ನೊಕುಶಿಗೆ ಎಂಬ ಸೈನಿಕನು ಹಕುಯಿನ್ ಝೆನ್ ಗುರುಗಳ ಬಳಿ ಬಂದು , “ನಿಜವಾಗಿಯೂ ಸ್ವರ್ಗ ಮತ್ತು ನರಕ ಎಂಬುದಿದೆಯೇ?” ಎಂದು ಕೇಳಿದನು.
“ನೀನು ಯಾರು?” ಎಂದು ವಿಚಾರಿಸಿದರು ಹಕುಯಿನ್ ಗುರುಗಳು . “ನಾನು ಒಬ್ಬ ಸಮರ್ಥ ಸಮುರಾಯ್ ಯೋಧ ಆಗಿದ್ದೇನೆ” ಎಂದು ಸೈನಿಕನು ಉತ್ತರಿಸಿದನು.
“ಒಹೋ , ನೀನು ಸೈನಿಕ!” ಎಂದು ಹಕುಯಿನ್ ಉದ್ಗರಿಸಿದನು. “ಯಾವ ರೀತಿಯ ಆಡಳಿತಗಾರನು ಅಥವಾ ರಾಜನು ನನ್ನನ್ನು ತನ್ನ ಕಾವಲುಗಾರನಾಗಿ ಹೊಂದುತ್ತಾನೆ ? ನಿಮ್ಮ ಮುಖವು ಒಳ್ಳೆ ಭಿಕ್ಷುಕನಂತೆ ತೋರುತ್ತಿದೆ.” ಎಂದು ಹಂಗಿಸಿದನು. ನೊಕುಶಿಗೆ ಆ ಮಾತುಗಳನ್ನು ಕೇಳಿ ತುಂಬ ಕೋಪದಿಂದ, ಅವನು ತನ್ನ ಸೊಂಟದಲ್ಲಿದ್ದ ಕತ್ತಿ ತೆಗೆಯಲು ಪ್ರಾರಂಭಿಸಿದನು, ಆದರೆ ಹಕುಯಿನ್ ಮುಂದುವರಿಸಿದರು:” ಒಹೋ ನೀವು ಖಡ್ಗವನ್ನು ಹೊಂದಿದ್ದೀರಿ! ನನ್ನ ತಲೆಯನ್ನು ಕತ್ತರಿಸಲು ನಿಮ್ಮ ಶಸ್ತ್ರ ಬಹುಶಃ ತುಂಬಾ ಮೊಂಡಾಗಿದೆ ಅನ್ನಿಸುತ್ತಿದೆ. ” ಎಂದು ನಗುತ್ತ ಹೇಳಿದರು.
ನೊಕುಶಿಗೆ ತನ್ನ ಖಡ್ಗವನ್ನು ಎತ್ತಿಹಿಡಿಯುತ್ತಿದ್ದಂತೆ ಹಕುಯಿನ್ “ಇದುವೇ ನರಕದ ಬಾಗಿಲು, ತೆಗೆದಿದೆ ನಿನಗೆ ! ” ಈ ಮಾತುಗಳನ್ನು ಕೇಳಿ , ಸಮುರಾಯ್ ಯೋಧ ಪಶ್ಚಾತ್ತಾಪ ಪಟ್ಟು ತನ್ನ ಕೋಪವನ್ನು ನಿಗ್ರಹಿಸಿ ತನ್ನ ಕತ್ತಿಯನ್ನು ಕೆಳಗಿರಿಸಿ , ಗುರುಗಳಿಗೆ ತಲೆ ಬಾಗಿದನು.
“ಈಗ ಸ್ವರ್ಗದ ಬಾಗಿಲು ತೆರೆಯಿತು” ಎಂದು ಹಕುಯಿನ್ ಮತ್ತೊಮ್ಮೆ ನಗು ನಗುತ್ತ ಹೇಳಿದರು.
ನೀತಿ – ಅರಿಷಡ್ವರ್ಗ ಗಳನ್ನೂ ನಿಗ್ರಹಿಸುವುದೆ ಸ್ವರ್ಗಕ್ಕೆ ದಾರಿ ಎಂದು ಈ ಝೆನ್ ಕಥೆ ತಿಳಿಸುತ್ತದೆ.