ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಾಣಗಾಪುರ ಶ್ರೀನೃಸಿಂಹ ಸರಸ್ವತೀ ಮತ್ತು ದತ್ತಗುರು

ಗಾಣಗಾಪುರ

ಈ ಕ್ಷೇತ್ರವು ಪೂನಾ-ರಾಯಚೂರ ಮಾರ್ಗದಲ್ಲಿ ಭೀಮಾ-ಅಮರಜೆಯ ಸಂಗಮಸ್ಥಾನದಲ್ಲಿದೆ. ಶ್ರೀನೃಸಿಂಹ ಸರಸ್ವತೀಯವರು ಇಲ್ಲಿ ವಾಡಿಯಿಂದ ಬಂದರು ಮತ್ತು ಸುಮಾರು ಇಪ್ಪತ್ತಮೂರು ವರ್ಷಗಳಷ್ಟು ಕಾಲ ಇಲ್ಲಿದ್ದು ಇಲ್ಲಿಂದಲೇ ಶ್ರೀಶೈಲಕ್ಕೆ ಅವರು ನಿರ್ಗಮಿಸಿದರು. ಅವರ ದೀರ್ಘ ಸಾನ್ನಿಧ್ಯದಿಂದಾಗಿ ಈ ಸ್ಥಾನವು ದತ್ತೋಪಾಸನೆಯ ಕ್ಷೇತ್ರದಲ್ಲಿ ಎಲ್ಲಕ್ಕಿಂತ ಹೆಚ್ಚು ಪವಿತ್ರವಾಗಿದೆ. ಶ್ರೀ ಗುರು ಇಲ್ಲಿಗೆ ಬಂದಾಗ ಮೊದಲು ಅವರು ಸಂಗಮದಲ್ಲಿಯೇ ವಾಸಿಸುತ್ತಿದ್ದರು. ಈ ಮಠದ ಸ್ಥಾನದಲ್ಲಿಯೇ ಅವರ ಪಾದುಕೆಗಳಿವೆ.

ನರಸೋಬಾ ವಾಡಿಯ ಪಾದುಕೆಗಳಿಗೆ ‘ಮನೋಹರ ಪಾದುಕೆ’ ಎಂದು ಕರೆಯುತ್ತಾರೆ ಮತ್ತು ಗಾಣಗಾಪುರದಲ್ಲಿರುವ ಪಾದುಕೆಗಳಿಗೆ ‘ನಿರ್ಗುಣ ಪಾದುಕೆಗಳು’ ಎಂದು ಕರೆಯುತ್ತಾರೆ. ಇಲ್ಲಿ ಅವರ ಸಾಧನೆಯು ದೇಹಾತೀತ-ಗುರುರೂಪಾತೀತವಾಗಿ ‘ನಿರ್ಗುಣ’ ಸ್ವರೂಪವನ್ನು ತಲುಪಿತು. ಗುರುವಾರ ಇಲ್ಲಿನ ಪಲ್ಲಕ್ಕಿಯ ವಾರವಾಗಿತ್ತು. ನಿತ್ಯೋಪಾಸನೆ ಪ್ರತಿದಿನ ಮುಂಜಾವಿನಿಂದಲೇ ಪ್ರಾರಂಭವಾಗುತ್ತದೆ. ಇಲ್ಲಿನ ಪಾದುಕೆಗಳಿಗೆ ಜಲಸ್ಪರ್ಶ ಮಾಡುವುದಿಲ್ಲ, ಕೇವಲ ಅಷ್ಟಗಂಧ ಮತ್ತು ಕೇಸರಿ ಇವುಗಳ ಲೇಪನ ಮಾಡುತ್ತಾರೆ. ಇಲ್ಲಿನ ‘ನಿರ್ಗುಣ ಪಾದುಕೆ’ಗಳನ್ನು ಅಲುಗಾಡಿಸಬಹುದು. ಪಾದುಕೆಗಳನ್ನು ಅವುಗಳ ಆಕಾರದ ಸಂಪುಟದಲ್ಲಿ (ಸಣ್ಣ ಆಕಾರದ ಡಬ್ಬೆ) ಇಡುತ್ತಾರೆ. ಸಂಪುಟದಿಂದ ಮಾತ್ರ ಅವುಗಳನ್ನು ಹೊರಗೆ ತೆಗೆಯುವುದಿಲ್ಲ. ಸಂಪುಟಗಳಿಗೆ ಮುಚ್ಚಳಗಳಿವೆ. ಪೂಜೆಯ ಸಮಯದಲ್ಲಿ ಮುಚ್ಚಳಗಳನ್ನು ಹಾಕಿ ಒಳಗೆ ಲೇಪನವಿಧಿಯು ಆಗುತ್ತದೆ ಮತ್ತು ಇತರ ಪೂಜೊಪಚಾರಕ್ಕಾಗಿ ತಟ್ಟೆಯಲ್ಲಿ ಉದಕ ಬಿಡುತ್ತಾರೆ.

  ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ

ಪಾದುಕೆಗಳಿರುವ ಮಠವು ಗ್ರಾಮದ ಮಧ್ಯಭಾಗದಲ್ಲಿದೆ. ಮಠದ ಪೂರ್ವ ದಿಕ್ಕಿಗೆ ಮಹಾದೇವನ ಸ್ಥಾನವಿದೆ. ದಕ್ಷಿಣಕ್ಕೆ ಔದುಂಬರ ಮತ್ತು ಅದರ ಕೆಳಗೆ ಮಹಾದೇವ-ಪಾರ್ವತಿ ಇವರ ಮೂರ್ತಿಗಳಿವೆ. ಪಶ್ಚಿಮಕ್ಕೆ ಅಶ್ವತ್ಥಾನದ ಮರಯಿದೆ. ಅಶ್ವತ್ಥದ ಕಟ್ಟೆಯ ಸುತ್ತಲೂ ನಾಗನಾಥ, ಮಾರುತಿಯ ಸ್ಥಾನಗಳಿವೆ ಮತ್ತು ತುಳಸಿ ವೃಂದಾವನವಿದೆ. ಮಠದಲ್ಲಿನ ಪಾದುಕೆಗಳ ಗರ್ಭಗುಡಿಗೆ ಬಾಗಿಲು ಇಲ್ಲ. ದರ್ಶನಕ್ಕಾಗಿ ಒಂದು ಬೆಳ್ಳಿ ಲೇಪನವಿರುವ ಚಿಕ್ಕ ಕಿಂಡಿ ಇದೆ. ಈ ಕಿಂಡಿಯಿಂದ ದರ್ಶನಾರ್ಥಿಗಳಿಗೆ ಶ್ರೀಗುರುಗಳ ಆ ಚಿಸ್ಮರಣೀಯ ‘ನಿರ್ಗುಣ ಪಾದುಕೆಗಳ’ ದರ್ಶನ ತೆಗೆದುಕೊಳ್ಳಬೇಕಾಗುತ್ತದೆ. ಅನೇಕ ಸಾಧಕರಿಗೆ ಈ ಪಾದುಕೆಗಳ ಸ್ಥಾನದಲ್ಲಿ ಶ್ರೀಗುರುಗಳ ದಿವ್ಯ ದರ್ಶನವಾಗಿದೆ ಎಂದು ಹೇಳುತ್ತಾರೆ.

  ಮಾತಾ ವಿಶಾಲಾಕ್ಷಿ ಮಣಿಕರ್ಣಿಕ, ವಾರಣಾಸಿ

ಗ್ರಾಮದಿಂದ ಒಂದು ಮೈಲಿನ ಅಂತರದಲ್ಲಿ ಭೀಮಾ-ಅರಮಜಾ ನದಿಗಳ ಸಂಗಮವಿದೆ. ಸಂಗಮದ ಸಮೀಪವೇ ಭಸ್ಮದ ಗುಡ್ಡವಿದೆ. ಸಂಗಮದಲ್ಲಿನ ಸಂಗಮೇಶ್ವರದ ದೇವಸ್ಥಾನದ ಮುಂದೆ ಶ್ರೀಗುರುಗಳ ತಪೋಭೂಮಿಯಿದೆ. ಗಾಣಗಾಪುರದ ಪರಿಸರದಲ್ಲಿ ಷಟ್ಕುಲತೀರ್ಥ, ನರಸಿಂಹತೀರ್ಥ, ಭಾಗೀರಥತೀರ್ಥ, ಪಾಪವಿನಾಶಿತೀರ್ಥ, ಕೋಟಿತೀರ್ಥ, ರುದ್ರಪಾದತೀರ್ಥ, ಚಕ್ರತೀರ್ಥ ಮತ್ತು ಮನ್ಮಥತೀರ್ಥ ಎಂಬ ಅಷ್ಟತೀರ್ಥಗಳಿವೆ.

ಗಾಣಗಾಪುರದ ಉತ್ಸವದಲ್ಲಿ ದತ್ತಜಯಂತಿ ಮತ್ತು ಶ್ರೀಗುರುಗಳ ಪುಣ್ಯತಿಥಿ ಇವೆರಡು ಉತ್ಸವಗಳ ವಿಶೇಷ ಮಹತ್ತ್ವವಿದೆ. ಶ್ರಿಗುರುಗಳ ಜೀವನಕಾರ್ಯವು ಗಾಣಗಾಪುರದಲ್ಲಿಯೇ ಘಟಿಸಿತು ಮತ್ತು ತಮ್ಮ ತೇಜವನ್ನು ಇದೇ ಭೂಮಿಯ ಅಣುರೇಣುವಿನಲ್ಲಿ ಪ್ರತಿಫಲಿಸುವಂತೆ ಮಾಡಿದರು. ಅದರಿಂದಲೇ ಕಳೆದ ಐದು ಶತಕಗಳಷ್ಟು ಈ ಕ್ಷೇತ್ರವು ದತ್ತೋಪಾಸಕರ ಹೃದಯದಲ್ಲಿ ಅಸೀಮ ಶ್ರದ್ಧೆಯ ಸ್ಥಾನ ಪಡೆದಿದೆ.

  ಗರುಡ ಪುರಾಣದ ಪ್ರಕಾರ ಆರು ವಿಧದ ಶುದ್ಧೀಕರಣ ಸ್ನಾನ

Leave a Reply

Your email address will not be published. Required fields are marked *

Translate »