ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕನ್ನಡ ವಾಟ್ಸಾಪ್ ಜೋಕ್ಸ್ ಕಾಮಿಡಿ

ಕನ್ನಡ ಜೋಕ್ಸ್ ಹಾಸ್ಯದ ಹೊನಲಿನ ಸಂಗ್ರಹ ನಿಮ್ಮನ್ನು ನಕ್ಕು ನಗಿಸಲು ಕೆಲವೊಂದು ಹಾಸ್ಯದ ಜೋಕ್ ಗಳನ್ನು ಇಲ್ಲಿ ನೀಡಲಾಗಿದೆ.

ಪಟ್ಟಣಕ್ಕೆ ಪ್ರಸಿದ್ಧ ಜ್ಯೋತಿಷಿ ಬಂದಿದ್ದಾರೆ ಎಂದು ಕೇಳಿದ ರಾಯರು ಅವರನ್ನು ಕಾಣಲು ಹೋದರು. ತಮ್ಮ ಜಾತಕದ ಜೊತೆ 501/- ಕಾಣಿಕೆ ಇಟ್ಟು ಕೇಳಿದರು…ಗುರುಗಳೇ ನಾನು ಯಾವಾಗ, ಯಾವ ಸ್ಥಳದಲ್ಲಿ, ಯಾವ ಪರಿಸ್ಥಿತಿಯಲ್ಲಿ ಸಾಯುತ್ತೇನೆ  ಎಂದು ಕೇಳಿದರು. ಜ್ಯೋತಿಷಿಗಳು ರಾಯರ ಜಾತಕ ನೋಡಿದರು,  ಅವರ ಮುಖವನ್ನು ದಿಟ್ಟಿಸಿ ನೋಡಿದರು. ನಂತರ ಒಂದು ಹಾಳೆಯಲ್ಲಿ ಸಂಖ್ಯೆಗಳನ್ನು ಬರೆದು  ಕೂಡಿ ಕಳೆದು ಗುಣಿಸಿ ಭಾಗಿಸಿ ಮತ್ತೆ ರಾಯರ ಮುಖ ದಿಟ್ಟಿಸಿ ಗಂಭೀರವಾಗಿ ಹೇಳಿದರು..

ನೋಡಿ ರಾಯರೇ, ನಿಮ್ಮ ಜಾತಕ ಅದ್ಭುತವಾಗಿದೆ. ಸ್ಪಷ್ಟವಾಗಿ ತಿಳಿಸುತ್ತದೆ. ಏನೆಂದರೆ,

  ಮೂಡುಗಟ್ಟಿನ ಗಿಡ

ನಿಮ್ಮ ತಂದೆಯಷ್ಟೇ ವರ್ಷ ಬದುಕುತ್ತೀರಿ,

ಅವರು ಸಾಯುವ ಸ್ಥಳದಲ್ಲೇ ಸಾಯುತ್ತೀರಿ,

ಅವರು ಸಾಯುವ ಪರಿಸ್ಥಿತಿಯಲ್ಲಿಯೆ ಸಾಯುತ್ತೀರಿ….

ರಾಯರು ಇದನ್ನು ಕೇಳಿ ಗುರುಗಳಿಗೆ ವಂದಿಸಿ ಅವಸರದಲ್ಲಿ ತಲೆ ಕೆಟ್ಟವರಂತೆ ಓಡಿದರು…………..

ಅರ್ಧ ಘಂಟೆಯೊಳಗೆ ಅಪ್ಪನನ್ನು ವೃದ್ಧಾಶ್ರಮದಿಂದ ಮನೆಗೆ ಕರೆತಂದರು. 😀

†*****†***************†***†*****

ಕನ್ನಡ ಶಾಲೆ ಮಾಸ್ತರ್ ಒಬ್ಬ ATM ಗೆ ದುಡ್ಡು ತೆಗೆಯಲು ಹೋದ , ATM ನಲ್ಲಿ ದುಡ್ಡಿರಲಿಲ್ಲ, ಚೆಕ್ಬುಕ್ ಜೇಬಲ್ಲಿ ಇದ್ದುದರಿಂದ ಬ್ಯಾಂಕ್ ಒಳಗಡೆ ಹೋಗಿ 1000 rs ದು withdrawal slip ಬರ್ದು ಕ್ಯಾಶಿಯರ್ ಕೈಗೆ ಕೊಟ್ಟ ಕ್ಯಾಶಿಯರ್ ಹೇಳ್ದ ” 5000 ಕಿಂತ ಕಡಿಮೆ ಅಮೌಂಟ್ ಇದ್ರೆ ಚಾರ್ಜ್ ಕಟ್ ಆಗುತ್ತೆ ಸರ್ ” .
ಆಗ ಮಾಸ್ತರ 6000 ಅಮೌಂಟ್ ಬರ್ದು ಮತ್ತೆ ಕ್ಯಾಶಿಯರ್ ಕೈಗೆ ಕೊಟ್ಟ ಕ್ಯಾಶಿಯರ್ 6000 ಅಮೌಂಟ್ ಕೊಟ್ಟ, ಮಾಸ್ತರ್ ಅದರಲ್ಲಿ 1000 ರು ಜೇಬಿಗೆ ಇಟ್ಕೊಂಡು ಉಳಿದ 5000 ರುಪಾಯಿ ಜಮಾ ಸ್ಲೀಪ್ ಬರ್ದು ಡೆಪಾಸಿಟ್ ಮಾಡು ಅಂತೇಳಿ ಮತ್ತೆ ಕ್ಯಾಶಿಯರ್ ಗೆ ಕೈಗೆ  ಕೊಟ್ಟ .😜

  ಶಿವ - ತಪಸ್ಸು - ವರ -- ಮಹಿಳೆ - ಬುದ್ಧಿವಂತೆ

ಕ್ಯಾಶಿಯರ್ ಮಕ 🙄ಮಕ 🙄ನೋಡೋಕೆ ಶುರು ಮಾಡಿದ.
ಆಗ ಮಾಸ್ತರ ಹೇಳಿದ …..
ನಿಮ್ ಮ್ಯಾನೇಜರ್ ಕೂಡ ನಮ್ ಕೈಯಲ್ಲಿ ಕಲ್ತು ಮ್ಯಾನೇಜರ್ ಆಗಿರ್ತಾನೆ ನೆನಪಿರಲಿ😎

😝😛😜😛😝😜😛😝😛😜😛😝😜😛😝😛😜😛😝😜😛😛😜😝😛😜😛😜😛😜😜😛😜😛
ಕ್ಯಾಶಿಯರ್ ಶಾಕ್ಸ್
ಮಾಸ್ತರ್ ರಾಕ್ಸ್

######|##########

ಆಗಿನ ಕಾಲದ ಮತ್ತು ಈಗಿನ ಫಂಕ್ಷನ್‌ಗಳ ಮೂಲಭೂತ ವ್ಯತ್ಯಾಸವೇನೆಂದರೆ….

ಆಗ:
ಊಟ ಮಾಡುವವರು ಒಂದೇ ಕಡೆ ಇರುತ್ತಿದ್ದರು ಮತ್ತು ಬಡಿಸುವವರು ಅತ್ತಿಂದಿತ್ತ ಅಲೆಯುತ್ತಿದ್ದರು.

ಈಗ:
ಬಡಿಸುವವರು ಒಂದೇಕಡೆ ಇರುತ್ತಾರೆ. ಊಟ ಮಾಡುವವರು ಅತ್ತಿಂದಿತ್ತ ಅಲೆಯುತ್ತಾರೆ.
🤣😂😜😃🤣😂

Leave a Reply

Your email address will not be published. Required fields are marked *

Translate »