ಪ್ರಬಂಧ ಸ್ಪರ್ಧೆ
ಅದೊಂದು ಪ್ರಬಂಧ ಸ್ಪರ್ಧೆ. ಅಲ್ಲಿಯ ಪ್ರಶ್ನೆ ಹೀಗಿತ್ತು,
“ಶಾಂತಿ, ನೆಮ್ಮದಿ ಹಾಗೂ ಸಂತೋಷ ಬಗ್ಗೆ ಒಂದೇ ಸಾಲಿನಲ್ಲಿ ಬರೆಯಿರಿ”
ಸಮಯವಾದ ಬಳಿಕ, ತೀರ್ಪುಗಾರರು ಬಹಳ ಸಂತೋಷದಿಂದ ಒಬ್ಬ ವ್ಯಕ್ತಿಯ ಕೈ ಕುಲುಕುತ್ತಿದ್ದರು. ಬೆನ್ನು ತಟ್ಟುತ್ತಿದ್ದರು. ಅವನ ಆಟೋಗ್ರಾಫ್ ಸಹ ಕೇಳಿದರು
ಅವನು ಬರೆದ ವಾಕ್ಯ…
“ನನ್ನ ಹೆಂಡತಿ ಮಲಗಿದ್ದಾಳೆ”
😁😁😀😂😀😁
ಸಂತಾಕ್ಲೋಸ್
ಕ್ರಿಸ್ಮಸ್ ಸಂತಾಕ್ಲೋಸ್ ನಮ್ಮ ಮನೆಗೆ ಬಂದಿದ್ದ. ಏನು ವರ ಬೇಕು ಎಂದು ಕೇಳಿದ. ನಾನು “ನನ್ನ ಹೆಂಡ್ತಿ ಕಾಟ ತಡೆಯಲಿಕ್ಕೆ ಆಗುವುದಿಲ್ಲ ಅವಳನ್ನು ಹೊತ್ತು ಕೊಂಡು ಹೋಗು “ಅಂದದ್ದೆ ತಡ; ಕೆನ್ನೆಗೆ, ಬೆನ್ನಿಗೆ, ತಲೆಗೆ ಪೆಟ್ಟು ಬೀಳಲು ಶುರು ಆಯಿತು. ಮತ್ತೆ ಗೊತ್ತಾಯಿತು.
ಸಂತಾಕ್ಲೋಸ್ ವೇಷ ಧರಿಸಿ ಬಂದದ್ದು ನನ್ನ ಹೆಂಡತಿಯೇ ಎಂದು 😱😢
ಗಂಡ ಹೆಂಡತಿ ಟಿಪ್ಸ್
ರೆಸ್ಟಾರೆಂಟ್ನಲ್ಲಿ ಭೋಜನವನ್ನು ಮುಗಿಸಿದ ನಂತರ, ಹಂಡತಿ ತನ್ನ ಗಂಡನಿಗೆ, “ಮಾಣಿಗೆ ಟಿಪ್ಸ್ ಕೊಟ್ಟು ಬನ್ನಿ ” ಎಂದು ಹೇಳಿದಳು.
ಪತಿ ಮಾಣಿಯನ್ನು ಕರೆದು ಒನ್ ಟಿಪ್ಸ್ ಹೇಳಿದನು :
” ಜೀವನದಲ್ಲಿ ಯಾವತ್ತು ಮದುವೆಯಾಗಬೇಡ! , ಹೆಂಡತಿಯನ್ನು ಸಂಭಾಳಿಸುವುದು ಕಷ್ಟ ”
😜😝🤣😁😂😀😁
ಬಲಿಪಶು
ಒಂದು ಸಂಜೆ ಗಂಡ ಹೆಂಡತಿ ಮಾತಾಡ್ತಾ ಕುಳಿತಿದ್ದರು.
ಹೆಂಡತಿಗೆ ಒಂದು ಸಂದೇಹ ಬಂತು.
ಗಂಡನನ್ನು ಕೇಳಿದಳು
“ಋಣಾನುಬಂಧ ರೂಪೇಣ ಪಶು ಪತ್ನಿ ಸುತ ಆಲಯ” ಅಂತ ಹೇಳ್ತಾರಲ್ಲ.ಪತಿನೇ ಇಲ್ಲವಲ್ಲ ಅದರಲ್ಲಿ ಅಂತಾಳೆ. ಅದಕ್ಕೆ ಗಂಡ ಹೇಳಿದ
ಪಶು ಅಂದರೆ ಇನ್ಯಾರು ಗಂಡನೇ , ಬಲಿಪಶು ಆಗಿದ್ದನಲ್ಲ
😄😄😜😝🤣😁😂
ಗಂಡ ಹೆಂಡತಿ – ನಗುವೇ ಜೀವನ
ಪಕ್ಕದ ಮನೆಯವನು- ನಿಮ್ಮನೆಯಿಂದ ಯಾವಾಗಲು ನಗೋ ಶಬ್ದ ಕೇಳ್ತಾ ಇರ್ತದಲ್ಲ, ನಿಮ್ಮ ಈ ಸಂತೋಷ ತುಂಬಿದ ಜೀವನದ ರಹಸ್ಯವೇನು?
ನಾನು- 😃😃😃 ನನ್ ಹೆಂಡ್ತಿ ನನ್ ಮೇಲೆ ಕೋಪ ಬಂದಾಗ್ಲೆಲ್ಲಾ ಸಿಕ್ ಸಿಕ್ಕಿದ್ ಸಾಮಾನೆಲ್ಲ ತೊಗೊಂಡು ನನ್ ಮೇಲೆ ಎಸಿತಾ ಇರ್ತಾಳೆ 😄
ನನ್ ಮೇಲೆ ಬಿದ್ರೆ ಅವಳು ನಗ್ತಾಳೆ
ಮಿಸ್ ಆದ್ರೆ ನಾನ್ ನಗ್ತೀನಿ ಅಷ್ಟೆ 😂😂😂😂
ದೇವರ ದಯೆ ನಗ್ ನಗ್ತಾನೇ ಜೀವನ ಹೇಗೋ ನಡಿತಾ ಇದೆ 😅😅😄
ಬೆಂಡೇಕಾಯಿ
ಗಂಡ :- ಏನೇ ಇದು! ನನಗೆ ಬೆಂಡೇಕಾಯಿ ಆಗದು ಅಂತ ಗೊತ್ತಿದ್ದೂ ಬೆಂಡೆಕಾಯಿಯದ್ದೇ ಎಂಟ್ಹತ್ತು ಐಟಂ ಮಾಡಿದೀ? ನಾನು ಊಟ ಮಾಡೋದು ಬೇಡವಾ??
ಹೆಂಡತಿ : ಆಹಾಹಾ… ಬೆಂಡೆಕಾಯಿ ಆಗದಾ? ಮತ್ತೆ ಏಕೋ ಅವಳು ಯಾರೋ ಮಿಟುಕಲಾಡಿ ಫೇಸ್ ಬುಕ್ ನಲ್ಲಿ ಬೆಂಡೆಕಾಯಿ ಪಲ್ಯದ ಫೋಟೋ ಹಾಕಿದ್ರೆ. “ವಾವ್…ಬಾಯಿಯಲ್ಲಿ ನೀರು ಬರ್ತಾ ಇದೆ. ನಿಮ್ಮ ಅಡುಗೆ ಅಂದ್ರೆ ಕೇಳ್ಬೇಕಾ? ಊಟಕ್ಕೆ ಬರಲಾ..” ಎಂದು ಕಾಮೆಂಟ್ ಮಡ್ಡಿದಿರಿ!!! ಈವಾಗ ಇಲ್ಲಿ ತಿನ್ರಿ..ನಾನೂ ನೋಡ್ತೀನಿ ಯಾವಕಡೆಯಿಂದ ನೀರು ಬರುತ್ತೆ ಅಂತ 😜😜😜😂😁😂