ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಷ್ಣು ಭಕ್ತಿಯ ಕಥೆ

ವಿಷ್ಣು ಭಕ್ತಿ…!

ಒಮ್ಮೆ ಸನತ್ಕುಮಾರರು ಯಮಧರ್ಮನನ್ನು ಭೇಟಿ ಮಾಡಲು ಹೋಗಿದ್ದ. ರು .ಅಲ್ಲಿ ಅವರು ಒಂದು ಅದ್ಭುತ ಸಂಗತಿ ಯನ್ನು ನೋಡಿದರು . ಒಬ್ಬ ಪುರುಷ ಸುವರ್ಣ. . ಸಿಂಹಾಸನದಲ್ಲಿ ಕುಳಿತು ಅಲ್ಲಿಗೆ ಬಂದಾಗ , ಯಮನು ಅವನನ್ನು ಕೈಹಿಡಿದು ಕರೆ ತಂದು ಅರ್ಘ್ಯಾದಿಗಳಿಂದ ಸತ್ಕರಿಸಿದನು ಹಾಗೂ ಅವರಿಂದ ಕೆಲವು ಜ್ಞಾನ ತತ್ವ ಗಳನ್ನು ತಿಳಿಸಲು ಕೇಳಿಕೊಂಡನು.ಅಷ್ಟರಲ್ಲೇ ಮತ್ತೊಬ್ಬ ಪುರುಷ ನು ವಿಮಾನದಲ್ಲಿ ಕುಳಿತು ಬಂದಾಗ , ಯಮನು ಮೊದಲ ವ್ಯಕ್ತಿ ಯಂತೆಯೇ ಇವರನ್ನು ಸತ್ಕರಿಸಿದನು. ಇದನ್ನು ಕಂಡು ಆಶ್ಚರ್ಯ ಚಕಿತರಾಗಿ ಅವರಿಬ್ಬರೂ ಯಾವ ಕರ್ಮದಿಂದ ಇಷ್ಟು ಗೌರವಕ್ಕೆ ಪಾತ್ರ ರಾದವರು ಎಂದು ಸನತ್ಕುಮಾರರು ಪ್ರಶ್ನಿಸಿದರು. ಅದಕ್ಕೆ ಯಮನು ಹೇಳುತ್ತಾನೆ

  ಮುತ್ತತ್ತಿಯ ಆಂಜನೇಯನ ದೇವಾಲಯ

ವೈದಿಶ ನಗರದ ಪ್ರಸಿದ್ಧ ರಾಜ ಧರಪಾಲನು ವಿಷ್ಣು ಮಂದಿರವನ್ನು ಕಟ್ಟಿಸಿ , ವಿಷ್ಣು ವಿಗ್ರಹವನ್ನು ಪ್ರತಿಷ್ಠಾಪಿಸಿದನು. ಅಲ್ಲಿ ನಿತ್ಯವೂ ಧರ್ಮ ಮತ್ತು ಪುರಾಣ ಪುಣ್ಯ ಕಥೆಗಳ ಶ್ರವಣ, ಪಠಣಕ್ಕೆ ನಡೆಯುವ ವ್ಯವಸ್ಥೆ ಮಾಡಿದನು. ಎಲ್ಲ ಕಡೆಯಲ್ಲೂ ಭಗವಂತನ ನಾಮಸ್ಮರಣೆ ನಡೆಯುವಂತೆ ನೋಡಿಕೊಂಡನು. ಕಾಲ ಕ್ರಮೇಣ ಕ್ಷೀಣನಾದ ರಾಜನು ಮರಣ ಹೊಂದಿ ವೈಕುಂಠ ಧಾಮಕ್ಕೆ ಬಂದನು …

ಇನ್ನೂ ಎರಡನಯವನು ಬ್ರಾಹ್ಮಣ , ಇವನು ಸತ್ಸಂಗದಿಂದ ಪುರಾಣ ಶ್ರವಣ , ಸುಪಾತ್ರರಿಗೆ ದಾನ ಧರ್ಮ ದಿಂದ ಪುಣ್ಯಾರ್ಜನೆ ಮಾಡಿ ಸ್ವರ್ಗ ಲೋಕವನ್ನು ಹೊಂದಿದ . ಈ ಕರ್ಮಗಳೇ ಅವರಿಗೆ ಮೊಕ್ಷವು ಪ್ರಾಪ್ತಿಯಾಗುವಂತೆ ಮಾಡಿದೆ

  ಕನ್ನಡ ಶ್ರೀಮದ್ಭಗವದ್ಗೀತಾ ಸಂಪೂರ್ಣ ಶ್ಲೋಕ

ಅದಕ್ಕಾಗಿಯೇ ಜೀವನ ಭಗವಂತನ ನಾಮ‍ಸ್ಮರಣೆಯನ್ನಃ ಸದಾ ಮಾಡುವವವನು ಕೊನೆಗೆ ಭಗವಂತನನ್ನೇ ಹೊಂದುತ್ತಾನೆ . ವಿಷ್ಣು ಭಕ್ತನಾದವನು ಗೋಪಿಚಂದನ ತಿಲಕವನ್ನು ಧರಿಸಬೇಕು. ಇದಕ್ಕೆ ವರ್ಣ ಭೇಧವಿಲ್ಲ. ಇದರಿಂದ ನಾಲ್ಕು ವರ್ಣದವರೂ ಶುದ್ಧರಾಗುತ್ತಾರೆ. ಮೃತ್ಯು ಸಮಯದಲ್ಲಿ ಗೋಪಿಚಂದನದ ತಿಲಕವಿದ್ದರೆ , ಅವರು ಸದ್ಗತಿ ಹೊಂದುತ್ತಾರೆ.

ಮನೆಯಲ್ಲಿ ಲಕ್ಷೀ ಸಹಿತ ವಿಷ್ಣುವನ್ನು ಪುರುಸೂಕ್ತ ಮತ್ತು ಶ್ರೀಸೂಕ್ತದಿಂದ ದಿನವೂ ಪೂಜಿಸಿದಲ್ಲಿ ದಾರಿದ್ರ್ಯ ದಿಂದ ಮುಕ್ತಿ ಹೊಂದುತ್ತಾರೆ . ಲಕ್ಷೀ ಸಹಿತ ವಿಷ್ಣು ವಿನ ಮುಂದೆ ದಿನವೂ ತುಪ್ಪದ ದೀಪ ಬೆಳಗಿದಲ್ಲಿ ಸಂತತಿ ಅಭಿವೃದ್ಧಿ ಹೊಂದುತ್ತದೆ….
✍️✍️ ವೀಣಾ ಜೋಶಿ

Leave a Reply

Your email address will not be published. Required fields are marked *

Translate »