ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕನ್ನಡ ಹಾಸ್ಯ ಬರಹ – Kannada Jokes

ಇದೀಗ ಬಂದ ಸುದ್ದಿ ಯುವತಿ ಕೇವಲ ಐದು ನಿಮಿಷದಲ್ಲೇ ಸೀರೆ ಸೆಲೆಕ್ಟ್ ಮಾಡಿದ್ದನ್ನು ನೋಡಿ ದಿಗಿಲುಗೊಂಡು ಸೀರೆ ತೋರಿಸುತ್ತಿದ್ದ ಹುಡುಗ ಹೃದಯಾಘಾತದಿಂದ ಸ್ಥಳದಲ್ಲೇ ಸಾವು😊😀 😂

———————-

ದೆಹಲಿಯ ಲೇಡಿಸ್ ಹಾಸ್ಟೆಲ್ ಮುಂದೆ ತರಕಾರಿ ಮಾರುವವನಿಗೆ ಹುಡುಗಿಯರೆಲ್ಲಾ ಸೇರಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಕಾರಣ:- ತರಕಾರಿ ಮಾರುವವನು “ಕ್ಯಾ ರೇಟ್ ಕ್ಯಾ ರೇಟ್” ಎಂದು ಕೂಗುತ್ತಿದ್ದನಂತೆ! 😜 😂 
——————–

ತಿಮ್ಮ : ಅಲ್ಲೋ ಕಾಲಿಗೆ ಹಾವು ಕಚ್ಚಿ
ಇನ್ನೂ ಐದು ನಿಮಿಷ ಆಗಲಿಲ್ಲ.
ಅಷ್ಟರಾಗ ಹೆಂಗ ಸತ್ತ..?

ಗುಂಡ : ತಲೀಗೆ ವಿಷ ಏರತ್ತೋ
ಏನೋ ಅಂತ….
ಕುತ್ತಿಗೀಗೆ ಜೋರಾಗಿ ಹಗ್ಗ ಬಿಗಿದಿದ್ವಿ..!

😳😳😱😱😆😆😂

ಟೀಚರ್:- ಆನೆ ದೊಡ್ಡದಾ? ಇರುವೆ ದೊಡ್ಡದಾ???
ಸರ್ದಾರ್ ನ ಮಗ:- ಹಾಗೆಲ್ಲಾ ಸುಮ್ ಸುಮ್ನೆ ಹೇಳಕ್ಕಾಗಲ್ಲಾ.. DATE OF BIRTH ಬೇಕು,,,

—————–

ಬಾಸ್ : ನೆನ್ನೆ ಯಾಕ್ರಿ ಕೆಲ್ಸಕ್ಕೆ ಬರ್ಲಿಲ್ಲ?😠

ನಾನು : ಕ್ಯಾಲೆಂಡರಲ್ಲಿ ರೆಡ್ ನಂ. ತೋರಿಸ್ತಿತ್ತು ಅಂತ ರಜ ಹಾಕ್ದೆ.😞
ಸಂಜೆ ಗೊತ್ತಾಯ್ತು ಹೊಸ ಕ್ಯಾಲೆಂಡರ್ ಪೂಜೆಗೆ ನಮ್ಮಜ್ಜಿ ಕುಂಕುಮ ಹಚ್ಚಿದ್ರು ಅಂತ!😒

  ಶಿವ - ತಪಸ್ಸು - ವರ -- ಮಹಿಳೆ - ಬುದ್ಧಿವಂತೆ

————————-

ಡಾಕ್ಟರ್ – ಹುಂ.. ಏನ್ ತಿಂಡಿ ತಿಂದಿದ್ಯವ್ವಾ?

ಹುಡ್ಗಿ- ಐ ಈಟ್ ಹಂಬರ್ಗರ್, ಫ್ರೆಂಚ್ ಫ್ರೈಸ್, ಕೋಕ್ and ಕಾರ್ನ್ ಪಿಜ್ಜಾ..

ಡಾಕ್ಟರ್- ಇದು ಫೇಸ್‘ಬುಕ್ ಅಲ್ಲವ್ವಾ.. ಖರೇ ಹೇಳ್ ಏನ್ ತಿಂದಿ?

ಹುಡ್ಗಿ- ರೊಟ್ಟಿ ಜೊತಿ ಬದ್ನೀಕಾಯಿ ಪಲ್ಯಾರೀ..
😂😂😂😂

———————-

ಹಾಸ್ಯ

ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚ್ ಡೈಲಾಗ್ ಹೇಳಿ..

ಗುಂಡ : ” ಕರ್ಕೊಂಡ್ ಬನ್ನಿ,
ಹೊತ್ಕಂಡ್ ಹೋಗಿ,
ಹಣ ನಮಗೆ,
ಹೆಣ ನಿಮಗೆ ” 😂😂😂😂😂

—————

ಮಾಸ್ತರ: ರಾಮ್ಯಾ, ಹೇಳಲೇ ತತ್ತಿ ಮೊದಲ ಬಂತೋ ಏನ್ ಕೋಳಿ 🐓ಮೊದಲ ಬಂತೋ..?

ರಾಮ್ಯಾ: ಸರ್‌ ತತ್ತಿ ಬಂತ್ರಿ..

ಮಂಜ್ಯಾ: ಸರ ಅವಂಗ ಗೊತ್ತಿಲ್ಲರೀ, ಅಂವಾ ಅಭ್ಯಾಸ ಮಾಡಿಲ್ಲರಿ, ನಾ ಹೇಳಲೆನ್ರಿ..?

ಮಾಸ್ತರ: ಹೇಳಪಾ, ನೀನ ಹೇಳ.

ಮಂಜ್ಯಾ: ಸರ ಮೊದಲ ಬೀರ್ 🍾ಬಂತರಿ,
ಆಮೇಲೆ ಶೇಂಗಾ ಬಂತರಿ, ಆಮೇಲೆ ತತ್ತಿ ಬಂತರಿ,
ಆಮೇಲೆ ಕೋಳಿ ಬಂತರಿ
ಲಾಸ್ಟಗೆ 850/- ಬಿಲ್ಲ್ ಬಂತರಿ ಸರಾ..
😀😄😜😜😂😂😂

  ತಾಳ್ಮೆಯ ಪಾಠ

——————-

ಟೀಚೆರ್ : ಗುಂಡ ” ಗಂಡ ಬೇರುಂಡ ” ಎಂದರೆ ಏನು ? ವಿವರಿಸು ?
ಗುಂಡ : ಅದು ತುಂಬಾ ಸುಲುಭ ಮೇಡಂ . ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ.

” ಗಂಡ” “ಬೇರೆ” “ಉಂಡ ” 
😁😊😁😊😁😊😁😊

—————

-ನ್ಯಾಯಾಲಯದಲ್ಲಿ-

ಜಡ್ಜ್ – ಈ ಗುಂಡನ ಎರಡೂ ಕಿವಿ ಕಟ್ ಮಾಡಿ🤕

ಗುಂಡ – ಬ್ಯಾಡಾ ಸ್ವಾಮಿ ಕಿವಿ ಏನಾರ ಕಟ್ ಮಾಡಿದ್ರ ನಾ ಕುರುಡ ಆಗ್ತೀನಿ..

ಜಡ್ಜ್ – ಲೇ ಹುಚ್ಚಾ ಕಿವಿ ಕತ್ತuರಿಸಿದ್ರ ಕುರುಡ ಹೆಂಗ ಆಗ್ತೀ ಲೇ..⁉️

ಗುಂಡ – ಚಷ್ಮಾದ ಕಡ್ಡಿ ಏನ್ ನಿನ್ನ ಕಿವ್ಯಾಗ ಇಡ್ಲ್ಯಾ..❓
😭😵

——————–

ಹುಡುಗ: ಮಸ್ತ ಡ್ರೆಸ್ ಹಾಕಿ ಅಲಾ
ಹುಡುಗಿ: ಥ್ಯಾಂಕ್ಸ್
ಹುಡುಗ: ಲಿಫ್ಟಿಕ್ ಅಂತೂ ಬಾರಿ ಐತಿ
ಹುಡುಗಿ: ಥ್ಯಾಂಕ್ಸ್
ಹುಡುಗ: ಮೇಕಪ್ ಅಂತು ಖತರನಾಕ
ಹುಡುಗಿ: ಥ್ಯಾಂಕ್ಸ್ *ಅಣ್ಣಾ*
ಹುಡುಗ: ಆದರೂ ಎ‌ನ್ ಬಿಡವಾ ಚಂದ ಕಾಣವಲ್ಲಿ.

  ಉತ್ತರಾಖಂಡದಲ್ಲಿದೆ ಊಖಿ ಮಂದಿರ - ಉಷೆ ಮಠ

😂😂😂😂😂😂
————————-
ಭಿಕ್ಷುಕ : ಮಗ ತಿನ್ನಲಿಕ್ಕೆ ಏನಾದರೂ ಕೊಡು,

ಗುಂಡ : ನಿನಗೆ ಕೊಟ್ಟ್ರೆ ನನಗೆ ಏನು ಸಿಗುತ್ತೆ

ಭಿಕ್ಷುಕ : ನಿನಗೆ ಸ್ವರ್ಗ ಸಿಗುತ್ತೆ,

ಗುಂಡ : ನಿಂಗೆ ಬೆಂಗಳೂರು ಕೊಡುತ್ತಿನಿ,

ಭಿಕ್ಷುಕ : ಬೆಂಗಳೂರು ಏನು ನಿಂದಾ,

ಗುಂಡ : ಮತ್ತೆ ಸ್ವರ್ಗ ಏನು ನಿಮ್ಮಪ್ಪಂದಾ,😆😆😂😂😂

ನೀವೂ ನಗುವದು ಮಾತ್ರ ಅಲ್ಲ ಬೇರೆಯವರಿಗೂ ಕಳಿಸಿ ಯಾಕೆಂದರೆ ನಗುವದಕ್ಕೂ ಸಮಯ ಇಲ್ಲದಂತೆ ಆಗಿದೆ ಜೀವನ…

One thought on “ಕನ್ನಡ ಹಾಸ್ಯ ಬರಹ – Kannada Jokes

  1. ಕಚಗುಳಿ
    ಹುಡುಗ – ನನ್ನ ಕಣ್ಣು ಸೇಳೆಯಿತು ನಿನ್ನಾ ಯೌವನ,
    ಹುಡುಗಿ-ಯಾಕ್ಲೇ ನಿಮ್ಮವನ.

Leave a Reply

Your email address will not be published. Required fields are marked *

Translate »