ಧಾರ್ಮಿಕ ವಿಚಾರಗಳು
- ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದರೆ, ಗೋವಿನ ಬಾಲದ ಒಂದು ಕೂದಲನ್ನು, ತಂದು ದೇವರ ಮನೆಯಲ್ಲಿಟ್ಟು, ಪೂಜಿಸುವುದರಿಂದ ಮನೆಯಲ್ಲಿ ಧನಾತ್ಮಕಶಕ್ತಿಗಳ ಪ್ರವೇಶ ಆಗುತ್ತದೆ, ಮತ್ತು ನಕರಾತ್ಮಕ ಶಕ್ತಿಗಳು ದೂರವಾಗುತ್ತವೆ.
- ಶುಕ್ರವಾರದಂದು ಸಗಣಿಯನ್ನು ಮನೆಗೆ ತಂದರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.
- ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಪ್ರತಿದಿನ ಪೂಜೆ ಮಾಡಿದ ನಂತರ ಹಸುವಿನ ಬೆರಣಿಯನ್ನು ಮನೆಯಒಳಭಾಗದಲ್ಲಿ, ಸುಡುವುದರಿಂದ ಆರೋಗ್ಯದ ಸಮಸ್ಯೆ ದೂರವಾಗುತ್ತದೆ. ಪ್ರತಿನಿತ್ಯ ಅಗ್ನಿಹೋತ್ರ ಸಹ ಮಾಡಬಹುದು. (ದೀಕ್ಷೆ ಪಡೆದು ಮಾಡಬೇಕು).
- ಮನೆಯ ಮುಖ್ಯಬಾಗಿಲಿನ ಹೊರಗಡೆ ಗೋವಿನ ಸಗಣಿಯನ್ನು ಬಳಸಿದರೆ ಲಕ್ಷ್ಮಿ ದೇವಿಯು ಪ್ರಸನ್ನಲಾಗುತ್ತಾಳೆ.
- ಜಾತಕದಲ್ಲಿ ಸೂರ್ಯನು ಅಶುಭ/ಪೀಡಿತನಾಗಿದ್ದರೆ ಹಸುವಿಗೆ ರೊಟ್ಟಿಯನ್ನು ಆಹಾರವಾಗಿ ನೀಡಿದರೆ, ಸೂರ್ಯದೇವನ ಕೃಪೆ ಉಂಟಾಗುತ್ತದೆ.
- ಜಾತಕದಲ್ಲಿ ಚಂದ್ರನು ಶುಭನಾಗಿಲ್ಲದಿದ್ದರೆ ಅವರು ಮನೆಯಲ್ಲಿ ಹಸುವನ್ನು ಸಾಕಬೇಕು, ಆಗದೇ ಇದ್ದ ಪಕ್ಷದಲ್ಲಿ ಹಸು ಸಾಕಿರುವವರಿಗೆ, ನೀರನ್ನು ಕೊಡಬೇಕು, ಇದರಿಂದ ಚಂದ್ರನ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.
- ಜಾತಕದಲ್ಲಿ ಮಂಗಳ ಗ್ರಹ ಅಶುಭನಾಗಿದ್ದರೆ ಮಂಗಳವಾರದಿಂದ ದಿನದಂದು ಎತ್ತಿಗೆ ಬೆಲ್ಲ ಮತ್ತು ನೆನೆಸಿದ ಬೇಳೆಯನ್ನು ತಿನ್ನಿಸಿ.
- ಜಾತಕದಲ್ಲಿ ಬುಧ ಗ್ರಹದ ದುರ್ಬಲತೆ ಇದ್ದರೆ, ಬುಧವಾರ ದಿನದಂದು ಹಸುಗಳಿಗೆ ಹಸಿರು ಹುಲ್ಲನ್ನು ತಿನ್ನಿಸಿ.
- ಜಾತಕದಲ್ಲಿ ಗುರು ಗ್ರಹದ ಪ್ರಭಾವವನ್ನು ಸುಧಾರಿಸಲು ಗುರುವಾರ ದಿನದಂದು ಹಸುಗಳಿಗೆ ಬಾಳೆಹಣ್ಣು, ಕಡಲೆ, ಬೆಲ್ಲವನ್ನು ನೀಡಿ.
- ಶುಕ್ರ ಗ್ರಹವನ್ನು ಬಲಿಷ್ಠ ಗೊಳಿಸಲು ನಿಮ್ಮ ಆಹಾರದ ಒಂದು ಭಾಗವನ್ನು ಎಂಜಲು ಮಾಡದೆ ಹಸುವಿಗೆ ನೀಡಿ.
- ಶನಿ ಅಥವಾ ರಾಹು ಗ್ರಹವನ್ನು ತೃಪ್ತಿಪಡಿಸಲು, ಶನಿವಾರದಂದು ಕಪ್ಪು ಎಳ್ಳು ಉದ್ದು, ಇವನ್ನು ಹಸುವಿಗೆ ತಿನ್ನಿಸಿ.
- ಕೇತು ಗ್ರಹವನ್ನು ತೃಪ್ತಿಪಡಿಸಲು ಮಂಗಳವಾರದಂದು, ತೊಗರಿ ಬೇಳೆಯನ್ನು, ಹಸುವಿಗೆ ನೀಡಿ.
ಎಲ್ಲದಕ್ಕೂ ನಂಬಿಕೆ ಭಕ್ತಿ ಶ್ರದ್ಧೆ ಮುಖ್ಯ, ಪರಿಹಾರ ಮಾಡುತ್ತಾ ತಾಳ್ಮೆಯಿಂದ ಕಾಯಬೇಕು.




