ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೀಪಾವಳಿಗೆ ಲಕ್ಷ್ಮೀ ಪೂಜೆ ಮಾಡುವ ವಿಧಾನ

ದೀಪಾವಳಿಗೆ ಲಕ್ಷ್ಮೀ ಪೂಜೆ ಮಾಡುವ ವಿಧಾನ..!

ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ
ಸಾಮಗ್ರಿಗಳು:
ರಂಗೋಲಿ , ಮಣೆ / ಮಂಟಪ
ಲಕ್ಷ್ಮೀ ವಿಗ್ರಹ ಅಥವಾ ಕಲಶ (ದೇವರ ಭಾವಚಿತ್ರ)
ದೀಪ, , ತುಪ್ಪ, ಎಣ್ಣೆ,
ದೀಪಕ್ಕೆ ಹಾಕುವ ಬತ್ತಿ
ಘಂಟೆ, ಪಂಚಪಾತ್ರೆ,
ಉದ್ದರಣೆ, ಅರ್ಘ್ಯ ಪಾತ್ರೆ, ನೀರು
ಅರಿಶಿನ, ಕುಂಕುಮ,
ಮಂತ್ರಾಕ್ಷತೆ,ಮಾವಿನ ಎಲೆ
ಶ್ರೀಗಂಧ, ಊದಿನ ಕಡ್ಡಿ
ರವಿಕೆ ಬಟ್ಟೆ,
ಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ –
ವೀಳ್ಯದ ಎಲೆ, ಅಡಿಕೆ,
ಹಣ್ಣು , ತೆಂಗಿನಕಾಯಿ
ನೈವೇದ್ಯ – ಹಣ್ಣು ಕಾಯಿ ಫಲವಸ್ತು
(ಪಾಯಸ,ಹುಗ್ಗಿ, ಅನ್ನ, ಕೋಸಂಬರಿ, ನೀರಲ್ಲಿ ನೆನೆ ಹಾಕಿದ ಕಡಲೆ ), ಇತ್ಯಾದಿ #ಯೋಗ್ಯತಾನುಸಾರ
ಕರ್ಪೂರ,
ಮಂಗಳಾರತಿ ಬತ್ತಿ
ಆರತಿ ತಟ್ಟೆ,
ಹೂಬತ್ತಿ,
ಇತ್ಯಾದಿ ಇವುಗಳೊಂದಿಗೆ
ಇನ್ನು ಹಲವಾರು ವಸ್ತುಗಳ ಬಳಕೆ
ಮಾಡಬಹುದು (ಮುಖ್ಯವಾಗಿ ಅಲಂಕಾರ
ಮಾಡುವುದಕ್ಕೆ ಮನೆಯಲ್ಲಿನ ಹೂ ಮತ್ತು ಪತ್ರೆ ಅತ್ಯಂತ ಶ್ರೇಷ್ಟ.)
ಅವರವರ ಯೋಗ್ಯತೆ ಗೆ ಅನುಸಾರ
ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ
ಅವಲಂಭಿಸಿದೆ.

ನಿಯಮಗಳು

1 ಬೆಳಿಗ್ಗೆ ಎದ್ದು ಮಂಗಳ (ತಲೆ) ಸ್ನಾನ ಮಾಡಬೇಕು.

2)ವ್ರತ ಮಾಡುವವರು ಪೂಜೆ
ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ
ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ
ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ
ಸ್ಥಾಪಿಸಬೇಕು.
3)ಬಾವಿಯಿಂದ ಒಂದು ಕಲಶದಲ್ಲಿ
ನೀರು ಹಾಕಿ, ಜೊತೆಗೆ ಅರಿಶಿನ ಕುಂಕುಮ,
ಬೆಳ್ಳಿ ನಾಣ್ಯ / ಯಾವುದೇ ನಾಣ್ಯ, ಹೂ
ಹಾಕಿ,ಕಳಶದ ಬಾಯಿಗೆ ಮಾವಿನ
ಎಲೆಗಳನ್ನು ಇಡಬೇಕು. .ಅದರ ಮೇಲೆ ಅರಿಶಿನ ಕುಂಕುಮ ಸವರಿದ
ತೆಂಗಿನಕಾಯಿ ಇಟ್ಟು, (ಇದರ ಮೇಲೆ ಲಕ್ಷ್ಮಿ ದೇವಿಯ ಬೆಳ್ಳಿಯ
ಮುಖವಾಡ ಇದ್ದರೆ ಅದನ್ನುಈ ತೆಂಗಿನಕಾಯಿಗೆ
ಜೋಡಿಸಬಹುದು) ಈ ಕಳಶವನ್ನು ಅಕ್ಕಿ ಹರಡಿರುವ
ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ
ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ
ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ಒಡವೆ ಹಾಕಿ
ಅಲಂಕಾರ ಮಾಡಬಹುದು. ಈ ಕಲಶಕ್ಕೆ
ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ,
ಕಲಶವನ್ನು ಪೂಜೆ ಮಾಡಬೇಕು.
ಕಲಶದ ಎದುರಿನಲ್ಲಿ ನಾಣ್ಯ ಮತ್ತು ಹಣವನ್ನು ಚಿನ್ನ ಬೆಳ್ಳಿ ಇತ್ಯಾದಿ ಇಟ್ಟು ಪೂಜೆ ಮಾಡಬಹುದು
4)ಪೂಜಾ ವಿಧಾನ
ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು.
ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ
ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ
ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ ,
ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ
ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ
ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ – ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ
ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ
ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ
ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ,
ನಕ್ಷತ್ರವನ್ನು ಹೆಸರಿಸಬಹುದು

  ಫಾಲ್ಗುಣ ಅಮಾವಾಸ್ಯೆ: ಅಮಾವಾಸ್ಯೆ ಪೂಜೆ ವಿಧಾನ ಮತ್ತು ಪರಿಹಾರಗಳು ಹೀಗಿವೆ

ವರ್ತಮಾನೇ ವ್ಯಾವಹಾರಿಕೇ ಶುಭ ಕೃತ್ ನಾಮ
ಸಂವತ್ಸರೇ, ದಕ್ಷಿಣಾಯನೇ ,.
ಶರತ್ ಋತು ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ,
….. ಅಮಾವಾಸ್ಯೆಯಾಂ ತಿಥಿ ಇಂದೂ ವಾಸರ (ಸೋಮವಾರ)
ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ
ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ,
ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ
ವಿಜಯ ವೀರ್ಯ ಅಭಯ ಆಯುರಾರೋಗ್ಯ
ಐಶ್ವರ್ಯಾಭಿವೃದ್ಧ್ಯರ್ಥಂ ಧನ ಧನ್ಯ ಸಂಪದಾದಿ ಅಭಿವೃದ್ಧ್ಯಾರ್ಥಂ
ಸಮಸ್ತ
ದುರಿತೋಪಶಾಂತ್ಯರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಯಾವತ್ ಜೀವನ ಸೌಮಾಂಗಲ್ಯ ಪ್ರಾಪ್ಯರ್ಥಂ ಶ್ರೀ ….ಧನ ಧಾನ್ಯ ಲಕ್ಷ್ಮೀ ಪ್ರೀತ್ಯರ್ಥಂ ಯಾಥಾ ಶಕ್ತ್ಯಾ
ಧ್ಯಾನಾವಾಹನಾದಿ ಷೋಡಶೋಪಚಾರ
ಪೂಜಾಂ ಅಹಂ ಕರಿಷ್ಯೇ.

  ದೀಪಾವಳಿ ಅಭ್ಯಂಜನ ಸ್ನಾನ ಯಾಕೆ , ಹೇಗೆ ಮಾಡಬೇಕು ?

ಧ್ಯಾನ
||ಪದ್ಮಾಸನೆ ಪದ್ಮಕರೇ ಸರ್ವ ಲೋಕೈಕಪೂಜಿತೆ |
ನಾರಾಯಣ ಪ್ರಿಯೇದೇವಿ ಸುಪ್ರೀತಾ ಭವ
ಸರ್ವದಾ”…||

(ನೀವು ಪೂಜೆ ಮಾಡುತ್ತಿರುವ
ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ
ಮಾಡುವುದು. ಸಾಮಾನ್ಯವಾಗಿ
ಷೋಡಶೋಪಚಾರದಿಂದ ಪೂಜೆ
ಅಂತ ನೀವು ಕೇಳಿರಬಹುದು. ಷೋಡಶ
ಅಂದರೆ 16.
ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ
ಎಂದರ್ಥ. ಇವುಗಳ ವಿವರ ಕೆಳಗಿದೆ:
ಇಲ್ಲಿ ಅಕ್ಷತೆ ಹಾಕಬೇಕು (ಸ್ತ್ರೀ ಸೂಕ್ತ ತಿಳಿದವರು ಹೇಳುವುದು)
1.ಆವಾಹನೆ – (ಅಂದರೆ ಆಹ್ವಾನ. ದೇವರನ್ನು ನಿಮ್ಮ
ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ
ಆಹ್ವಾನ ಮಾಡುವುದು.)ಮಹಾಲಕ್ಷ್ಮೀಯೇ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ

2.ಆಸನ – ಅಂದರೆ ಕುಳಿತುಕೊಳ್ಳುವ ಜಾಗ . ದೇವರ
ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಅಕ್ಷತೆ
ಹಾಕುವುದು.ಮಹಾಲಕ್ಷ್ಮೀಯೇ ನಮಃ ಆಸನಂ ಸಮರ್ಪಯಾಮಿ

3.ಪಾದ್ಯ – ಕಾಲು ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು.ಮಹಾಲಕ್ಷ್ಮೀಯೇ ನಮಃ ಪಾದ್ಯಂ ಸಮರ್ಪಯಾಮಿ (ಹರಿವಾಣದಲ್ಲಿ ನೀರು ಬಿಡುವುದು)

4.ಅರ್ಘ್ಯ – ಕೈ ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು.ವರಮಹಾಲಕ್ಷ್ಮೀಯೇ ನಮಃ ಅರ್ಘ್ಯಂ ಸಮರ್ಪಯಾಮಿ(ಹರಿವಾಣದಲ್ಲಿ ನೀರು ಬಿಡುವುದು)

5.ಆಚಮನ – ಕುಡಿಯುವುದಕ್ಕೆ
ನೀರು ಕೊಡುವುದು.ಮಹಾಲಕ್ಷ್ಮೀಯೇ ನಮಃ ಆಚಮನಂ ಸಮರ್ಪಯಾಮಿ

6.ಸ್ನಾನ – ಶುದ್ಧೋದಕ (ನೀರು)
ಮತ್ತು ಪಂಚಾಮೃತದಿಂದ ಸ್ನಾನ
ಮಹಾಲಕ್ಷ್ಮೀಯೇ ನಮಃ ಸ್ನಾನಂ ಸಮರ್ಪಯಾಮಿ

7.ವಸ್ತ್ರ – ಧರಿಸಲು ಉಡುಪು ಕೊಡುವುದು .
ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ
( ಜನಿವಾರ), ಆಭರಣವನ್ನು (ಬಳೆ-
ಬಿಚ್ಚೋಲೆ )ಸಮರ್ಪಿಸುವುದು.ಮಹಾಲಕ್ಷ್ಮೀಯೇ ನಮಃ ವಸ್ತ್ರಂ ಸಮರ್ಪಯಾಮಿ

8.ಹರಿದ್ರ, ಕುಂಕುಮ,
ಗಂಧ, ಅಕ್ಷತ – ಅರಿಶಿನ , ಕುಂಕುಮ, ಶ್ರೀಗಂಧ ,
ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.ಮಹಾಲಕ್ಷ್ಮೀಯೇ ನಮಃ.ಹರಿದ್ರ, ಕುಂಕುಮ,
ಗಂಧ, ಅಕ್ಷತಾಂ – ಸಮರ್ಪಯಾಮಿ

  ಮದುವೆಯಾದ ಕೂಡಲೇ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತವನ್ನು ಮಾಡಲು ಏಕೆ ಹೇಳುತ್ತಾರೆ …?

9.ಪುಷ್ಪ ಮಾಲ – ಹೂವು, ಪತ್ರೆಗಳಿಂದ ದೇವರಿಗೆ
ಅಲಂಕಾರ ಮಾಡುವುದು.ಮಹಾಲಕ್ಷ್ಮೀಯೇ ನಮಃ ಪುಷ್ಪಂ ಸಮರ್ಪಯಾಮಿ

  1. ಅರ್ಚನೆ/ಅಷ್ಟೋತ್ತರ – ನೂರೆಂಟು ನಾಮಗಳಿಂದ
    ದೇವರನ್ನು ಸ್ಮರಣೆ ಮಾಡುವುದು.(ಪೋಟೋದಲ್ಲಿ ಕೊಟ್ಟಿದೆ.) ನಮಃ ಅಷ್ಟೋತ್ತರ ಶತ ನಾಮ ಪೂಜಾಂ ಸಮರ್ಪಯಾಮಿ
    11.ಧೂಪ – ಪರಿಮಳಯುಕ್ತವಾದ
    ಧೂಪವನ್ನು ಅರ್ಪಿಸುವುದು.ಮಹಾಲಕ್ಷ್ಮೀಯೇ ನಮಃ ಧೂಪಂ ಸಮರ್ಪಯಾಮಿ

12.ದೀಪ – ದೀಪ
ಸಮರ್ಪಣೆ ಮಾಡುವುದು.
ಮಹಾಲಕ್ಷ್ಮೀಯೇ ನಮಃ ದೀಪಂ ಸಮರ್ಪಯಾಮಿ
13.ನೈವೇದ್ಯ, ತಾಂಬೂಲ –
ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ
ಅರ್ಪಿಸುವುದು .ವೀಳೆಯ, ಅಡಿಕೆ,
ತೆಂಗಿನಕಾಯಿ ತಾಂಬೂಲ ಕೊಡುವುದು.ಮಹಾಲಕ್ಷ್ಮೀಯೇ ನಮಃ ನೈವೇದ್ಯಂ ಸಮರ್ಪಯಾಮಿ

  1. ನೀರಾಜನ – ಕರ್ಪುರದಿಂದ ಮಂಗಳಾರತಿ
    ಮಾಡುವುದು.ಮಹಾಲಕ್ಷ್ಮೀಯೇ ನಮಃ ನೀರಾಜನಂ ಸಮರ್ಪಯಾಮಿ
  2. ನಮಸ್ಕಾರ – ಪ್ರದಕ್ಷಿಣೆ ಮಾಡಿ ದೇವರಿಗೆ
    ಸಾಷ್ಟಾಂಗ ನಮಸ್ಕಾರ ಮಾಡುವುದು.ಮಹಾಲಕ್ಷ್ಮೀಯೇ ನಮಃ ನಮಸ್ಕಾರಂ ಸಮರ್ಪಯಾಮಿ
  3. ಪ್ರಾರ್ಥನೆ – ನಿಮ್ಮ ಇಷ್ಟಗಳನ್ನು ನಡೆಸಿ
    ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ
    ಮಾಡುವುದು.
    ||ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾಧಿಕೆ |
    ಶರಣ್ಯೇ ತ್ರಯಂಬಕೆ ಗೌರಿ ನಾರಾಯಣೀ ನಮೋಸ್ತುತೆ||…………. ಮಹಾಲಕ್ಷ್ಮೀಯೇ ನಮಃ ಪ್ರಾರ್ಥನಾಂ ಸಮರ್ಪಯಾಮಿ
    ಪೂಜೆಯ
    ನಂತರ ದೇವರು ಅನುಗ್ರಹಿಸಿರುವ ಅರಿಶಿನ,
    ಕುಂಕುಮ, ನೈವೇದ್ಯವನ್ನು ಪ್ರಸಾದ
    ರೂಪವಾಗಿ ಸ್ವೀಕಾರ
    ಮಾಡುವುದು.
    ಹೀಗೆ ಕ್ರಮವಾಗಿ ಪೂಜೆ ಮಾಡಿ.🙏

Leave a Reply

Your email address will not be published. Required fields are marked *

Translate »