ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಣ್ಣಾ ಮುಚ್ಚಾಲೆ ಹಾಡಿಗೆ ಒಳ ಅರ್ಥ…!

ಕಣ್ಣಾ ಮುಚ್ಚಾಲೆ ಹಾಡಿಗೆ ಒಳ ಅರ್ಥ…!

“ಕಣ್ಣಾ ಮುಚ್ಚೇ….
ಕಾಡೇ ಗೂಡೇ….
ಉದ್ದಿನ ಮೂಟೆ….
ಉರುಳೇ ಹೋಯ್ತು….
ನಮ್ಮಯ ಹಕ್ಕಿ …
ನಿಮ್ಮಯ ಹಕ್ಕಿ ….
ಬಿಟ್ಟೇ ಬಿಟ್ಟೆ … “

ಇದೊಂದು ಮಕ್ಕಳ ಆಟ

ನಮ್ಮ ಹಿಂದಿನವರು ಮಕ್ಕಳಾಟಗಳಲ್ಲೂ ಸಹ ಎಷ್ಟು ಚೆನ್ನಾಗಿ ರಾಮಾಯಣದ, ಮಹಾಭಾರತದ ಕತೆಗಳನ್ನು ಜೋಡಿಸಿ ಹೆಣೆಯುತ್ತಿದ್ದರು ಎನ್ನುವುದಕ್ಕೆ ಇದೊಂದು ನಿದರ್ಶನ.

“ಕಣ್ಣಾ ಮುಚ್ಚೆ ” –
ಅಂದರೆ ಅಯೋಧ್ಯೆಯ ಮಹಾರಾಜ “ದಶರಥ” ಕಣ್ಣು ಮುಚ್ಚಲು….

“ಕಾಡೇ ಗೂಡೆ “-
ಶ್ರೀರಾಮಚಂದ್ರನಿಗೆ ಕಾಡೇ ಮನೆಯಾಯಿತು…

“ಉದ್ದಿನಮೂಟೆ” –
ಅಹಂಕಾರದಿ ಉದ್ದಿಟತನದಿ ನೆಂದ ಬೇಳೆಯಂತೆ ಉಬ್ಬಿಹೋಗಿದ್ದ ರಾವಣನನ್ನು …

“ಉರುಳೇ ಹೋಯ್ತು” –
ಯುದ್ಧದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ…. ಅದೆ ಸೊಕ್ಕಿನ ಮೂಟೆ, ಅದೇ ಉದ್ದಿನ ಮೂಟೆ ಉರುಳೇ ಹೋಯ್ತು….

“ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ “….

ಸಾತ್ವಿಕನಾದ ವಿಭೀಷಣ (ರಾವಣನ ತಮ್ಮ ) ಸೀತೆಯನ್ನು ಗೌರವಾಧರಗಳಿಂದ ತಂದು ಶ್ರೀರಾಮನಿಗೊಪ್ಪಿಸಿದ…

ರಾವಣ ತಿಳಿದಂತೆ ಇದು ನಮ್ಮ ಹಕ್ಕಿ ಅಲ್ಲ , ನಿಮ್ಮಯ ಹಕ್ಕಿ
ಬಿಟ್ಟು ಕಳಿಸಿಕೊಡುತ್ತಿದ್ದೇವೆ, ಸ್ವೀಕರಿಸಿ, ಎಂದು ರಾಮ ಲಕ್ಷ್ಮಣರನ್ನು ಪ್ರಾರ್ಥಿಸಿದ…

ಈ ಅರ್ಥದಲ್ಲಿ ಇಡೀ ರಾಮಾಯಣದ ಕಥೆಯನ್ನು ಈ ಮಕ್ಕಳಾಟದಲ್ಲಿ ಪೋಣಿಸಿದವರು ನಮ್ಮ ಹಿಂದಿನ ತಲೆಮಾರಿನವರು….*

  ಹುಲಿಗೆಮ್ಮ ದೇವಿ ದೇವಸ್ಥಾನ ಹುಲಿಗಿ ಕೊಪ್ಪಳ

ಹೀಗಿದೆ ನೋಡಿ ಅರ್ಥ ಈ “ಕಣ್ಣಾಮುಚ್ಚಾಲೆ” ಆಟಕ್ಕೆ….

‘ಏಗ್ದಂಗೆಲ್ಲಾ ಐತೆ’ ಕೃತಿಯಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ಇದನ್ನ ವಿವರಿಸಿದ್ದಾರೆ.


“ರಾಮ” ಎಂಬ ಎರಡಕ್ಷರದ ಪದದಲ್ಲಿದೆ ಮಾಧುರ್ಯತೆ. ರಾಮನಾಮಜಪದಿಂದ ಶರೀರ ಹಾಗೂ ಮನಸ್ಸಿಗೆ ಶಾಂತಿ,ನೆಮ್ಮದಿ ಹಾಗೂ ಆಧ್ಯಾತ್ಮಿಕ ಅನುಭವ ಸಿಗುತ್ತದೆ.ಸಾವಿರಾರು ಸಂತರು,ಮಹಾತ್ಮರು ರಾಮನಾಮದಿಂದ ಅಲೌಕಿಕ ಶಾಂತಿ ಹಾಗೂ ಮೋಕ್ಷತ್ವವನ್ನು ಪಡೆದಿದ್ದಾರೆ.ರಾಮನಾಮದ ಮಹಿಮೆ ರಾಮನಿಗಿಂತಲೂ ಹಿರಿದು.ಭವದ ಕತ್ತಲೆಯಿಂದ ಆನಂದದ ಬೆಳಕಿನತ್ತ ಕೊಂಡೊಯ್ಯುವ ದೀಪ ರಾಮನಾಮ.ಭವದುಃಖದ ಪರಿಹಾರಕ್ಕೆ ರಾಮನಾಮವೊಂದೇ ಸಾಕು.

ಸಮರ್ಥ ರಾಮದಾಸರು “ಶ್ರೀ ರಾಮ ಜಯರಾಮ ಜಯ ಜಯ ರಾಮ” ಎಂಬ ತ್ರಯೋದಶಾಕ್ಷರಿ ಮಂತ್ರವನ್ನು ೧೩ ಕೋಟಿ ಸಲ ಬರೆದು ಸಾಕ್ಷಾತ್ ಶ್ರೀರಾಮನ ದರ್ಶನ ಪಡೆದರು.

ಶ್ರೀರಾಮನನ್ನೇ ನೆನೆದು,ಪೂಜಿಸಿ ಶಬರಿ ಮುಮುಕ್ಷತ್ವವನ್ನು ಪಡೆದಳು.

ವಾನರರ ಸೇನೆ ರಾಮದರ್ಶನದಿಂದ ಪುನೀತವಾಯಿತು.

ಹೀಗೆ ಶರಣಾಗತರನ್ನು ರಕ್ಷಿಸುವ ಭಕ್ತವತ್ಸಲ ಶ್ರೀರಾಮ.ಆತನ ನಾಮಜಪದಿಂದ ಮಾತ್ರ ಕಲಿಯುಗದ ದುಃಖದುಮ್ಮಾನಗಳ ಪರಿಹಾರ.ರಾಮನಾಮ ಸಂಕೀರ್ತನೆಯಿಂದ ಈ ಭವಸಾಗರವನ್ನು ದಾಟಲು ಸುಲಭ ಸಾಧ್ಯ.
ರಾಮನಾಮದಲ್ಲಿದೆ ಅದ್ಭುತ ಶಕ್ತಿ,ಅಪಾರ ಮಹಿಮೆ.ಆ ಶಕ್ತಿ ಮಹಿಮೆಗಳ ದರ್ಶನ ಕೇವಲ ಶ್ರದ್ಧೆ,ವಿಶ್ವಾಸ ಹಾಗೂ ಭಕ್ತಿಗಳಿಂದ ಮಾತ್ರ ಸಾಧ್ಯ. “ಅಣೋರಣೀಯಾನ್ ಮಹತೋ ಗರೀಯಾನ್” ಅಣುವಿನಲ್ಲಿ ಅಣು,ಮಹತ್ತಿನಲ್ಲಿ ಹಿರಿದು ರಾಮನಾಮ.ಇದನ್ನರಿತ ವ್ಯಕ್ತಿಗೆ ಭವಸಾಗರದ ಅಳುಕಿಲ್ಲ,ದುಃಖ,ನೋವುಗಳಿಲ್ಲ.

“ಜಪಹಿಂ ನಾಮು ಜನ ಆರತ ಭಾರೀ | ಮಿಟಹಿಂ ಕುಸಂಕಟ ಹೋಹಿಂ ಸುಖಾರೀ |

  ಬ್ರಾಹ್ಮೀ ಮುಹೂರ್ತ

ಪ್ರತಿದಿನ ಮನದಲ್ಲಿ ಎರಡು ನಿಮಿಷ ರಾಮನಾಮವನ್ನು ನೆನೆದರೆ ಸಾಕು, ಅದೇ ಶ್ರೀರಾಮನ ನಿತ್ಯಪೂಜೆ.ಶ್ರೀರಾಮನ ಸಂಕೀರ್ತನೆಯಿಂದ ಕೇವಲ ಮನಶ್ಶಾಂತಿಯಷ್ಟೇ ಅಲ್ಲ,ಕರ್ಮಶುದ್ಧಿ,ವಿಚಾರಶುದ್ಧಿಗಳು ಸಹ ಸಿಗುತ್ತವೆ.ಪ್ರಕೃತಿಯ ಆರಾಧನೆಯೂ ಕೂಡ.ರಾಮನಿಲ್ಲದೇ ಪ್ರಕೃತಿ,ಪ್ರಪಂಚ,ಚರಾಚರವಸ್ತುಗಳ್ಯಾವವೂ ಇರಲಾರವು.

“ಆಪನ್ನಃ ಸಂಸೃತಿಂ ಘೋರಾಂ ಯನ್ನಾಮ ವಿವಶೋ ಗೃಣನ್ | ತತಃ ಸದ್ಯೋ ವಿಮುಚ್ಯೇತ ಯದ್ವಿಭೇತಿ ಸ್ವಯಂ ಭಯಮ್ ||
(ಶ್ರೀ ಮದ್ಭಾಗವತ)
ಅಂದರೆ,ಘೋರ ಸಂಸಾರ ಬಂಧನದಲ್ಲಿ ನಿಲುಕಿರುವ ಮನುಷ್ಯ ರಾಮನಾಮವನ್ನು ಜಪಿಸಿದ ತಕ್ಷಣ ಎಲ್ಲಾ ಬಂಧನಗಳಿಂದ ವಿಮುಕ್ತನಾಗುತ್ತಾನೆ.ಶ್ರೀರಾಮನ ದಿವ್ಯಸ್ಥಾನವನ್ನು ಹೊಂದಲು ಅರ್ಹತೆಯನ್ನು ಗಳಿಸುತ್ತಾನೆ.ರಾಮನಾಮ ಸ್ವಯಂಜ್ಯೋತಿ,ಸ್ವಯಂ ಮಣಿ,ರಾಮನಾಮವನ್ನು ಜಪಿಸುವವನೆಂದೂ ಅಂಧಕಾರದಲ್ಲಿರಲಾರನೆಂದು ಶ್ರೀಮದ್ಭಾಗವತ ತಿಳಿಸುತ್ತದೆ.

“ನ ದೇಶನಿಯಮಸ್ತಸ್ಮಿನ್ ನ ಕಾಲನಿಯಮಸ್ತಥಾ | ನೋಚ್ಛಿಷ್ಟೇಪಿ ನಿಷೇಧೋಸ್ತಿ ಶ್ರೀಹರೇರ್ನಮ ಲುಬ್ಧಕ ||”

ರಾಮಮಂತ್ರವನ್ನು ಜಪಿಸಲು ದೇಶನಿಯಮವಿಲ್ಲ,ಕಾಲನಿಯಮವಿಲ್ಲ,ಯಾವುದೇ ಸ್ಥಳ ಹಾಗೂ ಸಮಯದಲ್ಲಿ ರಾಮಮಂತ್ರವನ್ನು ಜಪಿಸಬಹುದು.ಅಶುಚಿ,ಅಪವಿತ್ರವಾಗಿರುವಾಗಲೂ ಸಹ ಶ್ರೀರಾಮಮಂತ್ರವನ್ನು ಜಪಿಸಬಹುದು. ನಿರ್ದಿಷ್ಟ,ಕಠೋರ ನಿಯಮಗಳ್ಯಾವವೂ ರಾಮ ಜಪಕ್ಕಿಲ್ಲ.

“ರಾಮ” ಕೇವಲ ಎರಡಕ್ಷರದ ಪದವಲ್ಲ.ಅಲೌಕಿಕ ಸಂತೋಷ,ಶಾಂತಿ,ಜೀವನ ಹಾಗೂ ಧರ್ಮ ಇವು “ರಾಮ” ಶಬ್ದಕ್ಕಿರುವ ಅರ್ಥಗಳು. ”ಹಾಗಾಗಿ “ರಾಮ” ಎಂಬುದು ದಿವ್ಯಮಂತ್ರ.ವೇದಗಳ ಜ್ಞಾನವಿಲ್ಲದೆಯೂ ಮೋಕ್ಷವನ್ನು ತೋರಿಸುವ ಮಾರ್ಗ.ರಾಮನಾಮ ಜಪಿಸುವವನಿಗೆ ಸರ್ವದುಃಖಗಳಿಂದ ವಿಮೋಚನೆ.

ಹಿಂದಿನಕಾಲದಲ್ಲಿ ಪರಸ್ಪರರು ಭೇಟಿಯಾದಾಗ “ರಾಮ್ ರಾಮ್” ಎನ್ನುವ ಪದ್ಧತಿಯಿತ್ತು.”ರಾಮ” ಶಬ್ದವನ್ನು ಬಿಡಿಸಿದಾಗ ಮೂರು ಅಕ್ಷರಗಳು ಸಿಗುತ್ತವೆ.ರ್+ಆ+ಮ್.. “ರ” ವ್ಯಂಜನಗಳಲ್ಲಿ ಇಪ್ಪತ್ತೇಳನೆಯದು. “ಆ” ಸ್ವರಗಳಲ್ಲಿ ಎರಡನೆಯದು. “ಮ್” ವ್ಯಂಜನಗಳಲ್ಲಿ ಇಪ್ಪತ್ತೈದನೆಯದು. ಇಪ್ಪತ್ತೇಳು+ಎರಡು+ಇಪ್ಪತ್ತೈದು = ಐವತ್ತನಾಲ್ಕು. ”ರಾಮ್ ರಾಮ್” ಎಂದರೆ ಐವತ್ತನಾಲ್ಕು + ಐವತ್ತನಾಲ್ಕು = ನೂರಾಎಂಟು. ನೂರಾಎಂಟು ನಮಗೆ ಪವಿತ್ರ ಸಂಖ್ಯೆ.ಜಪಮಾಲೆಯಲ್ಲಿರುವ ಮಣಿಗಳ ಸಂಖ್ಯೆ.ಜಪಮಾಲೆಯನ್ನು ಹಿಡಿದು ನೂರಾಎಂಟು ಬಾರಿ ಜಪ ಮಾಡಬೇಕಿಂದಿಲ್ಲ.”ರಾಮ ರಾಮ” ಎಂದರೆ ಸಾಕು, ಒಂದು ಮಾಲೆ ಜಪವನ್ನು ಮಾಡಿದ ಫಲ ಸಿಗುತ್ತದೆ..!! “ರಾಮ” ಎಂಬುದು ರಘುಪತಿಯ ಉದಾರನಾಮ.ಅದು ಅತ್ಯಂತ ಪವಿತ್ರ ಹೆಸರು.ವೇದ-ಪುರಾಣಗಳ ಸಾರ.ಸಕಲ ಕಲ್ಯಾಣಗಳ ಭವನ.ಅಮಂಗಲಗಳ ಹರಣ.ಈ ರಾಮನಾಮವನ್ನು ಪಾರ್ವತಿ ಸಹಿತ ಪರಮೇಶ್ವರ ಸದಾ ಜಪಿಸುತ್ತಿರುತ್ತಾನೆ. “ರಾಮ”ವೆಂಬ ಪವಿತ್ರನಾಮ ಸದಾ ನಮ್ಮ ಮನದಲ್ಲಿರಲಿ.ಶ್ರೀರಾಮನ ಅನುಗ್ರಹ ಸದಾ ನಮಗಿರಲಿ.
ಹಾಗಾಗಿ ರಾಮನಾಮ ಭವದ ದಿವ್ಯಮಂತ್ರ.ಆತನ ಸ್ಮರಣೆಯೊಂದೇ ಮೋಕ್ಷಪ್ರದಾಯಕ.ಆತನನ್ನು ಸದಾ ಸ್ಮರಿಸಿ ರಾಮನ ದಿವ್ಯಕೃಪೆಗೆ ಪಾತ್ರರಾಗೋಣ.
ಲೋಕಾಃ ಸಮಸ್ತಾಃ ಸುಖಿನೋ ಭವಂತು.
ಹರೇ ರಾಮ

  ಭೋಜನದ ಮಹತ್ವ

ಶ್ರೀ ರಾಮ ಜಯರಾಮ ಜಯ ಜಯ ರಾಮ


Leave a Reply

Your email address will not be published. Required fields are marked *

Translate »