“ಸತ್ಸಂಗದ ಫಲ”
ವಶಿಷ್ಠ ಮಹರ್ಷಿಗಳು ಒಂದು ಸಾರಿ ಒಂದು ಸಪ್ತಾಹ ಮಾಡಿದರು, ವಿಶ್ವಾಮಿತ್ರ ಋಷಿಗಳನ್ನು.ಅಧ್ಯಕ್ಷತೆಗೆ ಕರೆದಿದ್ದರು . ಸಪ್ತಾಹವೆಲ್ಲ.ಮುಗಿದು ಪೂರ್ಣಾಹುತಿಯಾದ ಮೇಲೆ ಅಧ್ಯಕ್ಷರು ಹೊರಡುವಾಗ ವಶಿಷ್ಠರು ಸಂಭಾವನೆಯಾಗಿ ತಮ್ಮ ಸತ್ಸಂಗದ 1/4 ಘಳಿಗೆಯ ಫಲವನ್ನು ಸಂಕಲ್ಪ ಪೂರ್ವಕವಾಗಿ ಧಾರೆ ಎರೆದರು. ವಿಶ್ವಾಮಿತ್ರರಿಗೆ ಇದು ತೃಪ್ತಿಕೊಡಲಿಲ್ಲ , ಹಠವಾದಿಯಾದ ವಿಶ್ವಾಮಿತ್ರರು ತಾವೂ ಒಂದು ಸಪ್ತಾಹವನ್ನು ಮಾಡಲು ನಿಶ್ಚಯಿಸಿ ಅದರ ಅಧ್ಯಕ್ಷತೆಗೆ ವಶಿಷ್ಠರನ್ನೇ ಕರೆದರು ಸಪ್ತಾಹದ ಅಂತ್ಯದಲ್ಲಿ. ತಮ್ಮ ಹನ್ನೆರಡು ವರ್ಷದ ತಪಸ್ಸಿನ ಫಲವನ್ನೇ ಧಾರೆ ಎರೆದರು, ತಪಸ್ಸು ನಿನ್ನ ಕರ್ಮದ ಫಲ ಅದನ್ನು ನೀನೆ ಭೋಗಿಸಬೇಕು ವಿನಃ ಹೀಗೆ ಧಾರೆ ಎರೆಯಬಾರದು . ಮೇಲಾಗಿ ನಿನ್ನ ತಪಸ್ಸಿನ ಫಲ ಸತ್ಸಂಗದ ಫಲಕ್ಕಿಂತ ಹೆಚ್ಚಿನದೇನಲ್ಲ ಎಂದು ವಶಿಷ್ಠರು ತಿರಸ್ಕರಿಸಿದರು ಇದರಿಂದ ಉಂಟಾದ ಜಗಳದಲ್ಲಿ ಪಂಚಾಯಿತಿ ನಡೆದು ಸತ್ಸಂಗದ ಫಲ ದೊಡ್ಡದೇ ತಪಸ್ಸಿ ಫಲ ದೊಡ್ಡದೇ ಎಂಬುದು ನ್ಯಾಯ ತೀರ್ಮಾನ ಕೊಡಲು.1 ಸೂರ್ಯ 2 ವಾಯು 3 ಅಗಸ್ತ್ಯರು 4 ಆದಿಶೇಷ ನನ್ನು ಕರೆಸುವುದು , ಇವರನ್ನು ಕರೆತರಲು ವಿಶ್ವಾಮಿತ್ರರೇ ಹೋಗಿ ಬರಬೇಕೆಂದು ಪಂಚಾಯತಿಯಲ್ಲಿ ತೀರ್ಮಾನವಾಯಿತು
ವಿಶ್ವಾಮಿತ್ರರು ನೇರವಾಗಿ ಸೂರ್ಯನಲ್ಲಿ ವಿಚಾರ ತಿಳಿಸಿ ತಾವು ಪಂಚಾಯ್ತಿ ಹೇಳಲು ಬರಬೇಕೆಂದು ಕೇಳಿಕೊಂಡರು ” ನೋಡಿ ನನಗೆ ಜಗತ್ತಿಗೆ ಬೆಳಕು ಮತ್ತು ಶಾಖ ಪ್ರಸಾರಕ್ಕೆ. ಭಗವಂತ ನನ್ನ ನೇಮಿಸಿದ್ದಾನೆ ಈ ಕಾರ್ಯಕ್ಕೆ ಬೇರೆ ಯಾರನ್ನಾದರೂ ಕೂರಿಸಿದರೆ ನಾನು ಇಲ್ಲಿಂದ ನಿಮ್ಮಲ್ಲಿಗೆ ಬರಃವೆನು ಎಂದನು , ಈ ಕೆಲಸ ಯಾರಿಂದ ಮಾಡಲು ಸಾಧ್ಯ ? ಅಲ್ಲಿಂದ ವಾಯು ದೇವನು ಸಹ ನನ್ನ ಕಾರ್ಯಕ್ಕೆ. ಯಾರನ್ನಾದರೂ ಕಳುಹಿಸು ಎಂದನು ಅಲ್ಲಿಂದ ನೇರವಾಗಿ ಅಗಸ್ತ್ಯರ ಬಳಿ ಬಂದು ಆಹ್ವಾನಿಸಲು ಅವರು ಹೇಳಿದರು “ನಾನು ಬೆಳೆಯುತ್ತಿರುವ ಈ ವಿಂಧ್ಯಾ ಪರ್ವತದ ತಲೆಯ ಮೇಲೆ ಕೈ ಇಟ್ಟು ಕೊಂಡಿದ್ದೇನೆ. ನಾನು ಕೈತಗೆದರೆ ಅದು ಪುನಃ ಬೆಳೆಯಲು ಪ್ರಾರಂಭಿಸಿ ಜನತೆಗೆ ತುಂಬಾ ತೊಂದರೆ ಕೊಡುತ್ತದೆ ಆದ್ದರಿಂದ ಈ ಕೆಲಸಕ್ಕೆ. ಬೇರೆ ಯಾರಾದರೂ ಸಿಕ್ಕರೆ ನಾನು ಬರುವೆನೆಂದರು. “ನಾಲ್ಕನೆಯವ ಆದಿಶೇಷನಲ್ಲಿ ಹೋಗಿ ಕರೆಯಲಾಗಿ ಅವನೆಂದನು” ನಾನು ಈ ಭೂಮಿಯನ್ನು ತಲೆಯಮೇಲೆ ಹೊತ್ತಿದ್ದೇನೆ , ಬೇರೆಯಾರಾದರೂ ಬಂದು ಹೊರಲು ಸಿದ್ದರಾದರೆ ನಾನು ಬರುವೆನೆಂದರು , ಅವಮಾನಿತನಾದ ವಿಶ್ವಮಿತ್ರರು ವಶಿಷ್ಠರಲ್ಲಿಗೆ ಬಂದು ಪಂಚಾಯಿತಿಸ್ಥರು ನನ್ನ ಮಾತಿಗೆ ಬರಲಿಲ್ಲ , ನೀವೇ ಕರೆದುಕೊಂಡು ಬನ್ನಿರಿ ಎಂದು ತನ್ನ ಭಾರ ಇಳಿಸಿಕೊಂಡರು,… ಹೇಗೆ ಈ ವಶಿಷ್ಠ ಕರೆತರುತ್ತಾರೋ ನಾನು ನೋಡೇ ಬಿಡುವೆ ಎಂದು ಕುಳಿತುಕೊಂಡರು
ಮಾರನೇ ದಿನ ವಶಿಷ್ಠರು ನೇರವಾಗಿ ಸೂರ್ಯನಲ್ಲಿಗೆ ಹೋಗಿ ಕರೆಯಲು ಅದೇ ಉತ್ತರ ಬಂತು, ತಕ್ಷಣ ವಶಿಷ್ಠರು ತಮ್ಮ ಜಪಮಾಲೆಯನ್ನು ತೆಗೆದು ಅಭಿಮಂತ್ರಿಸಿ “ನಾನು ಸತ್ಸಂಗ ಮಾಡಿದ್ದು ನಿಜವಾದರೆ ಸೂರ್ಯನ ಕಾರ್ಯವನ್ನು.ಈ ಜಪಸರ ಮಾಡಲಿ ” ಎಂದು ಸಂಕಲ್ಪ ಮಾಡಲು ಸೂರ್ಯನ ಕೆಲಸಕ್ಕೆ ಜಪಮಾಲೆ ನಿಂತುಕೊಂಡಿತು . ನಂತರ ವಶಿಷ್ಠರು ಸೂರ್ಯನನ್ನು ಕರೆದುಕೊಂಡು ವಾಯುವಿನ ಬಳಿ ಬಂದು , ವಾಯುವಿನ ಕೆಲಸಕ್ಕೆ ತಮ್ಮ ಬೀಸಣಿಕೆಯನ್ನು ನಿಯಮಿಸಿ ಕೆಲಸ ಮಾಡು ಎಂದು ಸಂಕಲ್ಪ ಮಾಡಲು ಸತ್ಸಂಗದ ಪ್ರಭಾವದಿಂದ ಬೀಸಣಿಕೆ ಕೆಲಸ ಪ್ರಾರಂಭ ಮಾಡಿತು , ಅದೇ ರೀತಿ ಅಗಸ್ತ್ಯರ ಕಾರ್ಯಕ್ಕೆ ತಮ್ಮ ಕಮಂಡಲನ್ನೂ, ಆದಿಶೇಷ ನ ಕಾರ್ಯಕ್ಕೆ ತಮ್ಮ ಯೋಗ ದಂಡವನ್ನೂ ನೇಮಿಸಿ ಅವರೆಲ್ಲರನ್ನೂ ಕರೆದುಕೊಂಡು ವಿಶ್ವಾಮಿತ್ರರ ಹತ್ತಿರ ಬಂದರು ಇದರಿಂದ ವಿಶ್ವಾಮಿತ್ರರಿಗೆ.ಅರ್ಥವಾಯಿತು ಸತ್ಸಂಗದ ಫಲವು ತಪಸ್ಸಿನ ಫಲಕ್ಕಿಂತಲೂ ಹೆಚ್ಚಿನದೆಂದು ತಮ್ಮ ತಪ್ಪನ್ನು ತಾವೇ ಒಪ್ಪಿಕೊಂಡರು,
ಸತ್ಸಂಗವೂ.ಮಾನವರನ್ನು ಮಾಧವನನ್ನಾಗಿ ಮಾಡುತ್ತದೆಂಬ ವಿಚಾರವನ್ನು ಶಂಕರಾಚಾರ್ಯರು ತಮ್ಮ ಭಜಗೋವಿಂದಂ ಸ್ತೋತ್ರದಲ್ಲಿ ಹೇಳಿದ್ದಾರೆ
ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿರ್ಮೋಹತ್ವಂ|
ನಿರ್ಮೋಹತ್ತ್ವೆ ನಿಶ್ಚಲತತ್ವಂ ನಿಶ್ಚಲತತ್ತ್ವೆ ಜೀವನ್ಮುಕ್ತಿಃ ಎಂಬುದಾಗಿ ಅಪ್ಪಣೆ ಕೊಡಿಸಿರುತ್ತಾರೆ ಆದ್ದರಿಂದ ಸತ್ಸಂಗ ಬಹಳ ಶ್ರೇಷ್ಠವಾದುದು ಇದನ್ನು ಪ್ರತಿಯೊಂದು ಅರಿತರೇ ಬಾಳು ಹಸನು.