॥ ದರ್ಭೆಯ ಬಗ್ಗೆ ಒಂದು ಮಾಹಿತಿ ॥
ಗರುಡ ರಾಜನು ತನ್ನ ಪರಿವಾರವನ್ನು ರಕ್ಷಿಸಿಕೊಳ್ಳಲು ನಾಗ ಕುಲದ ಕುದ್ರುವಿನ ಪರಿವಾರಕ್ಕೆ ಸಹಾಯ ಮಾಡಲು ದೇವಲೋಕಕ್ಕೆ ಹೋಗಿ ಅಮೃತ ಕಲಶವನ್ನು ತರುತ್ತಾನೆ
ಆಗ ಆ ಕಳಶವನ್ನು ದರ್ಭೆ ಮೇಲಿಟ್ಟು ತನ್ನ ಮಕ್ಕಳನ್ನು ಕರೆತರಲು ಹೋಗುತ್ತಾಳೆ ಕದ್ರುವು
ಆಗ ಇಂದ್ರನು ಧಾವಿಸಿ ಬಂದು ಅಮೃತ ಕಲಶವನ್ನು ಅಪಹರಿಸಿ ದೇವಲೋಕಕ್ಕೆ ಒಯ್ದುನು
ಹಾಗೆ ಕಳಸವನ್ನು ಒಯ್ಯುತ್ತಿದ್ದಾಗ ಅಮೃತದ ಕೆಲವು ಬಿಂದುಗಳು ತುಳುಕಿ ದರ್ಭೆ ಹುಲ್ಲಿನ
ಮೇಲೆ ಬಿದ್ದವು ನಂತರ ಬಂದ ಸರ್ಪಗಳು ದರ್ಭೆಯ ಮೇಲೆ ಬಿದ್ದಿದ್ದ ಅಮೃತ ಬಿಂದುಗಳನ್ನು
ನೆಕ್ಕಲು ಹೋಗಿ ತಮ್ಮ ನಾಲಗೆಗಳನ್ನು ಸೀಳಿಕೊಂಡವು .
ಈ ಕಾರಣದಿಂದ ಸರ್ಪಗಳಿಗೆ ಸೀಳಿದ ನಾಲಿಗೆಗಳಾಗಿ ದ್ವಿಜಿಹ (ಎರಡು )ಎಂಬ ಹೆಸರನ್ನು ಪಡೆದವು
ಅಮೃತ ಬಿಂದುಗಳು ತುಳುಕಿ ಈ ರೀತಿ ಧರ್ಭೆಗಳ ಮೇಲೆ ಬಿದ್ದಾಗ ಅವು ಅಮೃತತ್ವವನ್ನು ಪಡೆದು
ಪವಿತ್ರಿ ಎಂಬ ಹೆಸರನ್ನು ಪಡೆದು ದರ್ಭೆಗಳು ಒಂದೇ ರೀತಿಯ ಹುಲ್ಲಾಗಿದ್ದು ಅವು
ಹಿಂದೂಗಳಿಗೆ ಪರಮ ಪವಿತ್ರವಾಗಿವೆ
ಇವುಗಳಲ್ಲಿ ಅನೇಕ ವಿಧಗಳಿವೆ ದರ್ಭೆ .ಕುಶ. ಕಾಶವೆಂಬ ವಿಶ್ವಾಮಿತ್ರ ದರ್ಭೆ . ಯಮವೆಂಬ ಧ್ಯಾನದ ಎಲೆ. ಭತ್ತದ ಗರಿ .ಜೊಂಡು .ಬಿಳಿ ಕಮಲ ಮುಂತಾದವುಗಳು
ದೇವತಾ ಕಾರ್ಯವಿರಲಿ ಪಿತೃ ಕಾರ್ಯಗಳಲ್ಲಿ ದರ್ಭೆ ಇಲ್ಲದೆ ಮಾಡುವಂತಿಲ್ಲ ಅಲ್ಲದೆ ಈ
ಸಂದರ್ಭದಲ್ಲಿ ದರ್ಭೆಯಿಂದ ಮಾಡಿದ ಪವಿತ್ರವನ್ನು ಬಲಗೈ ಉಂಗುರದ ಬೆರಳಿಗೆ ಧರಿಸಬೇಕು
ಗ್ರಹಣ ಕಾಲದಲ್ಲಿ ಸಂಭವಿಸಬಹುದಾದ ದುಷ್ಟ ಪರಿಣಾಮಗಳನ್ನು ತಡೆಯಲು ದರ್ಭೆಗಳನ್ನು ನೀರು
ತಿಂಡಿ ತಿನಿಸುಗಳು ಮುಂತಾದವುಗಳ ಮೇಲೆ ಹರಡುತ್ತಾರೆ ದರ್ಬೆಯ ಆಗ್ರದಲ್ಲಿ ಶಿವನು
ಮಧ್ಯದಲ್ಲಿ ವಿಷ್ಣುವು ಬುಡದಲ್ಲಿ ಬ್ರಹ್ಮನು ಉಪಸ್ಥಿತರಿರುತ್ತಾರೆ ೆಂದು ನಂಬಲಾಗಿದೆ
ಪೂರ್ವದಲ್ಲಿ ಮಾನವರು ಬಹುವಿಧವಾದ ದಾನಗಳನ್ನು ಮಾಡಿದರು ಆಗ ದೈತ್ಯರು ಈ ದಾನಗಳ
ಫಲವನ್ನು ತಾವೇ ಪಡೆದರು ಈ ಬಗ್ಗೆ ಚಿಂತಿಸಿದ ಬ್ರಹ್ಮದೇವನು ಒಂದು ನಿಯಮವನ್ನು ಮಾಡಿದನು
ಇನ್ನು ಮುಂದೆ ದೇವತಾ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ಜಲವನ್ನು ಉಪಯೋಗಿಸಬೇಕು
ಹಾಗೆಯೆ ಪಿತೃ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ತಿಲಗಳನ್ನು ಬಳಸಬೇಕು
ಇವುಗಳು ಯಜ್ಞಾಂಗಗಳಾಗಿ ಇರುವುದರಿಂದ ದೈತ್ಯರು ಅವುಗಳ ಹತ್ತಿರ ಬರಲಾಗುವುದಿಲ್ಲ ಈ
ರೀತಿ ದೇವತಾ ಪಿತೃ ಕಾರ್ಯಗಳನ್ನು ರಕ್ಷಿಸಲು ಪರಮಾತ್ಮನು ದರ್ಬೆ ಮತ್ತು ತಿಲಗಳನ್ನು
ಸೃಷ್ಟಿಸಿದನು
ಧರ್ಭೆಗಳ ಸೃಷ್ಟಿಯ ಬಗ್ಗೆ ಪುರಾಣದಲ್ಲಿ ಒಂದು ಕಥೆಯಿದೆ ವಿಷ್ಣುವು ವರಾಹ ಅವತಾರ
ತಾಳಿದಾಗ ಅವನು ಒಮ್ಮೆ ಭೂಮಿಯ ಮೇಲೆ ನಿಂತು ಮೈ ಕೆಡವಿದಾಗ ಅವನ ಶರೀರದ ಕೆಲವು ರೋಮಗಳು
ಬಿದ್ದು ಧರ್ಭೆಗಳಾದವು ಎಂದು ಹೇಳಲಾಗಿದೆ ರೋಮಗಳು ಬಿದ್ದ ಸ್ಥಳವು ಬಹ್ಮಿಷ್ಮತಿ (
ದರ್ಭೆಗಳ ಪ್ರದೇಶ ) ಎಂದು ಖ್ಯಾತವಾಯಿತು ಅಲ್ಲದೆ ಅದು ಸ್ವಾಯಂಭುವ ಮನುವಿನ
ರಾಜಧಾನಿಯಾಗಿತು