ಶಿರಡಿ..!
೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಶಿರಡಿಯಲ್ಲಿ ಸಂತರಾದ ಶ್ರೀ ಸಾಯಿಬಾಬಾ ಅನೇಕ ವರ್ಷ ನೆಲೆಸಿದ್ದರು. ಇಲ್ಲಿ ಇದ್ದುಕೊಂಡೆ ಅವರು ಭಕ್ತರಿಗೆ ಭಕ್ತಿಮಾರ್ಗದ ವಿಷಯದಲ್ಲಿ ತಮ್ಮ ಕೃತಿಗಳ ಮೂಲಕಮಾರ್ಗದರ್ಶನ ಮಾಡಿದರು. ‘ಶ್ರದ್ಧಾ’ ಹಾಗೂ ‘ಸಬುರಿ’ (ತಾಳ್ಮೆ) ಎಂಬ ಎರಡು ಸೂತ್ರಗಳು ಜೀವಿಸಲಿಕ್ಕೆಂದು ನೀಡಿದ ಶ್ರೀ ಸಾಯಿಬಾಬಾ೨೦ನೆಯ ಶತಮಾನದ ಆರಂಭದಲ್ಲಿ ಶಿರಡಿಯಲ್ಲಿ ಸಮಾಧಿಯನ್ನು ಪ್ರವೇಶಿಸಿದರು. ನಂತರ೧೯೨೨ರಲ್ಲಿ ಇಲ್ಲಿ ಪ್ರಶಸ್ತವಾದ ಮಂದಿರ ಕಟ್ಟಲಾಯಿತು ಹಾಗೂ ಶ್ರೀ ಸಾಯಿಬಾಬಾಮೂರ್ತಿಯ ಸ್ಥಾಪನೆಯನ್ನೂ ಮಾಡಲಾಗಿತು.ಪ್ರತಿ ವರ್ಷ ಶ್ರೀ ಸಾಯಿಬಾಬಾ ದರ್ಶನವನ್ನು ಪಡೆಯಲು ಭಕ್ತರು ಅಪಾರ ಸಂಖ್ಯೆಯಲ್ಲಿ ಶಿರಡಿಗೆ ಆಗಮಿಸುತ್ತಾರೆ.
ಹಾಲುಗಲ್ಲಿನಿಂದ ಶ್ರೀ ಸಾಯಿಬಾಬಾಸುಂದರ, ವಿಶಾಲ ಮೂರ್ತಿಯು ಭಕ್ತಾದಿಗಳ ಶ್ರದ್ಧಾಸ್ಥಾನವಾಗಿದೆ. ಅಲ್ಲದೇ ಹಾಲುಗಲ್ಲಿನಸಮಾಧಿಸ್ಥಾನವೂ ಅತ್ಯಂತ ಪವಿತ್ರ, ಹಾಗೂ ಸುಂದರವಾಗಿದೆ. ನಾಗಪುರದ ಗೋಪಾಳರಾವ ಬುಟೀಯವರು ಮುರಳಿಧರ ಮಂದಿರದ ಸಲುವಾಗಿ ಶಿರಡಿಯಲ್ಲಿ ಕಟ್ಟಡ ಕಟ್ಟಿಸಿದರು. ಆದರೆ ಸಾಯಿಬಾಬಾ ಅಲ್ಲಿನ ಮುರಳಿಧರರಾದರು ಎಂದು ಹೇಳಲಾಗುತ್ತದೆ.
ಶಿರಡಿಯಲ್ಲಿ ಬಾಲಯೋಗಿಯ ರೂಪದಲ್ಲಿ ತಲುಪಿದ ಸಾಯಿಬಾಬಾ ಎಲ್ಲಿ ನೆಲೆಸಿದ್ದರೋ, ಅದನ್ನು ದ್ವಾರಕಾಮಾಯಿ ಎಂದು ಕರೆಯುತ್ತಾರೆ. ಅವರು ಯಾವ ಬೇವಿನಮರದ ಕೆಳಗೆ ಮೊಟ್ಟಮೊದಲಿಗೆ ಕಾಣಿಸಿದರೋ ಅದನ್ನು ಗುರುಸ್ಥಾನ ಎಂದು ಕರೆಯುತ್ತಾರೆ. ಅವರು ಮಲಗುತ್ತಿದ್ದ ಚಾವಡಿ ಕೂಡ ಶಿರಡಿಯಲ್ಲಿದೆ. ಶ್ರೀ ಸಾಯಿಬಾಬಾ ಪ್ರತಿದಿನ ನೀರುಹಾಕಿ ಸಿದ್ಧಪಡಿಸಿದತೋಟ, ಬಾಬಾದಿನಾಲೂ ವಿಶ್ರಾಂತಿ ಪಡೆಯುತ್ತಿದ್ದ ಬೇವಿನ ಮರಕೂಡ ಇದೆ.ಮಂದಿರದ ಪರಿಸರದಲ್ಲಿಯೇ ಶ್ರೀ ಸಾಯಿಬಾಬಾಪ್ರತಿನಿತ್ಯ ಕುಳಿತುಕೊಳ್ಳುವ ಸ್ಥಳದಲ್ಲಿಶಿಲೆಯನ್ನೂ ದರ್ಶನಕ್ಕಾಗಿ ಇಟ್ಟಿದ್ದಾರೆ.
ಶ್ರೀ ಸಾಯಿಬಾಬಾಪ್ರತಿನಿತ್ಯ ಬಳಸುತ್ತಿದ್ದ ವಸ್ತುಗಳಸಂಗ್ರಹಾಲಯ ಮಾಡಿದ್ದಾರೆ. ಸಾಯಿಬಾಬಾ ಉಪಯೋಗಿಸುತ್ತಿದ್ದನೀರಿನ ಡಬ್ಬಿ, ಪಾದುಕೆಗಳು, ಬೀಸುವಕಲ್ಲು, ಹುಕ್ಕಾದಾಣಿ ಮುಂತಾದ ವಸ್ತುಗಳು ನೋಡಲು ಸಿಗುತ್ತವೆ. ಅವರದುರ್ಲಭ ಛಾಯಾಚಿತ್ರಗಳೂ ಇಲ್ಲಿ ನೋಡಲು ಸಿಗುತ್ತವೆ.