ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸೂರ್ಯಪುರ ಸೂರ್ಯಾಂಜನೇಯ ಸ್ವಾಮಿ.

ಸೂರ್ಯಪುರ ಸೂರ್ಯಾಂಜನೇಯ ಸ್ವಾಮಿ..!

48 ರ ಮಹಿಮೆಯ ಸ್ವಾಮಿ

ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ಹೆಸರನ್ನು 48 ಬಾರಿ ಬರೆದು ಹುಂಡಿಯಲ್ಲಿ ಹಾಕಿ, ಸ್ವಾಮಿಯ ಮುಂದೆ 2 ಎಳ್ಳು ಬತ್ತಿ ಹಚ್ಚಿದರೆ ಸಾಕು ಭಕ್ತರ ಸಕಲ ಕೋರಿಕೆಗಳು ಅತಿ ಶೀಘ್ರವಾಗಿ ನೆರವೇರುತ್ತವೆ ಎಂಬ ನಂಬಿಕೆಯಿದೆ.

ಇಲ್ಲಿನ ಮತ್ತೊಂದು ವಿಶೇಷವೆಂದರೆ ದೇವಾಲಯದ ವತಿಯಿಂದ ಬರೆಯಲು ಹಾಳೆ,ಎಳ್ಳು ಬತ್ತಿ, ಸ್ವಾಮಿಯ ಫೋಟೋ ಎಲ್ಲವೂ ಉಚಿತವಾಗಿ ನೀಡುತ್ತಾರೆ.

ಸೂರ್ಯಪುರ ಎಂದ ತಕ್ಷಣ ನೆನಪಿಗೆ ಬರುವುದು ಸುಂದರ ಪರಿಸರ ಮತ್ತು ಸೂರ್ಯಾಂಜನೇಯ ಸ್ವಾಮಿ.

*ಸೂರ್ಯದೇವ ಮತ್ತು *ಆಂಜನೇಯಸ್ವಾಮಿ* ಒಂದೇ ಕಡೆ ನೆಲೆಸಿರುವ ಏಕೈಕ ದೇವಾಲಯ ಸೂರ್ಯಪುರ ಸೂರ್ಯಾಂಜನೇಯ ಸ್ವಾಮಿ ದೇವಾಲಯ..

ಗುರು ಶಿಷ್ಯರು ಒಂದೇ ಕಡೆ ನೆಲೆಸಿರುವ ಏಕೈಕ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಸೂರ್ಯಪುರ.

ಬಹಳಷ್ಟು ಜನಕ್ಕೆ ಪುರಾಣ ಪ್ರಸಿದ್ದ ಐತಿಹಾಸಿಕ ಪುಣ್ಯಕ್ಷೇತ್ರ ಸೂರ್ಯಪುರ ದ ಬಗ್ಗೆ ಗೊತ್ತಿಲ್ಲ. ಆಂಜನೇಯನು ತನ್ನ ಗುರುವಾದ ಭಗವಾನ್ ಸೂರ್ಯದೇವನಿಂದ ವಿದ್ಯೆ ಕಲಿತ ಭೂಮಿ. ಹಾಗೂ ಸೂರ್ಯಪುರದಲ್ಲಿ ಆಂಜನೇಯ ಸ್ವಾಮಿ ದಕ್ಷಿಣಾಭಿ ಮುಖವಾಗಿದ್ದು ಸಂಪೂರ್ಣ ವಾಸ್ತುವಿನಿಂದ ಕೂಡಿದ್ದು ಭಕ್ತರ ಸಕಲ . ಕೋರಿಕೆಗಳನ್ನು ನೆರವೇರಿಸುತ್ತಿರುವ ಅಪಾರ ಮಹಿಮೆಯನ್ನ ಹೊಂದಿರುವ ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ
ಸೂರ್ಯಪುರ ಎಲ್ಲರಿಗೂ ತಿಳಿಯುವಂತಾಗಲಿ.

ಕ್ಷೇತ್ರದ ಇತಿಹಾಸ

ಸುಂದರ ಪ್ರಕೃತಿಯ ನಿಸರ್ಗದ ತಾಣ ಸೂರ್ಯಪುರ. ಪುರಾತನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಸೂರ್ಯಪುರ, ಧ್ಯಾನ,ಯೋಗ ಮತ್ತು ಮನಃಶಾಂತಿಗೆ ಸೂಕ್ತವಾದ ಸ್ಥಳ.

ಸೂರ್ಯಪುರ ಗ್ರಾಮದ ಮನೆಯೊಳಗಿನ ಒಲೆ ಒಂದರಲ್ಲಿ ಹುಣಸೆಗಿಡ ಹುಟ್ಟಿದಾಗ ಅದು ಅಪಶಕುನ ಎಂದು ಜನರು ಈ ಗ್ರಾಮವನ್ನೆ ಖಾಲಿ ಮಾಡಿ ಬೇರೆ ಪ್ರದೇಶಗಳಿಗೆ ವಲಸೆ ಹೋಗಿ ನೆಲೆಸಿದ್ದಾರೆ.

  ಸಾರಂಗಪಾಣಿ ಶ್ರೀ ಲಕ್ಷ್ಮೀ ದೇವಸ್ಥಾನ

ಇತ್ತೀಚೆಗೆ ಅಳಿದುಳಿದ
ಈ ಗ್ರಾಮದ ದೇವಾಲಯಗಳನ್ನು ಶ್ರೀ ರವೀಂದ್ರ ಕುಮಾರ ಸ್ವಾಮೀಜಿ ರವರ ಸಾರಥ್ಯದಲ್ಲಿ ಸೂರ್ಯಪುರ ಆಶ್ರಮ (ಮಠ)ದ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ.ಸೂರ್ಯನಿಗೆ ಪ್ರಿಯವಾದ ವಾರ ಬಾನುವಾರ.ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಹೀಗಾಗಿ ಬಾನುವಾರ,ಮಂಗಳವಾರ ಮತ್ತು ಶನಿವಾರ ಹಾಗೂ ಹಬ್ಬಗಳು ಮತ್ತು ಸರ್ಕಾರಿ ರಜಾದಿನಗಳಲ್ಲಿ
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

ಸೂರ್ಯಪುರ
ಗ್ರಾಮದಲ್ಲಿ ಮುಂಚೆ ನೆಲೆಸಿದ್ದವರ ವಂಶಸ್ಥರು ಈಗಲೂ ಕೂಡ ಅನಾದಿಕಾಲದಿಂದಲೂ ನೆಲೆಸಿರುವ ಇಲ್ಲಿನ ಗ್ರಾಮ ದೇವತೆ ಮಾರಮ್ಮನಿಗೆ ಮತ್ತು ಹರಿಹರೇಶ್ವರ ಹಾಗೂ ಸೂರ್ಯಾಂಜನೇಯ ಸ್ವಾಮಿಗೆ ನಡೆದುಕೊಳ್ಳುತ್ತಾರೆ.

ಹಿಂದೆ ಈ ಗ್ರಾಮದಲ್ಲಿ ಜನವಸತಿ ಇತ್ತು ಮತ್ತು ಕೋಟೆ ಕೊತ್ತಲುಗಳಿಂದ ಕೂಡಿತ್ತು ಈ ಗ್ರಾಮ ಎಂಬುದಕ್ಕೆ ನಿದರ್ಶನವಾಗಿ ಇಲ್ಲಿನ ಗುಟ್ಟೆ ಮೇಲೆ ಕುರುಹುಗಳನ್ನು ಕಾಣಬಹುದು.
ಋಷಿಮುನಿಗಳು ತಪಸ್ಸುಗೈದ ಸ್ಥಳವಾಗಿದ್ದ ಸೂರ್ಯಪುರ, ವಿಜಯನಗರ ಸಾಮ್ರಾಜ್ಯದ ಪತನಾನಂತರ ತನ್ನ ಭವ್ಯತೆಯನ್ನು ಕಳೆದುಕೊಂಡಿತು.

ಮಾನವನಿಗೆ ಹಣಕ್ಕಿಂತ ಆರೋಗ್ಯವೇ ಮುಖ್ಯ . ಆರೋಗ್ಯವೇ ಭಾಗ್ಯ ಎಂಬ ಗಾದೆ ಇದೆ. ಆದರೆ ಆರೋಗ್ಯವನ್ನು ಕೊಡುವ ಸೂರ್ಯ ದೇವಾಲಯಗಳು ಇರುವುದು ಅಪರೂಪ. ಅದರಲ್ಲಿಯ ಗುರು ಶಿಷ್ಯರು ಒಂದೇ ಕಡೇ ನೆಲೆಸಿರುವ ಏಕೈಕ ಕ್ಷೇತ್ರ. ಜೀವನದಲ್ಲಿ ಒಮ್ಮೆಯಾದರೂ ಹಿಂದೂಗಳು ಇಂತಹ ಅಪರೂಪದ ಪುಣ್ಯಕ್ಷೇತ್ರ ದರ್ಶನ ಮಾಡಬೇಕು.

ಆರೋಗ್ಯಕ್ಕೆ ಅಧಿಪತಿಯಾದ ರವಿ ಯನ್ನು ಪ್ರತಿನಿತ್ಯ ಪೂಜಿಸುವುದರಿಂದ ಆರೋಗ್ಯ ಲಭಿಸುವುದರ ಜೊತೆಗೆ ಹೃದಯಾಘಾತ(Heart Attack) ಸಂಭವಿಸುವುದಿಲ್ಲ.

ಪ್ರತಿ ನಿತ್ಯ ಸೂರ್ಯ ನಮಸ್ಕಾರ(ಯೋಗ) ಮಾಡುವುದರಿಂದ ಆರೋಗ್ಯ ಲಭಿಸುತ್ತದೆ.
ಆರೋಗ್ಯದ ಸಮಸ್ಯೆಗಳು,ಕಣ್ಣು ಮತ್ತು ಹೃದಯದ ಸಮಸ್ಯೆಗಳಿದ್ದಾಗ *ವ್ಯಾಪಾರ, ವ್ಯವಹಾರ, ಕೋರ್ಟ್ ಕೇಸ್ ಗಳು, ಹಾಗೂ ಚುನಾವಣೆಗಳಲ್ಲಿ ಜಯಗಳಿಸಲು *ಪ್ರಸಿದ್ಧ ಜ್ಯೋತಿಷಿ* ಗಳು ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡಿ ಬರುವಂತೆ ಸಲಹೆ ನೀಡುತ್ತಾರೆ. ಹಾಗೂ ಆರೋಗ್ಯದಿಂದ ಚೇತರಿಸಿಕೊಳ್ಳಲು ಸ್ವಾಮಿ ಸನ್ನಿಧಿಯಲ್ಲಿಪೂಜೆ ಮತ್ತು ಹೋಮ ನಡೆಸುತ್ತಾರೆ.

  ಪಾರದರ್ಶಕ ಸರಕಾರ - ಪ್ರಜಾಕೀಯ

ಆದಿತ್ಯ ಹೃದಯ ಸ್ತೋತ್ರ ಪಠಿಸುವುದರಿಂದ ಕೋರ್ಟ್,ಕಛೇರಿ,ವ್ಯಾಪಾರ,ವ್ಯವಹಾರಗಳಲ್ಲಿ ಜಯ ಲಭಿಸುತ್ತದೆ. ಶ್ರೀರಾಮನು ಆಗಸ್ತ್ಯ ಮುನಿ ಗಳ ಸಲಹೆಯಂತೆ ಆದಿತ್ಯ ಹೃದಯ ಸ್ತೋತ್ರ ಪಠಿಸಿ ರಾವಣನನ್ನು ಜಯಿಸಿದನು ಎಂಧು ರಾಮಾಯಣದಲ್ಲಿ ಉಲ್ಲೇಖವಾಗಿದೆ.

ನವಗ್ರಹಗಳ ಆದಿಪತಿ ಸೂರ್ಯ. ಹಾಗೂ ಆಂಜನೇಯ ಸ್ವಾಮಿ ಒಟ್ಟಿಗೆ ಇರುವ ಏಕೈಕ ದೇವಾಲಯ

ಪ್ರತಿ ವರ್ಷ ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿ (ರಥಸಪ್ತಮಿ) ದಿನ
ಸೂರ್ಯಪುರದಲ್ಲಿ ಶ್ರೀ ಸೂರ್ಯಾಂಜನೇಯ ಸ್ವಾಮಿ ರಥೋತ್ಸವ
ಜರುಗುತ್ತದೆ.

ಆರೋಗ್ಯಕ್ಕೆ ಅಧಿಪತಿಯಾದ ಸೂರ್ಯ ಹುಟ್ಟಿದ ದಿನ ವಾದ ರಥಸಪ್ತಮಿ ದಿನ ಪ್ರತಿ ವರ್ಷ ಪುರುಷರು ಮತ್ತು ಮಹಿಳೆಯರು ಸೂರ್ಯಮಾಲೆ ಧರಿಸಿ ಶ್ರೀ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುತ್ತಾರೆ. ಸೂರ್ಯಮಾಲೆ ಧರಿಸಿ ಸೂರ್ಯದೇವನ ದರ್ಶನ ಮಾಡಿದರೆ ಆರೋಗ್ಯ ದಿಂದ ಇರುತ್ತಾರೆ, ಹಾಗೂ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ.

ಸೂರ್ಯಪುರ
ಇಲ್ಲಿ ಯಾವುದೇ ರೀತಿಯ ಅಂಗಡಿಗಳು ಇರುವುದಿಲ್ಲವಾದ್ದರಿಂದ ಹೂ ಹಣ್ಣು ಮುಂತಾದ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಬೇಕು.

ಪ್ರತಿದಿನ ಪ್ರಸಾದ ವ್ಯವಸ್ಥೆ ಇರುತ್ತದೆ. ಹಾಗೂ ಭಕ್ತರು ಉಳಿದುಕೊಳ್ಳಲು ರೂಮು ಗಳು ದೊರೆಯುತ್ತವೆ.

ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಓಂ ಶ್ರೀ ಸೂರ್ಯಾಂಜನೇಯ ಸ್ವಾಮಿ ನಮಃ ಎಂದು
48 ಬಾರಿ ಬರೆದು ಸ್ವಾಮಿಯ ಮುಂದೆ ಎಳ್ಳು ಬತ್ತಿ ಹಚ್ಚಿ ಹರಕೆ ಮಾಡಿಕೊಂಡು ಅರಿಶಿಣ ಹಚ್ಚಿ ಕಾಣಿಕೆ ಇಟ್ಟು ನಂತರ ಕೋರಿಕೆ ಪತ್ರವನ್ನು ಹುಂಡಿಯಲ್ಲಿ ಹಾಕಿ ಹೋದರೆ ಖಂಡಿತವಾಗಿ ತಮ್ಮ ಕೋರಿಕೆ ನೆರವೇರುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.

  ಹೃದಯಾಘಾತಕ್ಕೆ ಮೂರೂವರೆ ನಿಮಿಷದ ಸಲಹೆ

ಸೂರ್ಯಪುರದ ಗುಟ್ಟೆಯ ಮೇಲಿರುವ ಗುಟ್ಟೆ ಗಣಪತಿ ದರ್ಶನ ಮೊದಲು ಮಾಡಿ ನಂತರ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯ.

ಆರೋಗ್ಯ,ಆಯುಸ್ಸು ಐಶ್ವರ್ಯ, ಸಂತಾನ ಬಾಗ್ಯ, ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ, ಅಪಾರ ಮಹಿಮೆ ಯನ್ನು ಹೊಂದಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ನೆಲೆಸಿರುವ ಸೂರ್ಯಪುರ ಒಂದು ಪುಣ್ಯ ಕ್ಷೇತ್ರವಾಗಿದೆ.
ಸೂರ್ಯಪುರ ಇಲ್ಲಿಗೆ ಭೇಟಿ ಕೊಡುವ ಭಕ್ತರು ಗೂಗಲ್ ಮ್ಯಾಪ್ ನಲ್ಲಿ ಈ ರೀತಿ ಸರ್ಚ್ ಮಾಡಿ ನೋಡಬಹುದು.
Suryanjaneya temple
ಸೂರ್ಯಾಂಜನೇಯ ದೇವಸ್ಥಾನ
Suryapura mutt
ಸೂರ್ಯಪುರ ಮಠ

ಸುಂದರ ಪ್ರಕೃತಿಯ ನಿಸರ್ಗದ ಮಡಿಲಲ್ಲಿ ಕಂಗೊಳಿಸುತ್ತಿರುವ
ಶ್ರೀ ಕ್ಷೇತ್ರ ಸೂರ್ಯಪುರ ಬೆಂಗಳೂರು ಇಲ್ಲಿಂದ 60.ಕಿ.ಮೀ. ಮತ್ತು ತುಮಕೂರು ಇಲ್ಲಿಂದ 24 ಕಿ.ಮೀ. ಹಾಗೂ ಕೊರಟಗೆರೆ ಇಲ್ಲಿಂದ 19 .ಕಿ.ಮೀ. ಮತ್ತು ಕೋಳಾಲ ಇಲ್ಲಿಂದ 6.ಕಿ.ಮೀ.ದೂರದಲ್ಲಿದೆ.

ಹೆಚ್ಚಿನ ವಿವರಗಳಿಗೆ ಸೂರ್ಯಪುರ ಆಶ್ರಮ

ಮೊಬೈಲ್ ಸಂಖ್ಯೆ 09448270327 ಅಥವಾ 09008335288. ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

Translate »