ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶಾಸ್ತ್ರಗಳನ್ನು ರಚಿಸಿದವರು ಯಾರು ?

ಶಾಸ್ತ್ರಗಳನ್ನು ರಚಿಸಿದವರು ಯಾರು ?

ಪ್ರಪಂಚಕ್ಕೆ ಪ್ರಪಂಚವೇ ಅಸೂಯೆ ಪಡಬೇಕಾದ ಶಾಸ್ತ್ರ ಸಂಪತ್ತು
ನಮಗಿದೆ. ಈ ವಿಷಯದಲ್ಲಿ ಯಾವ ಭಾರತೀಯನೂ ಸಂದೇಹ ಪಡಬೇಕಾಗಿಲ್ಲ. ವೇದ, ಉಪನಿಷತ್ತುಗಳು, ಸ್ಮೃತಿ, ಶ್ರುತಿ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಪುರಾಣಗಳು, ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ … ಮುಂತಾದುವು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಒಂದು ವಿಷಯ, ನಾವೆಲ್ಲರೂ ನೊಂದುಕೊಳ್ಳಬೇಕಾದ ವಿಷಯವೊಂದಿದೆ. ಪುರಾಣಗಳನ್ನು ಸ್ಮೃತಿಧರ್ಮಗಳನ್ನು ಮಹರ್ಷಿಗಳ ಹೆಸರಿನಲ್ಲಿ ಕೆಲವು ಸ್ವಾರ್ಥಿಗಳು, ಸ್ವಾರ್ಥ ಪಂಡಿತರು, ತಮ್ಮನ್ನು ತಾವೇ ದೊಡ್ಡವರೆಂದು ಹೊಗಳಿಕೊಳ್ಳುವ ಸಮಾಜ ವಿಘಾತಕರು ಸ್ಮೃತಿಶಾಸ್ತ್ರಗಳನ್ನು ಬದಲಾಯಿಸಿ ಬೇಧವಿಬೇಧಗಳನ್ನು ಕಲ್ಪಿಸಿದ್ದಾರೆ. ಹಿಂದು ಧರ್ಮೋನ್ನತಿಗೆ ವಿಘ್ನವಿಘಾತವನ್ನು ಸೃಷ್ಟಿಸಿದ್ದಾರೆ. ಧರ್ಮವನ್ನೇ ದಾರಿ ತಪ್ಪಿಸಿದ್ದಾರೆ. ಎಲ್ಲರಿಗೂ ಇದು ತಿಳಿಯದು. ಎಲ್ಲರಿಗೂ ತಿಳಿಯದಿರುವುದೇ ಅವರಿಗೆ ಶ್ರೀರಕ್ಷೆಯಾಗಿದೆ. ಹ್ಞೂಂ.. ಗತವನ್ನು ನೆನೆಯುವುದರಲ್ಲಿ ಫಲವಿಲ್ಲ. ಆದರೆ ಗತವೇ ವರ್ತಮಾನಕ್ಕೆ ಬುನಾದಿಯಾಗುತ್ತದಲ್ಲವೇ! ಸರಿ; ಈಗ ವಿಷಯಕ್ಕೆ ಬರೋಣ…

ನಮಗೆ ಒಂದೊಂದು ವಿಷಯಕ್ಕೆ ಒಂದೊಂದು ಶಾಸ್ತ್ರವಿದೆ. ಆದರೆ ಈ ಶಾಸ್ತ್ರಗಳು ಸಂಸ್ಕೃತ ಭಾಷೆಯಲ್ಲಿಯಿರುವುದರಿಂದ ಸಂಸ್ಕೃತವು ಪ್ರಜಾಭಾಷೆಯಾಗದೇ ಪಂಡಿತ ಭಾಷೆಯಾಗಿರುವುದರಿಂದ ಪುರಾತನ ಭಾಷಾ ಸಂಗ್ರಹಾಲಯಕ್ಕೆ ಸೀಮಿತವಾಗಿವೆ. ಪಾಶ್ಚಾತ್ಯರು ನಾವು ಕಳೆದುಕೊಂಡ ಶಾಸ್ತ್ರವಿಚಾರಗಳನ್ನು ಹೇಗೋ ಪಡೆದು ಸದ್ಭಳಕೆಮಾಡಿಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಮಾಡಿರುವ ಸಾಧ್ಯತೆಯಿದೆ.

ಅಕ್ಷರ ಲಕ್ಷ:
ಇದು ಭಗವಾನ್ “ವಾಲ್ಮೀಕಿ ಮಹರ್ಷಿ” ಬರೆದಿದ್ದಾರೆ. ಇದು ಸರ್ವಶಾಸ್ತ್ರ ಗ್ರಂಥವಾಗಿದೆ. (ಎನ್‌ಸೈಕ್ಲೋಪಿಡಿಕ್ ಸೈನ್ಸ್) ಈ ಅಕ್ಷರಲಕ್ಷ ಗ್ರಂಥದಲ್ಲಿ ರೇಖಾಗಣಿತ ಬೀಜಗಣಿತ ತ್ರಿಕೋನಗಣಿತ ಮುಂತಾದ ಮುನ್ನೂರ ಇಪ್ಪತ್ತೈದು (42 ಗಣಿತಪ್ರಕ್ರಿಯಗಳಿವೆ. ಖನಿಜಶಾಸ್ತ್ರ – ಭೌತಿಕಶಾಸ್ತ್ರ – ಜಲ(ಯಂತ್ರಶಾಸ್ತ್ರ – ಭೂಗರ್ಭಶಾಸ್ತ್ರ – ವಾಯುಶಾಸ್ತ್ರ – ಉಷ್ಣಶಾಸ್ತ್ರ ಉಷ್ಣವಿದ್ಯುತ್‌ಗಳನ್ನು ಅಳೆಯುವ ಪ್ರಕ್ರಿಯೆಗಳನ್ನು ವಿವರಿಸಲಾಗಿದೆ. ಈ ಗ್ರಂಥವು ಮಹಾನ್ ವಿಜ್ಞಾನ ಶಾಸ್ತ್ರವಾಗಿದೆ. ವಿದ್ಯುತ್‌ಶಾಸ್ತ್ರ ಮತ್ತು ಉಷ್ಣ ವಿದ್ಯತ್ ಗಳನ್ನು ಅಳೆಯುವ ಪ್ರಕ್ರಿಯೆಗಳನ್ನು ವಿವರಿಸಲಾಗಿದೆ. ಈ ಗ್ರಂಥವು ಮಹಾನ್ ವಿಜ್ಞಾನ ಶಾಸ್ತ್ರವಾಗಿದೆ.

ಶಬ್ದಶಾಸ್ತ್ರ:
ಕಂಡಿಕ ಋಷಿಗಳು ಬರೆದಿದ್ದಾರೆ. ಈ ಶಬ್ದಶಾಸ್ತ್ರವು ಹೆಸರಿಗೆ ತಕ್ಕಂತೆಯೇ ಸರ್ವಸೃಷ್ಟಿಯ ಸಮಸ್ತ ಚರಾಚರ ಶಬ್ದ ಪ್ರತಿಶಬ್ದಗಳ ಬಗ್ಗೆ ಕೂಲಂಕುಷ ಚರ್ಚೆ ಮಾಡಿದ ಗ್ರಂಥವಿದು. ಯಾಂತ್ರಿಕವಾಗಿ ಧ್ವನಿಸೃಷ್ಟಿಮಾಡುವುದು, ಧ್ವನಿವೇಗ ಮತ್ತು ಸ್ಥಾಯಿಗಳನ್ನು ಅಳತೆ ಮಾಡುವ ಪದ್ಧತಿಗಳು ಸವಿವರವಾಗಿ ಐದು ಅಧ್ಯಾಯಗಳಲ್ಲಿ ವಿವರಿಸಲಾಗಿದೆ.

ಲಕ್ಷಣಶಾಸ್ತ್ರ:
ಕಟಾಯನ ಮಹರ್ಷಿ” ಬರೆದಿದ್ದಾರೆ. ಈ ಲಕ್ಷಣ ಗ್ರಂಥದಲ್ಲಿ ಚೈತನ್ಯ ಮತ್ತು ಜಡ ಸೃಷ್ಟಿ ಸರ್ವಲಿಂಗ ಗಳ ವಿಷಯಗಳನ್ನು ವಿವರಿಸುವ ಲಕ್ಷಣಶಾಸ್ತ್ರವಿದು.

  ಶ್ರೀ ದುರ್ಗಾ ಪರಮೇಶ್ವರಿ ಮಲ್ಲ ಕ್ಷೇತ್ರದ ಪುರಾಣ ಕಥೆ ಮಹಾತ್ಮೆ

ಕನ್ಯಾಲಕ್ಷಣಶಾಸ್ತ್ರ:
ಬಬ್ರು ಮಹರ್ಷಿಗಳು ಬರೆದಿದ್ದಾರೆ. ಈ ಶಾಸ್ತ್ರದಲ್ಲಿ ವಿವಿಧರೀತಿಯ ಕನ್ಯಗಳ ಮನಸ್ತತ್ವ ಲಕ್ಷಣಗಳನ್ನು, ಶಾರೀರಿಕ ಪದ್ಧತಿಗಳನ್ನು ಅವಲಕ್ಷಣಗಳನ್ನು ಸೌಶೀಲ್ಯಾದಿ ಗುಣಗಳ ವಿವರಣೆಯನ್ನು ವಿವರಿಸಲಾಗಿದೆ.

ಶಕುನಶಾಸ್ತ್ರ:
ಗರ್ಗಮಹರ್ಷಿ ಬರೆದಿದ್ದಾರೆ. ಪಕ್ಷಿಗಳ ಧ್ವನಿಗಳಿಂದ ಪ್ರಾಣಿಗಳ ಮೂಗುಗಳಿಂದ ಮನುಷ್ಯರ ಮಾತುಗಳಿಂದ ಪ್ರಯಾಣ ಪ್ರಾರಂಭದಲ್ಲಿ ಪ್ರಾಣಿ, ಮನುಷ್ಯ, ವಸ್ತುಗಳು ಎದುರಾಗಿ ಬರುವುದರಿಂದ ನಡೆಯಬಹುದಾದ ಆಗುಹೋಗುಗಳು ಈ ಗ್ರಂಥದಲ್ಲಿವೆ.

ಶಿಲ್ಪಶಾಸ್ತ್ರ:
ಕಶ್ಯಪಋಷಿ ಬರೆದಿದ್ದಾರೆ. ಈ ಶಾಸ್ತ್ರದಲ್ಲಿ ಇಪ್ಪತ್ತೆರಡು ಅಧ್ಯಾಯಗಳವೆ. ಮುನ್ನೂರ ಏಳು ಶಿಲ್ಪವಿಧಾನಗಳನ್ನು ಈ ಶಾಸ್ತ್ರದಲ್ಲಿ ಚರ್ಚಿಸಲಾಗಿದೆ. ದೇವಸ್ಥಾನ ರಾಜಭವನ ನಿರ್ಮಾಣಗಳ ವಿವರಣೆಗಳಿವೆ. ವಿಶ್ವಾಮಿತ್ರ ಮಹಾಬ್ರಹ್ಮ ಛಾಯಾಪುರುಷ ಮುಂತಾದವರು ಹೇಳಿರುವ ವಿಷಯಗಳನ್ನು ಈ ಶಿಲ್ಪಶಾಸ್ತ್ರದಲ್ಲಿ ಚರ್ಚಿಸಲಾಗಿದೆ. ಈಶಾಸ್ತ್ರವನ್ನು “ಆಗಮಶಾಸ್ತ್ರ” ವೆಂದೂ ಹೇಳುತ್ತಾರೆ.

ಸೂಪಶಾಸ್ತ್ರ:
ಇದನ್ನು ಸುಕೇಶಮುನಿ ಬರೆದಿದ್ದಾರೆ. ಸೂಪಶಾಸ್ತ್ರವೆಂದರೆ ಪಾಕಶಾಸ್ತ್ರ. ಈ ಶಾಸ್ತ್ರದಲ್ಲಿ ಒಂದು ನುರಾ ಎಂಟು ವ್ಯಂಜನ (ಚಟ್ನಿ)ಗಳು, ಅಷ್ಟೇ ಪಲ್ಯಗಳು ಮತ್ತು ಸಿಹಿ ಪದಾರ್ಥಗಳು ಉಪ್ಪಿನಕಾಯಿಗಳು ಉತ್ತರಭಾರತೀಯ ತಿನಿಸುಗಳು, ಪಾಯಸಗಳು, ನಮಗೆ ಪರಿಚಯವೇ ಇಲ್ಲದ ತಿನಿಸುಗಳು ಒಟ್ಟು ಮೂರು ಸಾವಿರಕ್ಕೂ ಮೇಲ್ಪಟ್ಟು ತಯಾರಿಗಳಿವೆ. ತಯಾರಿಸುವ ವಿಧಾನಗಳನ್ನು ಹೇಳಲಾಗಿದೆ.

ಮಾಲಿನೀ ಶಾಸ್ತ್ರ:
ಈ ಶಾಸ್ತ್ರವನ್ನು ಋಷ್ಯಶೃಂಗಮಹರ್ಷಿ ಬರೆದಿದ್ದಾರೆ. ಹದಿನೆಂಟು ಅಧ್ಯಾಯಗಳಿರುವ ಇದರಲ್ಲಿ ಹೂವಿನ ಬಣ್ಣಗಳು ಹೂಗಳ ವಿಶೇಷತೆಗಳು, ಹೂವಿನ ಮಾಲೆಗಳನ್ನು ತಯಾರಿಸುವ ವಿವಿಧ ವಿಧಾನಗಳು ಈ ಶಾಸ್ತ್ರದಲ್ಲಿ ವಿವರಿಸಲಾಗಿದೆ.

ಕಾಲಶಾಸ್ತ್ರ:
ಕಾರ್ತಿಕೇಯ ಮಹರ್ಷಿ ಗಳು ಬರೆದಿದ್ದಾರೆ. ಈ ಶಾಸ್ತ್ರದಲ್ಲಿ ಸಮಯವಿಭಜನೆ (ಕ್ಷಣ, ನಿಮಿಷ, ಘಂಟೆ, ದಿನ, ಅಯನ, ವರ್ಷ ಮುಂ.) ಮತ್ತು ಶುಭಸಮಯಗಳು ಅಶುಭಸಮಯಗಳು ವರ್ಜಸಮಯಗಳು, ಸಮಯದೇವತೆಗಳು, ಅಧಿದೇವತೆಗಳ ಬಗ್ಗೆ ವಿವರಿಸಲಾಗಿದೆ.

ಸಾಮುದ್ರಿಕಶಾಸ್ತ್ರ:
ಸಮುದ್ರಋಷಿ ಬರೆದಿದ್ದಾರೆ. ಸಮುದ್ರನಿಂದ ಹೇಳಲಾಗಿರುವ ಶಾಸ್ತ್ರವಾಗಿದ್ದರಿಂದ ಸಾಮುದ್ರಿಕ ಶಾಸ್ತ್ರವೆಂದು ಹೆಸರು ಬಂದಿದೆ. ಹಸ್ತಸಾಮುದ್ರಿಕವೆಂಬ ಶಾಸ್ತ್ರವು ಇದರಲ್ಲಿದೆ.

ಧಾತುಶಾಸ್ತ್ರ:
ಅಶ್ವಿನಿ ಕುಮಾರರಿಂದ ರಚಿಸಲಾಗಿದೆ. ಇದು ಅದ್ವಿತೀಯ ‘ಲೋಹಶಾಸ್ತ್ರ’ವಾಗಿದೆ. ಸಹಜ ಮತ್ತು ಕೃತ್ರಿಮ ಲೋಹಗಳ ಬಗ್ಗೆ ಶಾಸ್ತ್ರೀಯ ವಿವರಣೆ ಇದರಲ್ಲಿದೆ. ಈ ಶಾಸ್ತ್ರದಲ್ಲಿ ಏಳು ಅಧ್ಯಾಯಗಳಿವೆ. ಈ ಧಾತುಶಾಸ್ತ್ರದಿಂದ ಮಾನವ ನಾಗರಿಕತೆ ನೂರು ಹೆಜ್ಜೆಗಳು ಮುಂದಕ್ಕೆ ಬಂದಿದೆ. ತಾಮ್ರವನ್ನು ಬಂಗಾರಕ್ಕೆ ರೂಪಾಂತರ ಮಾಡುವುದನ್ನು ಇದರಲ್ಲಿ ತಿಳಿಸಲಾಗಿದೆ.

ವಿಷಶಾಸ್ತ್ರ:
ಅಶ್ವಿನೀಕುಮಾರರಿಂದ ಪ್ರಣೀತವಾಗಿದೆ. ಮುವ್ವತ್ತೆರಡು ವಿಷಗಳು. ಇದರ ಪ್ರಭಾವಗಳು ಪ್ರತಿಕ್ರಿಯೆಗಳು, ಕೃತ್ರಿಮ ವಿಷ ತಯಾರಿಕೆಗಳು ವಿಷನಿರೋಧನೆಗಳು ಈ ಶಾಸ್ತ್ರದಲ್ಲಿ ವಿವರಿಸಲಾಗಿದೆ.

  ಗಣಪತಿಯ ವಿಗ್ರಹ ಯಾವ ಸಮಯದಲ್ಲಿ ಪ್ರತಿಷ್ಠಾಪಿಸಬೇಕು, ಪೂಜಾ ವಿಧಾನ ಹೇಗಿರಬೇಕು? ಮಾಹಿತಿ ಇಲ್ಲಿದೆ

ಚಿತ್ರಲೇಖನ ಶಾಸ್ತ್ರ:
ಭೀಮಋಷಿ ಪ್ರಣೀತವಾಗಿದೆ. ಚಿತ್ರಲೇಖನಾ ರಹಸ್ಯಗಳು ಈ ಶಾಸ್ತ್ರದಲ್ಲಿವೆ. ಮನುಷ್ಯನ ಕೂದಲು, ಉಗುರುಗಳನ್ನು ನೋಡಿ ಆ ಮನುಷ್ಯನ ಚಿತ್ರವನ್ನು ಬರೆಯುವ ವಿಧಾನವಿದೆ. ಹನ್ನೆರಡು ಅಧ್ಯಾಯಗಳಲ್ಲಿ ಎರಡುನೂರು ಚಿತ್ರಗಳ ವಿನ್ಯಾಸ ರಹಸ್ಯಗಳನ್ನು ಹೇಳಲಾಗಿದೆ.

ಮಲ್ಲಶಾಸ್ತ್ರ:
ಮಲ್ಲಮಹರ್ಷಿ ಬರೆದಿದ್ದಾರೆ. ಅದರಿಂದಲೇ ಮಲ್ಲಯುದ್ದ’ವೆಂಬ ಹೆಸರು ಬಂದಿದೆ. ಕೈಯಲ್ಲಿಯಾವ ಆಯುಧವೂ ಇಲ್ಲದೆ ದೇಹಶಕ್ತಿಯಿಂದ ಹೋರಾಡುವ ಯುದ್ಧಶಾಸ್ತ್ರವಿದು. ಇಪ್ಪತ್ನಾಲ್ಕು ಮಲ್ಲಯುದ್ಧಗಳನ್ನು ಈ ಶಾಸ್ತ್ರದಲ್ಲಿ ಹೇಳಲಾಗಿದೆ.

ಪರಕಾಯಪ್ರವೇಶಶಾಸ್ತ್ರ:
ಇದನ್ನು ವಾಲಖಿಲ್ಯ ಋಷಿ ಬರೆದಿದ್ದಾರೆ. ತನ್ನ ಶರೀರವನ್ನು ಬಿಟ್ಟು ಇನ್ನೊಂದು ಶರೀರದಲ್ಲಿ ಪ್ರವೇಶಿಸುವುದನ್ನು ಪರಕಾಯ ಪ್ರವೇಶಶಾಸ್ತ್ರವೆನ್ನುತ್ತಾರೆ. ಈ ಶಾಸ್ತ್ರದಲ್ಲಿ ಮುವತ್ತೆರಡು ವಿಧದ ಯೋಗವಿದ್ಯೆಗಳು ಅಣಿಮಾದಿ ಅಷ್ಟಸಿದ್ಧಿಗಳು ಹೇಳಲಾಗಿದೆ.

ಅಶ್ವಶಾಸ್ತ್ರ:
ಈ ಶಾಸ್ತ್ರವನ್ನು “ಅಗ್ನಿವರ್ಮ” ಬರೆದಿದ್ದಾನೆ. ಅಶ್ವಗಳ ವಿಧಗಳು ಅಶ್ವಗಳ ಶುಭಾಶುಭಚಿಹ್ನೆಗಳು, ಓಡುವ ರೀತಿಗಳು, ಗುಡ್ಡಗಳನ್ನು ಹತ್ತಿಸುವುದು, ನದಿಗಳನ್ನು ದಾಟುವುದು ಮುಂತಾದ ವಿಷಯಗಳು ಈ ಶಾಸ್ತ್ರದಲ್ಲಿವೆ.

ಗಜಶಾಸ್ತ್ರ:
ಶಾಸ್ತ್ರವನ್ನು ‘ಕುಮಾರಸ್ವಾಮಿ’ ಬರೆದಿದ್ದಾರೆ. ಆನೆಗಳ ಶಾರೀರಿಕ ಲಕ್ಷಣಗಳು ಆನೆಯ ಜಾತಿಗಳು ಕಾಡಾನೆಗಳನ್ನು ಸ್ವಾಧೀನ ಮಾಡಿಕೊಳ್ಳೂವ ವಿಧಾನಗಳು, ಆನೆಗಳ ಮನಸ್ಸು ಕಂಡುಹಿಡಿಯುವ ಪದ್ಧತಿಗಳು ಈ ಶಾಸ್ತ್ರದಲ್ಲಿವೆ.

ರತ್ನಶಾಸ್ತ್ರ:
ಈ ಶಾಸ್ತ್ರವನ್ನು ವಾತ್ಸಾಯನ ಮಹರ್ಷಿ ಬರೆದಿದ್ದಾರೆ. ರತ್ನಗಳ ವಿಶಿಷ್ಟತೆ ಮತ್ತು ಪರೀಕ್ಷಿಸುವ ವಿಧಾನ ಕೃತ್ರಿಮ ರತ್ನಗಳನ್ನು ಕಂಡುಹಿಡಿಯುವ ಪದ್ಧತಿಗಳು, ರತ್ನಗಳು ಕೊಡುವ ಅದೃಷ್ಟಗಳು ವಿಶೇಷತೆಗಳು ರತ್ನಪರೀಕ್ಷೆ ಮಾಡುವ 32 ಪದ್ಧತಿಗಳು ಶಾಸ್ತ್ರೀಯವಾಗಿ ವಿವರಿಸಲಾಗಿದೆ.

ಇಂದ್ರಜಾಲ ಶಾಸ್ತ್ರ:
ಈ ತಂತ್ರ ಶಾಸ್ತ್ರವನ್ನು ವೀರಬಾಹು ಬರೆದಿದ್ದಾನೆ. ಇದರಲ್ಲಿ ಗಾರುಡಿ ವಿದ್ಯೆಗಳು ಮಾಡುವ ಪದ್ಧತಿಗಳು ಅನುಸರಿಸಬೇಕಾದ ಜಾಗ್ರತೆಗಳನ್ನು ವಿವರಿಸಲಾಗಿದೆ. ನೀರಿನ ಮೇಲೆ ನಡೆಯುವುದು, ಬೆಂಕಿಯ ಮೇಲೆ ನಡೆಯುವುದು, ಆಧಾರವಿಲ್ಲದೇ ಗಾಳಿಯಲ್ಲಿ ನಿಲ್ಲುವುದು ಮುಂತಾದ ಮಾಯಾಜಾಲ ವಿದ್ಯೆಗಳಿವೆ.

ಅರ್ಥಶಾಸ್ತ್ರ:
ವಿಷ್ಣುಶರ್ಮ ಬರೆದಿದ್ದಾರೆ. ಈ ಶಾಸ್ತ್ರದಲ್ಲಿ ಮೂರು ಭಾಗಗಳಿವೆ. ಧರ್ಮಬದ್ಧವಾದ ಧನಸಂಪಾದನೆಯ ಬಗ್ಗೆ ಎಂಭತ್ತೆರಡು ವಿಧಾನಗಳನ್ನು ತಿಳಿಸಲಾಗಿದೆ. ಈ ಶಾಸ್ತ್ರ ಬರೆದ ವಿಷ್ಣುಶರ್ಮರನ್ನು “ಚಾಣುಕ್ಯ” ಎನ್ನುತ್ತಾರೆ.

ಶಕ್ತಿ ಶಾಸ್ತ್ರ:
ಅಗಸ್ಯ ಮಹರ್ಷಿ ಬರೆದಿದ್ದಾರೆ. ಸೂರ್ಯ, ವಾಯು, ಚಂದ್ರ, ಅಗ್ನಿಗಳಿಂದ ಶಕ್ತಿಯನ್ನು ಸೃಷ್ಟಿಸುವುದು, ವಿನಿಯೋಗವಿಧಾನಗಳು, ಅಣುವಿಚ್ಛೇದನ ವಿಧಾನಗಳು ಈ ಶಾಸ್ತ್ರದಲ್ಲಿ ಹೇಳಲಾಗಿದೆ.

ಕಾಮಶಾಸ್ತ್ರ:
ವಾತ್ಸಾಯನ ಮಹರ್ಷಿ ಬರೆದಿದ್ದಾರೆ. ಈ ಶಾಸ್ತ್ರದಲ್ಲಿ ರತಿಕ್ರಿಯಾ ಭಂಗಿಗಳು ಸ್ತ್ರೀಪುರುಷ ಮನಸ್ತತ್ವಗಳು, ಆರೋಗ್ಯ ಪದ್ಧತಿಗಳು ದೇಹಶಕ್ತಿಯನ್ನು ವೃದ್ಧಿಮಾಡುವ ವಿಷಯಗಳು ಆಹಾರ ವಿಷಯಗಳು ರತಿಸಂಕೇತಗಳು ಮುಂತಾದ ವಿಷಯಗಳಿವೆ.

  ತೊಗರಿಬೇಳೆ ದಾನದ ಮಹತ್ವ

ಸೌದಾಮಿನಿ ಶಾಸ್ತ್ರ:
ಸೌದಾಮಿನೀ ಶಾಸ್ತ್ರ ಮತಂಗಋಷಿ ಬರೆದಿದ್ದಾರೆ. ಮನುಷ್ಯರನ್ನು ನೋಡಿ ಬುದ್ಧಿಯನ್ನು ಕಂಡುಹಿಡಿಯುವ ಪದ್ಧತಿ; ನೆರಳನ್ನು ನೋಡಿ ವರ್ತನೆಗಳನ್ನು ಕಂಡುಹಿಡಿಯುವ ಪದ್ಧತಿ ; ಚೇಷ್ಟೆಗಳನ್ನು ನೋಡಿ ಅದೃಷ್ಟವನ್ನು ಹೇಳುವ ಪದ್ಧತಿ ; ಭೂಗರ್ಭ ಪರ್ವತಗರ್ಭಗಳನ್ನು ಪರೀಕ್ಷಿಸುವ ರಹಸ್ಯಗಳು ಈ ಶಾಸ್ತ್ರದಲ್ಲಿವೆ.

ಮೇಘಶಾಸ್ತ್ರ:
ಅತ್ರಿಮುನಿಗಳು ಬರೆದಿದ್ದಾರೆ. ಹನ್ನೆರಡು ಬಗೆಯ ಮೇಘಗಳು, ಹನ್ನೆರಡು ಬಗೆಯ ಮಳೆಗಳು, ಅರವತ್ನಾಲ್ಕು ಬಗೆಯ ಮಿಂಚುಗಳು, ಮುವ್ವತ್ತಮೂರು ಬಗೆಯ ಸಿಡಿಲುಗಳು ಮತ್ತು ಮೇಘಗಳ ಬಗ್ಗೆ ತಿಳಿಯಬೇಕಾದ ವಿಷಯಗಳು ಈ ಶಾಸ್ತ್ರದಲ್ಲಿವೆ.

ಯಂತ್ರಶಾಸ್ತ್ರ:
ಭರದ್ವಾಜ ಮಹರ್ಷಿ ರಚಿಸಿದ್ದಾರೆ ಈಗ ನಾವು ನೋಡುತ್ತಿರುವ ಎಲ್ಲಾ ಯಂತ್ರಸಾಧನಗಳ ನಿರ್ಮಾಣಗಳನ್ನು ಆ ಕಾಲದಲ್ಲಿಯೇ ವಿವರಿಸಿದ್ದಾರೆ. ವಿಮಾನ, ರೈಲು, ನೌಕೆ, ಸ್ವಯಂಚಾಲಿತ ಯಂತ್ರಗಳು ದೂರವಾಣಿ ಆಕಾಶವಾಣಿ (ರೇಡಿಯೋ) ಮುಂತಾದ ನಿರ್ಮಾಣರಹಸ್ಯಗಳು ಈ ಶಾಸ್ತ್ರದಲ್ಲಿ ವಿವರಿಸಲಾಗಿದೆ. 339 ಭೂವಾಹನಗಳು, 783 ಜಲವಾಹನಗಳು 101 ಆಕಾಶವಾಹನಗಳ ನಿರ್ಮಾಣಗಳು ಈ ಶಾಸ್ತ್ರದಲ್ಲಿವೆ.

ಸ್ಥಾಪತ್ಯಶಾಸ್ತ್ರ:
ಈ ಶಾಸ್ತ್ರವು ‘ಅಥರ್ವವೇದ’ ದಲ್ಲಿದೆ. (ಸ್ಥಾಪತ್ಯವೆಂದರೆ ಇಂಜನಿಯರಿಂಗ್! ಸ್ತಪತಿ ಎಂದರೆ ಇಂಜನಿಯರ್) ಈ ಶಾಸ್ತ್ರದಲ್ಲಿ ಭವನ ನಿರ್ಮಾಣಗಳು, ನಗರ ನಿರ್ಮಾಣಗಳು ಈ ಶಾಸ್ತ್ರದಲ್ಲಿವೆ.

ವೈದ್ಯಶಾಸ್ತ್ರ:
ವೈದ್ಯಶಾಸ್ತ್ರವನ್ನೇ ಆಯುರ್ವೇದವೆನ್ನುತ್ತಾರೆ. ಇದು ಭಗವಾನ್ ಧನ್ವಂತರಿಯಿಂದ ಪ್ರಾಪ್ತವಾಗಿದೆ. ಸ್ವರ್ಗಲೋಕದಿಂದ ಭರದ್ವಾಜಋಷಿ ಭೂಲೋಕಕ್ಕೆ ತಂದಿದ್ದಾನೆ.
ಚರಕಮುನಿ ಈ ಶಾಸ್ತ್ರವನ್ನು ಗ್ರಂಥಸ್ಥ ಮಾಡಿದ್ದಾನೆ. ಸುಶೃತನು ಜನಪರಿಚಯ
ಮಾಡಿದ್ದಾನೆ. ಕೇವಲ ಔಷಧಗಳಲ್ಲದೇ ಶಸ್ತ್ರ ಚಿಕಿತ್ಸೆಗಳು (ಪ್ಲಾಸ್ಟಿಕ್ ಸರ್ಜರೀ
ಮುಂ.) ಆ ಕಾಲದಲ್ಲೇ ಮಾಡುತ್ತಿದ್ದ
ನಿದರ್ಶನಗಳಿವೆ.

ಅಸ್ತ್ರಶಾಸ್ತ್ರ:
ಬ್ರಹ್ಮರ್ಷಿ ವಿಶ್ವಾಮಿತ್ರ ಬರೆದಿದ್ದಾರೆ. ಮಹಾಮಹಿಮೆಯುಳ್ಳ ಅನೇಕ ದಿವ್ಯಾಸ್ತಗಳು ಬ್ರಹ್ಮಾಸ್ತ್ರ, ವಾರುಣಾಸ್ತ್ರ, ಅನ್ನೇಯಾಸ್ತ, ನಾರಾಯಣಾಸ್ತ್ರ, ಪಾಶುಪತಾಸ್ತ್ರ ಮುಂತಾದವಗಲನ್ನು ಈ ಧನುರ್ವೇದಶಾಸ್ತ್ರದಲ್ಲಿ ಪ್ರಯೋಗ ಉಪಸಂಹಾರಗಳನ್ನು ವಿವರಿಸಲಾಗಿದೆ.

ಗಂಧರ್ವಶಾಸ್ತ್ರ:
ಭರತಮುನಿ ಬರೆದಿದ್ದಾರೆ. ಇದರಲ್ಲಿ ನಾಟ್ಯ ಸಂಗೀತ, ಗಾಯನಾದಿಗಳ ವಾದ್ಯತಾಳಗಳ ಬಗ್ಗೆ ವಿಫುಲವಾಗಿ ವಿವರಿಸಲಾಗಿದೆ.

ಇನ್ನೂ ಅನೇಕ ಶಾಸ್ತ್ರಗಳಿವೆ, ಅನೇಕ ಧರ್ಮಶಾಸ್ತ್ರಗಳಿವೆ. ಎಲ್ಲವನ್ನೂ ಇಲ್ಲಿ ತಿಳಿಸಲಾಗುತ್ತಿಲ್ಲ.

Leave a Reply

Your email address will not be published. Required fields are marked *

Translate »