ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪೂಜೆಯಲ್ಲಿ ಆರತಿ ಮಾಡುವ ಸರಿಯಾದ ವಿಧಿ – ವಿಧಾನ

ಪೂಜೆಯಲ್ಲಿ ಆರತಿ ಮಾಡುವ ಸರಿಯಾದ ವಿಧಿ – ವಿಧಾನಗಳಿವು..!

ಹಿಂದೂ ಧರ್ಮದ ಪೂಜೆಯಲ್ಲಿ ಆರತಿಯಿಲ್ಲದೆ ಪೂಜೆಯು ಅಪೂರ್ಣ. ದೇವರಿಗೆ ಆರತಿಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ. ದೇವರಿಗೆ ಆರತಿಯನ್ನು ಮಾಡುವಾಗ ನಾವು ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು..? ದೇವರಿಗೆ ಆರತಿ ಮಾಡುವುದರ ಪ್ರಯೋಜನವೇನು ತಿಳಿಯಿರಿ..

ದೇವರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ತಪ್ಪದೇ ಆರತಿಯನ್ನು ಮಾಡುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಸಾಮಾನ್ಯವಾಗಿ, ಮನೆಯಲ್ಲಿ ಮುಂಜಾನೆ ಮತ್ತು ಸಂಜೆ ದೇವರ ಪೂಜೆಯನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಆರತಿಯನ್ನು ಮಾಡುವ ನಿಯಮಗಳಿಗವೆ. ಆತಿಯಿಲ್ಲದೆ ದೇವರ ಪೂಜೆಯನ್ನು ಪೂರ್ಣವೆಂದು ಹೇಳಲಾಗುವುದಿಲ್ಲ. ದೇವರಿಗೆ ಆರತಿಯೊಂದಿಗೆ ಪೂಜೆಯನ್ನು ಮಾಡುವುದರಿಂದ ಆ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಆದರೆ, ಹೆಚ್ಚಿನವರಿಗೆ ದೇವರ ಆರತಿ ಮಾಡುವ ವಿಧಿ – ವಿಧಾನ ತಿಳಿದಿಲ್ಲ. ಆರತಿಯಲ್ಲಿ ನಾವು ಮಾಡುವ ತಪ್ಪುಗಳು ನಮಗೆ ಪೂಜೆಯ ಫಲವನ್ನು ನೀಡುವುದಿಲ್ಲ. ಹಾಗಾದರೆ, ದೇವರಿಗೆ ಆರತಿ ಮಾಡುವ ಸರಿಯಾದ ವಿಧಿ – ವಿಧಾನಗಳಾವುವು ಎಂಬುದನ್ನು ಇಲ್ಲಿ ತಿಳಿಯೋಣ.

  ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ ! - ಗಾದೆ ಅರ್ಥ

ಎಷ್ಟು ಬಾರಿ ಆರತಿ ಮಾಡಬೇಕು..?
ದೇವರಿಗೆ ನಾವು ಆರತಿಯನ್ನು ಮಾಡುವಾಗ ಒಂದೆಡೆ ನಿಂತು ಆರತಿಯನ್ನು ಮಾಡಬೇಕೆನ್ನುವ ನಿಯಮವಿದೆ. ಆರತಿ ಮಾಡುವಾಗ ನಾವು ಯಾವಾಗಲೂ ಸ್ವಲ್ಪ ನಮಸ್ಕರಿಸಿ ಆರತಿ ಮಾಡಬೇಕು. ನಾಲ್ಕು ಬಾರಿ ದೇವರ ಪಾದಗಳಿಗೆ, ಎರಡು ಬಾರಿ ದೇವರ ಹೊಕ್ಕುಳಿಗೆ, ಒಂದು ಬಾರಿ ದೇವರ ಮುಖಕ್ಕೆ ಮತ್ತು ಏಳು ಬಾರಿ ದೇವರ ಎಲ್ಲಾ ಅಂಗಗಳಿಗೆ ಆರತಿಯನ್ನು ಮಾಡಬೇಕು. ಈ ರೀತಿ 14 ಬಾರಿ ನಾವು ದೇವರಿಗೆ ಆರತಿಯನ್ನು ಮಾಡುವುದರಿಂದ ನಿಮ್ಮ ನಮಸ್ಕಾರವು ದೇವರಲ್ಲಿರುವ 14 ಭುವನಗಳನ್ನು ತಲುಪುತ್ತದೆ.

ಸ್ಕಂದ ಪುರಾಣದಲ್ಲಿ ಆರತಿ
ಸ್ಕಂದ ಪುರಾಣದಲ್ಲೂ ಆರತಿಯನ್ನು ಮಾಡುವುದರ ಬಗ್ಗೆ ವಿಶೇಷ ನಿಯಮವನ್ನು ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ, ಒಬ್ಬ ವ್ಯಕ್ತಿಯು ಮಂತ್ರವನ್ನು ತಿಳಿದಿಲ್ಲದಿದ್ದರೆ, ಅವನಿಗೆ ಸಂಪೂರ್ಣ ಪೂಜಾ ವಿಧಾನ ತಿಳಿದಿಲ್ಲ ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ದೇವರ ಆರಾಧನೆ ಮತ್ತು ಪೂಜೆಯಲ್ಲಿ ಭಕ್ತಿಯಿಂದ ವಿಧಿ – ವಿಧಾನಗಳ ಪ್ರಕಾರ ಆರತಿಯನ್ನು ಮಾಡಿದರೆ ಅವನ ಪೂಜೆಯನ್ನು ದೇವರು ಸ್ವೀಕರಿಸುತ್ತಾನೆ ಎಂದು ಹೇಳಲಾಗಿದೆ. ದೇವರ ಪೂಜೆಯಲ್ಲಿ ಆರತಿಯ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

  ಮದುವೆಯಾದ ಕೂಡಲೇ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತವನ್ನು ಮಾಡಲು ಏಕೆ ಹೇಳುತ್ತಾರೆ …?

ಆರತಿ ಮಾಡುವುದರ ಪ್ರಯೋಜನ
ವಿಷ್ಣು ಪುರಾಣದ ಪ್ರಕಾರ, ತುಪ್ಪದ ದೀಪದಿಂದ ದೇವರಿಗೆ ಆರತಿಯನ್ನು ಮಾಡುವ ವ್ಯಕ್ತಿಯು ಲಕ್ಷಾಂತರ ಜನನ-ಮರಣ ಚಕ್ರಗಳಿಂದ ಮುಕ್ತನಾಗಿ ಸ್ವರ್ಗವನ್ನು ಸೇರುತ್ತಾನೆ ಎಂದು ಹೇಳಲಾಗಿದೆ. ಓರ್ವ ವ್ಯಕ್ತಿಯು ದೇವರಿಗೆ ಕರ್ಪೂರದಿಂದ ಆರತಿ ಮಾಡುವುದರಿಂದ ಅವನು ಅನಂತತೆಯ ಪ್ರವೇಶವನ್ನು ಪಡೆದುಕೊಳ್ಳುತ್ತಾನೆ. ದೇವರ ಪೂಜೆಯಲ್ಲಿ ಮಾಡುವ ಆರತಿಯನ್ನು ನೋಡಿ ಕಣ್ತುಂಬಿಸಿಕೊಳ್ಳುವ ವ್ಯಕ್ತಿಯು ಪರಮ ಸ್ಥಾನವನ್ನು ಪಡೆದುಕೊಳ್ಳುತ್ತಾನೆ. ಹೀಗಾಗಿ ಪೂಜೆಯ ನಂತರ ಮಾಡುವ ಆರತಿಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು.

ಆರತಿಯ ವಿಧಗಳು
ಆರತಿಯಲ್ಲಿ ಪ್ರಮುಖವಾಗಿ 7 ವಿಧಗಳಿವೆ. ಈ 7 ಆರತಿಯನ್ನು ದೇವರಿಗೆ ವಿವಿಧ ರೀತಿಯಲ್ಲಿ ಮಾಡಲಾಗುತ್ತದೆ. ಈ ಎಲ್ಲಾ ಆರತಿಯನ್ನು ಪೂಜೆಯಲ್ಲಿ ಪ್ರತ್ಯೇಕವಾಗಿ ಮಾಡಲಾಗುತ್ತದೆ.

  • ಮಂಗಳ ಆರತಿ
  • ಪೂಜಾ ಆರತಿ
  • ಶೃಂಗಾರ ಆರತಿ
  • ಭೋಗ ಆರತಿ
  • ಧೂಪ ಆರತಿ
  • ಸಂಧ್ಯಾ ಆರತಿ
  • ಶಯನ ಆರತಿ.
  ರಾಜ ಕೆಂಪೇಗೌಡರ ಜೀವನ ಕಥೆ

ಆರತಿಯನ್ನು ಸ್ವೀಕರಿಸುವ ವಿಧಾನ
ದೇವರಿಗೆ ಕರ್ಪೂರದ ಆರತಿಯನ್ನು ಮಾಡಿದ ನಂತರ, ಆರತಿಯ ಮೇಲೆ ಎರಡೂ ಅಂಗೈಗಳನ್ನು ತೋರಿಸಿ ಆರತಿಯನ್ನು ತೆಗೆದುಕೊಳ್ಳಬೇಕು. ನಂತರ ಬಲಗೈಯನ್ನು ತಲೆಯ ಮೇಲೆ ಮುಂಭಾಗದಿಂದ ಕತ್ತಿನ ಕೆಳಕ್ಕೆ ತೆಗೆದುಕೊಂಡು ಹೋಗಬೇಕು. ಕಾರಣಾಂತರಗಳಿಂದ ಕರ್ಪೂರದ ಆರತಿಯನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ತುಪ್ಪದ ದೀಪದ ಮೇಲೆ ಅಂಗೈಗಳನ್ನು ತೋರಿಸಿ ಆರತಿಯನ್ನು ತೆಗೆದುಕೊಳ್ಳಬಹುದು.

Leave a Reply

Your email address will not be published. Required fields are marked *

Translate »