ಮನುಷ್ಯನ 11 ಗುಣಗಳು ಉದಾಹರಣೆ ಸಹಿತ ಇಲ್ಲಿ ನೀಡಲಾಗಿದೆ
1. ಐಸ್ ಕ್ಯಾಂಡಿಯನ್ನು ತಿ೦ದಾದ ಮೇಲೆ ಕಡ್ಡಿಯನ್ನು ನೆಕ್ಕುವುದು
ಇದನ್ನೇ ಶಾಸ್ತ್ರದಲ್ಲಿ ಲೋಭ ಎನ್ನಲಾಗಿದೆ
2. ಕಡ್ಡಿ ಬಿಸಾಡಿದ ಮೇಲೆ ಇನ್ನೊಬ್ಬರದ್ದು ಖಾಲಿಯಾಗದೇ ಅವರು
ನೆಕ್ಕುವುದನ್ನು ನೋಡಿ ಇವರದ್ದು ಇನ್ನೂ ಖಾಲಿಯಾಗಿಲ್ಲವೆ
ಅ೦ದುಕೊಳ್ಳುವುದುದು ಇದನ್ನೇ ಅಸೂಯೆ ಎನ್ನಲಾಗಿದೆ
3. ಐಸ್ ಕ್ಯಾಂಡಿಯನ್ನು ತಿನ್ನುವಾಗ ಪೂರಾ ಕೆಳಗೆ ಬಿದ್ದು ಕಡ್ಡಿ ಮಾತ್ರ ಉಳಿಯುವುದಾಗ ಮನಸ್ಸಲ್ಲಿ ಎನು ಬರುತ್ತದೋ ಅದನ್ನೇ ಕ್ರೋಧ ಎನ್ನಲಾಗಿದೆ
4. ನಿದ್ದೆಯಿ೦ದ ಎಚ್ಚೆತ್ತ ಮೇಲೂ ಮೂರು ಘ೦ಟೆ ಹಾಗೆ
ಮೊಸಳೆಯ೦ತೆ ಬಿದ್ದು ಕೊ೦ಡಿರುವುದನ್ನು ಆಲಸ್ಯ ಎನ್ನಲಾಗಿದೆ
5. ರೆಸ್ಟೋರೆ೦ಟ್ ನಲ್ಲಿ ತಿ೦ದಾದ ಮೇಲೆ ಬಾಯಿತು೦ಬಾ
ಬಡಿಸೋಪ್ ಮತ್ತು ಸಕ್ಕರೆ ಮಿಶ್ರಿತ ಮಿಶ್ರಣವನ್ನು ಹಾಕಿ ಅಲ್ಲೇ
ಇರುವ ಪೇಪರ್ ನಲ್ಲಿ ತು೦ಬಿಕೊಳ್ಳುವುದನ್ನು ದುರಾಸೆ ಎನ್ನಲಾಗಿದೆ
6. ಮನೆಗೆ ಬೀಗ ಜಡಿದು ಎರಡು ಮೂರು ಬಾರಿ ಎಳೆದು ನೋಡುವುದನ್ನೇ ಭಯ ಎನ್ನಲಾಗಿದೆ
7. ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ ಮೇಲೆ ಪದೆ ಪದೆ ನೀಲಿ ಗೆರೆ
(ನೋಡಲಾಗಿದೆಯೇ) ನೋಡುವುದನ್ನೇ ಉತ್ಸುಕತೆ ಎನ್ನಲಾಗಿದೆ
8. ಪಾನಿಪುರಿ ತಿನ್ನುವಾಗ, ಪಾನಿಗಾಗಿ ಚಟ್ನಿಗಾಗಿ ಆ ಪಾನಿಪುರಿ
ಅ೦ಗಡಿಯವನನ್ನು ಅಣ್ಣಾ ಎ೦ದು ಕರೆಯುವುದನ್ನೇ
ಶೋಷಣೆ ಎನ್ನಲಾಗಿದೆ
9. ಫ್ರುಟಿ ಕುಡಿದು ಕೊಣೆ ಸಿಪ್ ವರೆಗೂ ಸುರ್ ಸುರ್ ಅ೦ತ
ಹೀರುವುದನ್ನೇ ಮೃಗತೃಷ್ಣಾ ಎನ್ನಲಾಗಿದೆ
10. ಮಾರ್ಕೆಟ್ ನಲ್ಲಿ ಬಾಳೆಹಣ್ಣು ಕೊಳ್ಳುತ್ತಿರುವಾಗ ಅಲ್ಲೇ
ದ್ರಾಕ್ಷಿಯನ್ನು ಎಳೆ೦ಟು ಬಾಯಿಗೆ ಹಾಕಿ ಇದಕ್ಕೆ ಎಷ್ಟು ಎ೦ದು
ಕೇಳುವುದನ್ನು ಅಕ್ಷಮ್ಯ ಅಪರಾಧ ಎನ್ನಲಾಗಿದೆ
11 . ಅದೇ ಊಟಕ್ಕೆ ಕೂತಾಗ ಎರಡನೇ ಬಾರಿ ಪಾಯಸ ಬರುವಾ ಮೊದಲಿನದನ್ನು ಬೇಗನೇ ಖಾಲಿ ಮಾಡುವುದನ್ನ ಛಲ ಎನ್ನಲಾಗಿದೆ