ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಾರತದ ನಿಗೂಢ ದೇವಾಲಯಗಳು

ದೇವಾಲಯಗಳ ಭೇದಿಸಲಾಗದ ರಹಸ್ಯಗಳು..!

ಭಾರತದಲ್ಲಿ ಹಲವು ದೇವಾಲಯಗಳಿದ್ದು ಅವುಗಳಲ್ಲಿ ನಿಗೂಢಗಳನ್ನೊಳಗೊಂಡ ದೇವಾಲಯಗಳು ಹೆಚ್ಚಾಗಿದ್ದು ಆಶ್ಚರ್ಯವನ್ನುಂಟು ಮಾಡುತ್ತಿವೆ. ಒಂದೊಂದು ದೇವಾಲವೂ ಒಂದೊಂದು ವಿಶಿಷ್ಟತೆಯನ್ನು ಹೊಂದಿದೆ.ಅಂತಹ ಪುಣ್ಯಕ್ಷೇತ್ರಗಳೂ, ಅವುಗಳ ವಿಶೇಷತೆ ಹಾಗೂ ನಿಗೂಢಗಳನ್ನೂ ನಿಮ್ಮ ಮುಂದಿಡುತ್ತಿದ್ದೇವೆ . ಬನ್ನಿ ಅವುಗಳ ಬಗ್ಗೆ ತಿಳಿಯೋಣ…

“ತಪ್ಪೇರುಮನಲ್ಲೂರ್”

ತಮಿಳುನಾಡಿನ ‘ತಪ್ಪೇರುಮನಲ್ಲೂರ್’ ನ ಶಿವಾಲಯದಲ್ಲಿ ತುಂಬಾ ಆಶ್ಚರ್ಯಕರ ಘಟನೆಯೊಂದು ನಡೆಯಿತು. 2010 ರಲ್ಲಿ ಒಂದು ದಿನ ಬೆಳಗ್ಗೆ ಅರ್ಚಕರು ಆಲಯದ ಬಾಗಿಲುಗಳನ್ನು ತೆಗೆದಾಗ ಶಿವಲಿಂಗದ ಮೇಲೆ ನಾಗರಹಾವು ಇರುವುದನ್ನು ನೋಡಿದರು. ನಂತರ ಹಾವು ಬಿಲ್ವಪತ್ರೆಗಳನ್ನು ತಂದು ಬಾಯಿಯಿಂದ ಶಿವನನ್ನು ಪೂಜಿಸಿತು. ಹಾವು ಹಾಗೆ ಮಾಡಿದ್ದೇಕೆ? ಆ ಹಾವನ್ನು ಶಿವನೇ ಕಳುಹಿಸಿರುತ್ತಾನೆಂದು ಇಂದಿಗೂ ಭಕ್ತರು ನಂಬುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಈ ನಿಗೂಢ ಮಾತ್ರ ಬಯಲಾಗಿಲ್ಲ.

“ಶನಿ ಶಿಂಗನಾಪೂರ್”

ಮಹಾರಾಷ್ಟ್ರದಲ್ಲಿರುವ ಒಂದು ಗ್ರಾಮದಲ್ಲಿ ಯಾವ ಮನೆಗೂ ಬಾಗಿಲುಗಳು ಇರುವುದಿಲ್ಲ. ಆದರೂ ಅಲ್ಲಿ ಕಳ್ಳತನ ನಡೆದ ವರದಿಯೇ ಇಲ್ಲ. ಕಳ್ಳತನ ಮಾಡಿದರೆ ಶನಿದೇವನು ಶನಿರೂಪದಲ್ಲಿ ಬಂದು ಶಿಕ್ಷಿಸುವನೆಂದು ಅಲ್ಲಿಯ ಭಕ್ತರ ನಂಬಿಕೆ. ಮತ್ತೊಂದು ವಿಶೇಷವೆಂದರೆ ಬ್ಯಾಂಕುಗಳಿಗೂ ಬೀಗ ಹಾಕುವುದಿಲ್ಲ.
ಶನಿ ಶಿಂಗನಾಪೂರ್ ನ ಶನಿದೇವನ ಮಹತ್ವವದು.

“ಗುರುದ್ವಾರ್”

ಪಂಜಾಬ್ ನಲ್ಲಿರುವ ಗುರುದ್ವಾರ್ ನಲ್ಲಿ ಆಚ್ಚರಿಗೊಳಿಸುವ ವಿಷಯ ಒಂದು ಅಡಗಿದೆ. ಸಾಮಾನ್ಯವಾಗಿ ಮಾವಿನ ಮರದಲ್ಲಿ ಬೇಸಿಗೆಯಲ್ಲೇ ಮಾತ್ರ ಮಾವಿನ ಕಾಯಿಗಳು ಬಿಡುತ್ತವೆ. ಆದರೆ ಇಲ್ಲಿರುವ ಮಾವಿನ ಮರದಲ್ಲಿ ಕಾಲಕ್ಕೆ ಸಂಬಂಧವಿಲ್ಲದಂತೆ ಎಲ್ಲ ಋತುಗಳಲ್ಲೂ ಇರುತ್ತವೆ. ಇದು ಯಾರಿಗೂ ಅರ್ಥವಾಗದ ಪ್ರಶ್ನೆಯಾಗಿದೆ.

  ಕುಟುಂಬ ಎಂಬ ಪರಮ ಬಂಧನ - ಮಹಾಭಾರತ ಕಥೆ

“ಯಾಗಂಟಿ”

ಆಂಧ್ರಪ್ರದೇಶದ ಸುಪ್ರಸಿದ್ಧ ಕ್ಷೇತ್ರವಾದ ಯಾಗಂಟಿ ದೇವಾಲಯದಲ್ಲಿ ಇರುವ ನಂದಿ ವಿಗ್ರಹದ ನಿಗೂಢ ರಹಸ್ಯವು ಇಂದಿಗೂ ಬಯಲಾಗಿಲ್ಲ. ಮೊದಲು ಚಿಕ್ಕದಾಗಿದ್ದ ನಂದಿ ವಿಗ್ರಹವು ಕಾಲಕ್ರಮೇಣ ಬೆಳೆಯುತ್ತಾ ಆಲಯದ ಪ್ರಾಂಗಣವನ್ನು ಆಕ್ರಮಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ. ವಿಜ್ಞಾನಿಗಳು ಹೇಳುವಂತೆ…ಆ ಕಲ್ಲು ಬೆಳೆಯುವ ಸ್ವಭಾವವುಳ್ಳದ್ದಾಗಿದ್ದು, 20 ವರ್ಷಗಳಿಗೊಮ್ಮೆ 1 ಇಂಚಿನಷ್ಟು ಬೆಳೆಯುತ್ತಿರುತ್ತದೆ ಎನ್ನುತ್ತಾರೆ. ಆದರೆ ಯುಗಾಂತ್ಯದಲ್ಲಿ ಆ ನಂದಿ ಗುಟುರು ಹಾಕುತ್ತದೆ ಎಂಬುವುದು ಅಲ್ಲಿಯ ಭಕ್ತರ ನಂಬಿಕೆ.

“ಲೇಪಾಕ್ಷಿ”

ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಲೇಪಾಕ್ಷಿಯಲ್ಲಿರುವ ಕಲ್ಲಿನ ಸ್ತಂಭಗಳ ನಿಗೂಢ ರಹಸ್ಯವಾಗಿಯೇ ಉಳಿದಿವೆ. 16ನೇ ಶತಮಾನದಲ್ಲಿ ನಿರ್ಮಾಣವಾದ ಈ ಆಲಯದಲ್ಲಿರುವ ಕಲ್ಲಿನ ಸ್ತಂಭದ ಕೆಳಗಿನಿಂದ ಕಾಗದ ಅಥವಾ ಬಟ್ಟೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಳವಾಗಿ ಎಳೆದುಕೊಳ್ಳಬಹುದು. ಅಂದರೆ ಸ್ತಂಭಕ್ಕೂ, ನೆಲಕ್ಕೂ ಅಂತರವಿದ್ದು, ಯಾವುದೇ ಆಧಾರವಿಲ್ಲದೆ ಆಲಯವನ್ನು ಹೊತ್ತು ನಿಂತಿದೆ ಎಂದರ್ಥ. ಆದರೆ ಯಾವುದೇ ಆಧಾರವಿಲ್ಲದೆ ಆಲಯವನ್ನು ಸ್ತಂಭವು ಹೇಗೆ ಹೊರುತ್ತಿದೆ ಎಂಬ ಈ ವಿಷಯವನ್ನು ಇಂದಿಗೂ ಯಾರೂ ಹೇಳಲಾಗುತ್ತಿಲ್ಲ.

“ದಾರ್ವೇಷ್ ದರ್ಗಾ”

ಪುಣೆಯಲ್ಲಿರುವ ದಾರ್ವೇಷ್ ದರ್ಗಾದಲ್ಲಿರುವ 90 ಕೆ.ಜಿ.ಯ ಕಲ್ಲು ಪ್ರತ್ಯೇಕ ಆಕರ್ಷಣೆಯಾಗಿದೆ. ಈ ಕಲ್ಲನ್ನು 11 ಮಂದಿ ಒಟ್ಟಿಗೆ ಸೇರಿ ಕೇವಲ ಒಂದೇ ಬೆರಳಿನಿಂದ ಮೇಲೆತ್ತಬೇಕು. “ಹಜರತ್ ಕಮಾರ್ ಅಲೀದರ್ವೇಷ್” ಎಂದು ಹೇಳುತ್ತಾ ಕಲ್ಲನ್ನು ಮೇಲೆತ್ತಬೇಕು. ಆಗ ಆ ಕಲ್ಲು 5-10 ಅಡಿ ಎತ್ತರಕ್ಕೆದ್ದು, ಗಾಳಿಯಲ್ಲಿ ತೇಲುತ್ತಿರುತ್ತದೆ. ಇದು ಹೇಗೆ ಸಾಧ್ಯ ಎಂಬ ವಿಷಯ ಇಂದಿಗೂ ಯಾರಿಗೂ ತಿಳಿಯದ ರಹಸ್ಯವಾಗಿಯೇ ಉಳಿದಿದೆ.

  ನಾವು ಎಲ್ಲಿ ಎಡವಿರುವೆವೆ

“ತಂಜಾವೂರ್”

11ನೇ ಶತಮಾನದಲ್ಲಿ ರಾಜರಾಜಚೋಳ ನಿರ್ಮಿಸಿದ ತಂಜಾವೂರಿನ ಬೃಹದೇಶ್ವರ ದೇವಾಲಯದಲ್ಲಿ ಒಂದು ರಹಸ್ಯ ಅಡಗಿದೆ. ಆ ರಹಸ್ಯವೇ ‘ನೆರಳು’. ಸಾಯಂಕಾಲವಾದರೂ ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳುವುದನ್ನು ಇಂದಿಗೂ ಯಾರೂ ನೋಡಿಲ್ಲ. ಹಾಗೆಯೇ ದೇವಾಲಯ ನಿರ್ಮಾಣಕ್ಕೆ ಉಪಯೋಗಿಸಿರುವ ಗ್ರಾನೈಟ್ ಅನ್ನು ಎಲ್ಲಿಂದ ತರಲಾಗಿದೆ ಎಂದು ತಿಳಿದಿಲ್ಲ. ಇಂತಹದ್ದೇ ಮತ್ತೊಂದು ದೇವಾಲಯವಿದೆ.
ಅದೇ…..

“ಪುರಿ ಜಗನ್ನಾಥ್”

ಯಾವುದೇ ಸಮಯದಲ್ಲೂ ಪುರಿ ಜಗನ್ನಾಥ್ ದೇವಾಲಯದ ನೆರಳು ಕಾಣುವುದಿಲ್ಲ. ಈ ಕ್ಷೇತ್ರಕ್ಕೆ ಸಮೀಪದಲ್ಲಿ ಬಂಗಾಳಾಕೊಲ್ಲಿ ಸಮುದ್ರವಿದ್ದು, ಸಮುದ್ರದ ಮೊರೆತ ಆಲಯ ಸಿಂಹದ್ವಾರದವರೆಗೂ ಕೇಳಿಸುತ್ತದೆ. ಆದರೆ ದೇವಾಲಯದ ಒಳಗೆ ಕೇಳಿಸುವುದಿಲ್ಲ. ಅದರ ತಾಂತ್ರಿಕತೆ ಏನೆಂದು ಇಂದಿಗೂ ನಿಗೂಢವಾಗಿದೆ.

“ಷೋಲಾಪೂರ್”

ನಾವು ಉಪಯೋಗಿಸುವ ಹಾಸಿಗೆಯ ಹೊದಿಕೆಗಳಿಗೆ ಹೆಸರುವಾಸಿಯಾದ ಮಹಾರಾಷ್ಟ್ರದ ಷೋಲಾಪೂರ್ ನಲ್ಲಿ ಒಂದು ವಿಚಿತ್ರವಾದ ಗ್ರಾಮ ಷೆತ್ಸಲ್. ಈ ಗ್ರಾಮದಲ್ಲಿ ಹಾವುಗಳನ್ನು ಪೂಜಿಸಿವುದು ರೂಢಿಯಲ್ಲಿದೆ. ಇಲ್ಲಿ ಪ್ರತಿ ಮನೆಯಲ್ಲೂ ಹಾವುಗಳಿಗೆಂದೇ ಒಂದು ಕೊಠಡಿ ಇರುತ್ತದೆ. ಪ್ರತಿ ಮನೆಯಲ್ಲೂ ಮನುಷ್ಯರು ಓಡಾಡುವ ಹಾಗೆ ಹಾವುಗಳು ಓಡಾಡುತ್ತಿರುತ್ತವೆ. ಹಾವುಗಳೆಂದರೇನೇ ನಮಗೆ ಭಯವಾಗುತ್ತದೆ. ಆದರೆ ಇಲ್ಲಿವರೆಗೂ ಅಲ್ಲಿ ಯಾರಿಗೂ ಹಾವು ಕಚ್ಚಿರುವ ನಿದರ್ಶನವಿಲ್ಲ.

“ಕಬೀಸ್ ಬಾಬಾ ಆಲಯ”

ಉತ್ತರಪ್ರದೇಶದ ಸೀತಾಪೂರ್ ಜಿಲ್ಲೆಯಲ್ಲಿರುವ ಕಬೀಸ್ ಬಾಬಾ ಆಲಯ ವಿಚಿತ್ರವಾದದ್ದು. ಅಲ್ಲಿ ದೇವರ ವಿಗ್ರಹವೂ ಇಲ್ಲ ಅರ್ಚಕರೂ ಇರುವುದಿಲ್ಲ. 150 ವರ್ಷಗಳ ಹಿಂದೆ ನಿರ್ಮಾಣವಾದ ಈ ದೇವಾಲಯದಲ್ಲಿ ಒಬ್ಬ “ಕಬೀಸ್ ಬಾಬಾ” ಇರುತ್ತಾರೆ. ಅವರು ಸಾಯಂಕಾಲದ ಸಮಯದಲ್ಲಿ ಭಕ್ತರು ನೀಡುವ ಮದ್ಯವನ್ನು ಸೇವಿಸಿ ಭಕ್ತರ ಅನಾರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತಾರೆ ಎಂದು ಅಲ್ಲಿಯ ಜನರು ನಂಬುತ್ತಾರೆ.

  ತಲೆಗೆ ಹೂ ಇಡುವುದರ ಮಹತ್ವ ? ಯಾವ ಹೂವು ಯಾವ ದೇವರ ಪೂಜೆಗೆ ಶ್ರೇಷ್ಠ ?

“ಅಮ್ರೋಹಾ”
ಉತ್ತರ ಪ್ರದೇಶದ ಅಮ್ರೋಹಾ ‘ಷರ್ಬುದ್ಧಿನ್ ಷಾವಿಲಾಯತ್’ ಗೆ ಪ್ರಸಿದ್ಧಿಯಾಗಿದೆ. ಈ ಪುಣ್ಯ ಕ್ಷೇತ್ರದ ಸುತ್ತಲು ‘ ಚೇಳುಗಳು’ ಕಾವಲಿರುತ್ತವೆ.! ಈ ಆಲಯದ ಒಳಗಡೆಯೂ ಚೇಳುಗಳು ಸದಾಕಾಲ ಹರಿದಾಡುತ್ತಿರುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಚೇಳುಗಳು ಹರಿದಾಡುತ್ತಿದ್ದರೂ , ಭಕ್ತರಿಗೆ ಕುಟುಕಿದ ಉದಾಹರಣೆಯಿಲ್ಲ.

” ಮಿಸ್ಟರೀ ಮಮ್ಮೀ”
ಮತ್ತೊಂದು ವಿಚಿತ್ರ ನಮ್ಮ ಭಾರತದಲ್ಲಿದ್ದು, ಅದೂ ಸಹ ನಿಗೂಢವಾಗಿಯೇ ಉಳಿದಿದೆ. ಮಮ್ಮೀ ಎಂದಾಕ್ಷಣ ನಮಗೆ , ಈಜಿಪ್ಟ್ ನಲ್ಲಿರುವ ಮಮ್ಮೀ ನೆನಪಿಗೆ ಬರುತ್ತದೆ.ಆದರೆ.. ಹಿಮಾಚಲ ಪ್ರದೇಶದಲ್ಲಿರುವ ‘ ಗ್ಯೂ’ ಎಂಬ ಗ್ರಾಮದಲ್ಲಿ 500 ವರ್ಷಗಳ ಹಿಂದಿನ ಮಮ್ಮೀ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ‘ಸಂಗಾ ತೇನ್ಸಿಂಗ್’ ಎಂಬ ಬೌದ್ಧ ಸನ್ಯಾಸಿಯ ಮಮ್ಮೀ ಕುಳಿತ ಭಂಗಿಯಲ್ಲಿದೆ. ಇಂದಿಗೂ ಸಹ ಅದರ ಕೂದಲು, ಚರ್ಮದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

Leave a Reply

Your email address will not be published. Required fields are marked *

Translate »