ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತಾಳ್ಮೆಯ ಪಾಠ

ಮೂರ್ ದಿನ ಆಗಿತ್ತು. ಹೆಂಡತಿ ಗಂಡನ ಜೊತೆ ಠೂ ಬಿಟ್ಟು…

ಎಷ್ಟೂಂತ ಬಾಯಿ ಮುಚ್ಕೊಂಡಿರಕಾಗುತ್ತೆ ಹೆಂಡತಿ. ಬಾಯಿ ನೋಯಕ್ಕೆ ಶುರುವಾಯ್ತು.

ಕಡೆಗೆ ಹೆಂಡತಿ ಅಂದ್ಲು:

“ಏನೋ ಗಂಡ ಹೆಂಡತಿ ಅಂದ್ರೆ ಒಂದ್ ಮಾತು ಬರುತ್ತೆ ಹೋಗುತ್ತೆ. ಅದಕ್ಕೇ ಇಷ್ಟ್ ದಿನ ಬಾಯ್ಮುಚ್ಕೊಂಡಿರ್ಬೇಕಾ?? 😠😠😠 ಇವಾಗ ನಾನು ಹತ್ತರವರೆಗೂ ಎಣಿಸ್ತೀನಿ. ಮಾತಾಡಿಲ್ಲಾಂದ್ರೆ ನಮ್ಮಮ್ಮನ ಮನೆಗೆ ಹೋಗ್ತೀನಿ ಅಷ್ಟೇ 😠😠😠”

ಹತ್ ನಿಮಿಷ ಆದ್ರೂ ಗಂಡ ಕಿಮಕ್ಕನ್ಲಿಲ್ಲ.

ಹೆಂಡತಿ ಎಣಿಸೋಕೆ ಶುರು ಹಚ್ಕೊಂಡ್ಲು.

  ಬದುಕಿನ ಪಾಠ, life lesson


ಒನ್..

ಟೂ…

ಥ್ರೀ..

ಉಹೂಂ. ಗಂಡ ಗಪ್ ಚುಪ್
😷😷

ಹೆಂಡತಿ ಹತ್ತು ನಿಮಿಷ ಬಿಟ್ಟು…

ಫೋರ್..

ಫೈವ್…

ಅಂದ್ಲು. 😠😠

ಗಂಡ… ಉಹೂಂ. ಬಾಯಿ ಬಿಡಲಿಲ್ಲ.

ಸಿಕ್ಸ್…

ಸೆವೆನ್.. 😵😧😧

(ಗಂಡ ಒಳಗೊಳಗೇ ಹಿಗ್ಗಿ ಹೀರೇಕಾಯಿ ಆಗಿದ್ದರೂ ತೋರಿಸಿಕೊಳ್ಳಲಿಲ್ಲ). 😷😷

ಕ್ಲೈಮ್ಯಾಕ್ಸು….

ಎಯ್ಟ್

ಅಂದ್ಲು ಹೆಂಡತಿ.

ಉಹೂಂ.. ಗಂಡ ಚುಪ್ ಚಾಪ್.

ನೈನ್..

(ಗಂಡಂಗೆ ಎದ್ದು ಕುಣಿಯೋಷ್ಟು ಖುಷಿ).

ಹೆಂಡತಿ ಏನ್ಮಾಡಿದ್ಲು ಅಂದ್ರೆ…

ಬಾಯಿ ಬಿಡಲಿಲ್ಲ.

  ಗಂಡ ಹೆಂಡತಿ - ಹಿರೇಮಗಳೂರು ಕಣ್ಣನ್

ಹೆಂಡತಿ ಈಗ ಫುಲ್ ಸೈಲೆಂಟು.

🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊

…….

……..
ಗಂಡಂಗೆ ಟೆನ್ಷನ್ನಾಗೋಯ್ತು.

ಹತ್ತು ನಿಮಿಷ ಕಾದ್ರು.

ತಡೆಯೋಕಾಗ್ದೆ

” ಲೇಯ್.. ಯಾಕೆ ನಿಲ್ಲಿಸ್ದೆ?? ಎಣಿಸೂ.. ಟೆನ್ ಅಂತ್ಹೇಳು” ಅಂದ್ರು. 😳😳😳😵

ಹೆಂಡತಿ ಅಂದ್ಲು.

“ಅಬ್ಬಾ!! ದೇವ್ರು ದೊಡ್ಡೋನು ಕಂಡ್ರೀ…. ಬಾಯಿ ಬಿಟ್ರಿ. ಇಲ್ದಿದ್ದರೆ ನಮ್ಮಮ್ಮನ ಮನೆಗೆ ಹೋಗ್ತಿದ್ದೆ. ಪಾಪ ನಿಮಗೆಷ್ಟು ತೊಂದರೆ ಆಗ್ತಿತ್ತು!!! ತಾಳಿ ಇದೇ ಖುಷೀಲಿ ಪಾಯಸ ಮಾಡ್ತೀನಿ 🏃🏃🏃” ಅಂತ ಕಿಚನ್ನಿಗೆ ಹೋದ್ಲು…
..

😭😳😟

ಗಂಡ ಈ ಘಟನೆಯನ್ನು ತನ್ನ ಆತ್ಮಚರಿತ್ರೆಯಲ್ಲಿ “ತಾಳ್ಮೆ ಕಳೆದುಕೊಳ್ಳುವುದರಿಂದ ಆಗುವ ಅನಾಹುತಗಳು” ಅಧ್ಯಾಯದಲ್ಲಿ ಸೇರಿಸಲಿದ್ದಾನಂತೆ.
😊😊

Leave a Reply

Your email address will not be published. Required fields are marked *

Translate »