್ಲಿಗೆ ನಿಂತುಬಿಡುತ್ತೇನೆ ಆದರೂ ಸಾಧುಗಳೇ ಬಂಗಾರಕ್ಕಿಂತ ಮಿಗಿಲಾದ್ದು ಏನಿದೆ ಅಲ್ಲವೇ ಇದರಿಂದ ಸಂಪತ್ತು ಬೇಕಾದಷ್ಟು ದೊರೆತಿದೆ ಎಂದನು.

  ಇದು ಯಾರ ಕಾಶ್ಮೀರ? - The Kashmiri Files ನೋಡುವ ಮುನ್ನ

ಆಗ ಸಾಧುಗಳು ಅಯ್ಯೋ ಬುದ್ಧಿಗೇಡಿ ನಿನಗೆ ತಿಳಿಯುವುದಿಲ್ಲ ಬಂಗಾರಕ್ಕಿಂತ ಹೆಚ್ಚು ಮುಂದೆ ಹೋದರೆ ನಿನಗೆ ವಜ್ರದ ದೊಡ್ಡ ಖಜಾನೆ ಇದೆ ಎಂದರು. ಆತನ
ಮುಖ ಸಂತೋಷದಿಂದ ಅರಳಿತು. ಆತ ವಜ್ರ ಹುಡುಕಲು ಹೊರಟನು.
ಬಂಗಾರದ ಖಜಾನೆಗಿಂತ ಸ್ವಲ್ಪ ಮುಂದೆ ಹೋದಾಗ ವಜ್ರದ ಗಣಿ ಕಂಡಿತು.
ಅವನ ಕಣ್ಣು ನಂಬಲೇ ಇಲ್ಲ. ಎಲ್ಲಿ ಕಣ್ಣು ಹಾಯಿಸಿದರು ವಜ್ರವೇ ಹೊಳೆಯು ತ್ತಿತ್ತು. ಈಗ ಮತ್ತೆ ಅಂದುಕೊಂಡ ಒಂದಷ್ಟು ವಜ್ರಗಳನ್ನು ತೆಗೆದುಕೊಂಡು ಹೋದರೆ ಎಷ್ಟೋ ವರ್ಷಗಳ ಕಾಲ ಜೀವನವನ್ನು ಸಂತೋಷವಾಗಿ ಕಳೆಯ ಬಹುದು. ಹೀಗೆಂದುಕೊಂಡು ವಜ್ರವನ್ನು ತೆಗೆದುಕೊಂಡು ಹೋಗಿ ಆತ ಬಹಳ ಕಾಲ ಸುಖವಾಗಿದ್ದನು.

ಈಗಾಗಲೇ ಆತನಿಗೆ ವಯಸ್ಸಾಗಿತ್ತು. ಆದರೂ ಬಿಡದೆ ವಜ್ರದ ವ್ಯಾಮೋಹ
ಅವನನ್ನು ಮತ್ತೆ ಕಾಡಿಗೆ ಕರೆತಂದಿತು ವಜ್ರವನ್ನು ತುಂಬಿಕೊಂಡು ಹೋಗುತ್ತಿ ದ್ದನು ಆಗ ಅದೇ ಸಾಧು ಧ್ಯಾನ ಮಾಡುತ್ತಾ ಕುಳಿತಿದ್ದರು ವೃದ್ಧರಾಗಿದ್ದರು.
ಈ ವ್ಯಕ್ತಿಯನ್ನು ಗುರುತಿಸಿ ಹತ್ತಿರ ಕರೆದು ಹೇಳಿದರು ವಜ್ರ ತೆಗೆದುಕೊಂಡು ಹೋಗುತ್ತಿರುವೆಯಾ?ಅಯ್ಯೋ ಮೂರ್ಖ ವಜ್ರವೇ ಕೊನೆ ಎಂದುಕೊಂಡೆಯಾ ಮುಂದೆ ಹೋದರೆ ವಜ್ರಕ್ಕಿಂತಲೂ ಮಿಗಿಲಾದ್ದು ಸಿಗುತ್ತದೆ ಎಂದು ನಿನಗೆ ತಿಳಿಯಲಿಲ್ಲವೇ ? ಸಾಧುಗಳ ಮಾತು ಅಭಿಮಾನದಿಂದ ಕೂಡಿತ್ತು, ಆದರೆ ಮರ ಕಡಿಯುವವನು ಬಹಳ ಬದಲಾಗಿದ್ದ ಅವನಿಗೆ ಸಿರಿವಂತಿಕೆಯ ಅಹಂ ಬಂದಿತ್ತು. ಆತ ಹೇ ಸಾಧು ನೀನು ಏನು ಹೇಳುತ್ತಿರುವೆ? ವಜ್ರಕ್ಕಿಂತ ಮೇಲಿದ್ದು ಏನಾದ್ರೂ ಇರಲು ಸಾಧ್ಯವೇ? ನನ್ನನ್ನು ಅವಿವೇಕಿ ಎಂದುಕೊಂಡೆಯಾ? ಇಷ್ಟು ದಿನ ನಿನ್ನನ್ನು ನಂಬಿದ್ದೆ, ಈಗ ನಂಬಲು ನಾನೇನು ಮೂರ್ಖನೇ? ವಜ್ರದ ಖಜಾನೆ ಗಿಂತ ಒಳಗೆ ಹೋದರೆ ಇನ್ನೇನು ಇರುತ್ತದೆ? ನೀನೆ ಹೇಳು?

ಅಷ್ಟೇ ಶಾಂತವಾಗಿ ಸಾಧು ಹೇಳಿದರು. ವಜ್ರಕ್ಕಿಂತ ಮುಂದೆ ಹೋದರೆ
ನಾನು ಸಿಗುವೆ ನಿನಗೆ ಅಷ್ಟು ತಿಳಿಯಲಿಲ್ಲವೇ? ಆತನಿಗೆ ಇದನ್ನು ಕೇಳಿ ಒಮ್ಮೆಲೇ ಏನೋ ಮನಸ್ಸಿನಲ್ಲಿ ಹೊಳೆಯಿತು. ಹೌದಲ್ಲವೇ? ವಜ್ರಕ್ಕಿಂತ ಮುಂದೆ ಇನ್ನೇನು ಇದೆ ಎಂದರೆ ಅಂಥ ವಜ್ರವನ್ನೇ ತಿರಸ್ಕರಿಸಿ ಈ ಮರದ ಕೆಳಗೆ ಕೂತಿರುವ ಸಾಧುಗಳಿಗೆ ಇನ್ನೂ ಏನೋ ಸಿಕ್ಕಿದೆ. ಆದ್ದರಿಂದ ವಜ್ರದ ಆಸೆಯನ್ನು ಬಿಟ್ಟು ಈತ ಈ ಮರದ ಕೆಳಗೆ ಕುಳಿತಿರುವುದು. ಇಷ್ಟು ಸರಳ ವಾದ ವಿಚಾರ ನನಗೆ ಇದುವರೆಗೂ ಹೊಳೆಯಲಿಲ್ಲ ಕಟ್ಟಿಗೆ ಕಡಿಯುವವಗೆ
ಸಾಧುಗಳ ಭಾವ ಅರ್ಥವಾಯಿತು. ಕಣ್ಣಲ್ಲಿ ನೀರು ಬಂದಿತು.ಸಾಧುಗಳ ಕಾಲಿಗೆ ಬಿದ್ದು ನಮಸ್ಕರಿಸಿ ನನ್ನನ್ನು ಕ್ಷಮಿಸಿರಿ. ನಾನು ಇದುವರೆಗೂ ನಿಮ್ಮ ಮಾತಿನ ಆಳವನ್ನು ತಿಳಿದುಕೊಳ್ಳಲು ಪ್ರಯತ್ನಿಸಲೇ ಇಲ್ಲ.

  ಸಂಬಂಧಗಳಲ್ಲಿ ಲಾಭ ನಷ್ಟದ ಲೆಕ್ಕಾಚಾರ - ಸಣ್ಣ ಕಥೆ

ಬೆಳ್ಳಿ ಬಂಗಾರ ವಜ್ರ -ವೈಡೂರ್ಯ- ಮುತ್ತು -ಮಾಣಿಕ್ಯ ಎಲ್ಲಕ್ಕಿಂತಲೂ ಮಿಗಿಲಾದ್ದು ಇನ್ನೇನು ಇದೆ ಎಂಬ ವಿಚಾರ ನಾನು ಯೋಚಿಸಲಿಲ್ಲ. ದಯವಿಟ್ಟು ಹೇಳಿ ಎಲ್ಲಕ್ಕಿಂತ ಅಮೂಲ್ಯವಾದ ಏನಿದೆ ನನಗೆ ಹೇಳಿ ಎಂದನು. ಎಲ್ಲಕ್ಕಿಂತ ಅಪರಿಮಿತವಾದ್ದು ಏಕಾಗ್ರತೆಯಿಂದ ಮನಸ್ಸಿಟ್ಟು ಧ್ಯಾನ ಮಾಡುವುದು ಎಂದು ಸಾಧುಗಳು ಹೇಳಿದರು. ಆತ ಹೇಳಿದ ಸ್ವಾಮಿ ನನಗೆ ಧ್ಯಾನ ಮಾಡಲು ನನ್ನ ಮನಸ್ಸು ಸ್ಥಿರವಾಗಿ ನಿಲ್ಲಲ್ಲ ಎಂದಾಗ, ಸಾಧುಗಳು ಹೇಳಿದರು ನೀನು ಈಗಾಗಲೇ ಬಾಹ್ಯ ಪ್ರಪಂಚದ ಬೇಕಾದಷ್ಟು ಸಂಪತ್ತನ್ನು ಸಂಪಾದಿಸಿರುವೆ ಈಗ ಅದನ್ನೆಲ್ಲ ಬಿಟ್ಟು ನಿನ್ನೊಳಗೆ ನೀನು ನೋಡುತ್ತಾ ಹೋಗು. ಅಲ್ಲಿ ಏನೇ ನಿನ್ನ ಅನುಭವಕ್ಕೆ ಬಂದರೂ ಅದನ್ನು ತಡೆದು ನಿಲ್ಲಿಸದೆದೆ ಮುಂದೆ ಮುಂದೆ ಸಾಗುತ್ತಾ ಇರು. ಹಾಗೆ ಹೋದಾಗ ನಿನಗೆ ಭಗವಂತನೇ ಸಿಗಬಹುದು ನಿನಗೆ ಆಗುವ ಯಾವುದೇ ಅನುಭವವನ್ನು ಹಿಡಿದು ನಿಲ್ಲಲು ಪ್ರಯತ್ನಿಸದೆ ಮುಂದೆ ಹೋಗುತ್ತಾ ಹೋಗುತ್ತಾ ಎಲ್ಲವೂ ಶಾಂತವಾಗುತ್ತದೆ. ಹೀಗೆ ಯಾವ ಅಡೆ-ತಡೆಯು ಇಲ್ಲದೆ ನೀನು ಮುಂದೆ ಸಾಗಿದರೆ ನಿನಗೆ ಸಮಾಧಿಯ ಸ್ಥಿತಿಯ ಅನುಭವವಾಗುತ್ತದೆ ಎಂದರು. ಆಗ ನಿನ್ನೊಳಗೆ ಶೂನ್ಯತೆ ವ್ಯಾಪಿಸುತ್ತದೆ ಶೂನ್ಯತೆಯಲ್ಲಿ ಜ್ಞಾನದ ದೀಪ ಬೆಳಗುವುದು. ಧ್ಯಾನಕ್ಕೆ ಬೇಕಾಗಿರೋದು ತಾಳ್ಮೆ. ಧ್ಯಾನ ಮಾಡಲು ಕುಳಿತ ದಿನವೇ ನಮಗೆ ಅದರ ಅನುಭವ ಆಗಬಹು ದು ಅಥವಾ ವರ್ಷಾನುಗಡಿಯ ಮುಂದೆ ಹೋಗಬಹುದು. ಮೊದಮೊದಲು ಸಾಧ್ಯವೇ ಇಲ್ಲ ಎನ್ನುವಂತಾಗುತ್ತದೆ. ನಾವು ಒಂದೆಡೆ ಮನಸ್ಸಿಟ್ಟು ಕೂರುವ ಅಭ್ಯಾಸ ರೂಡಿಸಿಕೊಳ್ಳುತ್ತೇವೆಯೋ ಆಗ ಒಂದೊಂದೇ ಅನುಭವ ನಮ್ಮ ಗಮನಕ್ಕೆ ಬರುತ್ತದೆ. ಇದೆ ಧ್ಯಾನದ ಮಾರ್ಗ.

ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮದನ್ ಶರೀರಸ್ಯ ಚ ವೈದ್ಯಕೇನ !
ಯೋಪಾ ಕರೋತ್ತಂ ಪ್ರವರಂ
ಮುನೀನಾಂ ಪತಂಜಲಿಂ
ಪ್ರಾಂಜಲಿ ರಾನಾತೋಸ್ಮಿ !!

🙏🙏🙏

Leave a Reply

Your email address will not be published. Required fields are marked *

Translate »