ಹುತ್ತದಲ್ಲಿ ಸರ್ಪರೂಪದಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯೇಶ್ಚರ ಸ್ವಾಮಿ ದೇವಾಲಯ..!
ಹುತ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಸರ್ಪರೂಪದಲ್ಲಿ ನೆಲೆಸಿದ್ದಾನೆ.
ಇದು ಹೇಗೆ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಅದೇ ಸ್ವಾಮಿಯ ಮಹಿಮೆಯಾಗಿದೆ. ಮಹಾಶಿವ ಹಾಗು ಸುಬ್ರಹ್ಮಣ್ಯೇಶ್ವರ ಸ್ವಾಮಿ ಇಬ್ಬರು ಒಂದೇ ಸ್ಥಳದಲ್ಲಿ ನೆಲೆಸಿ ಭಕ್ತರಿಗೆ ಅಭಯವನ್ನು ನೀಡುತ್ತಿರುವ ಏಕೈಕ #ಶೈವಕ್ಷೇತ್ರ ಮೋಪಿದೇವಿ ಸುಬ್ರಹ್ಮಣ್ಯೇಶ್ವರ ದೇವಾಲಯ. ವಿಷೇಶವೆನೆಂದರೆ ಸುಬ್ರಹ್ಮಣ್ಯೇಶ್ವರ ಸ್ವಾಮಿಯು #ಸ್ವಯಂಭೂವಾಗಿ ಇಲ್ಲಿ ನೆಲೆಸಿರುವುದು.
ದೀಪಾವಳಿ ಹಬ್ಬದ ನಂತರ ಬರುವ ನಾಗರ ಚೌಥಿಯಂದು ಈ ಕ್ಷೇತ್ರಕ್ಕೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನವನ್ನು ಕೋರಿ ಭೇಟಿ ನೀಡುತ್ತಾರೆ.
ಹಾಗಾದರೆ ಈ ಸ್ವಾಮಿ ಸ್ವಯಂ ಭೂವಾಗಿ ಹೇಗೆ ನೆಲೆಸಿದನು? ಈ ದೇವಾಲಯ ಎಲ್ಲಿದೆ? ಎಂಬ ಕುತೂಹಲದಲ್ಲಿದ್ದೀರಾ? ಹಾಗಾದರೆ ಲೇಖನದ ಮೂಲಕ ತಿಳಿಯಿರಿ. ”
ಶ್ರೀ ಸುಬ್ರಹ್ಮಣ್ಯೇಶ್ಚರ ಸ್ವಾಮಿ ದೇವಾಲಯ…
ಕೃಷ್ಣಜಿಲ್ಲೆಯಲ್ಲಿನ ಒಂದು ಪ್ರದೇಶಕ್ಕೆ ಸೇರಿದ ಸ್ಥಳದಲ್ಲಿ ಈ ಮೋಪಿದೇವಿ ದೇವಾಲಯವಿದೆ.
ಇದು #ಮಚಲಿಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.
ಇದಕ್ಕೆ #ಮಹೀನಿಪುರಂ_ಸರ್ಪಕ್ಷೇತ್ರವೆಂದೂ ಕೂಡ ಕರೆಯುತ್ತಾರೆ.
ಆದರೆ ಕಾಲ ಕ್ರಮೇಣ ಮೋಪಿದೇವಿ ದೇವಾಲಯ ಎಂದು ಮಾರ್ಪಾಟಾಯಿತು.
ಈ ದೇವಾಲಯದಲ್ಲಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯು ಲಿಂಗ ರೂಪದಲ್ಲಿ ನೆಲೆಸಿರುವುದು ಈ ಕ್ಷೇತ್ರದ ವಿಶೇಷತೆ.
ಮೋಪಿದೇವಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯಕ್ಕೆ ಹಲವಾರು ವರ್ಷಗಳ ಚರಿತ್ರೆ ಕೂಡ ಇದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ #ಸ್ಕಂದ ಪುರಾಣದಲ್ಲಿ ಪ್ರಸ್ತಾವನೆಯನ್ನು ಕಾಣಬಹುದು.
ಇಲ್ಲಿ ಸ್ವಾಮಿ ಸ್ವಯಂ ಭೂವಾಗಿ ನೆಲೆಸಲು ಕಾರಣವೇನು ಎಂಬುದನ್ನು ಕೂಡ ಪುರಾಣಗಳಲ್ಲಿ ಹೇಳಲಾಗಿದೆ.
ರಾಹು-ಕೇತು ಸರ್ಪದೋಷಗಳನ್ನು ನಿವಾರಿಸುವ ಮಹಿಮಾನ್ವಿತ ದೇವಾಲಯವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಪೂರ್ವದಿಕ್ಕಿಗೆ ಇರುವ ದೇವಾಲಯದ ಗರ್ಭಗುಡಿಯಲ್ಲಿ 7 ಸರ್ಪಗಳ ಮೇಲೆ ಸುಬ್ರಹ್ಮಣ್ಯೇಶ್ವರಸ್ವಾಮಿಯು ನೆಲೆಸಿದ್ದಾನೆ.
ಇಲ್ಲಿಗೆ ಅನೇಕ ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರ್ಶನಕ್ಕೆ ಭೇಟಿ ನೀಡುತ್ತಾರೆ.
ಆಶ್ಚರ್ಯ ಏನಪ್ಪ ಎಂದರೆ ಇಲ್ಲಿನ ಹುತ್ತದಲ್ಲಿ ವರ್ಷಕ್ಕೆ ಒಮ್ಮೆ ಹಾವು ಹೊರಗೆ ಬಂದು ಭಕ್ತರಿಗೆ ದರ್ಶನವನ್ನು ನೀಡುತ್ತದೆ ಎಂತೆ.
ಇದು ಅಲ್ಲಿನ ಅತಿ ಮುಖ್ಯವಾದ ವಿಶೇಷವೇ ಆಗಿದೆ. ಹಾಗಾಗಿಯೇ ಈ ಮಹಿಮಾನ್ವಿತವಾದ ದೇವಾಲಯಕ್ಕೆ ಹಲವಾರು ಮಂದಿ ಭೇಟಿ ನೀಡುತ್ತಾರೆ.
ಇನ್ನು ದೇವಾಲಯವನ್ನು ಪ್ರದಕ್ಷಿಣೆ ಹಾಕುವ ಮಾರ್ಗದಲ್ಲಿ ದಕ್ಷಿಣ ದಿಕ್ಕಿಗೆ ಒಂದು ಹುತ್ತವಿದೆ. ಅದರ ಕೆಳಗೆ ಇರುವ ರಂಧ್ರದ ಮೂಲಕ ಅರ್ಚಕರು ಹಾಲಿನಿಂದ ಕಾರ್ತಿಕೇಯನಿಗೆ ಅಭಿಷೇಕವನ್ನು ಮಾಡುತ್ತಾರೆ,
ನಾಗರ ಚೌಥಿ, ನಾಗ ಪಂಚಮಿ ಪರ್ವದಿನಗಳಲ್ಲಿ ಭಕ್ತರು ಈ ಹುತ್ತಕ್ಕೆ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೆ.
ಇನ್ನು ದೇವಾಲಯದ ಪುರಾಣಕ್ಕೆ ಬಂದರೆ ಇಂದ್ರಾದಿ ದೇವತೆಗಳು ಪ್ರಾರ್ಥನೆ ಮಾಡಲು ಬರುತ್ತಾರಂತೆ.
ಅಗಸ್ತ್ಯಮಹರ್ಷಿಯು ತನ್ನ ಲೋಪವನ್ನು ಕಳೆದುಕೊಳ್ಳಲು ಕಾಶಿ ಪಟ್ಟಣವನ್ನು ಬಿಟ್ಟು ದಕ್ಷಿಣಭಾರತ ದೇಶಕ್ಕೆ ಪ್ರವಾಸಕ್ಕೆ ಹೊರಟನು.
ಮಾರ್ಗದಮಧ್ಯ ಭಾಗದಲ್ಲಿ ಶಿಷ್ಯರ ಜೊತೆ ಕೂಡಿ ಕೃಷ್ಣಾನದಿ ತೀರದಲ್ಲಿನ ಮೋಹಿನಿಪುರಂನಲ್ಲಿ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳುವಾಗ ಹಳೆಯ ದ್ವೇಷವನ್ನು ಮರೆತು ಹಾವು, ಮುಂಗಿಸಿ, ನವಿಲು ಜೊತೆಗೂಡಿ ಆಟ ಆಡುತ್ತಿದ್ದುದ್ದನ್ನು ಕಂಡನು.
ಆ ಪಕ್ಕದಲ್ಲಿಯೇ ದಿವ್ಯ ತೇಜಸ್ಸನಿಂದ ಕಂಗೊಳಿಸುತ್ತಿದ್ದ ಒಂದು ಹುತ್ತದ ಮೇಲೆ ದೃಷ್ಟಿ ಬೀಳುತ್ತದೆ.
ಸಮೀಪಕ್ಕೆ ಹೋದಾಗ ಕಾರ್ತಿಕೇಯನು ಸರ್ಪರೂಪದಲ್ಲಿ ತಪಸ್ಸು ಮಾಡುತ್ತಾ ಕಾಣಿಸಿಕೊಳ್ಳುತ್ತಾನೆ.
ತನ್ನ ದಿವ್ಯ ದೃಷ್ಟಿಯಿಂದ ಕಾರ್ತಿಕೇಯನ ರೂಪವನ್ನು ವೀಕ್ಷಿಸಿ ಅಗಸ್ತ್ಯನು ಹುತ್ತದ ಮೇಲೆ ಒಂದು ಶಿವಲಿಂಗವನ್ನು ಏರ್ಪಾಟು ಮಾಡಿ ಆರಾಧನೆ ಮಾಡುತ್ತಾರೆ.
ಅದನ್ನು ತಿಳಿದುಕೊಂಡ ದೇವತೆಗಳು ಕೂಡ ಇಲ್ಲಿಗೆ ಬಂದು ಸ್ವಾಮಿಯನ್ನು ಪೂಜಿಸಿದರಂತೆ.
ಹುತ್ತದಲ್ಲಿರುವ #ಕಾರ್ತೀಕೇಯನು ಒಬ್ಬ ಭಕ್ತನ ಕನಸ್ಸಿನಲ್ಲಿ ಕಾಣಿಸಿಕೊಂಡು ತಾನು ಹುತ್ತದಲ್ಲಿ ಇದ್ದೇನೆ ಎಂದೂ, ತನ್ನನ್ನು ಹೊರಗೆ ತಂದು ದೇವಾಲಯವನ್ನು ನಿರ್ಮಾಣ ಮಾಡಿ,
ತನ್ನ ವಿಗ್ರಹವನ್ನು ಪ್ರತಿಷ್ಟಾಪಿಸಿ ಪೂಜೆಯನ್ನು ಮಾಡು ಎಂದು ಅಜ್ಞಾಪಿಸಿದನಂತೆ.
ಸ್ವಪ್ನ ವೃತ್ತಾಂತದ ಪ್ರಕಾರ ದೇವಾಲಯವನ್ನು ನಿರ್ಮಾಣ ಮಾಡಿ ಷಣ್ಮುಖನ ರೂಪದಲ್ಲಿ ವಿಗ್ರಹವನ್ನು ಪ್ರತಿಷ್ಟಾಪಿಸಿದನು.
ಸ್ವಾಮಿ ಮಹಿಮೆಯನ್ನು ತಿಳಿದುಕೊಂಡ ದೇವರ ಕೋಟೆ ಸಂಸ್ಥಾನದ ರಾಜವಂಶಿಕರು ದೇವಾಲಯದ ಅಭಿವೃದ್ಧಿಗೆ ವಿಶೇಷವಾದ ಆಸಕ್ತಿ ವಹಿಸಿದರಂತೆ.
ನಾಗರಚೌಥಿಯಂದು ಹುತ್ತದ ಸಮೀಪಕ್ಕೆ ತೆರಳಿ ಸ್ವಾಮಿಯನ್ನು ಪೂಜೆ ಮಾಡಿದರೆ ಸಂತಾನ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ಸಂತಾನ ಭಾಗ್ಯ ಉಂಟಾಗುತ್ತದೆ ಎಂದು ನಂಬಲಾಗಿದೆ.
ಹುತ್ತದ ಮಣ್ಣನ್ನು ಪ್ರಸಾದವಾಗಿ ಧರಿಸಿದರೆ ಅನೇಕ ವ್ಯಾಧಿಗಳಿಂದ ಮುಕ್ತಿ ಹೊಂದಬಹುದು ಎಂಬುದು ಇಲ್ಲಿನ ಪ್ರತೀತಿ.
ಸರ್ಪ ಜ್ಞಾನಕ್ಕೆ ನಿದರ್ಶನವಾಗಿದೆ ಈ ಮಾಹಿಮಾನ್ವಿತವಾದ ದೇವಾಲಯ.
ಹಾಗಾಗಿಯೇ ಆ ರೂಪದಲ್ಲಿರುವ ಸ್ವಾಮಿಯನ್ನು ಧ್ಯಾನಿಸಿದವರಿಗೆ ಒಳ್ಳೆಯ ಉದ್ಯೋಗ, ವಿದ್ಯೆ, ಐಶ್ವರ್ಯ, ಸೌಭಾಗ್ಯಗಳು ಸಿದ್ಧಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.
ಈ ವಿಧವಾಗಿ ಸ್ವಯಂ ಭೂವಾಗಿ ಹುತ್ತದಲ್ಲಿ ನೆಲೆಸಿರುವ ಸುಬ್ರಹ್ಮಣ್ಯೆಶ್ವರ ಸ್ವಾಮಿಯು ನಾಗರ ಚೌಥಿಯ ದಿನದಂದು ಅನೇಕ ಭಕ್ತರು ಲಕ್ಷ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಿ ಸ್ವಾಮಿಯನ್ನು ಆರಾಧನೆ ಮಾಡುತ್ತಾರೆ.