ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಾಘ ಹುಣ್ಣಿಮೆ

ಮಾಘ ಹುಣ್ಣಿಮೆ…
ಮಾಘಿ ಹುಣ್ಣಿಮೆಯಂದು ಗಂಗಾ ಸ್ನಾನದ ಮಹತ್ವ:

ಮಾಘ ಮಾಸದಲ್ಲಿ ದೇವತೆಗಳು ಭೂಮಿಗೆ ಆಗಮಿಸಿ ಕೆಲವು ದಿನಗಳ ಕಾಲ ಇಲ್ಲೇ ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಯಾವುದೇ ವ್ಯಕ್ತಿಯು ಮಾಘ ಪೂರ್ಣಿಮೆಯಂದು ಗಂಗಾ ಸ್ನಾನವನ್ನು ಮಾಡಿದರೆ, ಆತ/ಆಕೆ ಪಾಪಗಳಿಂದ ಮುಕ್ತನಾಗುತ್ತಾನೆ ಮತ್ತು ಸ್ವರ್ಗವನ್ನು ಪಡೆಯುತ್ತಾನೆ ಎನ್ನಲಾಗಿದೆ. 

 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಿಶೇಷ ದಿನದಂದು ಸೂರ್ಯೋದಯಕ್ಕೂ ಮುನ್ನ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿ ಭಗವಾನ್‌ ವಿಷ್ಣುವನ್ನು ಪೂಜಿಸಿ ದಾನ ಧರ್ಮ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ದಿನ ಎಳ್ಳಿನ ನೈವೇದ್ಯ, ಎಳ್ಳೆಣ್ಣೆ ದೀಪ ಹಚ್ಚುವುದು ಕೂಡಾ ಒಳ್ಳೆಯದು. 

  ಮಾತಾ ವಿಶಾಲಾಕ್ಷಿ ಮಣಿಕರ್ಣಿಕ, ವಾರಣಾಸಿ

ಮಾಘ ಪೂರ್ಣಿಮೆಯಂದು ಭಗವಾನ್ ವಿಷ್ಣುವು ಸ್ವತಃ ಗಂಗಾನದಿಯ ನೀರಿನಲ್ಲಿ ಸ್ನಾನ ಮಾಡುತ್ತಾನೆ, ಆದ್ದರಿಂದ ಈ ದಿನದಂದು ಗಂಗಾಸ್ನಾನಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಗಂಗಾಜಲವನ್ನು ಸ್ಪರ್ಶಿಸುವುದರಿಂದ ದೇಹದ ಎಲ್ಲಾ ಕಾಯಿಲೆಗಳು ಗುಣವಾಗುತ್ತವೆ ಎಂದು ನಂಬಲಾಗಿದೆ. ಪಾಪಗಳೆಲ್ಲಾ ನಾಶವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ.

ಪುರಾಣದ ಪ್ರಕಾರ, ಮಾಘ ಹುಣ್ಣಿಮೆಯಂದು ಗಂಗಾ-ಯಮುನೆಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದ ನಂತರ ಭಗವಾನ್ ವಿಷ್ಣುವಿನ ಧ್ಯಾನ  ಮಾಡಿ, ದಾನ ಮಾಡಿದರೆ ಸಾಕ್ಷಾತ್‌ ವಿಷ್ಣು ಸಂತೃಪ್ತನಾಗಿ ಹರಸುತ್ತಾನೆ. ಈ ದಿನ ಹಸು, ಎಳ್ಳು, ಬೆಲ್ಲ ಮತ್ತು ಕಂಬಳಿಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಬಟ್ಟೆ, ಬೆಲ್ಲ, ತುಪ್ಪ, ಹತ್ತಿ, ಲಡ್ಡು, ಹಣ್ಣುಗಳು, ಧಾನ್ಯಗಳು ಹಾಗೂ ಇನ್ನಿತರ ವಸ್ತುಗಳನ್ನು ದಾನ ಮಾಡಬಹುದು. 

  ಶ್ರೀಶಿಂಶುಮಾರರೂಪಿ ಭಗವಂತನ ಅವತಾರ ಮತ್ತು ಸ್ತೋತ್ರ ಮಹಾತ್ಮೆ

ಸಂಗ್ರಹ= ಅನಂತ.ಎಚ್

Leave a Reply

Your email address will not be published. Required fields are marked *

Translate »