ಶ್ರೀ ಹುಲಿಗೆಮ್ಮ ದೇವಿ.. ದೇವಿ ಶ್ರೀಸ್ಥಳಕ್ಕೆ ಬಂದ ಹಿನ್ನೆಲೆ…
ಸುಮಾರು 800 ವರ್ಷ ಇತಿಹಾಸ…
ಹೊಂದಿರುವ….
ತುಂಗಭದ್ರ ನದಿಯ ತಟದಲ್ಲಿ ನೆಲೆ ನಿಂತಿರುವ…
ನಮ್ಮ ಕಲ್ಯಾಣ ಕರ್ನಾಟಕ ಪ್ರಾಂತ್ಯದ …
ಶಕ್ತಿ ದೇವತೆ….
ವಿಜಯನಗರ ಸಾಮ್ರಾಜ್ಯದ ರಕ್ಷಕಿ….
ಶ್ರೀ ಹುಲಿಗೆಮ್ಮ ದೇವಿ..
ದೇವಿ ಶ್ರೀಸ್ಥಳಕ್ಕೆ ಬಂದ ಹಿನ್ನೆಲೆ…
800 ವರ್ಷದ ಹಿಂದೆ ಭಕ್ತರಿಬ್ಬರು…
ಪ್ರತಿ ಹುಣ್ಣಿಮೆ.. ಸವದತ್ತಿಗೆ ಹೋಗುವ…
ವಾಡಿಕೆ…
ಒಂದು… ಹುಣ್ಣಿಮೆ ಸವದತ್ತಿಗೆ ಹೋಗುವಾಗ…
ತುಂಬಾ ಗಾಳಿ ಮಳೆ ಇಂದಾಗಿ ಸಮಯಕ್ಕೆ ಹೋಗಲು ಸಾಧ್ಯವಾಗಲಿಲ್ಲ…
ಅವರ ಭಕ್ತಿಗೆ ಮೆಚ್ಚಿದ ಸವದತ್ತಿ ಎಲ್ಲಮ್ಮ ದೇವಿ…
ಅವರಿಗೆ ಅರ್ಧ ದಾರಿಯಲ್ಲೇ ದರ್ಶನ ಕೊಟ್ಟು… ನೀವು ಇನ್ನ ಮೇಲೆ ಇಲ್ಲಿ ಬರುವ ಅವಶ್ಯಕತೆ ಇಲ್ಲ…
ನಾನೇ ನಿಮ್ಮ ಊರಿಗೆ ಬಂದು ನೆಲೆಸುತ್ತೇನೆ…
ಎಂದು ಹೇಳಿ ಅನುಗ್ರಹಿಸುತ್ತಾಳೆ…
ಅಂದಿನ ವ್ಯಾಘ್ರಪುರಿ… ಇಂದು ಹುಲಿಗಿ ಎಂದು ಕರೆಯಲಾಗುತ್ತಿದೆ….
ಈ ದೇವಿಯ ಕಣ್ಣುಗಳಲ್ಲಿ… ಸಾಲಿಗ್ರಾಮ ಶಿಲೆ ಇರುವುದು… ವಿಶೇಷತೆಯಲ್ಲಿ ವಿಶೇಷವಾಗಿದೆ….
ಭರತ ಹುಣ್ಣಿಮೆಯ ಹುಲಿಗಿ ಕ್ಷೇತ್ರದ ಮಾಹಿತಿ..🙏