ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಫಾಲ್ಗುಣ ಅಮಾವಾಸ್ಯೆ: ಅಮಾವಾಸ್ಯೆ ಪೂಜೆ ವಿಧಾನ ಮತ್ತು ಪರಿಹಾರಗಳು ಹೀಗಿವೆ

ಫಾಲ್ಗುಣ ಅಮಾವಾಸ್ಯೆ: ಅಮಾವಾಸ್ಯೆ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಪರಿಹಾರಗಳು ಹೀಗಿವೆ..!

ಈ ದಿನದ ವಿಶೇಷತೆಯೇನೆಂದರೆ ಇಂದು ಅಮಾವಾಸ್ಯೆಯೊಂದಿಗೆ ಪ್ರಸ್ತುತ ಶುಭಕೃತ್ ನಾಮ ಸಂವತ್ಸರವು ಮುಕ್ತಾಯಗೊಂಡು ನೂತನ ಸಂವತ್ಸರವು ಆರಂಭವಾಗುವುದು. ಈ ಅಮಾವಾಸ್ಯೆಯನ್ನು ಅನೇಕ ಕಾರಣಗಳಿಗಾಗಿ ಪ್ರಮುಖವೆಂದು ಪರಿಗಣಿಸಲಾಗಿದೆ. ಫಾಲ್ಗುಣ ಮಾಸದ ಅಮಾವಾಸ್ಯೆಯ ತಿಥಿ ಸೋಮವಾರ, ಶನಿವಾರ, ಮಂಗಳವಾರ, ಗುರುವಾರದಂದು ಇದ್ದರೆ ಸೂರ್ಯಗ್ರಹಣಕ್ಕಿಂತ ಹೆಚ್ಚು ಫಲವನ್ನು ನೀಡುತ್ತದೆ.

ಲಿಂಗ ಪುರಾಣದಲ್ಲಿ ಫಾಲ್ಗುಣ ಅಮಾವಾಸ್ಯೆ ಪೂಜೆ ವಿಧಾನ:
ಫಾಲ್ಗುಣ ಮಾಸದ ಅಮಾವಾಸ್ಯೆಯಂದು ರುದ್ರ, ಅಗ್ನಿ ಮತ್ತು ಬ್ರಹ್ಮ ದೇವರನ್ನು ಪೂಜಿಸಿದ ನಂತರ, ಅವರಿಗೆ ಉದ್ದು, ಮೊಸರು ಮತ್ತು ಪುರಿಯ ನೈವೇದ್ಯವನ್ನು ಅರ್ಪಿಸಬೇಕು. ಅವುಗಳನ್ನೇ ಪ್ರಸಾದವಾಗಿಯೂ ತೆಗೆದುಕೊಳ್ಳಬೇಕು. ಅಲ್ಲದೇ ಈ ಅಮಾವಾಸ್ಯೆಯಂದು ತಾಯಿ ಅಥವಾ ತಂದೆ ತೀರಿಕೊಂಡವರು ಪೂರ್ವಜರ ಹೆಸರಿನಲ್ಲಿ ಅಪಿಂಡ ಶ್ರಾದ್ಧ ಮಾಡಬೇಕು. ಇದರಿಂದ ಅವರ ಆತ್ಮಕ್ಕೆ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ.

  ವಾದಿರಾಜ ಜಯಂತಿ

ವರ್ಷದ ಪ್ರಮುಖ ಅಮಾವಾಸ್ಯೆ:
ವರ್ಷದಲ್ಲಿ ಒಟ್ಟು 12 ಅಮವಾಸ್ಯೆ ತಿಥಿಗಳನ್ನು ನೋಡಬಹುದು. ಇದರಲ್ಲಿ ಚೈತ್ರ ಮಾಸದ ಅಮಾವಾಸ್ಯೆ ಮೊದಲ ಮತ್ತು ಫಾಲ್ಗುಣ ಮಾಸದ ಅಮಾವಾಸ್ಯೆ ಕೊನೆಯ ಅಮಾವಾಸ್ಯೆಯಾಗಿದೆ. ವರ್ಷದ ಕೆಲವು ಅಮಾವಾಸ್ಯೆಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ, ಅವುಗಳಲ್ಲಿ ಶ್ರಾವಣ, ಭಾದ್ರಪದ ಮತ್ತು ಆಶ್ವೀಜ ಮಾಸದ ಅಮಾವಾಸ್ಯೆ ಸೇರಿದಂತೆ ಪೂರ್ವಜರು ಮತ್ತು ದೇವತೆಗಳ ವಿಶೇಷ ಆಶೀರ್ವಾದವನ್ನು ಪಡೆಯಲಾಗುತ್ತದೆ.

ಅಮಾವಾಸ್ಯೆಯಂದು ಉಪ್ಪಿನ ಪರಿಹಾರ:
ಪ್ರತಿ ಅಮಾವಾಸ್ಯೆಯಂದು ಅಥವಾ ಪ್ರತಿ 15 ದಿನಗಳಿಗೊಮ್ಮೆ ಮನೆಯಲ್ಲಿ ಕಲ್ಲು ಉಪ್ಪನ್ನು ನೀರಿನಲ್ಲಿ ಅಂದರೆ 50 ಗ್ರಾಂನಷ್ಟು ಉಪ್ಪನ್ನು ಸುಮಾರು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಮನೆಯನ್ನು ಒರೆಸಬೇಕು. ಇದು ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುತ್ತದೆ ಅಥವಾ ಉಪ್ಪಿನ ಬದಲಿಗೆ ಗೋಮೂತ್ರವನ್ನು ಕೂಡ ಸೇರಿಸಿ ಮನೆಯನ್ನು ಒರೆಸಬಹುದು. ಅಮಾವಾಸ್ಯೆಯಂದು ಮರ, ಬಳ್ಳಿ ಇತ್ಯಾದಿಗಳನ್ನು ಕಡಿಯುವವನು ಅಥವಾ ಯಾವುದೇ ಒಂದು ಗಿಡದ ಎಲೆಯನ್ನು ಕಿತ್ತುಹಾಕುವವನು ಬ್ರಹ್ಮ ಹತ್ಯೆ ದೋಷವನ್ನು ಹೊಂದುತ್ತಾನೆ ಎಂದು ಹೇಳಲಾಗುತ್ತದೆ.

  ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ

ಅಮಾವಾಸ್ಯೆಯ ಇತರ ಪರಿಹಾರಗಳು:

  • ಅಮಾವಾಸ್ಯೆಯ ದಿನ, ಮೀನಿಗೆ ಹಿಟ್ಟಿನ ಉಂಡೆಗಳನ್ನು ಆಹಾರವಾಗಿ ನೀಡಿ.
  • ಅಮಾವಾಸ್ಯೆಯ ದಿನ ಕಪ್ಪು ಇರುವೆಗಳಿಗೆ ಸಕ್ಕರೆ ಬೆರೆಸಿದ ಹಿಟ್ಟನ್ನು ತಿನ್ನಲು ನೀಡಿ.
  • ಸಂಜೆ ಒಳ್ಳೆಯ ಪುರೋಹಿತರನ್ನು ಕರೆಸಿ ಮನೆಯಲ್ಲಿ ಹವನ ನಡೆಸಬೇಕು.
  • ಅಮಾವಾಸ್ಯೆಯ ತಿಥಿಯು ಮುಖ್ಯವಾಗಿ ಪೂರ್ವಜರಿಗೆ ಸಮರ್ಪಿತವಾಗಿದೆ. ಈ ದಿನ ಪೂರ್ವಜರ ಹೆಸರಿನಲ್ಲಿ ದಾನ ಮಾಡಿ.
  • ಅಮಾವಾಸ್ಯೆಯಂದು ಅರಳಿ ಮರವನ್ನು ಪೂಜಿಸಿ ಮತ್ತು ಮರಕ್ಕೆ ಜನು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಅರ್ಪಿಸಿ. ಇದರ ನಂತರ, ಭಗವಾನ್ ವಿಷ್ಣುವಿನ ಮಂತ್ರವಾದ, ‘ಓಂ ನಮೋ ಭಗವತೇ ವಾಸುದೇವಾಯ’ ಎನ್ನುವ ಮಂತ್ರವನ್ನು 7 ಬಾರಿ ಪಠಿಸಿ.

Leave a Reply

Your email address will not be published. Required fields are marked *

Translate »