ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಇತಿಹಾಸ ಪ್ರಸಿದ್ಧ ವಂಡಾರು ಕಂಬಳ

” ಹಿಂದಿನಕಾಲವಲ್ಲ – ವಂಡಾರುಕಂಬಳವಲ್ಲ ”

ಇತಿಹಾಸ ಪ್ರಸಿದ್ಧ ವಂಡಾರು ಕಂಬಳ
ವಂಡಾರಿನ ಹಿರಿಯರು ಆಗಾಗ ಗಾದೆ ಮಾತೊಂದನ್ನು ಹೇಳುತ್ತಿರುತ್ತಾರೆ, ಅದೇನೆಂದರೆ ‘ಹಿಂದಿನ ಕಾಲವಲ್ಲ – ವಂಡಾರು ಕಂಬಳವಲ್ಲ’ ಅಂತ. ಈಗಿನ ಕೆಟ್ಟು ಹೋದ ಪರಿಸ್ಥಿತಿಗೆ ರೋಸಿಹೋದ ಹಿರಿಯ ತಲೆಗಳು ಆಗಾಗ ಈ ಗಾದೆಯನ್ನು ಹೇಳುತ್ತಿರುತ್ತಾರೆ. ಆದರೆ ಆ ಗಾದೆ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ. ಮಂಗಳೂರು, ಉಡುಪಿ, ಕುಂದಾಪುರ, ಮೂಡಲಕಟ್ಟೆ, ಪುತ್ತೂರು ಸೇರಿದಂತೆ ಹಲವೆಡೆ ನಡೆಯುವ ಕಂಬಳ ಒಂದು ವಿಶೇಷವಾದ ಸಾಂಪ್ರದಾ ಯಿಕ ಕ್ರೀಡೆಯಾಗಿದೆ.
ಈ ಭಾಗಗಳಲ್ಲಿ ಹಬ್ಬ ಹರಿದಿನಗಳು ಹೇಗೋ, ಹಾಗೇ ಕಂಬಳ ಕೂಡ ಪ್ರಮುಖವಾದದ್ದು. ನಾನೀಗ ಹೇಳ ಹೊರಟಿ ರುವುದು ಕುಂದಾಪುರದಿಂದ ಸುಮಾರು 30ಕಿ.ಮೀ. ದೂರದಲ್ಲಿರುವ ವಂಡಾರು ಎಂಬ ಊರಿನ ಕಂಬಳದ ಬಗ್ಗೆ. ಇದಕ್ಕೆ ಕ್ರಿ.ಶ.1200ರ ಆಳುಪರ ಜರ್ಕೆಯ ಶಾಸನದಲ್ಲಿ ಕೆಲವು ವಿವರಗಳು ಲಭ್ಯವಾಗುತ್ತದೆ. ಇದು ಉಡುಪಿ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಕಂಬಳಗದ್ದೆಯಾಗಿದೆ. ಇದು ಅಂದಾಜು 10ಎಕರೆ ವಿಸ್ತಿರ್ಣ ಹೊಂದಿದೆ. ಈ ಕಂಬಳಗದ್ದೆ ಬಗ್ಗೆ ಬಹಳಷ್ಟು ಐತಿಹ್ಯಗಳಿವೆ. ಆ ಕಾಲದಲ್ಲಿ ಇದನ್ನು ಮನುಷ್ಯರು ಬೀಜ ಬಿತ್ತಿ ಬೆಳೆ ತೆಗೆಯುತ್ತಿರಲಿಲ್ಲವಂತೆ, ದೇವತೆಗಳು ರಾತ್ರಿ-ಬೆಳಗಾಗುವುದ ರೊಳಗೆ ನೇಜಿ ಮಾಡಿ ಮುಗಿಸುತ್ತಿದ್ದರಂತೆ !. ವಂಡಾರಿನ ಈ ಕಂಬಳ ಗದ್ದೆ ಹೆಗ್ಗಡೆ ಮನೆತನದ್ದು,ಅವರ ಮನೆಯ ಪಕ್ಕ #ನಿಗಳೇಶ್ವರನ (ಮೊಸಳೆ) ಗುಡಿ ಇದೆ. ಈ ಗುಡಿಯಲ್ಲಿ ಲಿಂಗಾರಾಧನೆ ನಡೆಯುತ್ತದೆ,ಇಲ್ಲಿ ಬಂಟರೇ ಅರ್ಚಕರಾಗಿದ್ದು, ಕಂಬಳದ ದಿನ ಮಾತ್ರ ಪೂಜೆ-ಪುನಸ್ಕಾರ ನಡೆಯುತ್ತದೆ.
ವಂಡಾರಿನಲ್ಲಿರುವ ನಿಗಳನ ಗುಡಿಯ ಗರ್ಭಗುಡಿಯ ಕೆಳಗೆ ನಿಗಳನ ಬಾವಿ ಇದ್ದು, ಇದನ್ನು ನೂರಾರು ವರ್ಷಗಳ ಹಿಂದೆಯೇ ಮುಚ್ಚಿದ್ದರು. ಆ ಬಾವಿಯನ್ನು ಯಾಕೆ ಮುಚ್ಚಿದರು ಎಂಬುದು ಈಗಲೂ ಜನಜನಿತವಾಗಿರುವ ಐತಿಹ್ಯ ಹೀಗಿದೆ… ವಂಡಾರು ಕಂಬಳಕ್ಕೆ ಜಿಲ್ಲೆಯ ಸುತ್ತಮುತ್ತಲಿನಿಂದ ಕೋಣಗಳನ್ನು ಶೃಂಗರಿಸಿ ಡೋಲು, ಬಾಜಭಜಂತ್ರಿ ಮೂಲಕ ಕರೆ ತರುತ್ತಿದ್ದರು, ಅಲ್ಲಿಯೇ ದೊಡ್ಡ ಜಾತ್ರೆಯೇ ನೆರೆದಿರುತ್ತಿದ್ದು, ಕಂಬಳ ನಡೆಯುವ ಹಿಂದಿನ ದಿನ ಎಲ್ಲೆಡೆಯಿಂದ ಕೋಣಗಳನ್ನು ತಂದು ಕಟ್ಟಿಹಾಕಿ, ದಿನಬೆಳಗು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರಾತ್ರಿ ನಿದ್ದೆಹೋದ ಸಂದರ್ಭ ಹೆಗ್ಗಡೆಯವರ ಮನೆಯಲ್ಲಿ ನಿದ್ದೆ ಹೋದವರೊಬ್ಬರ ಕಾಲಿಗೆ ಬಳ್ಳಿ ಹಾಕಲಾಗುತ್ತದೆ. ಹಾಗೇ ಯಾರ ಕಾಲಿಗೆ ಬಳ್ಳಿ ಬೀಳುತ್ತಿತ್ತೋ ಅವರನ್ನು ನಸುಕಿನಲ್ಲಿಯೇ ಎತ್ತಿ ನಿಗಳನ (ಮೊಸಳೆ)ಬಾವಿಗೆ ಹಾಕಲಾಗುತ್ತಿತ್ತು. ಅಂದರೆ ನರಬಲಿ ಕೊಡಲಾಗುತ್ತಿತ್ತು !! ಹೀಗೆ ಇದು ನಿರಂತರ ಪ್ರತಿ ಬಾರಿಯ ಕಂಬಳದ ಮುನ್ನ ನಿಗಳನಿಗೆ ನರಬಲಿ ನಡೆಯುತ್ತಿತ್ತು.
ಏತನ್ಮಧ್ಯೆ ಒಮ್ಮೆ ಹಾಗೆ ಕಾಲಿಗೆ ಬಳ್ಳಿ ಹಾಕಿದ ವ್ಯಕ್ತಿಯನ್ನು ನಿಗಳನಿಗೆ ಬಲಿ ಕೊಡಲಾಯಿತಂತೆ, ಆದರೆ ನಿಗಳನಿಗೆ ಬಲಿಯಾದ ವ್ಯಕ್ತಿ ಹೆಗ್ಗಡೆ ಮನೆಯ ಆಳು ಎಂಬುದು ನಂತರ ತಿಳಿಯಿತಂತೆ. ಆ ದಿನದಿಂದ ನಿಗಳನಿಗೆ ನರಬಲಿ ಕೊಡುವ ಸಂಪ್ರದಾಯವನ್ನು ನಿಲ್ಲಿಸಲಾಯಿತಂತೆ.
ಇತಿಹಾಸವನ್ನು ಹೊಂದಿರುವ ವಂಡಾರು ಕಂಬಳ ಗದ್ದೆಯನ್ನು ನೀವೊಮ್ಮೆ ನೋಡಬೇಕು .ಜನವರಿಯಿಂದ ಮಾರ್ಚ್ ತಿಂಗಳ ನಡುವೆ ನಡೆಯುತ್ತದೆ
. ಡೈನೋಸಾರಸ್ಸ್ ರೂಪದ ನಿಗಳನ ಗುಡಿಯನ್ನು ಕಾಣಬೇಕು.
. ಇಲ್ಲಿ ಪ್ರತಿ 12ವರ್ಷಗಳಿಗೊಮ್ಮೆ ಪಟ್ಟದ ಹೆಗ್ಗಡೆವರಿಗೆ ಆಗುವ ಉತ್ಸವ ಪಟ್ಟೋತ್ಸವ ನಡೆಯುತ್ತಿತ್ತು. ಅದು ಕಳೆದ ಒಂದು ಶತಮಾನದಿಂದ ನಿಂತು ಹೋಗಿದೆ, ಈಗ ಕಾಶಿಯಿಂದ ತಂದ ಮೂರ್ತಿಗೆ ಸಾಂಕೇತಿಕವಾಗಿ ಪಟ್ಟದ ಉತ್ಸವ ನಡೆಯುತ್ತದೆ.
. ವಂಡಾರು ಕಂಬಳದ ಗದ್ದೆಗೆ ಅಣ್ಣ-ತಮ್ಮ ಒಟ್ಟಿಗೆ ಇಳಿಯುವಂತಿಲ್ಲ,
.ಪಟ್ಟದ ಹೆಗ್ಗಡೆಯವರು ಗದ್ದೆಗೆ ಪೂರ್ಣ ಸುತ್ತು ಬರುವಂತಿಲ್ಲ,
.ವಂಡಾ ರು ಕಂಬಳದ ದಿನ ಕೋಟೇಶ್ವರದ ಕೆರೆ ನೀರು ಕೆಸರಾಗುವುದು,
.ಕಂಬಳದ ಗದ್ದೆ ಪಾಲಾಗುವಂತಿಲ್ಲ,
.ಇಲ್ಲಿ ಒಬ್ಬಳೇ ಹೆಣ್ಣು ಮಗಳು ಹುಟ್ಟುವುದು, ಆ ಹೆಣ್ಣಿನ ಮಗನೇ ಪಟ್ಟದ ಹೆಗ್ಗಡೆಯವರಾಗಿ ಕಂಬಳವನ್ನು ನಡೆಸುತ್ತಾರೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ವಂಡಾರು ಕಂಬಳ ಮತ್ತು ಅಲ್ಲಿನ ವೈಭವವನ್ನು ನೀವೂ ಒಮ್ಮೆ ಕಣ್ಣಾರೆ ನೋಡಬೇಕು…ಇದು ಜೂಜಿಗಾಗಿ ನಡೆಯುವ ಕಂಬಳವಲ್ಲ….

  ಹಾಗೇ ಒಂಥರಾ ಖುಷಿ, ಬೇಜಾರು

ಬಹಳ ಹಿಂದೆ ಪಾಂಡವರು ಈ ಕಂಬಳ ಗದ್ದೆ ಹಾಗೂ ಕುಂದಾಪುರ ಕೋಟೆಶ್ವರದ ಕೋಟಿತೀರ್ಥ ಪುಷ್ಖರಣಿಯನ್ನು ಒಂದೇ ರಾತ್ರಿ ನಿರ್ಮಿಸಿದ್ದರು. ಅಂದು ರಾತ್ರಿ ತಿನ್ನುವ ಸಲುವಾಗಿ ಹಲಸಿನ ಹಣ್ಣನ್ನು ಸಿಗಿಯಲು ಹೋದ ಸಂದರ್ಭದಲ್ಲಿ ಕೋಳಿ ಕೂಗಿ ಬೆಳಕಾಗುತ್ತಾ ಬಂತು ಅಲ್ಲಿಗೆ ಗದ್ದೆ ನಿರ್ಮಾಣ ನಿಲ್ಲಿಸಿದರು. ಅದಕ್ಕೆ ಪುಷ್ಟಿ ನೀಡುವಂತೆ ಈ ಗದ್ದೆ ಸಮೀಪದಲ್ಲೇ ಅರ್ದ ಸಿಗಿದ ಹಲಸಿನ ಹಣ್ಣಿನ ಆಕ್ರತಿಯ ಕಲ್ಲಿನ ಪ್ರತಿಮೆ ಇದ್ದು ಅದನ್ನು ಪಾಂಡವರ ಕಲ್ಲೆಂದು ಕರೆಯುವ ಜನರು ಇಗಲೂ ಅದಕ್ಕೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ಕೋಡಿ ಹಬ್ಬದ ದಿನ ವಂಡಾರು ಕಂಬಳ ಗದ್ದೆಯಲ್ಲಿ ದೂಳು ಏಳುತ್ತದೆ ಮತ್ತು ವಂಡಾರು ಕಂಬಳದ ದಿನ ಕೋಟೇಶ್ವರ ಕೋಟಿತೀರ್ಥ ಕೆರೆಯಲ್ಲಿ ಕೆಸರು ಏಳುತ್ತದೆ ಎನ್ನುವ ಮಾತೂ ಇದೆ. ವಿಶೇಷ ಹರಕೆ: ಇಲ್ಲಿನ ಕಂಬಳದ ದಿನ ಹರಕೆಯ ಪ್ರಾಕಾರಗಳು ನಡೆಯುತ್ತದೆ. ಜಾನುವಾರುಗಳಿಗೆ ಅನಾರೋಗ್ಯ ಬಾರದಂತೆ ಹರಕೆ ಸಲ್ಲಿಸುವ ಕ್ರಮವಿದೆ. ಜಾನುವಾರುಗಳನ್ನು ಇಡೀ ಗದ್ದೆ ಸುತ್ತು ಹಾಕಿಸಿ ಹರಕೆ ಸಲ್ಲಿಸುತ್ತಾರೆ. ಮತ್ತು ತಮ್ಮ ತಮ್ಮ ಮಕ್ಕಳನ್ನು ಗದ್ದೆಗೆ ಇಳಿಸಿ ನೀರಿನ ಪ್ರೋಕ್ಷಣೆ ಮಾಡಿಸುತ್ತಾರೆ. ಜಿಲ್ಲೆಯಾದ್ಯಂತ ಹಲವು ಕಡೆಗಳಿಂದ ಜನರು ಕೋಣಗಳನ್ನು ಕಂಬಳಕ್ಕಾಗಿ ಇಲ್ಲಿಗೆ ತರುತ್ತಾರೆ. ಹಲವರು ಕೋಣಗಳನ್ನು ವಾಧ್ಯ-ಮೇಳಗಳೊಂದಿಗೆ ಕರೆತರುವ ಪದ್ದತಿಯೂ ಇದೆ.ವಿಶೇಷತೆಯೆಂದರೆ ಇಲ್ಲಿ ಯಾವುದೇ ತಂಡ ಹಾಗೂ ಕೋಣಗಳ ಓಟದಲ್ಲಿ ಸ್ಪರ್ಧೆ ಇರುವುದಿಲ್ಲ. ಕೇವಲ ಸಂಪ್ರದಾಯ ಹಾಗೂ ಜಾನಪದ ಕ್ರೀಡೆಯಾಗಿ ಹಿಂದಿನಿಂದಲೂ ಬಂದಂತಹ ಕಂಬಳ ಕ್ರೀಡೆಯನ್ನು ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಪುರಾತನ ಹಾಗೂ ಗ್ರಾಮೀಣ ಕ್ರೀಡೆಯಾಗಿರುವ ಕಂಬಳವನ್ನು ಹರಕೆ ರೂಪದಲ್ಲಿ ಭಕ್ತಿಭಾವದಿಂದ ಇಲ್ಲಿನ ಜನರು ಆಚರಿಸುತ್ತಾ ಬಂದಿದ್ದಾರೆ. ದೈವದ ನಂಬಿಕೆಯ ಮೂಲಕ ಜಾನುವಾರುಗಳಿಗೆ ಯಾವುದೇ ಕೊರತೆಯಾಗದಿರಲಿ, ಅವುಗಳು ಅಭಿವ್ರದ್ಧಿ ಹೊಂದಲಿ ಎನ್ನುವ ಆಶಯದೊಂದಿಗೆ ಹರಕೆ ರೂಪದಲ್ಲಿ ನಡೆಸಲಾಗುವ ಕ್ರೀಡೆ. ಧಾರ್ಮಿಕ ಕಟ್ಟುಕಟ್ಟಳೆ ಮುಖಾಂತರ ನಡೆಯುವ ಕಂಬಳ ಮನೋರಂಜನೆಯೊಂದಿಗೆ ಗ್ರಾಮೀಣ ಸೊಗಡನ್ನು ಸಾರುತ್ತದೆ. ಅನಾದಿ ಕಾಲದಿಂದ ನೆಡೆದು ಬಂದ ಕಂಬಳ ಬಿಕ್ಕಟ್ಟಿಗೆ ಬಂದು ತಲುಪಿದೆ ಕಂಬಳದಂಥ ಸಾಂಸ್ಕೃತಿಕ ವೈಭವಕ್ಕೆ ಯಾವತ್ತಿಗೊ ಭಂಗ ಬರದಿರಲಿ ಎಂಬ ಆಶಾಭಾವದೊಂದಿಗೆ, ಸಮಸ್ತ ಭಕ್ತಾದಿಗಳಿಗೆ, ಕಲಾಭಿಮಾನಿಗಳಿಗೆ, ಕಂಬಳ ಪ್ರಿಯರಿಗೆ, …🙏🙏🙏🙏

Leave a Reply

Your email address will not be published. Required fields are marked *

Translate »