*ಪ್ರೀತಿ ವಿಶ್ವಾಸದಿಂದ ಆದ ಪ್ಯಾಂಟ್ ನ ಆವಾಂತರ 😥🤭
ನಾಳೆ ಗೆಳೆಯರೊಬ್ಬರ ಮದುವೆಗೆ ಧರಿಸಲಿಕ್ಕಾಗಿ ಹೊಸ ಪ್ಯಾಂಟ್ 👖 ಖರೀದಿಸಿದ್ದೆ,,,
ಮನೆಗೆ ಬಂದು ಧರಿಸಿ ನೋಡಿದಾಗ ಸ್ವಲ್ಪ ಉದ್ದಳತೆ ಜಾಸ್ತಿ ಇತ್ತು,,
8cm ಕಟ್ ಮಾಡಬೇಕಿತ್ತು,,
ಮನೆಯಲ್ಲಿ ದರ್ಜಿ ಮಿಷನ್ ಇದೆ,
ಪತ್ನಿಯ ಬಳಿ 8 cm ಕಮ್ಮಿ ಮಾಡಲು ಸಹಾಯ ಯಾಚಿಸಿದಾಗ, ಪತ್ನಿ, ನನಗೆ ಇಲ್ಲಿ ಅಡುಗೆ ಮನೆಯಲ್ಲಿ ಬೇರೆ ಕೆಲಸವಿದೆ ಎಂದಳು,
ತಕ್ಷಣ ಅಡುಗೆ ಮನೆಯಿಂದ ನಾನು ಕಾಲ್ಕಿತ್ತೆ,,
ಮಗಳ ಬಳಿ 8 cm ಕಮ್ಮಿ ಮಾಡುವ ಸಲುವಾಗಿ ಕೇಳಿಕೊಂಡೆ, ಅದಕ್ಕವಳ ಉತ್ತರ ನನಗೆ ಸುಮಾರು ಪಾಠ ಕಲಿಯಲಿಕ್ಕಿದೆ ಎಂದಳು, ತಗಾದೆ ಮಾಡದೇ ಅದು ಸರಿ ಎಂದನಿಸಿತು, ಸೀರಿಯಲ್ ನೋಡುತ್ತಾ ಕುಳಿತ ತಾಯಿಯ ಬಳಿಯೂ 8cm ಕಮ್ಮಿ ಮಾಡುವ ಬಗ್ಗೆ ಕೇಳಿಕೊಂಡೆ ಅವರು ಕ್ಯಾರೆ ಮಾಡಲಿಲ್ಲ,,,
ಗತಿಯೇ ಇಲ್ಲದಾದಾಗ ಹುಲಿ ಹುಲ್ಲನ್ನೂ ತಿನ್ನಬಹುದು ಎಂಬಂತೆ ಕೊನೆಗೆ ನಾನೇ 8 cm ಕಮ್ಮಿ ಮಾಡಿ ಕಪಾಟಿನೊಳಗಿಟ್ಟೆ ,,,
ಛೆ, ಇದು ನನಗೆ ತಿಳಿದಿರುವ ಕೆಲಸ, ಇವರಲ್ಲಿ ಅಂಗಲಾಚಿಸುವ ಮೊದಲೇ ನಾನೇ ಮಾಡಬಹುದಿತ್ತು ಎಂದು ನನಗೆ ನಾನೇ ಬುದ್ಧಿ ಹೇಳಿ ನಿದ್ರೆಗೆ ಜಾರಿದೆ,,,
ಅಷ್ಟರಲ್ಲಿ ಸೀರಿಯಲ್ ನೋಡುತ್ತಾ ಇದ್ದ ತಾಯಿಗೆ ಕನಿಕರವಾಗಿ ಕಪಾಟಿನಲ್ಲಿಟ್ಟಿದ್ದ ಪ್ಯಾಂಟ್ ತೆಗೆದು 8cm ಕಮ್ಮಿ ಮಾಡಿ ಕಪಾಟಿನಲ್ಲಿಟ್ಟರು,,,
ಅಡುಗೆ ಮನೆ ಕೆಲಸ ಮುಗಿಸಿ ಬಂದ ಪತ್ನಿ ಕರುಣೆತೋರಿ ಅವಳು 8 cm ಕಟ್ ಮಾಡಿ ಪುನಃ ಕಪಾಟಿನಲ್ಲಿ ಇಟ್ಟಳು,
ಪಾಠವೆಲ್ಲಾ ಓದಿ ಹೋಂ ವರ್ಕ್ ಮುಗಿಸಿ ಬಂದ ಮಗಳು ಅಪ್ಪನ ಮೇಲಿರುವ ಪ್ರೀತಿಯಿಂದ ಕಪಾಟಿನಿಂದ ಪ್ಯಾಂಟ್ ತೆಗೆದು 8cm ಕಟ್ ಮಾಡಿ ಇಟ್ಟಳು,
*ನಂತ್ರ ಅವರೆಲ್ಲರೂ ಆರಾಮವಾಗಿ ನಿದ್ರೆಗೆ ಜಾರಿದರು,,,
ಮರು ದಿನ ಬೆಳಿಗ್ಗೆ ಮದುವೆಗೆ ಹೋಗಲು ತಯಾರಿ ನಡೆಸುತ್ತಾ ಪ್ಯಾಂಟ್ ಧರಿಸಿದೆ *ತನ್ನಿಂದ ತಾನೇ ಪ್ಯಾಂಟಿನ ಬದಲು ಬರ್ಮುಡ ವಾಗಿತ್ತು,,,*
ಸಿಡಿಲು ಬಡಿದವನಿಗೆ ಹಾವು ಕಚ್ಚಿದಂತೆ ಆಗಿ ಬಿಟ್ಟೆ,,!!!!!
😎😎😜😜😜😝
😇 ಗುಣ ಪಾಠ,
*ಸ್ವಯಂ ತಿಳಿದಿರುವ ಕೆಲಸಕ್ಕೆ ಇನ್ನೊಬ್ಬರನ್ನು ಆಶ್ರಯಿಸಬಾರದು,,
ತನ್ನ ಕಾಲ ಮೇಲೆ ತಾನೇ ನಿಲ್ಲಬೇಕು,,
*ಅಹಂ ಗಡಸು ಸ್ವಭಾವ ತ್ಯಜಿಸಿ ನಾಜೂಕಾಗಿರಲು ಪ್ರಯತ್ನಿಸೋಣ,*
😄😄🙏🙏🙏