ಈ ಝೆನ್ ಮಾತುಕತೆ – ಪ್ರಶ್ನೆ – ಉತ್ತರ – Zen Question Answer ಎಂಬ ಝೆನ್ ಕಥೆ [ zen story ] ಯಲ್ಲಿ ಎರಡು ಝೆನ್ ದೇವಾಲಯದ ಕಿರಿಯ ಶಿಷ್ಯಂದಿರಾ ಕೊನೆಯಿಲ್ಲದ ಪ್ರಶ್ನೆ – ಉತ್ತರದ [ question- answer ] ಮಾತುಕತೆಯನ್ನು ನೀಡಲಾಗಿದೆ. ನಾವು ಇನ್ನೊಬರಿಂದ ಏನನ್ನದರು ನಿರೀಕ್ಷಿಸುವುದು ತಪ್ಪು ಎಂಬ ನೀತಿಕಥೆಯ ಮೇಲೆ ಈ ಝೆನ್ ಕಥೆ ಹೆಣೆಯಲಾಗಿದೆ.
ಝೆನ್ ಮಾತುಕತೆ – ಪ್ರಶ್ನೆ – ಉತ್ತರ – Zen Question Answer
ಝೆನ್ ಶಿಕ್ಷಕರು ತಮ್ಮ ಯುವ ವಿದ್ಯಾರ್ಥಿಗಳನ್ನು ತಮ್ಮ ಇಷ್ಟದಂತೆ ಭಾವನೆಗಳನ್ನು ವ್ಯಕ್ತಪಡಿಸಲು ತರಬೇತಿ ನೀಡುತ್ತಾರೆ. ಎರಡು ಝೆನ್ ದೇವಾಲಯಗಳಲ್ಲಿ ಪ್ರತಿಯೊಬ್ಬರೂ ಕಿರಿಯ ಝೆನ್ ಮಕ್ಕಳ ಶಿಕ್ಷಕರಾಗಿದ್ದರು. ಒಂದು ಮಗು, ಪ್ರತಿ ದಿನ ಬೆಳಗ್ಗೆ ತರಕಾರಿಗಳನ್ನು ತರುವಾಗ ದಾರಿಯಲ್ಲಿ ಇನ್ನೊಂದು ಝೆನ್ ದೇವಾಲಯದ ಮಗುವನ್ನು ಭೇಟಿಯಾಗುವುದು.
“ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ತರಕಾರಿ ತರಲು ಹೊರಟಿದ್ದ ಮಗು ಕೇಳಿತು.
“ನನ್ನ ಪಾದಗಳು ಎಲ್ಲಿಗೆ ಹೋದರೂ ನಾನು ಅಲ್ಲಿಗೆ ಹೋಗುತ್ತಿದ್ದೇನೆ” ಎಂದು ಇನ್ನೊಂದು ಝೆನ್ ದೇವಾಲಯದ ಮಗು ಪ್ರತಿಕ್ರಿಯಿಸಿತು.
ಈ ಉತ್ತರವು ಮೊದಲ ಮಗುವನ್ನು ಗೊಂದಲಕ್ಕೆ ದೂಡಿತು , ಅದು ಸಹಾಯಕ್ಕಾಗಿ ತನ್ನ ಶಿಕ್ಷಕರ ಬಳಿ ಹೋಗಿ ತನ್ನ ಗೊಂದಲವನ್ನು ತಿಳಿಸಿತು. ಶಿಕ್ಷಕನು ಅವನಿಗೆ, “ನಾಳೆ ಬೆಳಿಗ್ಗೆ ಆ ಚಿಕ್ಕ ಸಹೋದರನನ್ನು ನೀನು ಭೇಟಿಯಾದಾಗ, ಅವನಿಗೆ ಅದೇ ಪ್ರಶ್ನೆಯನ್ನು ಕೇಳು . ಅವನು ನಿಮಗೆ ಅದೇ ಉತ್ತರವನ್ನು ಕೊಡುತ್ತಾನೆ, ಆಗ ನೀನು ಅವನನ್ನು ಕೇಳು: ‘ನಿನ್ನಲ್ಲಿ ಯಾವುದೇ ಪಾದಗಳಿಲ್ಲ ಎಂದಾದರೆ , ಹಾಗಾದರೆ ನೀವು ಎಲ್ಲಿಗೆ ಹೋಗುತ್ತೀರಿ?’ ಅಗ ಅವನು ತನ್ನ ಉತ್ತರವನ್ನು ಸರಿಪಡಿಸಿಕೊಳ್ಳುತ್ತಾನೆ. ” ಎಂದು ಹೇಳಿ ಕಳುಹಿಸಿದರು.
ಮರುದಿನ ಬೆಳಿಗ್ಗೆ ಮಕ್ಕಳು ಪುನಹ ಭೇಟಿಯಾದರು.
“ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಮೊದಲ ಮಗು ಕೇಳಿತು.
“ಗಾಳಿ ಬೀಸುವಲ್ಲೆಲ್ಲಾ ನಾನು ಹೋಗುತ್ತಿದ್ದೇನೆ” ಎಂದು ಉತ್ತರಿಸಿದನು ಎರಡನೇ ಝೆನ್ ದೇವಾಲಯದ ಮಗು.
ಮೊದಲ ಮಗುವನ್ನು ಇದು ಮತೊಮ್ಮೆ ಗೊಂದಲಕ್ಕೆ ದೂಡಿತು , ಅದು ಸಹಾಯಕ್ಕಾಗಿ ತನ್ನ ಶಿಕ್ಷಕರ ಬಳಿ ಪುನಹ ಹೋಯಿತು.
“ಗಾಳಿ ಇಲ್ಲದಿದ್ದರೆ ಅವನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಈ ಬಾರಿ ಕೇಳಿ” ಎಂದು ಶಿಕ್ಷಕನು ಮಗುವಿಗೆ ಸಲಹೆ ನೀಡಿದರು.
ಮರುದಿನ ಮಕ್ಕಳು ಮೂರನೆಯ ಬಾರಿಗೆ ಭೇಟಿಯಾದರು.
“ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಮೊದಲ ಮಗು ಕೇಳಿತು.
“ನಾನು ತರಕಾರಿಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗುತ್ತಿದ್ದೇನೆ” ಎಂದು ಮತ್ತೊಂದು ಮಗು ಉತ್ತರಿಸಿದನು.
“ಮಾರುಕಟ್ಟೆ ಇಲ್ಲದಿದ್ದರೆ ನೀವು ಎಲ್ಲಿಗೆ ಹೋಗುತ್ತೀದ್ದೀರಿ?” ಎಂದು ಮೊದಲ ಮಗುವು ಮರು ಪ್ರಶ್ನೆ ಮಾಡಿತು.
“ನಂತರ ನಾನು ಮನೆಗೆ ಹೋಗುತ್ತೇನೆ” ಎಂದು ಮತ್ತೊಂದು ಮಗು ಉತ್ತರಿಸಿದನು.
“ಮನೆ ಇಲ್ಲದಿದ್ದರೆ ನೀವು ಎಲ್ಲಿಗೆ ಹೋಗುತ್ತೀರಿ?” ಎಂದು ಮೊದಲ ಮಗು ಕೇಳಿತು.
“ನಾನು ಎಲ್ಲಿಗೆ ಹೋದರೂ, ಮನೆ ನನ್ನ ಮಾರ್ಗದಲ್ಲಿದೆ” ಮತ್ತೊಂದು ಮಗು ಉತ್ತರಿಸಿದನು.
“ಯಾವುದೇ ಮಾರ್ಗವಿಲ್ಲದಿದ್ದರೆ ನೀವು ಎಲ್ಲಿಗೆ ಹೋಗುತ್ತೀದ್ದೀರಿ ?” ಎಂದು ಮೊದಲ ಮಗು ಕೇಳಿತು.
” ನಿಮ್ಮಿಂದ ಈ ಪ್ರಶ್ನೆ ನಿರೀಕ್ಷಿಸಿದ್ದೆ . ನೀವು ಕೇವಲ ನಿಮಗೆ ಬೇಕಾದ ಉತ್ತರಗಳಿಗಾಗಿ ನಿರೀಕ್ಷಣೆಯಲ್ಲಿರುವರು. ನಾನು ನಿಮಗೆ ಏನಾದರೂ ಕೇಳಬಹುದೇ? ಯಾವುದೇ ಪ್ರಶ್ನೆಗಳಿಲ್ಲದಿದ್ದರೆ ನೀವು ಏನು ಕೇಳುತ್ತೀರಿ? “ಎಂದು ಮತ್ತೊಂದು ಮಗು ಪ್ರಶ್ನೆಯ ಜೊತೆ ಉತ್ತರಿಸಿತು.