ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶಂಕರ ಜಯಂತಿ – ಶ್ರೀ ಶಂಕರಾಚಾರ್ಯರ ಒಂದು ಕಿರು ಪರಿಚಯ

ಶಂಕರ ಜಯಂತಿ

ಹರಿಃ ಓಂ
ಶ್ರುತಿ ಸ್ಮೃತಿ ಪುರಾಣಾನಾಮ್ ಆಲಯಂ ಕರುಣಾಲಯಂ | ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ ||

ಶಂಕರ ಜಯಂತಿ. ಶ್ರೀ ಶಂಕರಾಚಾರ್ಯರ ಒಂದು ಕಿರು ಪರಿಚಯವನ್ನ ಮನದಲ್ಲಿ ತಂದುಕೊಳ್ಳುವುದು ಒಳ್ಳೆಯದು ಅನ್ನಿಸ್ತು.

ಶ್ರೀ ಶಂಕರರ ತಂದೆ ಶಿವಗುರು ನಂಬೂದರಿ; ತಾಯಿ ಆರ್ಯಾಂಬಾ. ಜನನ ಕೇರಳದ ಕಾಲಡಿ, ಜನನ ಕ್ರಿ.ಶ. 788 ರಲ್ಲಿ ವೈಶಾಖ ಶುದ್ಧ ಪಂಚಮಿ, ತಮ್ಮ 32 ನೇ ವರ್ಷಕ್ಕೆ ಅವತಾರ ಸಮಾಪ್ತಿ. 32 ವರ್ಷಗಳಲ್ಲಿ ಏನೆಲ್ಲಾ ಸಾಧಿಸಿದ್ದಾರೆ ಅನ್ಸುತ್ತೆ ಆಲ್ವಾ, ಹಾಗಾಗಿ ಪರಶಿವನ ಅವತಾರ ವೆಂದರೆ ತಪ್ಪಿಲ್ವೇನೋ ಅನ್ಸುತ್ತೆ.

ಬಾಲ್ಯದಲ್ಲೇ ಸನ್ಯಾಸತ್ವ, ಗೌಡ ಪಾದರ ಶಿಷ್ಯರಾದ ಗೋವಿಂದ ಭಗವತ್ಪಾದರಲ್ಲಿ ಶಿಷ್ಯತ್ವ, ಪ್ರಸ್ಥಾನ ತ್ರಯಕ್ಕೆ ಭಾಷ್ಯ (ಪ್ರಸ್ಥಾನ ತ್ರಯ ಅಂದ್ರೆ ಭಗವದ್ಗೀತೆ, ಉಪನಿಷದ್ಗಳು ಹಾಗೂ ಬ್ರಹ್ಮಸೂತ್ರ) , ಅದ್ವೈತ ಸಿದ್ಧಾಂತದ ಸ್ಥಾಪನೆ ಹೀಗೆ ಎಲ್ಲವನ್ನೂ ಸಾಧಿಸಿದ ಶಂಕರಾಚಾರ್ಯರ ಬಗ್ಗೆ ಎಲ್ಲರಿಗೂ ಗೊತ್ತಿರುವ ಒಂದು ಶ್ಲೋಕ –

ಅಷ್ಟವರ್ಷೇ ಚತುರ್ವೇದಿ ದ್ವಾದಶೇ ಸರ್ವಶಾಸ್ತ್ರವಿತ್ | ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||
(ಎಂಟು ವರ್ಷಕ್ಕೇ ನಾಲ್ಕು ವೇದಗಳನ್ನು ಅಭ್ಯಾಸ ಮಾಡಿ ಚತುರ್ವೇದಿ ಯಾಗಿ, ಹನ್ನೆರಡನೇ ವಯಸ್ಸಿಗೆ ಸಕಲ ಶಾಸ್ತ್ರಪಾರಂಗತನಾಗಿ, ಹದಿನಾರನೇ ವಯಸ್ಸಿಗೆ ಭಾಷ್ಯಗಳನ್ನು ಬರೆದು, ಮೂವತ್ತೆರಡನೇ ವಯಸ್ಸಿಗೆ ಅವತಾರ ಸಮಾಪ್ತಿ).

ಅವರ ಅದ್ವೈತ ಸಿದ್ಧಾಂತದ ಬಗ್ಗೆ ಹೇಳೋದಾದ್ರೆ – “ಅ” + “ದ್ವೈತ” ಅಂದರೆ “ಎರಡಲ್ಲದ್ದು” ಎಂದು ಅರ್ಥೈಸಬಹುದು. ಅದ್ವೈತ ಸಿಧ್ಧಾಂತದ ಮೂಲ ಸಾರವೇ ಇದು. “ಆತ್ಮ” ಮತ್ತು “ಪರಮಾತ್ಮ” ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಇರುವುದು ಒಂದೇ. ಆತ್ಮನೇ ಪರಮಾತ್ಮ (ದೇವರು). ಪರಮಾತ್ಮನೇ ಆತ್ಮ.

ಶ್ರೀ ಶಂಕರರು ತಮ್ಮ ಅದ್ವೈತ ಸಿದ್ಧಾಂತಕ್ಕೆ ನಾಲ್ಕು ವೇದಗಳಿಂದ ಪ್ರತಿಯೊಂದರಿಂದಲೂ ಒಂದೊಂದು ವಾಕ್ಯವನ್ನು ಕಂಡು ಕೊಂಡಿದ್ದಾರೆ. ಋಗ್ವೇದದಿಂದ (ಐತರೇಯ ಉಪನಿಷತ್) ಪ್ರಜ್ಞಾನಂ ಬ್ರಹ್ಮ , ಯಜುರ್ವೇದದಿಂದ (ಬೃಹದಾರಣ್ಯಕ) ಅಹಂ ಬ್ರಹ್ಮಾಸ್ಮಿ , ಸಾಮವೇದದಿಂದ (ಛಾಂದೋಗ್ಯ) ತತ್ವಮಸಿ ಮತ್ತು ಅಥರ್ವ ವೇದದಿಂದ (ಮಾಂಡೂಕ್ಯ ಉಪನಿಷತ್) ಅಯಮಾತ್ಮಾ ಬ್ರಹ್ಮ – ಇವು ಸುಪ್ರಸಿದ್ಧ ಬೋಧನೆಗಳು ಮತ್ತು ” ಸರ್ವಂ ಬ್ರಹ್ಮಮಯಂ ಜಗತ್ ” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಅಂತ ಜಗತ್ತಿಗೆ ತಿಳಿಯುವಂತೆ ವಿವರಿಸಿದಾರೆ ಅನ್ನಬಹುದು.

  ಮಂಗಳಾರತಿಯನ್ನು ಹೇಗೆ ತೆಗೆದುಕೊಳ್ಳಬೇಕು?

ಹಾಗೆಯೇ ದೇಶದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಶಕ್ತಿ ಪೀಠ (ಮಠ) ಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿ, ಪ್ರತಿ ಮಠಕ್ಕೆ ಒಂದೊಂದು ವೇದವನ್ನು ಅನುಗ್ರಹಿಸಿ ಅದ್ವೈತ ಸಿದ್ಧಾಂತ ವನ್ನು ಜನಪ್ರಿಯಗೊಳಿಸಿದರು. (ಉತ್ತರದ ಬದ್ರಿನಾಥದಲ್ಲಿ ಜ್ಯೋತಿರ್ ಮಠ – ಅಥರ್ವ ವೇದ , ದಕ್ಷಿಣದಲ್ಲಿ ಶೃಂಗೇರಿಯಲ್ಲಿ – ಯಜುರ್ವೇದ , ಪೂರ್ವದ ಜಗನ್ನಾಥ ಪುರಿಯಲ್ಲಿ – ಸಾಮ ವೇದ , ಪಶ್ಚಿಮದ ದ್ವಾರಕಾಪೀಠ – ಋಗ್ವೇದ ).

ಶ್ರೀ ಶಂಕರಾಚಾರ್ಯರು ತಮ್ಮ ಅಲ್ಪಾವಧಿ ಆಯುಷ್ಯದ ಬಹುಪಾಲನ್ನು ಪರ್ಯಟನೆಯಲ್ಲಿ ಕಳೆದರೂ, ಉಳಿದ ಸಮಯ ಗ್ರಂಥ ರಚನೆಗೆ ಮೀಸಲಿಟ್ಟು, 300ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆಂದು ಹೇಳಲಾಗಿದೆ. ಇದರ ಬಗ್ಗೆ ಇತಿಹಾಸಕಾರರ ತರ್ಕ, ವಾದವಿವಾದಗಳಿವೆಯಾದರೂ ಅವುಗಳಲ್ಲಿ ಅಧಿಕೃತವಾಗಿ 56 ಕೃತಿಗಳು ಶಂಕರರದೇ ಎಂದು ಎಲ್ಲರೂ ಒಪ್ಪುತ್ತಾರೆ.

ಶ್ರೀ ಶಂಕರಾಚಾರ್ಯರ ಕೃತಿಗಳು ಅಂದಾಗ ನಮಗೆ ಜ್ಞಾಪಕಕ್ಕೆ ಮೊದಲಿಗೆ ಬರೋದು ” ಮೋಹ ಮುದ್ಗರ ” – ಅಥವಾ ಭಜಗೋವಿಂದಂ ಆಲ್ವಾ.

“ಭಜಗೋವಿಂದಂ – ಮೋಹಮುದ್ಗರ” ಸ್ತೋತ್ರ, ಇದು ವೇದಾಂತದ ಸಾರವನ್ನೊಳಗೊಂಡ ಉತ್ತಮ ಕೃತಿ ಅಂತಲೇ ಪ್ರಸಿದ್ಧಿ. ಇದರಲ್ಲಿ ಮುಖ್ಯವಾಗಿ ಅರಿಷಡ್ವರ್ಗಗಳಲ್ಲೊಂದಾದ “ಮೋಹ”ವನ್ನು ಹೇಗೆ ನಿವಾರಿಸಿಕೊಳ್ಳಬಹುದು, ಎಂಬುದನ್ನು ವಿವರಿಸಿದೆ. ಅದಕ್ಕಾಗಿಯೇ ಈ ಸ್ತೋತ್ರವನ್ನು ” ಮೋಹ – ಮುದ್ಗರಮ್” (ಮಾಯೆಯನ್ನು ನಾಶಮಾಡುವುದು ) ಎಂದೂ ಹೇಳುವುದಿದೆ. ಭಜಗೋವಿಂದಂ ಸ್ತೋತ್ರವು, ಆದಿ ಶಂಕರಾಚಾರ್ಯರ ಸಣ್ಣ ಕೃತಿಯಾದರೂ ಇದನ್ನು ಪ್ರಕರಣ ಗ್ರಂಥವೆಂದು (ಪ್ರಮುಖ ಕೃತಿಗೆ ಮುನ್ನುಡಿ) ಹೇಳುವುದಿದೆ.

  ಸರ್ವಜ್ಞನ ವಚನದಲ್ಲಿ ಒಗಟುಗಳು ಉತ್ತರ ಸಹಿತ

ಇದರಲ್ಲಿ ಓದುಗರಿಗೆ ಜ್ಞಾನ ಹಾಗೂ ಭಕ್ತಿಗಳಿಗೆ ಸಂಬಂಧಿಸಿದ ಪ್ರಮುಖ ತತ್ವಗಳನ್ನು ತಿಳಿಸಿದ್ದಾರೆ ಅನ್ನೋದು ಎಲ್ಲರ ಒಟ್ಟಾರೆ ಅಭಿಪ್ರಾಯ. ಈ ಶ್ಲೋಕಗಳು ನಮ್ಮನ್ನು “ಜೀವನದ ಪ್ರಮುಖ ಉದ್ದೇಶವೇನು, ಸಂಸಾರ ಚಕ್ರದಲ್ಲಿ ಸಿಲುಕಿ ಶಾಂತಿ ಇಲ್ಲದಿರುವುದು, ಜೀವನದ ಉದ್ದೇಶವೇನು, ಯಾವುದು ಸತ್ಯ” ಎಂಬುದರ ಬಗೆಗೆ ಆಳವಾಗಿ ವಿಚಾರಮಾಡಲು ಪ್ರೇರೇಪಿಸುತ್ತದೆ, ನಾವು ಅಂತರ್ಮುಖಿಯಾಗಿ ನಮ್ಮಲ್ಲೇ ಇರುವ ಭಗವಂತನನ್ನರಿಯುವ ಮಾರ್ಗ ಸೂಚಿಯೂ ಇದಾಗಿದೆ, ವೇದಾಂತದ ತತ್ವಗಳನ್ನು, ಜ್ಞಾನ ಹಾಗೂ ಭಕ್ತಿಗಳಿಗೆ ಸಂಬಂಧಿಸಿದ ಪ್ರಮುಖ ತತ್ವಗಳನ್ನು ಸ್ತೋತ್ರದಲ್ಲಿ ತಿಳಿಸಲಾಗಿದೆ ಅನ್ನೋದು ಹಲವಾರು ದಾರ್ಶನಿಕರ ಅಭಿಪ್ರಾಯ.

ಭಜಗೋವಿಂದಂ ಸ್ತೋತ್ರದಲ್ಲಿ ಮೊದಲನೇ ಶ್ಲೋಕವನ್ನು ಪಲ್ಲವಿ ಎಂದು ಪರಿಗಣಿಸ್ತಾರೆ . ಪಲ್ಲವಿ ಹಾಗೂ ನಂತರದ ಹನ್ನೆರಡು ಶ್ಲೋಕಗಳನ್ನು ಶಂಕರಾಚಾರ್ಯರೇ ರಚಿಸಿರುವರೆಂದೂ ಇದನ್ನು ” ದ್ವಾದಶ ಮಂಜರಿಕಾ ಸ್ತೋತ್ರ ” ವೆಂದು ಕರೆಯಲ್ಪಟ್ಟಿದೆ. ಅವರೊಡನಿದ್ದ ಹದಿನಾಲ್ಕು ಶಿಷ್ಯರೂ ದ್ವಾದಶ ಮಂಜರಿಕಾ ಸ್ತೋತ್ರದಿಂದ ಸ್ಫೂರ್ತಿ ಗೊಂಡು ಪ್ರತಿಯೊಬ್ಬರೂ ಇದಕ್ಕೆ ಪೂರಕವೋ ಎಂಬಂತೆ ಒಂದೊಂದು ಶ್ಲೋಕಗಳನ್ನು ರಚಿಸಿ ಧನ್ಯರಾಗಿದ್ದಾರೆ. ಇದು ” ಚತುರ್ದಶಾ ಮಂಜರಿಕಾ ಸ್ತೋತ್ರಮ್ ” ಎಂದೇ ಪ್ರಸಿದ್ಧಿ. ಇದರಿಂದ ಸುಪ್ರಸನ್ನರಾದ ಆಚಾರ್ಯರು ಮತ್ತೂ ನಾಲ್ಕು ಶ್ಲೋಕಗಳನ್ನು ರಚಿಸಿ ಶಿಷ್ಯರನ್ನು ಹಾಗೂ ನಮ್ಮನ್ನು ಆಶೀರ್ವದಿಸಿದ್ದಾರೆ. ಹೀಗಾಗಿ ಭಜಗೋವಿಂದಂ 31 ಶ್ಲೋಕಗಳನ್ನೊಳಗೊಂಡ ಆಧ್ಯಾತ್ಮಿಕ ರತ್ನ ಭಂಡಾರವೆನಿಸಿಕೊಂಡಿದೆ.

ಇದರೊಂದಿಗೆ ಸ್ತೋತ್ರಮಂಜರಿಯಲ್ಲಿ ಇಲ್ದೇ ಇದ್ರೂ, ಮತ್ತೆರಡು ಶ್ಲೋಕಗಳನ್ನ ಸಮಾರೋಪ ಶ್ಲೋಕವಾಗಿ ಹೇಳಿಕೊಳ್ಳುವುದೂ ಇದೆ. (ಇದು ಯಾರ ರಚನೆ ಅನ್ನೋದು ಗೊತ್ತಿಲ್ಲ, ನನಗಂತೂ ಕಂಡುಬಂದಿಲ್ಲ). ಚೆನ್ನಾಗಂತೂ ಇದೆ, ಭಾವಪೂರ್ವಕ ಇದನ್ನೂ ಸೇರಿಸಿ ಹೇಳಿಕೊಳ್ಳಬಹುದಾಗಿದೆ.

  ಲಲಿತಾ ಜಯಂತಿ: ಮಂತ್ರ, ಪ್ರಯೋಜನ ಮತ್ತು ಕಥೆ ..!

ನಾವೂ ಕೂಡ ಶ್ರೀ ಶಂಕರ ಭಗವದ್ಪಾದರ ಅನುಜ್ಞೆಯಂತೆ ” ಸೋಹಮ್ ” ಭಾವದ ಕಡೆ ಸಾಗುವ ಪ್ರಯತ್ನವನ್ನು ಹಾಕೋಣ.

“ಶೃತಿ ಸ್ಮೃತಿ ಪುರಾಣಾನಾಮಾಲಯಮ್ ಕರುಣಾಲಯಮ್ | ನಮಾಮಿ ಭಗವತ್ಪಾದ ಶಂಕರಮ್ ಲೋಕ ಶಂಕರಮ್” ||

ಶ್ರುತಿ ಸ್ಮ ತಿ ಪುರಾಣಗಳ ಆಶ್ರಯರಾಗಿರುವ, ಲೋಕಕ್ಕೆ ಕಲ್ಯಾಣ ಉಂಟುಮಾಡುವ ಕರುಣೆಯಿಂದ ತುಂಬಿದ ಶ್ರೀ ಶಂಕರ ಭಗವತ್ಪಾದರನ್ನು ಭಕ್ತಿ ಪೂರ್ವಕ ನಮಿಸುತ್ತೇನೆ, ನಮಸ್ಕರಿಸೋಣ.

ಓಂ ತತ್ಸತ್,

ಶ್ರೀ ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರ ಅನುಗ್ರಹ ನಮ್ಮ ಮೇಲಿರಲಿ, ಎಲ್ಲರಿಗೂ ದೊರೆಯುವಂತಾಗಲಿ ಎಂದು ಆಶಿಸೋಣ.

ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
ಅಡ್ಮಿನ್ ಬಳಗ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://chat.whatsapp.com/It4IhsGZj0WFIcFLGVhbu6
⬆️ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *

Translate »