ಥಾಯ್ಲೆಂಡ್ ಬಗ್ಗೆ ನಿಮಗೆಷ್ಟು ತಿಳಿದಿದೆ!
ಇತ್ತೀಚಿನ ವರೆಗೂ ‘ರಾಮರಾಜ್ಯ’ ವೇ ಉಳಿದಿರುವ ಏಕೈಕ ರಾಷ್ಟ್ರವಾಗಿ ಉಳಿದಿರುವ ದೇಶ ಥಾಯ್ಲೆಂಡ್
ಈ ವಿಷಯ ಬಹಳ ಮಂದಿಗೆ ತಿಳಿದಿರಲಾರದು.
ಶ್ರೀರಾಮನ ಪುತ್ರನಾದ ಕುಶನ ವಂಶಸ್ಥನಾದ
‘ ಭೂಮಿಬಲ ಅತುಲ್ಯ ತೇಜ’ ಎನ್ನುವ ರಾಜ ಥಾಯ್ಲೆಂಡ್ ನಲ್ಲಿ ರಾಜ್ಯಭಾರ ನಡೆಸಿದ್ದಾನೆ!!
ಶ್ರೀರಾಮನ ಕಾಲದಲ್ಲಿ ರಾಜ್ಯ ವಿಭಜನೆ ನಡೆದು ಪಶ್ಚಿಮದಲ್ಲಿ ಇನ್ನೊಬ್ಬ ಮಗನಾದ ಲವನಿಗೆ ‘ಲವಪುರ’ (ಇಂದಿನ ಲಾಹೋರ್), ಪೂರ್ವದಲ್ಲಿ ಕುಶ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡರು. ಹೀಗೆ ಥಾಯ್ಲೆಂಡ್ ನ ರಾಜರೆಲ್ಲಾ ಕುಶನ ವಂಶಸ್ಥರೇ ಆಗಿದ್ದಾರೆ.
ನಾಗವಂಶದ ಕನ್ಯೆಯನ್ನು ವಿವಾಹವಾದ ಕುಶನ ವಂಶವೇ ಇಂದಿನ ರಾಜವಂಶ ಕೂಡ. ಈ ವಂಶವನ್ನು ‘ಚಕ್ರಿ’ ವಂಶವೆಂದು ಕರೆದರು. ಚಕ್ರಿ ಎಂದರೆ ಚಕ್ರಪಾಣಿಯಾದ ವಿಷ್ಣುವೆಂದೇ ಅರ್ಥ. ಶ್ರೀರಾಮನೂ ವಿಷ್ಣುವಿನ ಅವತಾರವೇ ತಾನೇ. ಹೀಗಾಗಿ ಆ ರಾಜರುಗಳೆಲ್ಲಾ ತಮ್ಮ ಹೆಸರಿನ ಕೊನೆಗೆ ‘ರಾಮ’ ಎನ್ನುವ ಬಿರುದನ್ನು ಸೇರಿಸಿಕೊಂಡರು. ಆ ರಾಜ ಎಷ್ಟನೆಯವನು ಎಂದು ಗುರುತಿಸಲು ರಾಮನ ಮುಂದೆ ಸಂಖ್ಯೆಯನ್ನೂ ಸೇರಿಸುವ ಪರಿಪಾಠವಾಯಿತು. ಈಗಿರುವ ರಾಜ 9ನೆಯ ರಾಮ. ‘ರಾಮಾ ದಿ ನೈನ್ತ್’ ಎಂದು ಇಂಗ್ಲೀಷ್ ನಲ್ಲಿ ಕರೆಯುತ್ತಾರೆ. ಈ ರಾಜನ ಹೆಸರೇ ‘ಭೂಮಿಬಲ ಅತುಲ್ಯ ತೇಜ’.
ಥಾಯ್ಲೆಂಡ್ ನ ರಾಜಧಾನಿಯನ್ನು ಎಲ್ಲರೂ ಬ್ಯಾಂಕಾಕ್ ಎಂದು ಕರೆಯುತ್ತೇವಲ್ಲವೇ. ಆದರೆ ಅಲ್ಲಿನ ಸರ್ಕಾರದ ದಾಖಲೆಗಳಲ್ಲಿ ಅದು ‘ಅಯೂಥಿಯ’. ಅಯೋಧ್ಯೆಯ ಅಪಭ್ರಂಶ. ಪ್ರಪಂಚದಲ್ಲಿನ ಎಲ್ಲಾ ದೇಶಗಳ ರಾಜಧಾನಿಗಳ ಹೆಸರಿಗಿಂತ ಈ ರಾಜಧಾನಿಯ
ಪೂರ್ಣ ಹೆಸರು ಬಹಳ ಉದ್ದವಾದದ್ದು. ಅಷ್ಟೇ ಅಲ್ಲ ಈ ಹೆಸರು ಸಂಸ್ಕೃತದ್ದು. ನೋಡಿ ಹೀಗಿದೆ:
“ಕೃಂಗದೇವ ಮಹಾನಗರ ಅಮರರತ್ನ ಕೋಸಿಂದ್ರ ಮಹಿಂದ್ರಾಯುಧ್ಯಾ ಮಹಾತಿಲಕ ಭವ ನವರತ್ನ ರಜಧಾನಿಪುರಿ ರಮ್ಯ ಉತ್ತಮ ರಾಜ ನಿವೇಶನ ಅಮರವಿಮಾನ ಅವತಾರ ಸ್ಥಿತ ಶಕ್ರದತ್ತಿಯ ವಿಷ್ಣುಕರ್ಮ ಪ್ರಸಿದ್ಧಿ” !!!!
ಥಾಯ್ ಭಾಷೆಯಲ್ಲಿ ಬರೆಯಲು 163 ಅಕ್ಷರಗಳನ್ನು ಬಳಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಅವರು ಈ ಹೆಸರನ್ನು ಸುಮ್ಮನೆ ಹೇಳದೇ ಹಾಡಿನ ರೂಪದಲ್ಲಿ ಹೇಳುವುದು. ಕೆಲವರು ಸಂಕ್ಷಿಪ್ತವಾಗಿ ‘ಮಹಿಂದ್ರಾಯುಧ್ಯಾ’ ಎನ್ನುತ್ತಾರೆ. ಇಂದ್ರ ನಿರ್ಮಿಸಿದ ಅಯೋಧ್ಯ ಎಂದರ್ಥ. ಥಾಯ್ಲೆಂಡ್ ನ ರಾಜರೆಲ್ಲರೂ ಈ ಅಯೋಧ್ಯೆಯಲ್ಲೇ ವಾಸ ಮಾಡುತ್ತಾರೆ.
ಥಾಯ್ಲೆಂಡ್ ನಲ್ಲಿ 1932 ರಲ್ಲೇ ಪ್ರಜಾಪ್ರಭುತ್ವ ಸರಕಾರ ಬಂದಿತ್ತು. ಅಲ್ಲಿನ ಪ್ರಜೆಗಳು ಬೌದ್ಧ ಧರ್ಮ ವನ್ನು ಅನುಸರಿಸಿದರೂ ಅಲ್ಲಿನ ರಾಮರಾಜ್ಯ ವನ್ನೇ ಗೌರವಿಸುತ್ತಾರೆ. ಅಲ್ಲಿನ ರಾಜವಂಶದವರನ್ನು ಟೀಕಿಸುವುದಾಗಲೀ, ವಿವಾದಕ್ಕೆ ಎಳೆಯುವುದಾಗಲೀ ಇಂತಹ ಮರ್ಯಾದೆಗೆ ಕುಂದು ತರುವ ಕೆಲಸಗಳನ್ನು ಎಂದೂ ಮಾಡುವುದಿಲ್ಲ. ಅಲ್ಲಿನ ರಾಜವಂಶವೆಂದರೆ ಅವರೆಲ್ಲರಿಗೂ ಪೂಜನೀಯ. ರಾಜವಂಶದವರೆದುರು ಸೆಟೆದು ನಿಂತು ಮಾತಾಡುವುದಾಗಲೀ ಅವರಿಗೆ ದಿಟ್ಟತನದ ಉತ್ತರ ಕೊಡುವುದಾಗಲೀ ಅವರಿಗೆ ಸಲ್ಲದು. ಮುಂದಕ್ಕೆ ಬಾಗಿ ನಿಂತು ಮಾತಾಡುವುದು ಅಲ್ಲಿನ ರಾಜಮರ್ಯಾದೆ.
ಈಗಿರುವ ರಾಜನಿಗೆ ಮೂವರು ಹೆಣ್ಣುಮಕ್ಕಳು. ಅವರಲ್ಲಿ ಕಡೆಯ ರಾಜಕುಮಾರಿಗೆ ಹಿಂದೂಧರ್ಮಶಾಸ್ತ್ರದ ಬಗ್ಗೆ ಪರಿಜ್ಞಾನವಿದೆ.
ಥಾಯ್ಲೆಂಡ್ ನ ರಾಷ್ಟ್ರೀಯ ಧರ್ಮಗ್ರಂಥ ರಾಮಾಯಣ. ಥಾಯ್ ಭಾಷೆಯಲ್ಲಿ ಅದನ್ನು
‘ರಾಮ್ ಕಿಯೆನ್’ ಎಂದು ಕರೆಯುತ್ತಾರೆ. ನಮ್ಮ ವಾಲ್ಮೀಕಿ ರಾಮಾಯಣದಲ್ಲಿಬರುವ ಎಷ್ಟೋ ಸನ್ನಿವೇಶ ಗಳು ಅದರಲ್ಲಿವೆ.
1767ರಲ್ಲಿ ಒಮ್ಮೆ ಈ ಧರ್ಮ ಗ್ರಂಥದ ಮೂಲಪ್ರತಿ ಅದು ಹೇಗೋ ನಾಶವಾಗಿ ಹೋಯಿತಂತೆ. ಆಗಿನ ರಾಜನಾಗಿದ್ದ ಒಂದನೆಯ ರಾಮ (1736-1809) ತನ್ನ ನೆನಪಿನಿಂದ ಪುನಃ ಅದನ್ನು ಪೂರ್ಣವಾಗಿ ರಚಿಸಿದನಂತೆ. ಯಾವ ದೇಶದ ಸರ್ಕಾರ ಯಾವುದೇ ಜಾತ್ಯಾತೀತ ಧ್ಯೇಯಗಳನ್ನು ತಂದರೂ ಥಾಯ್ಲೆಂಡ್ ಮಾತ್ರ ರಾಮಯಣವನ್ನೇ ತಮ್ಮ ಧರ್ಮಗ್ರಂಥವನ್ನಾಗಿ ಘೋಷಿಸಿ ಅದನ್ನು ನಡೆಸಿಕೊಂಡು ಬರುತ್ತಿರುವುದು ಮೆಚ್ಚಬೇಕಾದ ವಿಷಯ.
ಥಾಯ್ಲೆಂಡ್ ನಲ್ಲಿ ‘ರಾಮ್ ಕಿಯೆನ್’ (ರಾಮಾಯಣ) ವನ್ನು ಅನುಸರಿಸಿ ಅನೇಕ ನಾಟಕಗಳು, ತೊಗಲುಬೊಂಬೆ ಆಟಗಳು ಇವೆ. ಆ ನಾಟಕಗಳಲ್ಲಿ ಬರುವ ಹೆಸರುಗಳನ್ನು ನೋಡಿ:
- ರಾಮ್ (ಶ್ರೀರಾಮ)
- ಲಕ್ (ಲಕ್ಷ್ಮಣ)
- ಪಾಲಿ (ವಾಲಿ)
- ಸುಕ್ರೀಪ್ (ಸುಗ್ರೀವ)
- ಓನ್ಕೋಟ್ (ಅಂಗದ)
- ಖೋಂಪೂನ್ (ಜಾಂಬವಂತ)
- ಬಿಪೇಕ್ (ವಿಭೀಷಣ)
- ತೋತಸ್ ಕನ್ (ದಶಕಂಠನಾದ ರಾವಣ )
- ಸದಾಯು (ಜಟಾಯು )
- ಸುಪನ್ ಮಚ್ಛಾ (ಶೂರ್ಪನಖ)
- ಮಾರಿತ್ (ಮಾರೀಚ )
- ಇಂದ್ರಚಿತ್ ( ಇಂದ್ರಜಿತ್, ಮೇಘನಾದ )
ಥಾಯ್ಲೆಂಡ್ ನಲ್ಲಿನ ಹಿಂದೂ ದೇವತೆಗಳು:
ಥಾಯ್ಲೆಂಡ್ ನಲ್ಲಿ ಬೌದ್ಧ ಧರ್ಮದ ಅನುಯಾಯಿಗಳೇ ಹೆಚ್ಚು. ಹಿಂದೂಗಳು ಅಲ್ಪಸಂಖ್ಯಾತರು. ಆದರೆ ಇಲ್ಲಿ ಬೌದ್ಧರೂ ಕೂಡ ಹಿಂದೂದೇವತೆಗಳನ್ನು ಪೂಜಿಸುತ್ತಾರೆ. ದೇವತೆಗಳ ಹೆಸರುಗಳು ಥಾಯ್ ಭಾಷೆಯಲ್ಲಿ:
1.ಈಸುಅನ್ ( ಈಶ್ವರ)
2.ನಾರಾಯ (ನಾರಾಯಣ, ವಿಷ್ಣು)
- ಫ್ರಾಮ (ಬ್ರಹ್ಮ)
- ಇನ್ ( ಇಂದ್ರ)
- ಆಥಿತ್ (ಆದಿತ್ಯ, ಸೂರ್ಯ ದೇವ)
- ಪಾಯ್ (ವಾಯು)
ಥಾಯ್ಲೆಂಡ್ ನ ರಾಷ್ಟ್ರೀಯ ಪಕ್ಷಿ : ಗರುತ್ಮಂತ ( ಗರುಡ).
ಹಿಂದಿನ ಗರುಡಪಕ್ಷಿ ಬಹಳ ದೊಡ್ಡದಾಗಿರುತ್ತಿತ್ತಂತೆ. ಆದರೆ ಈಗ ಈ ಜಾತಿ ಲಭ್ಯವಿಲ್ಲವೆಂದು ಹೇಳುತ್ತಾರೆ.
ಇಂಗ್ಲೀಷ್ ನಲ್ಲಿ ಇದನ್ನು ‘The Brahmany Kite’ -.ಬ್ರಾಹ್ಮಣ ಪಕ್ಷಿ, ಎಂದು ಕರೆಯುವುದು ಸೋಜಿಗವಲ್ಲವೇ!!! ಇದರ Scientific ಹೆಸರು ‘Haliastur Indus. ಫ್ರೆ಼ಂಚ್ ಪಕ್ಷಿಶಾಸ್ತ್ರಜ್ಞ ಜಾಕ್ಸ್ ಬ್ರೈಸನ್ ಇದನ್ನು ಗುರುತಿಸಿ ಇದಕ್ಕೆ Falco Indus ಎಂದು ಹೆಸರಿಸಿದ. ಈತ ನಮ್ಮ ಪಾಂಡಿಚೆರಿ ಸಮೀಪದ ಒಂದು ಬೆಟ್ಟದಲ್ಲಿ ಇದನ್ನು ಮೊದಲು ನೋಡಿದ್ದಾಗಿ ಉಲ್ಲೇಖಿಸಿದ್ದಾನೆ. ಇದರಿಂದ ಇಂತಹ ದೊಡ್ಡ ಗರುಡ ಪಕ್ಷಿ ಕಲ್ಪನೆಯದಲ್ಲ ಎನ್ನಿಸುತ್ತದೆ.
ನಮ್ಮ ಪುರಾಣಗಳಲ್ಲಿ ಈ ಪಕ್ಷಿಯನ್ನು ವಿಷ್ಣುವಿನ ವಾಹನವೆಂದೇ ಕರೆದರಷ್ಟೆ. ಥಾಯ್ಲೆಂಡ್ ಪ್ರಜೆಗಳೂ ಅದು ತಮ್ಮ ರಾಜನಾದ ರಾಮನ ಮೂಲ ಅವತಾರ ವಾದ ವಿಷ್ಣುವಿನ ವಾಹನವಾದ್ದರಿಂದ ಗರುಡ ಪಕ್ಷಿಯನ್ನು ಬಹಳ ಗೌರವದಿಂದ ಕಾಣುತ್ತಾರೆ. ಅಲ್ಲದೆ ಅದನ್ನೇ ಅವರು ತಮ್ಮ ರಾಷ್ಟ್ರೀಯ ಪಕ್ಷಿಯನ್ನಾಗಿ ಮಾಡಿಕೊಂಡಿದ್ದಾರೆ. ಅದರ ದೊಡ್ಡ ವಿಗ್ರಹವೊಂದನ್ನು ಅವರ ಪಾರ್ಲಿಮೆಂಟ್ ಮುಂದೆ ನಿಲ್ಲಿಸಿದ್ದಾರೆ.
ಥಾಯ್ಲೆಂಡ್ ವಿಮಾನನಿಲ್ದಾಣದ ಹೆಸರು ‘ಸುವರ್ಣ ಭೂಮಿ ಏರ್ ಪೋರ್ಟ್’ ಎಂದಿದೆ. ನಮ್ಮಲ್ಲಿ ಸಂಸ್ಕೃತದ ಹೆಸರುಗಳನ್ನು ವಿಮಾನನಿಲ್ದಾಣಗಳಿಗಿಡುವ ಸಂಸ್ಕೃತಿ ಜಾತ್ಯಾತೀತತೆಯ ಕಾರಣದಿಂದ ಬರಲೇ ಇಲ್ಲ.
‘ ಸುವರ್ಣ ಭೂಮಿ’ ವಿಮಾನನಿಲ್ದಾಣ 563,000 square meters ನಷ್ಟು ವಿಶಾಲವಾಗಿದ್ದು ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿದೆ. ಏರ್ ಪೋರ್ಟ್ ಎದುರಿಗೆ ‘ಕ್ಷೀರಸಾಗರ ಮಥನ’ ದ ದೊಡ್ಡ ಪ್ರತಿಕೃತಿಯಿದ್ದು ಅದರಲ್ಲಿ ದೇವತೆಗಳೂ ರಾಕ್ಷಸರೂ ಮಾಡಿದ ಸಮುದ್ರ ಮಥನವನ್ನು ಬಿಂಬಿಸಲಾಗಿದೆ.
ಇಷ್ಟೆಲ್ಲಾ ಇರುವ ಆ ಪುಟ್ಟ ರಾಷ್ಟ್ರ ಥಾಯ್ಲೆಂಡ್ ನಲ್ಲೇ ನಮ್ಮ ಹಿಂದೂ ಸಂಸ್ಕೃತಿ ನಮ್ಮಲ್ಲಿಗಿಂತ ಹೆಚ್ಚು ಜೀವಂತವಾಗಿದೆಯೇನೋ ಅನ್ನಿಸುವುದಿಲ್ಲವೇ!!!….
🙏🏻🙏🏻🙏🏻