ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಏಕಾದಶಿ-ವೈಜ್ಞಾನಿಕ ವಿಶ್ಲೇಷಣೆ

ಏಕಾದಶಿ-ವೈಜ್ಞಾನಿಕ ವಿಶ್ಲೇಷಣೆ..!

ಸರ್ವೋತ್ತಮನಾದ ಶ್ರೀ ಹರಿಗೆ ಅತ್ಯಂತ ಪ್ರಿಯವಾದ ಹಾಗೂ ಎಲ್ಲ ವೃತಗಳ ರಾಜ ನೆನೆಸಿದ ಏಕಾದಶಿಯನ್ನು ಎಲ್ಲ ವೈದಿಕರು ಆಚರಿಸುತ್ತಾರೆ. ಏಕಾದಶಿಯ ಉಪವಾಸದ ಆಚರಣೆಯಿಂದ ಎಲ್ಲಾ ರೀತಿಯ ಇಹ-ಪರ ಸೌಖ್ಯಗಳು ಲಭ್ಯವಾಗುತ್ತವೆ ಎಂದು ಎಲ್ಲ ಶಾಸ್ತ್ರ- ಪುರಾಣಗಳು ಸಾರಿ ಸಾರಿ ಹೇಳುತ್ತಿವೆ. ಏಕಾದಶಿ ಉಪವಾಸವು ವೈದಿಕರ ಪಾಲಿನ ನಿತ್ಯ ಕರ್ತವ್ಯವಾಗಿದೆ. ಏಕಾದಶಿ ಪಾಲನೆಯಿಂದ ರಾಜಸಿಕ,ತಾಮಸಿಕ ಗುಣಗಳು ನಶಿಸಿ ಸಾತ್ವಿಕಭಾವ ಜಾಗೃತವಾಗಿ ದೈವಿ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತದೆ.

ಏಕಾದಶಿ ಉಪವಾಸ ಧಾರ್ಮಿಕವಾಗಿ ಮಾತ್ರವಲ್ಲದೆ ವೈಜ್ಞಾನಿಕವಾಗಿ ಮಹತ್ವವನ್ನು ಪಡೆದಿದೆ. ಸಾಮಾನ್ಯವಾಗಿ ಉಪವಾಸದ ಆಚರಣೆಯಿಂದ ನಮ್ಮ ಪಚನ ಕ್ರಿಯೆ, ಉಸಿರಾಟ ಕ್ರಿಯೆ ಮತ್ತು ಪರಿಚಲನಕ್ರಿಯೆಗಳಲ್ಲಿ ಸುಧಾರಣೆಯಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೋಳ್ಳುವುದರೊಂದಿಗೆ ಮನಸ್ಸು ಶಾಂತವಾಗಿರುತ್ತದೆ.

ಉಪವಾಸದಿಂದ ಪಚನ ಕ್ರಿಯೆ ಇತ್ಯಾದಿ ಆರೋಗ್ಯ ಸುಧಾರಣೆ ಆಗುತ್ತಿದ್ದರೆ ನಾವು ಏಕಾದಶಿಯೇಂದೇ ಏಕೆ ಉಪವಾಸ ಮಾಡಬೇಕು? ತಿಂಗಳಲ್ಲಿ ಯಾವಾಗಲಾದರೂ ಎರಡು ದಿನ ಉಪವಾಸ ಮಾಡಬಹುದಲ್ಲ, ಆದರೆ ನಮ್ಮ ಪೂರ್ವಿಕರು ಏಕಾದಶಿಯಂದೇ ಏಕೆ ಉಪವಾಸ ಹೇಳಿದರು? ಅದಕ್ಕೆ ಕಾರಣಗಳೇನು? ಏಂಬ ಸಹಜ ಪ್ರಶ್ನೆ ಎಲ್ಲರಿಗೂ ಬರುತ್ತದೆ. ಹೀಗಾಗಿ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಒಂದು ಸಣ್ಣ ಪ್ರಯತ್ನ ಈ ಲೇಖನ.


ಮೊದಲು ತಿಥಿಯ ಬಗ್ಗೆ ತಿಳಿಯೋಣ – ಸೂರ್ಯ ಮತ್ತು ಚಂದ್ರರ ಮಧ್ಯೆ 12 ಅಂಶಗಳ ಅಂತರವಿರುವಾಗ ತಿಥಿಯಾಗುತ್ತದೆ. ಸೂರ್ಯ ಚಂದ್ರರ ಚಲನೆಯಿಂದ ಉಂಟಾಗುವ ವೃದ್ಧಿ ಕ್ಷಯಗಳ ವಿವಿಧ ಹಂತಗಳನ್ನು ತಿಥಿಯ ಮೂಲಕ ಗುರುತಿಸಲಾಗುತ್ತದೆ. ಒಟ್ಟು 30 ತಿಥಿಗಳಿದ್ದು ಎರಡು ಪಕ್ಷಗಳಲ್ಲಿ 15ರಂತೆ ಗಣನೆ ಮಾಡಲಾಗುತ್ತದೆ. ಪ್ರತಿಪದೇಯಿಂದ ಹುಣ್ಣಿಮೆಯವರೆಗೆ ಬರುವ ಮೊದಲ 15 ತಿಥಿಗಳಿಗೆ ಶುಕ್ಲ ಪಕ್ಷವೆಂದೂ ,ನಂತರದ ಪ್ರತಿಪದೇಯಿಂದ ಅಮಾವಾಸ್ಯೇ ವರೆಗೆ ಬರುವ15 ತಿಥಿಗಳಿಗೆ ಕೃಷ್ಣ ಪಕ್ಷವೆಂದು ಕರೆಯುತ್ತಾರೆ. ಚಂದ್ರನು180 ಅಂಶ ಚಲಿಸಿದಾಗ ಪೂರ್ಣಿಮೆ ಮತ್ತು ಚಂದ್ರನ 360 ಅಂಶ ಚಲಿಸಿದಾಗ ಅಮಾವಾಸ್ಯೆ ಬರುತ್ತದೆ. ಏಕಾದಶಿಯು 11ನೇ ತಿಥಿಯಾಗಿದೆ.

  ಪ್ರಜಾಕೀಯ - ಪ್ರಜೆ ಯ ಜೊತೆ ಚರ್ಚೆ

ಈ ತಿಥಿಗಳ ಗಣನೆಯು ಸೂರ್ಯ ಚಂದ್ರರ ಚಲನೆ ಅವಲಂಬಿಸಿರುತ್ತದೆ. ಸೂರ್ಯ ಚಂದ್ರರ ಚಲನೆಯು ಭೂಮಿಯ ಮೇಲೆ ತನ್ನ ಪ್ರಭಾವಬಿರುತ್ತದೆ. ಗ್ರಹಗಳ ಗತಿಗಳ ವಿದ್ಯುತ್ ಕಾಂತೀಯ ಪ್ರಭಾವವು ಭೂಮಿಯ ಮೇಲೆ ಬೀರುವುದನ್ನು ಆಧುನಿಕ ವಿಜ್ಞಾನಿಗಳ ಒಪ್ಪಿಕೊಂಡಿದ್ದಾರೆ. ಹೀಗಾಗಿ ಸೂರ್ಯ ಚಂದ್ರರ ಗತಿಯನ್ನೇ ಅವಲಂಬಿಸಿರುವ ತಿಥಿಯು ಭೂಮಿ ಮತ್ತು ಮನುಷ್ಯರ ಮೇಲೆ ಪ್ರಭಾವ ಬೀರುವುದು ಸಹಜವಾಗಿದೆ.

ಭೂಮಿಯಂತೆ ಮನುಷ್ಯರ ದೇಹದಲ್ಲಿಯೂ ಶೇಕಡ 70ರಷ್ಟು ದ್ರವ ರೂಪ ಮತ್ತು 30ರಷ್ಟು ಘನ ರೂಪವಿರುತ್ತದೆ. ಮನುಷ್ಯನ ಮೆದುಳು ಮತ್ತು ಹೃದಯದಲ್ಲಿ73% ನೀರಿನ ಪ್ರಮಾಣವಿದ್ದರೆ, ಚರ್ಮದಲ್ಲಿ 64%, ಸ್ನಾಯುಗಳಲ್ಲಿ ಮತ್ತು ಮೂತ್ರಪಿಂಡದಲ್ಲಿ 78% ನೀರಿನ ಅಂಶವಿರುತ್ತದೆ. ಶ್ವಾಸಕೋಶದಲ್ಲಿ 79% ನೀರಿನ ಅಂಶ ಇರುತ್ತದೆ. ಈ ವಿಷಯವು ಏಕಾದಶಿಯ ಉಪವಾಸದ ಬಗ್ಗೆ ಅರ್ಥ ಮಾಡಿಕೊಳ್ಳಲುಅತ್ಯಂತ ಸಹಾಯಕವಾಗಿದೆ.

ಎಲ್ಲರಿಗೂ ತಿಳಿದಂತೆ ಭೂಮಿಯ ದ್ರವದ (ನೀರಿನ ) ಮೇಲೆ ಚಂದ್ರನ ಆಕರ್ಷಣೆಯಿಂದ ಹುಣ್ಣಿಮೆ ಮತ್ತು ಅಮಾವಾಸ್ಯೇಗಳೇಂದು ಸಮುದ್ರದಲ್ಲಿ ಉಬ್ಬರ -ವಿಳಿತಗಳು ಕಂಡುಬರುತ್ತವೆ. ಚಂದ್ರನ ಗುರುತ್ವಾಕರ್ಷಣ ಶಕ್ತಿಯಿಂದ ಸಾಗರದ ಮೇಲೆ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ಅಧಿಕ ಏರಿಳಿತ ವಿದ್ದರೆ ಸಪ್ತಮಿ ತಿಥಿಯಂದು ಕಡಿಮೆ ಏರಿಳಿತ ಇರುತ್ತದೆ.

ಶೇಕಡ 70ರಷ್ಟು ಜಲವನ್ನು ಹೊಂದಿರುವ ಭೂಮಿಯ ಮೇಲೆ ಚಂದ್ರನು ಪ್ರಭಾವ ಬೀರುವಂತೆ, ಮನುಷ್ಯನ ದೇಹದ ಮೇಲೆಯೂ ಚಂದ್ರನು ಪ್ರಭಾವ ಬೀರುತ್ತಾನೆ (ಮನುಷ್ಯರಲ್ಲಿಯೂ ಶೇಕಡ 70ರಷ್ಟು ದ್ರವವಿರುತ್ತದೆ) ಮನುಷ್ಯನ ಮನಸ್ಸು ಮತ್ತು ಶರೀರದ ಮೇಲೆ ಚಂದ್ರನ ಪ್ರಭಾವ ಹಿರಿದಾಗಿರುತ್ತದೆ.

ಅರ್ನೋಲ್ಡ್ ಲೈವರ ಎಂಬ ಮನೋವಿಜ್ಞಾನಿಗಳು ತಮ್ಮ “Does the moon control your mind “ ಎಂಬ ಸಂಶೋಧನಾ ಲೇಖನದಲ್ಲಿ ಹೇಳುವಂತೆ- ಈ ಜೈವಿಕ ಏರಿಳಿತಗಳು ಮನುಷ್ಯನ ಮನಸ್ಥಿತಿ ಮತ್ತು ನಡವಳಿಕೆ ಮೇಲೆ ಪ್ರಭಾವ ಬೀರುತ್ತವೆ. ಅನೇಕ ಮನೋವೈದ್ಯಕೀಯ ಆಸ್ಪತ್ರೆಗಳೇ ದಾಖಲಿಸಿರುವಂತೆ ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನಗಳಲ್ಲಿ ಮನೋರೋಗಿಗಳ ನಡವಳಿಕೆ ಮತ್ತು ವರ್ತನೆಗಳಲ್ಲಿ ಹೆಚ್ಚು ಬದಲಾವಣೆ – ತೊಂದರೆ ಕಂಡು ಬರುತ್ತದೆ. ಇಷ್ಟೇ ಅಲ್ಲ , ಕೆಲವು ಬಾರಿ ಆರೋಗ್ಯವಂತರು ಸಹ ಈ ದಿನಗಳಲ್ಲಿ ಮಾನಸಿಕ ಒತ್ತಡ ಅಥವಾ ಭಯದಿಂದ ಬಳಲುತ್ತಾರೆ.
ಅರ್ನಾಲ್ಡರವರ ಹೇಳಿಕೆ ಸಹಜವಾಗಿ ನಮ್ಮೆಲ್ಲರ ಅನುಭವಕ್ಕೇ ಬಂದಿರುತ್ತದೆ. ಬಹಳ ಜನ ಹುಣ್ಣಿಮೆ / ಅಮಾವಾಸ್ಯೇಗಳಲ್ಲಿ ಭೂತಭಾದೆಯಿಂದ, ಮಾನಸಿಕ ಒತ್ತಡದಿಂದ ಬಳಲುವುದು ನೋಡಿದ್ದೇವೆ.

  ನಿತ್ಯ ಪಠನಾ ಶ್ಲೋಕಗಳು

ಅವರಿನ್ನೂ ಮುಂದುವರೆದು ತಮ್ಮ ವರದಿಯಲ್ಲಿ ಹೇಳುವಂತೆ- ದಿನಾಂಕ 08/01/1974 ಮತ್ತು 07/02/1974 ರಂದು ಸೂರ್ಯ- ಭೂಮಿ -ಚಂದ್ರರು ಒಂದೇ ಸರಳ ರೇಖೆಯಲ್ಲಿ ಬಂದಿದ್ದು, ಚಂದ್ರನು ಭೂಮಿಗೆ ಹತ್ತಿರವಾಗಿದ್ದನು. ಆಗ ಸಮುದ್ರದ ನೀರಿನ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ಅತ್ಯಧಿಕ ಏರಿಕೆಯಾಗಿತ್ತು. ಈ ಸಮಯದಲ್ಲಿ ಪ್ರಕೃತಿಯೊಂದಿಗೆ ಮನುಷ್ಯರ ವರ್ತನೆ ಮತ್ತು ಮನಸ್ಸಿನ ಮೇಲೆ ಅಧಿಕ ಪ್ರಭಾವ ಬೀರಿತ್ತು. ವರದಿಯಲ್ಲಿ ಹೇಳುವಂತೆ ಈ ಸಮಯದಲ್ಲಿ ಮಿಯಾಮಿಯದಲ್ಲಿ ಕೊಲೆ ಮತ್ತು ಅಪರಾಧಗಳ ಸಂಖ್ಯೆ ಹೆಚ್ಚಾಗಿ ಕಂಡುಬಂದಿತ್ತು.

ಹೀಗೆ ಸೂರ್ಯ ಚಂದ್ರರ ಗತಿಯು ಪ್ರಕೃತಿ ಮೇಲಷ್ಟೇ ಅಲ್ಲ ಮನುಷ್ಯರ ಮೇಲೂ ಅಧಿಕ ಪ್ರಭಾವ ಬೀರುತ್ತದೆ ಎಂದು ಅರ್ನಾಲ್ಡ್ ಲೈಬರ ಸಾಧಿಸಿ ತೋರಿಸಿದ್ದಾರೆ.

ಸಂಶೋಧಕರು ತಿಳಿಸುವಂತೆ ಚಂದ್ರ ಮತ್ತು ಆಕಾಶ ಕಾಯಗಳ ಪ್ರಭಾವದಿಂದ ನಮ್ಮ ಹಾರ್ಮೋನಗಳಲ್ಲಿ ಅಸಮತೋಲನ ಉಂಟಾಗುತ್ತದೆ. ಇದರಿಂದ ಅನೇಕ ಮಾನಸಿಕ ಕಾಯಿಲೆಗಳಾದ ಭಯ, ಲಾಲಸೆ, ದ್ವೇಷ,ಸಿಟ್ಟು ಇತ್ಯಾದಿ ಅಧಿಕವಾಗಿ ಕಂಡುಬರುತ್ತದೆ. ಇಷ್ಟೇ ಅಲ್ಲ ಇದರಿಂದ ಅನೇಕ ದೈಹಿಕ ತೊಂದರೆಗಳು ಕಂಡು ಬರುತ್ತದೆ.

ಸೌರಮಂಡಲದಿಂದ ಬರುವ ವಿದ್ಯುತ್ ಕಾಂತಿಯ ಶಕ್ತಿಯು(electromagntic force )ಭೂಮಿ ಮತ್ತು ಮನುಷ್ಯನ ಮೇಲೆ ಸೂಕ್ಷ್ಮ ಪರಿಣಾಮ ಬೀರುತ್ತದೆ. ಕೆಲವು ಸಾರಿ ವಿದ್ಯುತ್ ಕಾಂತಿಯ ಶಕ್ತಿಯು ಮನುಷ್ಯನ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನರ ದೌರ್ಬಲ್ಯವನ್ನು ಉಂಟುಮಾಡುತ್ತದೆ. ಹೀಗೆ ಒಟ್ಟಾರೆ ಸೌರಮಂಡಲದಲ್ಲಿ ಆಗುವ ಬದಲಾವಣೆ ಮನುಷ್ಯನ ಮೇಲೆ ಬಹಳ ಪ್ರಭಾವ ಬೀರುತ್ತದೆ.

  ದಿಕ್ಕುಗಳ ಮಹತ್ವ ಮತ್ತು ದಿಕ್ಪಾಲಕರು

ಇನ್ನು ಏಕಾದಶಿ ವಿಚಾರಕ್ಕೆ ಬಂದರೆ – ಸಪ್ತಮಿ(ಅತ್ಯಂತ ಕಡಿಮೆ ಏರಿಳಿತ) ಹಾಗೂ ಹುಣ್ಣಿಮೆ- ಅಮಾವಾಸ್ಯೆಗಳ (ಅಧಿಕ ಏರಿಳಿತ ) ಮಧ್ಯದ ದಿನವು ಏಕಾದಶಿಯಾಗಿರುವುದರಿಂದ ನಮ್ಮ ಶರೀರ ಮತ್ತು ಮನಸ್ಸು ಸಮತೋಲನದಿಂದ ಕೂಡಿರುತ್ತದೆ. ಹೀಗಾಗಿ ಅಂದು ಉಪವಾಸ ಮಾಡುವುದರಿಂದ ರೇಖಿಯ ಆಕರ್ಷಣೆಯು(liner attraction ) ಕರಳು,ಮೂತ್ರಪಿಂಡ ಮತ್ತು ಯಕೃತ್ ಇತ್ಯಾದಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅಷ್ಟೇ ಅಲ್ಲ, ಅಂದು ದೇಹದ ಹೆಚ್ಚಿನ ಶಕ್ತಿಗಳ ನಿರ್ವಹಣೆಯ ಪ್ರವರ್ತಿ ಕೇಂದ್ರಾಭಿಮುಖವಾಗಿರುತ್ತದೆ. ಹೀಗಾಗಿ ಮನುಷ್ಯನ ಆಂತರಿಕ ಗುರುತ್ವಾಕರ್ಷಣೆಯ ಸೆಳೆತದ ಪ್ರಭಾವವು ಚಂದ್ರನ ಬಾಹ್ಯ ಗುರುತ್ವಾಕರ್ಷಣೆಯ ಸೆಳೆತಕ್ಕಿಂತ ಅಧಿಕವಾಗಿರುತ್ತದೆ. ಇದು ಶರೀರದ ಎಲ್ಲಾ ರೀತಿಯ ಜೈವಿಕ ಪರಿವರ್ತನೆ, ರಾಸಾಯನಿಕ ಬದಲಾವಣೆ ಮತ್ತು ಜೀವಕೋಶಗಳ ಬೆಳವಣಿಗೆಯ ಮೇಲೆ ನಿಯಂತ್ರಣ ಸಾಧಿಸುತ್ತದೆ. ಹೀಗಾಗಿ ಏಕಾದಶಿ ಉಪವಾಸದಿಂದ ಎಲ್ಲ ರೀತಿಯ ಆರೋಗ್ಯ ಸಮಸ್ಯೆ(ಮಾನಸಿಕ ಮತ್ತು ದೈಹಿಕ ) ನಿವಾರಣೇಯಾಗುತ್ತವೆ ಜೊತೆಗೆ ಆಯುಷ್ಯವು ಹೆಚ್ಚುತ್ತದೆ.

ಒಟ್ಟಾರೆ ಸಪ್ತಮಿ ಮತ್ತು ಹುಣ್ಣಿಮೆ/ಅಮಾವಾಸ್ಯೆಗಳ ಮಧ್ಯದ ದಿನವಾದ ಏಕಾದಶಿಯ ಉಪವಾಸವು ಚಂದ್ರನ ಆಕರ್ಷಣೆಯ ಪರಿಣಾಮವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ನಿರಾಹಾರ ಏಕಾದಶಿಯೊಂದಿಗೆ ದೇವರ ಧ್ಯಾನಾದಿಗಳನ್ನು ಮಾಡುವುದರಿಂದ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಜೀವಿಯು ಸದೃಢನಾಗಿ ತನ್ನ ಅಂತಿಮ ಆಧ್ಯಾತ್ಮಿಕ ಉದ್ದೇಶವನ್ನು ಸಾಧಿಸುತ್ತಾನೆ.

ದಿಲೀಪ ದೇಶಪಾಂಡೆ.
ಬೆಂಗಳೂರು.
🙏

Leave a Reply

Your email address will not be published. Required fields are marked *

Translate »