💚🙏 ನಮೋ ವಾಸುದೇವಾ🙏💚
🙏ಧರ್ಮ-ಅಧ್ಯಾತ್ಮ🙏
ನವ (ಒಂಭತ್ತು) ವಿಧ ಭಕ್ತಿಗಳು:
ಭಗವಂತನ ಆರಾಧನೆಯ ಸುಲಭ ಮಾರ್ಗಗಳಿವು.
ದೇವರನ್ನು ಭಕ್ತಿಯಿಂದ ಆರಾಧಿಸಿದರೆ ಮನಃಶಾಂತಿ ದೊರೆಯುತ್ತದೆ; ಇಷ್ಟಾರ್ಥಗಳು ಸಿದ್ಧಿಸುತ್ತವೆ. ಆದರೆ ಭಕ್ತಿ ಹೇಗಿರಬೇಕು ಎಂಬ ಬಗ್ಗೆ ನಮಗೆ ತಿಳಿದಿರಬೇಕು. ದೇವನನ್ನು ಒಲಿಸಲು ನವ ವಿಧದ ಭಕ್ತಿಯಿಂದ ಆರಾಧಿಸಬಹುದು. ಭಾಗವತದಲ್ಲಿ ವಿವರಿಸಲಾದ ಅಂತಹ ಭಕ್ತಿಯ ಒಂಬತ್ತು ಸ್ವರೂಪಗಳು.
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ
ಆರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮ ನಿವೇದನಂ
(ಭಾಗವತ-7.5.23)
🙏1. ಶ್ರವಣಂ:
ದೇವರ ಮಹಿಮೆಗಳನ್ನು ಧ್ಯಾನ ಮತ್ತು ಭಕ್ತಿಯಿಂದ ಕೇಳಿ ಮನನ ಮಾಡಿಕೊಳ್ಳುವುದು.
🙏2. ಕೀರ್ತನಂ:
ದೇವರ ಕೀರ್ತನೆ, ಭಜನೆ, ಗುಣಗಾನ, ಮಹಿಮೆಗಳನ್ನು ಕೊಂಡಾಡುವುದು.
🙏3. ಸ್ಮರಣಂ:
ಕಲಿಯುಗದ ಮುಖ್ಯಧರ್ಮವಾದ ಶ್ರೀಹರಿಯ ನಾಮಸ್ಮರಣೆಯನ್ನು ನಿರಂತರ ಮಾಡುವುದು.
🙏4. ಪಾದ ಸೇವನಂ:
ಶ್ರೀ ಹರಿಯ ಚರಣ ಸೇವೆ ಮಾಡುವುದು ಅಥವಾ ಮಾಡುವ ಎಲ್ಲ ಒಳ್ಳೆಯ ಕಾರ್ಯಗಳು ಶ್ರೀಹರಿಯ ಚರಣ ಸೇವೆ ಎಂದು ತಿಳಿಯುವುದು.
🙏5. ಅರ್ಚನಂ:
ಶಾಸ್ತ್ರ ವಿಹಿತ ಫಲ-ಪುಷ್ಪಗಳಿಂದ ದೇವರ ಅರ್ಚನೆ, ಪೂಜೆಯನ್ನು ಮಾಡುವುದು.
🙏6. ವಂದನಂ:
ದೇವರಿಗೆ ಪ್ರಣಾಮ, ದಂಡ ಪ್ರಣಾಮಗಳ ಸಮರ್ಪಣೆ ಮಾಡುವುದು.
🙏7. ದಾಸ್ಯಂ:
ಮಾಡುವ ಎಲ್ಲ ಕಾರ್ಯಗಳು ತಾನು ದೇವರ ದಾಸನೆಂದು ತಿಳಿದು ಮಾಡುವುದು.
🙏8. ಸಖ್ಯಂ:
ದೇವರ ಮೇಲೆ ವಿಶೇಷವಾದ ಪ್ರೀತಿ ಹಾಗೂ ಸಖನೆನ್ನುವ ಭಾವನೆ ಇರಿಸಿಕೊಳ್ಳುವುದು.
🙏9. ಆತ್ಮ ನಿವೇದನಂ:
ಮಾಡುವ ಎಲ್ಲ ಕಾರ್ಯಗಳನ್ನು ದೇವರಿಗೆ ಸಮರ್ಪಣೆ ಮಾಡುವುದು.
ಇಂತಹ ಭಕ್ತಿಯ ಒಂಭತ್ತು ಸ್ವರೂಪವನ್ನು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಂಡರೆ ಮುಕ್ತಿ ಮಾರ್ಗವು ದೊರಕುವುದು..
💚🙏 ಕೃಷ್ಣ..ಕೃಷ್ಣ..ಕೃಷ್ಣ,🙏💚
ವಂದನೆಗಳು
(ಸಂಗ್ರಹ)