ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮೈಲಾರಲಿಂಗೇಶ್ವರ ಅವತಾರ ಮತ್ತು ಆದಿಶಕ್ತಿ ಗಂಗೀ ಮಾಳಮ್ಮ ದೇವಿ

ಆದಿಶಕ್ತಿ ಗಂಗೀ ಮಾಳಮ್ಮ ದೇವಿ..!

ಗಂಗೀ ಮಾಳಮ್ಮದೇವಿಯನ್ನು ತಿಳಿದುಬೇಕಾದರೆ ಮೊದಲು ಮೈಲಾರೇಶ್ವರನ ಕುರಿತು ಸ್ವಲ್ಪ ತಿಳಿಯಬೇಕು. ಮೈಲಾರಲಿಂಗೇಶ್ವರದ ದೇವಾಲಯದ ಕಾರ್ಣಿಕ ಹೇಳುವ ಭವಿಷ್ಯಕ್ಕಾಗಿ ಜನರು ಕಾತುರದಿಂದ ಕಾಯುತ್ತಾರೆ ಮತ್ತು ಈ ಕಾರ್ಣಿಕ ನುಡಿಯಲ್ಲಿ ಪ್ರಸಕ್ತ ವರ್ಷದ ಮಳೆ, ಬೆಳೆ, ರಾಜಕೀಯದ ಏಳು-ಬೀಳು, ಆರ್ಥಿಕ, ವಾಣಿಜ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳು ಹಾಗೂ ದೇಶದ ಭವಿಷ್ಯ ಅಡಗಿರುತ್ತದೆ ಎಂಬ ನಂಬಿಕೆ ಇದೆ. ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ‘ಮೈಲಾರ’ ಎಂಬಲ್ಲಿ ಇದೆ.
ಇತಿಹಾಸ ಪ್ರಸಿದ್ಧವಾದ ಮೈಲಾರಲಿಂಗೇಶ್ವರನ ಪವಾಡಗಳನ್ನು ಮತ್ತು ಜಾತ್ರೆಯನ್ನು ನೋಡಲು ಪ್ರತಿ ವರ್ಷ ರಾಜ್ಯ ಮತ್ತು ಅಂತರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮೈಲಾರಲಿಂಗೇಶ್ವರ ಅವತಾರದ ಕುರಿತಾಗಿ ಒಂದು ಕಥೆ ಇದೆ.

ಪುರಾಣದ ಪ್ರಕಾರ ಈ ಕ್ಷೇತ್ರದಲ್ಲಿ ಮಣಿ ಮತ್ತು ಮಲ್ಲ ಎಂಬ ರಾಕ್ಷಸರು ಇದ್ದು,
ದೇವತೆಗಳಿಗೆ ಋಷಿಮುನಿಗಳಿಗೆ ಸಾಮಾನ್ಯ ಜನರಿಗೆ ಬಹಳ ತೊಂದರೆಯನ್ನು ಕೊಡುತ್ತಿದ್ದರು. ಇವರ ಕಾಟ ಸಹಿಸಲು ಆಗದೆ ದೇವತೆಗಳು ಮತ್ತು ಋಷಿ ಮುನಿ ಗಳು ಶಿವನಲ್ಲಿ ಬೇಡಿ ಪ್ರಾರ್ಥಿಸುತ್ತಾರೆ. ಹೇಗಾದರೂ ಮಾಡಿ ಈ ರಾಕ್ಷಸರನ್ನು ಸಂಹಾರ ಮಾಡಿ ನಮ್ಮ ನಿತ್ಯ ಕರ್ಮ ಅನುಷ್ಠಾನ ಪೂಜೆಗಳು
ಅಡೆತಡೆ ಇಲ್ಲದೆ ನಿರ್ವಘ್ನವಾಗಿ ನಡೆಯುವಂತೆ ಮಾಡು ಎಂದು ಪ್ರಾರ್ಥಿಸಿ ದರು. ಪರಮೇಶ್ವರನು ಅವರ ಪ್ರಾರ್ಥನೆಗೆ ಒಲಿದು, ರಾಕ್ಷಸರನ್ನು ಸಂಹಾರ ಮಾಡಲು, ಶಿವನ ಹಲವಾರು ಅವತಾರಗಳಲ್ಲಿ ಒಂದಾದ ‘ಮೈಲಾರ’ ಅವತಾರ ಧರಿಸಿ ಬಂದು ಏಳು ಸಹಸ್ರ ಗೊರವರನ್ನು ಜೊತೆ ಮಾಡಿಕೊಂಡು ಮಣಿ ಮತ್ತು ಮಲ್ಲ ರಾಕ್ಷಸರು ಹಾಗೂ ಅವರ ಸೈನಿಕರನ್ನು ನಾಶಪಡಿಸಿದನು.‌ ಈ ಸಮಯದಲ್ಲಿ ಆ ರಾಕ್ಷಸರ ರಕ್ತ ಭೂಮಿಯ ಮೇಲೆ ಬಿದ್ದು ಮತ್ತೆ ರಕ್ತಬೀಜಾ ಸುರನಂತೆ ಸಹಸ್ರಾರು ರಾಕ್ಷಸರು ಹುಟ್ಟಿಕೊಳ್ಳಬಾರದೆಂದು ತಾಯಿ ಪಾರ್ವತಿ ದೇವಿ “ಗಂಗೀ ಮಾಳಮ್ಮನ” ರೂಪ ಧರಿಸಿ ಭೂಮಿಗೆ ಬಂದು ತನ್ನ ನಾಲಿಗೆ ಯನ್ನು 10 ಯೋಜನೆಗಳ ದೂರ ಹಾಸಿ ರಾಕ್ಷಸರ ರಕ್ತವನ್ನೆಲ್ಲ ಹೀರಿದಳು. ಈ ರೀತಿ ಮಣಿ ಮಲ್ಲರ ಸಂಹಾರವಾಗಿ ಲೋಕದಲ್ಲಿ ಶಾಂತಿ ನೆಲೆಸುತ್ತದೆ. ಈ ಕಾರಣದಿಂದ ಗೊರವರ ಕುಲದೇವನಾಗಿ ‘ಮೈಲಾರ’ ನಾಗಿ ನೆಲೆಸಿದನು.

  ಮಹಾಭಾರತದಲ್ಲಿ ಪಾಂಡವರ ಸಾವಿನ ಐದು ಚಿನ್ನದ ಬಾಣಗಳ ಕಥೆ

ಗಂಗೀಮಾಳಮ್ಮ ದೇವಿ:-

‘ಅಮ್ಮನ ಹಟ್ಟಿ’ ಎಂಬ ಪುಟ್ಟಗ್ರಾಮವು ಗಂಗಾ ಮಾಳಮ್ಮ ದೇವಿಯ ಕ್ಷೇತ್ರವಾಗಿದೆ. ಈ ಗ್ರಾಮದವರೆಲ್ಲರೂ ಗಂಗಾಮಾಳಮ್ಮ ದೇವಿಗೆ ನಡೆದುಕೊಳ್ಳುತ್ತಾರೆ. ಈ ದೇವಿಯ ಗುಡಿಯನ್ನು ಒಂದು ಗೂಡಿನಂತೆ ಕಟ್ಟಿದ್ದಾರೆ ಮೇಲೆ ಎಲೆ ಬಳ್ಳಿಗಳು ಹಬ್ಬಿದೆ. ದೇವಿ ಇದರೊಳಗೆ ನೆಲೆಸಿದ್ದಾಳೆ.
ಮಾಳಮ್ಮ ದೇವಿಗೆ ಈ ಕ್ಷೇತ್ರವೆಂದರೆ ಬಹಳ ಪ್ರಿಯವಂತೆ. ತಾಯಿಯ ಆವಾಸ ಸ್ಥಾನ ಹಲವಾರು ಕಡೆ ಇದ್ದರೂ ಎಲ್ಲಿಯೂ ನೆಲೆನಿಲ್ಲದೆ ಈ ಊರಿಗೆ ಬಂದು ನೆಲೆಸ ಬೇಕೆಂದು ಗ್ರಾಮದ ಮುಖ್ಯಸ್ಥನ ಕನಸಲ್ಲಿ ಬಂದು ಸೂಚನೆ ಕೊಟ್ಟಳು
ಆನಂತರ ,’ಅಮ್ಮನ ಹಟ್ಟಿ’ ಗ್ರಾಮದಲ್ಲಿ ದೇವಿ ನೆಲೆಸಿದಳು. ಮುಂದೆ ಗುಡಿಯಾಯಿತು ಭಕ್ತರ ಸಂಖ್ಯೆಯು ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರತೊಡಗಿದರು.

ಮೊದಮೊದಲು ಕೆಲವರು ದೇವಿಯ ಬಗ್ಗೆ ಹಗುರವಾಗಿ ಏನ್ಮಹಾ, ಎಂಬಂತೆ ಮಾತನಾಡಿದರು. ಅಂಥ ಒಬ್ಬನಿಗೆ ದೇವಿ ಎಚ್ಚರಿಕೆ ರೂಪದಲ್ಲಿ ನಾಳೆ ಬೆಳಗ್ಗೆ ನಿನ್ನನ್ನು ಹುಲಿ ಬಾಯಿಗೆ ತಳ್ಳುತ್ತೇನೆ ಎಂದು ದೇವಿ ವಿಗ್ರಹವು ಅಲ್ಲಾಡಿಸುತ್ತಾ ಸೂಚಿಸಿದಳು. ಆದರೂ ಆ ವ್ಯಕ್ತಿ ಎಲ್ಲಿಯ ಹುಲಿ ಎಲ್ಲಿಯ ದೇವಿ, ಗೊಂಬೆಯ ಹಾಗೆ ದೇವಿ ತಲೆ ಅಲ್ಲಾಡಿಸಿದರೆ ಇದು ನಂಬಿಕೆಯಲ್ಲ ಎಂದು ಉಪೇಕ್ಷೆ ಮಾಡಿ ದನು. ಮರುದಿನ ಬೆಳಗಾಗುವ ಹೊತ್ತಿಗೆ ಒಂದೆಡೆ ಜನ ಸೇರಿದ್ದರು. ಅಲ್ಲಿಗೆ ಬಂದ ಒಂದು ಹುಲಿ ಉಪೇಕ್ಷೆ ಮಾಡಿದ ವ್ಯಕ್ತಿಯನ್ನು ಎಳೆದಾಡಿ ಕೊಂದು ಹಾಕಿ, ಎಲ್ಲಾ ಜನಗಳು ನೋಡುತ್ತಿದ್ದಂತೆ ಕಾಡಿನತ್ತ ಓಡಿತಂತೆ. ಇದೇ ರೀತಿ ಇನ್ನೊಬ್ಬ ವ್ಯಕ್ತಿ ಗಂಗಮ್ಮನ ಮೂರ್ತಿಯನ್ನು ಮಾಡುವಾಗ ನಿರ್ಲಕ್ಷದಿಂದ, ದೇವಿಯನ್ನು ಕನ್ನಡಕ ಹಾಕಿಕೊಂಡು ನೋಡಿ ಹುಡುಕಿ ಎಂದನು. ಸ್ವಲ್ಪ ದಿನಗಳಲ್ಲಿ ಆ ವ್ಯಕ್ತಿ ಕಾಲು ಕಳೆದುಕೊಂಡು ಮತ್ತೆ ಕೆಲವು ದಿನಗಳಲ್ಲಿ ಮರಣ ಹೊಂದಿದನು.‌

  ರಂಗೋಲಿ ಏಕೆ ಹಾಕಬೇಕು ? ಕಲೆಯ ಹಿಂದಿನ ವೈಜ್ಞಾನಿಕ ವಿಚಾರ

ಮತ್ತೆ ಕೆಲವು ದೇವಿಯನ್ನು ನಂಬದ ‌ ವಿದ್ಯಾವಂತ ಯುವಕರು, ಇದೆಲ್ಲ ಮೂಢ ನಂಬಿಕೆ ಎಂದು ಅಪಹಾಸ್ಯ ಮಾಡಿ, ಹಲವಾರು ಕಷ್ಟ ನಷ್ಟಗಳಿಗೆ ಗುರಿಯಾಗಿ, ಯಾವುದೇ ಕ್ಷೇತ್ರ ಸುತ್ತಿ ಬಂದರೂ ಅವರ ಕಷ್ಟ ನಿವಾರಣೆ ಯಾಗಲಿಲ್ಲ ಯಾವ ವೈದ್ಯರನ್ನು ಕಂಡರೂ ರೋಗ ವಾಸಿಯಾಗಲಿಲ್ಲ. ಎಲ್ಲಾ ಕಡೆ ಸುತ್ತಿ ಬಂದು ದೇವಿಗೆ ಮೊರೆ ಹೋದರಂತೆ. ಕಾಯಾ, ವಾಚಾ, ಮನಸಾ ದೇವಿಗೆ ಮೊರೆ ಹೋದ ಕ್ಷಣದಲ್ಲಿಯೇ ಅವರ ದೇಹದಲ್ಲಿ ಮೆಟ್ಟಿಕೊಂಡ ನೀಚ ಶಕ್ತಿಗಳು ಬಿಟ್ಟು ಹೋದಂತೆ ಬಾಸವಾಗಿ ದೇಹ ಮನಸ್ಸು ಹಗುರವಾಯಿತಂತೆ. ಈ ರೀತಿ ಅನುಭವ ಆದವರು ತಮ್ಮ ಅನುಭವಗಳನ್ನು ಈಗಲೂ ಹೇಳುತ್ತಾರೆ.

ನಂಬಿಕೆ- ಅಪನಂಬಿಕೆಗಳ ಮೇಲೆ ತೂಗುಯ್ಯಾಲೆಯಲ್ಲಿ, ಇರುವವರ ಅನುಮಾನಗಳಿಗೆ ಉತ್ತರ ಕೊಟ್ಟು, ದೇವಿ ಸ್ಥಿರವಾಗಿ ಆ ಕ್ಷೇತ್ರದಲ್ಲಿ ನೆಲೆಸಿದಳು. ಗ್ರಾಮದವರ ಪಾಲಿಗೆ, ತಾಯಿಯಾಗಿ, ಮನೆ ದೇವತೆಯಾಗಿ, ಕುಲದೇವತೆ ಯಾಗಿ, ಊರದೇವಿ ಯಾಗಿ, ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೇವಿ ಕಳೆಯು ತ್ತಾಳೆ ಎಂದು ನಂಬಿ ಬಂದವರ ಬಾಳನ್ನು ಬಂಗಾರ ಮಾಡಿದ್ದಾಳೆ. ಭಕ್ತರ ಸಂಖ್ಯೆ ಅಪಾರವಾಗಿದೆ. ಆ ದೇವಿಯ ಮಹಿಮೆಯೋ ಎಂಬಂತೆ, ಮಕ್ಕಳಿಗೆ ಆಕೆಯ ಹೆಸರು ಅಥವಾ ಇಡುವ ಹೆಸರಿ ನೊಂದಿಗೆ ಆಕೆ ಹೆಸರನ್ನು ಸೇರಿಸಿ ಇಡುತ್ತಾರೆ. ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ ಎಂಬ ನಂಬಿಕೆಯ ಮೇಲೆ ಆ ಗ್ರಾಮದ ಜನರ ಎಲ್ಲರ ಹೆಸರು, ಅಂಗಡಿ -ಮುಗ್ಗಟ್ಟು, ರಸ್ತೆ ಹೀಗೆ ಎಲ್ಲದಕ್ಕೂ ದೇವಿಯ ಹೆಸರನ್ನು ಇಟ್ಟಿದ್ದಾರೆ.” ಹೆಸರುಗಳು, ಗಂಗಾ, ಗಂಗೀ, ಮಾಳಮ್ಮ, ಮಾಳವಿಕಾ, ಗಂಗಾಧರ, ಶಂಕರಗಂಗಾ, ಮಲ್ಲಿ ಮಾಳಮ್ಮ, ಗಂಗಾ ಭವಾನಿ, ರುದ್ರೇಶ ಗಂಗಾಧರ, ಗೌರಿ ಗಂಗಾ, ಈ ರೀತಿ ಪ್ರತಿ ಮನೆ ಯಲ್ಲಿ ಮಕ್ಕಳಿಂದ ದೊಡ್ಡವರ ತನಕ ಇಂತಹ ಹೆಸರುಗಳನ್ನೇ ಇಟ್ಟಿರುತ್ತಾರೆ.

  ಪ್ರಜಾಕೀಯಾ - ಪ್ರಜೆಗಳಿಗೆ ವಿವರಿಸುವುದು ಹೇಗೆ?

ಮನೆಯಲ್ಲಿ ಮಾಡುವ ಶುಭಕಾರ್ಯ, ಮನೆ ಕಟ್ಟುವುದು, ಬೋರು ತೆಗೆಸುವುದು, ತೋಟ ಖರೀದಿಸುವುದು, ಮದುವೆ, ವಿಶೇಷ ಪೂಜೆ,
ಆರೋಗ್ಯ ಸಂಕಷ್ಟಗಳು ಬಂದಾಗ, ಹೀಗೆ ಎಲ್ಲವಕ್ಕೂ ದೇವಿಯನ್ನೇ ಕೇಳಿ ಉತ್ತರ ಪಡೆದು ನಂತರವೇ ಅವರ ಕಾರ್ಯಗಳನ್ನು ಮಾಡುತ್ತಾರೆ. ಇಂತಹ ಪ್ರಶ್ನೆಗಳನ್ನು ಕೇಳಲು ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನವರೆಲ್ಲರೂ ಬಂದು, ಸಮಸ್ಯೆಗಳನ್ನು ದೇವಿಯಲ್ಲಿ ಅರಿಕೆ ಮಾಡಿಕೊಂಡು ಪೂಜೆ ಮಾಡಿಸಿ.
ಪ್ರಾರ್ಥಿಸಿ ಬೇಡಿಕೊಂಡು ಹೋದವರಿಗೆ ಅವರ ಇಷ್ಟಾರ್ಥಗಳೆಲ್ಲ ನೆರವೇರಿ
ನಂತರ ಬಂದು ದೇವಿಯ ದರ್ಶನ ಪಡೆದವರು ಇದ್ದಾರೆ. ಈ ರೀತಿಯಾಗಿ
ನಂಬಿ ಬರುವ ಭಕ್ತರ ಭಕ್ತಿ ಪ್ರೀತಿ ನಂಬಿಕೆಗೆ ಸಾಕ್ಷಿಯಾಗಿ ಅವರ ಅಭೀಷ್ಟ ಗಳನ್ನು ನೆರವೇರಿಸುತ್ತಾ ” ಆದಿಶಕ್ತಿ ಗಂಗಾ ಮಾಳಿಕ ದೇವಿ” ಅಮ್ಮನ ಹಟ್ಟಿ ಗ್ರಾಮದಲ್ಲಿ ನೆಲೆಸಿ ಕ್ಷೇತ್ರ ದೇವತೆಯಾಗಿ ಪೊರೆಯುತ್ತಿದ್ದಾಳೆ.

ಆಧಾರ ರೂಪೇ ಚಾಧೇಯೇ ಧೃತಿ ರೂಪೇ ದುರನ್ಧರೇ !
ಧ್ರುವೇ ಧ್ರುವ ಪದೇ ಧೀರೆ ಜಗದ್ಧಾತ್ರಿ ನಮೋಸ್ತು ತೇ!!
ಆಗಮ್ಯಧಾಮ ಧಾಮಸ್ಥೇ ಮಹಾಯೋಗೇಶ ಹೃತ್ಪುರೇ !
ಅಮೇಯಭಾವ ಕೂಟಸ್ಥೇ ಜಗದ್ಧಾತ್ರಿ ನಮೋಸ್ತುತೇ !!

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

Leave a Reply

Your email address will not be published. Required fields are marked *

Translate »