ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಕ್ತ ಪ್ರಹ್ಲಾದ ರಾಜ – ಕಥೆ

🌹ಶ್ರೀರಾಘವೇಂದ್ರ ಸ್ವಾಮಿಗಳ ಪ್ರಥಮಾವತಾರ ಶ್ರೀ ಭಕ್ತಪ್ರಹ್ಲಾದರಾಜ🌹

🌺ಭಕ್ತಿ ಎಂದರೆ ಏನು?ಅದರ ಪ್ರಭಾವ ಹೇಗಿರುತ್ತದೆ? ಶ್ರೀ ರಾಘವೇಂದ್ರ ಸ್ವಾಮಿಗಳು ಪ್ರಥಮ ಅವತಾರದಲ್ಲಿ ದೈತ್ಯಕುಲೋದ್ದಾರಕನಾದ ಭಕ್ತಿಯ ಸಾಕಾರ ರೂಪನಾದ ಪ್ರಹ್ಲಾದರಾಗಿ ಅವತಾರ ಮಾಡಿದರು.

🌺ತಾವು ಗರ್ಭದಲ್ಲಿರುವಾಗಲೇ ಶ್ರೀ ಹರಿಯ ಪರಮಭಕ್ತರಾದ ಶ್ರೀ ನಾರದ ಮಹರ್ಪಿಗಳಿಂದ ಉಪದೇಶ ಹೊಂದಿದರು.ಅಂತಹ ದೃಢವಾದ ಭಕ್ತಿ ಇದ್ದುದರಿಂದಲೇ ತಂದೆಯಾದ ಹಿರಣ್ಯಕಶಿಪುವು ಸಮುದ್ರದಲ್ಲಿ ಮೂಳುಗಿಸಿದರೂ ಪರ್ವತಾಗ್ರದಿಂದ ಎತ್ತಿ ಹಾಕಿದರೂ ಅಗ್ನಿಯಲ್ಲಿ ಹಾಕಿ ಭಸ್ಮಮಾಡಲು ಪ್ರಯತ್ನಿಸಿದರು ಕ್ರೂರಮೃಗಗಳ ಭೋನಿನೊಳಗೆ ಬಿಟ್ಟರೂ ಮಹಾ ವಿಷಸರ್ಪಗಳಿಂದ ಕಚ್ಚಿಸಿ ಕೊಲ್ಲಲು ಪ್ರಯತ್ನಿಸಿದರು ಪ್ರಹ್ಲಾದನನ್ನು ಕೊಲ್ಲಲು ಶಕ್ತನಾಗಲಿಲ್ಲ. ಕೊನೆಗೆ ರೋಸಿ ಹೋಗಿ ಮಹಾವಿಷವನ್ನು ತಾಯಿ ಯಿಂದದಲೇ ಕುಡಿಸುವಂತೆ ಆ ದೈತ್ಯನು ಮಾಡಿದನು. ಅಷ್ಟೆಲ್ಲ ಮಾಡಿದರು ಸಹ ಶ್ರೀಹರಿಯ ಅನುಗ್ರಹದಿಂದ ಪ್ರಹ್ಲಾದನನ್ನು ಏನು ಮಾಡಲು ಶಕ್ತವಾಗಲಿಲ್ಲ.

  ಸೋಮ ಪ್ರದೋಷ ವ್ರತ

🌺ಆಗ ಹಿರಣ್ಯಕಶಿಪುವು ಪ್ರಹ್ಲಾದನನ್ನು ಸಭೆಯಲ್ಲಿ ದಂಡಿಸಬೇಕೆಂದು ಗಟ್ಟಿಯಾಗಿ ಹಿಡಿದು ಕೊಂಡು ಆ ನಿನ್ನ ಹರಿ ಎಲ್ಲೆಲ್ಲೂ ಇರುವುದುದಾದರೆ ಈ ಕಂಭದಿಂದ ಬಂದು ರಕ್ಷಿಸಲಿ ಎಂದು ಕಂಭವನ್ನು ಕಾಲಿನಿಂದ ಒದ್ದಾಗ ಪ್ರಹ್ಲಾದನ ಕರೆಗಾಗಿ ಕಾದಿದ್ದ ಶ್ರೀಹರಿಯು ಅವನನ್ನು ಉದ್ದಾರ ಮಾಡುವ ಸಲುವಾಗಿ ಅರ್ಧ ಮನುಷ್ಯ ಅರ್ಧ ಮೃಗ ರೂಪದಿಂದ ತಾನು ಎಲ್ಲಕಡೆ ಇದ್ದು ಭಕ್ತರು ಕರೆದರೆ ಬರುವೆನು ಎಂದು ತೋರಿಸುವ ಸಲುವಾಗಿ ಕಂಭದಿಂದ ಹೊರಬಂದನು.ಪ್ರಹ್ಲಾದನಿಗಾಗಿ ಅವನ ತಂದೆ ಮಹಾ ದೈತ್ಯನಾದ ಹಿರಣ್ಯಕಶಿಪುವಿನ ಹೊಟ್ಟೆಯನ್ನು ಬಗೆದು ಸಂಹಾರ ಮಾಡಿದನು.ಈ ಪ್ರಹ್ಲಾದನಂತಹ ಭಕ್ತರು ಇನ್ನು ಎಷ್ಟು ಮಂದಿ ಇವನ ಹೊಟ್ಟೆಯಲ್ಲಿ ಇದ್ದಾರೋ ನೋಡೋಣ ಎಂದು ನರಸಿಂಹ ರೂಪನಾದ ಶ್ರೀಹರಿಯು ಹಿರಣ್ಯಕಶಿಪುವಿನ ಹೊಟ್ಟೆಯನ್ನು ಸೀಳಿದನೇನೋ ಎನ್ನುವಂತಿತ್ತು ಆ ದೃಷ್ಯ..

  ಶಿವ ತಾಂಡವ ಸ್ತೋತ್ರಂ

🌺ಹೀಗೆ ಶ್ರೀಹರಿಯನ್ನು ನೆನೆಯುತ್ತಾ ಭಕ್ತಿಯಿಂದ ಮೈಮರೆತು ಶ್ರೀಪ್ರಹ್ಲಾದರಾಜರು ಭಕ್ತಿ ಮಾರ್ಗದಲ್ಲಿ ನಡೆದುದಲ್ಲದೆ ಎಲ್ಲರನ್ನು ಆ ದಾರಿಯಲ್ಲಿ ನಡೆಸಿ ತಾವು ಮಾಡಿಕೊಂಡ ಶ್ರೀಹರಿಯ ಸಾಕ್ಷಾತ್ಕಾರವನ್ನು ಸಂಸಾರ ಸಾಗರದಲ್ಲಿ ಬಿದ್ದು ನರಳುತ್ತಾ ಮುಳುಗುತ್ತಿರುವ ಸಜ್ಜನರಿಗೂ ಮಾಡಿಸಿದರು. ಎಲ್ಲರೂ ಹರಿಕೃಪೆ ಪಡೆಯುವಂತೆ ಭಕ್ತಿಮಾರ್ಗದಲ್ಲಿ ನಡೆಸಿದರು. ಹರಿದ್ವೇಷಿಯಾದರು ತಂದೆ ಹಿರಣ್ಯಕಶಿಪುವಿನ ತಪ್ಪನ್ನು ಮನ್ನಿಸುವಂತೆ ಪ್ರಾರ್ಥಿಸಿ ಶ್ರೀನರಹರಿಯಿಂದ ತಮ್ಮತಂದೆಯ ಉದ್ಧಾರ ಬಯಸಿದರು. ಯಾವಾಗಲೂ ದುಷ್ಟವರ್ತನೆಯಲ್ಲಿ ತೊಡಗಿ ಕುಮಾರ್ಗಗಾಮಿಗಳಾದ ದೈತ್ಯರ ಸಮೂಹದಲ್ಲಿಹುಟ್ಟಿ ಬಂದು ಭಕ್ತಿಮಾರ್ಗದಿಂದ ಅವರನ್ನೆಲ್ಲಾ ಉದ್ಧಾರಮಾಡಿದರು.

🌺ಚಿಕ್ಕಬಾಲಕನಾದರೂ ಪ್ರಹ್ಲಾದನು ಭಕ್ತಿಯ ಪ್ರತಿರೂಪ ಎಂಬ ಪ್ರಶಸ್ತಿಪಡೆದರು. ಶ್ರೀ ಹರಿಯ ಇಚ್ಛೆಯಂತೆ ನಮ್ಮೆಲ್ಲರ ರಕ್ಷಣೆಗಾಗಿ ಭಕ್ತ ಪ್ರಹ್ಲಾದರಾಜರೆ ಕಲಿಯುಗದಲ್ಲಿ ಶ್ರೀ ಮೂಲರಾಮರ ಪೂಜೆಗೈಯಲು ಮತ್ತು ಭಕ್ತರ ಉದ್ಧಾರಕಾಗಿ ಶ್ರೀ ರಾಘವೇಂದ್ರ ಸ್ವಾಮಿಗಳಾಗಿ ಜನಿಸಿ ಬಂದರು…

  ಮಾಘ ಅಮಾವಾಸ್ಯೆಯ ಮಹತ್ವ

🌹”ಶ್ರೀ ಗುರು ರಾಘವೇಂದ್ರಾಯ ನಮಃ”🌹

Leave a Reply

Your email address will not be published. Required fields are marked *

Translate »