https://www.vishaya.in ನಿಮಗಾಗಿ ಒಂದಿಷ್ಟು ಕನ್ನಡ ವಾಟ್ಸಾಪ್ ಜೋಕ್ಗಳು ಇಲ್ಲಿವೆ – ಓದಿ ನಕ್ಕು ಬಿಡಿ . kannada whatsapp jokes are here to read for the laugh riot.
ಕನ್ನಡ ವಾಟ್ಸಾಪ್ ಜೋಕ್ಗಳು – Kannada Whatsapp Jokes
ಲೋನ್ ಕಥೆ – Loan Story
ಇವತ್ತು ದ್ವಿಚಕ್ರ ವಾಹನ ಖರೀದಿಸಲು ಲೋನ್ ಪಡೆಯೊದಕ್ಕೆ ಬ್ಯಾಂಕಿಗೆ ಹೋಗಿದ್ದೆ!
ಬ್ಯಾಂಕ್ ಮ್ಯಾನೇಜರ್ ತುಂಬಾ ಒಳ್ಳೆಯವರು!
ನನ್ನನ್ನು ಕೂರಿಸಿಕೊಂಡು ಜ್ಯುಸ್ ತರಿಸಿ ಕೊಟ್ಟು ಲೋನ್ ಕೊಡುವುದಾಗಿ ಹೇಳಿದರು!
ಹಾಗೆ ಪೇಪರ್ ವರ್ಕ್ ಎಲ್ಲಾ ಮಾಡೋಕೆ ಶುರುಮಾಡುವಾಗ ಕೇಳಿದರು… “ಲೋನ್ ಹೇಗೆ ತೀರಿಸುತ್ತಿಯಾ” ಅಂತ!
ಅದ್ಕೆ ನಾನಂದೆ…. ಒಬ್ಬ ಪಪ್ಪು ಅನ್ನೋ ಮಹಾಶಯ ಮುಂದೆ ಪ್ರಧಾನಿಯಾಗಿ 72000 ನನ್ನ ಅಕೌಂಟ್ ಗೆ ಹಾಕ್ತಿನಿ ಅಂದಿದ್ದಾನೆ, ಅದರಿಂದಲೇ ತಿಂಗಳು ತಿಂಗಳು ಕಟ್ ಮಾಡಿ ಸಾರ್! ಅಂದೇ ಅಷ್ಟೇ…..
ನೆಹರೂ ಮೇಲೆ ಆಣೆಯಾಗಿ….. ಮ್ಯಾನೇಜರ್ ಅದೇ ಬ್ಯಾಂಕಲ್ಲಿ ಕಸ ಗುಡಿಸೋ ಹೆಂಗಸಿನ ಹತ್ರ ಪೊರಕೆ ಕೇಳೋಕೆ ಹೋದ್ರು…. ಅವರು ಪೋರಕೆಯೊಂದಿಗೆ ಬರೋದು ನೋಡಿ ಮೆಲ್ಲನೆ ಜಾರಿಕೊಂಡೇ….
ಇಲ್ಲಾಂದ್ರೆ ಈ ಪಪ್ಪು ನ ನಂಬಿ ಲೋನ್ ಕೇಳಿ ಪೊರಕೆ ಸೇವೆ ಮಾಡಿಸ್ಕೊಬೇಕಿತ್ತು!!!!
*********** ********* *********** ********* ********* ******* ***** *******
ಹಿಂದೆ ಮುಂದೆ ಓದಿ – Reverse Reading
😀 ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ.
1. ಪಕೋಡ ಬೇಕಾ,ಬೇಡ ಕೋಪ.
2. ನಾಗಮಣಿ ಮಗನಾ
3. ಮದ್ರಾಸಿನ ಸಿದ್ರಾಮ
4. ರುಮಾಲು ಶಾಲು ಮಾರು
5. ನೆಗಡಿ ಅಲ್ವಾ ಅಡಿಗನೆ
6. ಗಯಾದ ವೇದ ಯಾಗ
7. ದಿವಾಕರ ಮಾರಕವಾದಿ
8. ಕುಬೇರ ಬಗ್ಗಿ ತಗ್ಗಿ ಬರಬೇಕು
9. ತಿಮ್ಮ ಸದಾ ಸಮ್ಮತಿ
10. ರೋಡಿನಲ್ಲೇ ನಡೀರೋ
11. ಮನುಜನ ಹೀನ ಜನುಮ
12. ಗೂಡಿನಾ ಬಾಳು ಬಾನಾಡಿಗೂ
13. ಪಂಜರದ ಗಿಳಿಗಿದರ ಜಪಂ
14.ವರದಪ್ಪ ಕೊಡು ಕೊಪ್ಪದ ರವ
15. ಗಜಾನನನ ಜಾಗ
16. ಕುಬೇರ ಸಿಹಿ ಸರಿ ಸಾಕು, ನಾನು ಸೀನಪ್ಪನ ಸೀನು ನಾಕು ಸಾರಿ ಸಹಿಸಿರಬೇಕು
17.ತೋರಿಸೇ ಲತಾ ಪಾರಿಜಾತ, ಜಾರಿ ಪಾತಾಲ ಸೇರಿತೋ
18. ಕೋಳೀಕೇ ರಂಗ,ನೀರು ನೀ ಗರಂ ಕೇಳಿಕೋ
19.ವಸಿ ಸೋಡಿ ಕೊಡಿಸೋ ಸಿವ
20. ನಗಾರಿ ಭೇರಿ ಗಾನ
****** ****** ****** ******* ******* ****** ******* ******* ******* *******
ದೀರ್ಘಾಯುಷ್ಯದ ಗುಟ್ಟು
😃😃😃😃😃😃😃😃
ತಮ್ಮ ವಿವಾಹದ 100 ನೇ ವರ್ಷ ಆಚರಿಸುತ್ತಿರುವ ವೃದ್ಧ ದಂಪತಿಗಳನ್ನು ಟಿ.ವಿ.ಯವರು ಸಂದರ್ಶಿಸಿದರು .
*ಟಿ.ವಿ*. : ನಿಮ್ಮ ಈ ದೀರ್ಘಾಯುಷ್ಯದ ಗುಟ್ಟೇನು ?
*ಅಜ್ಜ* : ವಾಕಿಂಗ್ . ನಾವಿಬ್ಬರೂ ಮದುವೆಯ ದಿನದಿಂದಲೇ ಒಂದು ಒಪ್ಪಂದ ಮಾಡಿದ್ದೆವು . ನಮಗಿಬ್ಬರಿಗೆ ವಾದ ಆದಾಗ ಸೋತವರು ದಿನಾ 2 ಕಿ.ಮೀ . ದೂರ ನಡೆದು ಮನೆಗೆ ಬರಬೇಕು ಎಂಬ ಷರತ್ತು . ದಿನಂಪ್ರತೀ ನಾನೇ ಸೋಲುತ್ತಿದ್ದ ಕಾರಣ , ವಾಕಿಂಗ್ ಮಾಡಿ , ಮಾಡಿ ದೀರ್ಘಾಯುಷ್ಯ ಹೊಂದಿದ್ದೇನೆ .
*ಟ.ವಿ* . : ನಿಮ್ಮ ಬಗ್ಗೆ ಸರಿ . ಆದರೂ ನಿಮ್ಮ ಪತ್ನಿಯೂ ದೀರ್ಘಾಯುಷ್ಯ ಹೊಂದಿದ್ದಾರಲ್ಲಾ ? ಅದಕ್ಕೆ ಕಾರಣವೇನು ?
*ಅಜ್ಜ*:ಅವಳು ಸಂದೇಹ ಸ್ವಭಾವದವಳು . ನಾನು ಸೋತಾಗ ಎರಡು ಕಿ.ಮೀ. ವಾಕಿಂಗ್ ಹೋಗುತ್ತೇನೋ ಇಲ್ಲವೋ ನೋಡಲು ಅವಳೂ ದಿನಂಪ್ರತೀ ನನ್ನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದಳು .
******* ******** ******** ******** ********* ******** ******* ****** ******
ಮತ್ತೊಂದು ಲೋನ್ ಕಥೆ – ಹಿರಿಯರ ಜಮಾನ
ವೃದ್ದರೊಬ್ಬರು ಬ್ಯಾಂಕ್ ನಲ್ಲಿ ಒಂದು ಗಂಟೆಯಿಂದ ಹಣ ಡ್ರಾ
ಮಾಡಲು ಕಾಯುತ್ತಿದ್ದುದನ್ನು ಕಂಡ ಯಂಗ್ ಮ್ಯಾನ್ ಒಬ್ರು ಅವರೊಡನೆ
ಮಾತಿಗಿಳಿದಿದ್ದು ಹೀಗೆ..
” ಸಾರ್ …ಎ ಟಿ ಎಮ್ ಕಾರ್ಡ್ ಮಾಡಿಸಿ..ಹೀಗೆ ಕಾಯೋ ಅಗತ್ಯ ಇಲ್ಲ…
ಮನೇಲಿ ಕಂಪ್ಯೂಟರ್ ಇದೆಯಾ..”
” ಹೂಂ .ಇದೇ..ಯಾಕೆ..?
” ಒಂದ್ ಕೆಲಸ ಮಾಡಿ. ನೆಟ್ ಹಾಕಿಸಿಕೊಳ್ಳಿ…
ಯಾವುದೇ ಬಿಲ್ ಆದ್ರೂ ನೆಟ್ ಬ್ಯಾಂಕ್ ಲಿ ಕಟ್ಟಬಹುದು..ಅಮೆಜಾನ್ಗೆ ಆರ್ಡರ್ ಮಾಡಿದ್ರೆ
ನಿತ್ಯದ ಗ್ರಾಸರೀ ಮನೆಗೇ ಬರುತ್ತೆ..ಬಟ್ಟೆ ಕೊಳ್ಳಬೇಕಾಔಷಧಿ ಬೇಕಾ,
ಯಾರಿಗಾದ್ರು ಗ್ರೀಟಿಂಗ್ಸ್, ಗಿಫ್ಟ್ ಕಳಿಸಬೇಕಾ, ಎಲ್ಲ ನೆಟ್ಟಲ್ಲೇ
ಮಾಡಬಹುದು..ವಯಸ್ಸಾದವರು …ಯಾಕೆ ಕಷ್ಟ ಪಡ್ತೀರಿ ..?
ಎಲ್ಲ ಕೇಳಿ ನಸುನಕ್ಕು ಹೇಳಿದರು ಆ ವೃದ್ಧರು…
” ಒಟ್ಟಿನಲ್ಲಿ ಮನೆಯಿಂದ ಹೊರಗೇ ಬರುವಂತಿಲ್ಲ..
ಒಂದು ಗಂಟೆಯಿಂದ ಇಲ್ಲಿ ಎಂಟು ಗೆಳೆಯರನ್ನು ಭೇಟಿಯಾಗಿದೀನಿ.ಕಷ್ಟ
ಸುಖ ಹಂಚಿಕೊಂಡಿದೀನಿ..
ಕಳೆದ ವಾರ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ನನಗೆ ಪ್ರಥಮ ಚಿಕಿತ್ಸೆ ಮಾಡಿದವ ನಾನು
ಯಾವಾಗಲೂ ಭೇಟಿ ನೀಡೋ ಮೆಡಿಕಲ್ ಅಂಗಡಿಯವ. ಶುಗರ್ ಎಷ್ಟಿರುತ್ತದೆ ನಂಗೆ
ಅಂತ ಅವನಿಗೆ ಗೊತ್ತಿತ್ತು..
ದೇವಸ್ಥಾನಕ್ಕೆ ಹೋಗಿದ್ದ ನನ್ನ ಹೆಂಡತಿ, ಜಾರಿ ಬಿದ್ದಾಗ, ಅವಳನ್ನು ಮನೆ ತಲುಪಿಸಿದವ
ನಮ್ಮನೆಗೆ ತಿಂಗೊಳೊಗೊಮ್ಮೆ ದಿನಸಿ ತಲುಪಿಸುವ
ಅಂಗಡಿಯ ಹುಡುಗ…ತಾತ ಅಜ್ಜಿ ಅಂತ ಕರೆದು ಪ್ರೀತಿಯಿಂದ ಮಾತಾಡಿಸೋ
ಎಷ್ಟೋ ಮಕ್ಕಳು ಹೀಗೆ ಬ್ಯಾಂಕ್ ಅಂಗಡಿ ಪೋಸ್ಟ್ ಆಫೀಸ್ ಗಳಲ್ಲಿ
ಪರಿಚಯ ಆದವರೇ…
ಇದರಿಂದ ಒಂಟಿತನ ದೂರಾಗಿದೆ. ಸಾಮಾಜಿಕ ಭದ್ರತೆ ಸಿಕ್ಕಿದೆ…
ನಿಮ್ಮ ಆ ಅಮೆಜಾನ್ ಇದನ್ನೆಲ್ಲ ಕೊಡುತ್ತಾ.????
ಅದು ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುತ್ತೆ, ಹಣ ಕೊಟ್ಟರೆ …
ಸಂಬಂಧ ಗಳನ್ನಲ್ಲ…ಸಂಬಂಧ ಗಳು ಪ್ರೀತಿ ಸ್ನೇಹ ವಿಶ್ವಾಸಗಳು
ಜನರ ಒಡನಾಟದಲ್ಲಿ ಪುಕ್ಕಟೆ ಸಿಗುತ್ತಲ್ಲಪ್ಪ….ಅದನ್ನ ಹೇಗೆ ಬಿಡಲಿ ….ಹೇಳು …”
ಯಂಗ್ ಮ್ಯಾನ್ …ಮೂಕನಾದ…..
******* ******** ******* ******** ******** ******* ******* ***** ***** *****
ದೆಹಲಿ – Delhi
👨🏫 ಟೀಚರ್ :- ಪಾಕಿಸ್ತಾನದ ರಾಜಧಾನಿ ಯಾವದು.?
👨 ಸ್ಟೂಡೆಂಟ್ :- ದೆಹಲಿ ಸರ್.
👨🏫 ಟೀಚರ್ :- ಅದೆಂಗೆ..?
👨ಸ್ಟೂಡೆಂಟ್ :- ನೀವು ಎಂದಾದ್ರೂ ಭಾರತದ ರಾಜಧಾನಿ ದೆಹಲಿ ಪ್ರವಾಸಕ್ಕೆ ಹೋದ್ರೆ ಅವಾಗ ಗೊತ್ತಾಗುತ್ತೆ, ನೀವು
“ಶಹಜಹಾನ್” ರೋಡನಿಂದ ಹೊರಟು
“ಅಕ್ಬರ್” ರೋಡ್ ಗೆ ಹೋಗ್ತೀರಿ,
ಅಲ್ಲಿಂದ ಮುಂದೆ ಹೋಗಿ
“ಬಾಬರ್” ರಸ್ತೆಗೆ ತಿರುಗಿ ನೇರವಾಗಿ
“ಹುಮಾಯುನ್” ರಸ್ತೆ ಕಡೆಗೆ ಹೋದ್ರೆ ಸರ್ಕಲ್ ಸಿಗುತ್ತೆ ಅಲ್ಲಿಂದ ಎಡಕ್ಕೆ ತಿರುಗಿ ಹೊರಟ್ರೆ ನೇರವಾಗಿ “ತುಘಲಕ್” ಲೇನಲ್ಲಿ ಎಂಟ್ರಿ ಕೊಡ್ತೀರಾ,ಅಲ್ಲಿಂದ “ಔರಂಗಜೇಬ” ರೋಡ್ ಮುಂದೆ ಹೊರಟ್ರೆ “ಸಫ್ದರಜಂಗ್” ರೋಡ್ ಬರುತ್ತೆ ಅಲ್ಲಿಂದ “ತುಘಲಕಾಬಾದ್” ಮತ್ತು”ಜಾಮಿಯಾ ನಗರ್” ಕ್ರಾಸ್ ಮಾಡಿ ನೇರವಾಗಿ
“ಕುತುಬಮಿನಾರ್”ವರೆಗು ಹೋಗೊ ಅಷ್ಟೊತ್ತಿಗೆ,
ಇದ್ದ ಪ್ರಶಾಂತ ವಾತಾವರಣ ಕುಲಗೆಟ್ಟು ಹೋಗಿ ಉಸಿರುಗಟ್ಟೋ ಥರಾ ಆಗ್ತಿದ್ರೆ, ನೀವು ಅಲ್ಲಿಂದ ಸೀದಾ
“ನಿಜಾಮುದ್ದೀನ್” ರೈಲ್ವೆ ಸ್ಟೇಷನ್ಗೆ ಹೋಗಿ ನಿಮ್ಮೂರಿನ ಟ್ರೇನ್ ಹತ್ತಿ ನೇರವಾಗಿ ಮನೆಗೆ ಬಂದುಬಿಟ್ಟು ಕುತ್ಕೊಂಡು ಗಂಭೀರವಾಗಿ ವಿಚಾರ ಮಾಡಿ ಹೇಳ್ರಿ
“ದೆಹಲಿ” ಭಾರತದ ರಾಜಧಾನಿನಾ
ಇಲ್ಲಾ ಪಾಕಿಸ್ತಾನದ ರಾಜಧಾನಿನಾ ಅಂತಾ…?
😂😂😂😜😜😜…
******* ******** ******* ******** ******** ******* ******* ***** *****