ಗೆಜ್ಜೆ ವಸ್ತ್ರ ಮಹತ್ವ
ದೇವರಿಗೆ ಸಲ್ಲಿಸುವ ಕೆಲವು ಸೇವೆಗಳಲ್ಲಿ ಇದೊಂದು ಉತ್ತಮ ಸೇವೆ.
ದೇವರಿಗೆ ಅಭಿಷೇಕದ ನಂತರ ವಸ್ತ್ರ ಧಾರಣೆ.ಇಲ್ಲಿ ವಸ್ತ್ರಗಳ ಬದಲಿಗೆ ಗೆಜ್ಜೆ ವಸ್ತ್ರ ದೇವರಿಗೆ ಏರಿಸುತ್ತಾರೆ. ಕೇವಲ ಅಲಂಕಾರಕ್ಕೆ ಮಾತ್ರವಲ್ಲ ಇದು ದೇವರಿಗೆ ಅತ್ಯಂತ
ಶ್ರೇಷ್ಠವು ಹೌದು.
ಪ್ರತಿದಿನ ಪೂಜೆಯಲ್ಲಿ ದೇವರಿಗೆ ಸ್ನಾನದ ನಂತರ ವಸ್ತ್ರಮ್ ಸಮರ್ಪಯಾಮಿ ಅಂತ ತುಳಸಿ ಅಥವಾ ಅಕ್ಷತೆ ಹಾಕುತ್ತೇವೆ.
ಆದರೆ ವಿಶೇಷ ಪೂಜೆ ;ಹೋಮ ,ಹವನ , ಸತ್ಯನಾರಾಯಣ ಪೂಜೆ , ಗೌರಿ ಪೂಜೆ ,ಲಕ್ಷ್ಮೀ ಪೂಜೆ , ಕಲಶವಿಟ್ಟು ಪೂಜೆ ಮಾಡುವಾಗ , ಹಬ್ಬಹರಿದಿನಗಳಲ್ಲಿ ಕಲಶಕ್ಕೆ (ದೇವರಿಗೆ) ಗೆಜ್ಜೆವಸ್ತ್ರವನ್ನು ಹಾಕುತ್ತಾರೆ.
ಗೆಜ್ಜೆ ವಸ್ತ್ರ ದೇವರಿಗೆ ಅರ್ಪಿಸುವುದರಿಂದ ಜನ್ಮಾಂತರ ಗಳಲ್ಲಿ ಎಂದೂ ವಸ್ತ್ರ ದಾರಿದ್ರ್ಯ ಕಾಡುವುದಿಲ್ಲ.
ವಸ್ತ್ರಕ್ಕೆ ಇನ್ನೊಂದು ಅರ್ಥ ಮಾರ್ಗ. ಜೀವನದಲ್ಲಿ ಒಳ್ಳೆಯ ಮಾರ್ಗದರ್ಶನಕ್ಕಾಗಿ ; ಸಂಸ್ಕಾರಕ್ಕಾಗಿ ದೇವರಿಗೆ ನಾವು ಈಗ ವಸ್ತ್ರವನ್ನು ಸಮರ್ಪಣೆ ಮಾಡಬೇಕು.
ಒಂದು ಗೆಜ್ಜೆ ವಸ್ತ್ರವನ್ನು ಮಾತ್ರ ದೇವರಿಗೆ ಇರಿಸಬೇಡಿ
ಉತ್ತರೀಯಕ್ಕಾಗಿ ಇನ್ನೊಂದು ಗೆಜ್ಜೆ ವಸ್ತ್ರ ವನ್ನು ಇಡಬೇಕು
ಯಾರಿಗಾದರೂ ನೀವು ಮುತ್ತೈದೆಯರಿಗೆ ಸೀರೆ ಉಡುಗೊರೆ ಕೊಡುವಾಗ ಖಣವಿಲ್ಲದೆ(ಬ್ಲೌಸಪೀಸ) , ಕೇವಲ ಸೀರೆಯನ್ನು ಕೊಡಬೇಡಿ.
ಯಾವುದೇ ಬ್ರಾಹ್ಮಣನಿಗೆ ವಸ್ತ್ರ ದಾನ ಮಾಡುವಾಗ ಪಂಚೆಯ ಜೊತೆ ಉಪ ವಸ್ತ್ರವನ್ನು ಕೊಡಬೇಕು. ಒಂಟಿ ವಸ್ತ್ರವನ್ನು ಕೊಡಬೇಡಿ. ಅಕಸ್ಮಾತ್ತಾಗಿ ಬರೀ ಶರ್ಟ್ ಪೀಸ್ ಕೊಡುವಾಗ ವೀಳ್ಯದೆಲೆ ಮೇಲೆ ಕಿಂಚಿತ್ ದಕ್ಷಿಣೆ ಯನ್ನಾದರೂ ಇಟ್ಟು ಕೊಡಿ.
ದೇವರಿಗೆ 16 ತಂತುಗಳ ಗೆಜ್ಜೆವಸ್ತ್ರ (ಷೋಡಶ)
ದೇವಿಗೆ 18 ತಂತುಗಳು ಇರುವ ಗೆಜ್ಜೆವಸ್ತ್ರ (ಹದಿನೆಂಟು ಮೊಳ ಸೀರೆಯ ಸಂಕೇತ).
ತುಂಬಾ ದಿನಗಳ ಹಿಂದೆ ಮಾಡಿದ ಗೆಜ್ಜೆ ವಸ್ತ್ರವನ್ನು ಇಡುವುದು ಬೇಡ. ಪೂಜೆಯ ಒಂದು ದಿನದ ಹಿಂದೆ ಗೆಜ್ಜೆ ವಸ್ತ್ರವನ್ನು ತಯಾರಿಸಬಹುದು.
ಮನೆಯಲ್ಲಿಯೇ ತಯಾರಿಸಿದ ಗೆಜ್ಜೆ ವಸ್ತ್ರ ಅತ್ಯಂತ ಶ್ರೇಷ್ಠ.
ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.
ದೇವರಿಗೆ ಕುಂಕುಮ ಮಿಶ್ರಿತ ಹತ್ತಿಯ ಗೆಜ್ಜೆ ವಸ್ತ್ರ
ದೇವಿಗೆ ಹಳದಿ ಕುಂಕುಮ ಮಿಶ್ರಿತ ಗೆಜ್ಜೆ ವಸ್ತ್ರ
ನಾಗದೇವರ ಪೂಜೆ ಮಾಡುವಾಗ ಗೆಜ್ಜೆವಸ್ತ್ರಕ್ಕೆ ಅರಿಷಿಣ ಹಚ್ಚಿ ಹಳದಿ ಗೆಜ್ಜೆವಸ್ತ್ರ ಏರಿಸಬೇಕು.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!