ಒಂದೂರಿನಲ್ಲಿ ತುಂಬಾ ಮಂಗಗಳಿದ್ದವು….
ಒಂದು ದಿನ ಆ ಊರಿಗೆ ಒಬ್ಬ ವ್ಯಾಪಾರಿಯು ಬಂದ.
ಮಂಗಗಳನ್ನು ಹಿಡಿದುಕೊಟ್ಟರೆ, ಒಂದು ಮಂಗನಿಗೆ ನೂರು ರುಪಾಯಿಯ ಹಾಗೆ ಕೊಡುವುದಾಗಿ ಅಲ್ಲಿನ ನಿವಾಸಿಗಳತ್ರ ಪ್ರಚಾರ ಮಾಡಿದ…
ಆ ಗ್ರಾಮವಾಸಿಗಳು ಮನಸಲ್ಲೇ ಅಂದುಕೊಂಡರು ಮಂಗನಿಗೆ ನೂರು ರುಪಾಯಿಗಳನ್ನು ಕೊಟ್ಟು ಖರೀದಿಸುವ ಈತ ಹಚ್ಚನೇ ಇರಬೇಕು….. ಆದರೂ ಆ ಗ್ರಾಮವಾಸಿಗಳು ಮಂಗಗಳನ್ನು ಹಿಡಿದು ಆತನಿಗೆ ಕೊಟ್ಟು ನೂರು ರುಪಾಯಿಗಳ ಹಾಗೆ ಇಸ್ಕೊಂಡರು…
ಮಂಗಗಳ ಸಂಖ್ಯೆ ಕಡಿಮೆಯಾಗುತ್ತಲೇ ಆ ವ್ಯಾಪಾರಿಯು ಒಂದು ಮಂಗನಿಗೆ ಇನ್ನೂರು ರುಪಾಯಿಗಳ ಹಾಗೆ ಖರೀದಿಸುವುದಾಗಿ ಪ್ರಚಾರ ಮಾಡಿದ….
ಸೋಮಾರಿಗಳಾದ ಆ ಗ್ರಾಮವಾಸಿಗಳು ಮಂಗಗಳನ್ನು ಹಿಡಿಯಲು ಹರಸಾಹಸಪಡತೊಡಗಿದರು.
ಸಿಕ್ಕಿದ ಮಂಗಗಳನ್ನು ಇನ್ನೂರುರುಪಾಯಿಯ ಹಾಗೆ ಆ ವ್ಯಾಪಾರಿಗೆ ಮಾರಿದರು…
ಪುನಃ ಆ ವ್ಯಾಪಾರಿಯು ಮಂಗಗಳ ಬೆಲೆ ಹೆಚ್ಚು ಮಾಡಿ ಪ್ರಚಾರ ಮಾಡಿದ… ಒಂದು ಮಂಗನಿಗೆ ಐನೂರು ರುಪಾಯಿ…!!
ಆ ಗ್ರಾಮವಾಸಿಗಳು ಊಟ ನಿದ್ದೆ ಬಿಟ್ಟು ಮಂಗನಿಗಾಗಿ ಹುಡುಕಾಡತೊಡಗಿದರು…. ಐದಾರು ಸಿಕ್ಕಿದವು ಅವನ್ನು ಐನೂರು ರುಪಾಯಿಗಳ ಹಾಗೆ ಆ ವ್ಯಾಪಾರಿಗೆ ಮಾರಿದರು… ಉಳಿದ ಮಂಗಗಳು ಕಾಣೆಯಾದವು….
ಅಷ್ಟರಲ್ಲಿ ಆ ವ್ಯಪಾರಿಯು ಆ ಗ್ರಾಮವಾಸಿಗಳತ್ರ ಹೇಳುತ್ತಾನೆ- ” ತಾನು ತನ್ನ ಊರಿಗೆ ಹೋಗುತ್ತಿದ್ದು, ಊರಿಂದ ಮರಳಿ ಬರುವಾಗ ಒಂದೊಂದು ಮಂಗಗಳಿಗೆ ಒಂದೊಂದು ಸಾವಿರ ರುಪಾಯಿಗಳ ಹಾಗೇ ಖರೀದಿಸುವೆನು…. ತಾನು ಈವರೆಗೆ ನಿಮ್ಮಿಂದ ಖರೀದಿಸಿದ್ದ ಮಂಗಗಳನ್ನು ಇಲ್ಲೇ ನನ್ನ ಸೇವಕ ನೋಡಿಕೊಳ್ಳುವನು..” ಅಂತ ಅವುಗಳನ್ನು ಒಂದು ಗೂಡೊಳಗೆ ಕೂಡಿ ಹಾಕಿ ಸೇವಕನೊಬ್ಬನನ್ನು ನೋಡಿಕೊಳ್ಳಲು ನೇಮಿಸಿ , ಆ ವ್ಯಾಪಾರಿಯು ಹೊರಟು ಹೋದ…
ವ್ಯಾಪಾರಿ ಮರಳಿ ಬರುವಾಗ ಸಾವಿರ ರುಪಾಯಿಗಳಿಗೆ ಮಾರಲು ಮಂಗಗಳಿಲ್ಲವಲ್ಲಾ ಅಂತ ಆ ಗ್ರಾಮವಾಸಿಗಳು ದುಃಖಿತರಾದರು…
ಆಗ ಆ ವ್ಯಾಪಾರಿಯ ಸೇವಕನು ಆ ಗ್ರಾಮವಾಸಿಗಳತ್ರ ಹೇಳುತ್ತಾನೆ – ” ಒಂದು ಮಂಗನಿಗೆ ಏಳುನೂರು ರುಪಾಯಿಗಳ ಹಾಗೆ ಕೊಟ್ಟರೆ ಗೂಡಲ್ಲಿರುವ ಮಂಗಗಳನ್ನು ಕೊಡುವೆ”.
ನನ್ನ ಯಜಮಾನ ಮರಳಿ ಬರುವಾಗ ಒಂದು ಸಾವಿರಕ್ಕೆ ಮಾರಬಹುದಲ್ಲವೇ…?ಮುನ್ನೂರು ರುಪಾಯಿಗಳ ಲಾಭ ಪಡೆಯಬಹುದಲ್ಲವೇ….?
ಆತನ ಮಾತುಗಳನ್ನು ಕೇಳಿದ ಗ್ರಾಮವಾಸಿಗಳು ನಾಮುಂದು , ತಾ ಮುಂದು ಅಂತ ಸಾಲಸೂಲ ಮಾಡಿ ಮಂಗಗಳನ್ನು ಏಳು ನೂರು ರುಪಾಯಿಯಲ್ಲಿ ಖರೀದಿಸಿದರು
ಆ ಸೇವಕ ಗೂಡಲ್ಲಿ ಇದ್ದ ಮಂಗಗಳನ್ನೆಲ್ಲಾ ಏಳುನೂರು ರುಪಾಯಿಗಳ ಹಾಗೆ ಮಾರಿದ…
ದುಡ್ಡು ಇದ್ದವರು ಹೆಚ್ಚು ಹೆಚ್ಚು ಮಂಗಗಳನ್ನು ಖರೀದಿಸಿದರು… ದುಡ್ಡಿಲ್ಲದವರು ಒಂದೆರಡನ್ನಷ್ಟೇ ಖರೀದಿಸಿದರು…
ಖರೀದಿಸಿದ ಮಂಗಗಳನ್ನು ತಮ್ಮ ತಮ್ಮ ಮನೆಯಲ್ಲಿ ಕಟ್ಟಿ ಹಾಕಿ ಆ ವ್ಯಾಪಾರಿಯ ಬರುವಿಕೆಗಾಗಿ ಕಾದುಕುಳಿತರು ಆ ಗ್ರಾಮವಾಸಿಗಳು…
ದಿನಗಳನೇಕ ಕಳೆದರೂ ಆ ವ್ಯಾಪಾರಿ ಬರಲೇ ಇಲ್ಲ…
ಕೆಲವು ದಿನಗಳ ನಂತರ ಆ ಗ್ರಾಮವಾಸಿಗಳು ಆ ಸೇವಕನ ಹತ್ತಿರ ಹೋದರು…
ಆದರೆ ಆ ಸೇವಕನೂ ಅಲ್ಲಿ ಇರಲಿಲ್ಲ..
ಆಗಲೇ ಅವರಿಗೆ ಗೊತ್ತಾದದ್ದು… “ಬೆಲೆಯೇ ಇಲ್ಲದ ಈ ಮಂಗಗಳಿಗೆ ಏಳುನೂರು ರುಪಾಯಿಗಳನ್ನು ಕೊಟ್ಟು ಖರೀದಿಸಿ ಮೋಸ ಹೋದ ವಿಷಯ”
ಹಲವರ ಜೀವನವನ್ನು ನಾಶ ಮಾಡಿದ್ದು ಮತ್ತು ಹಲವರನ್ನು ಕೋಟ್ಯಾದಿಪತಿಗಳನ್ನಾಗಿ ಮಾಡಿದ್ದು ಇದೇ ಮಂಗನಾಟವಾಗಿದೆ….!!