ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗೋವಿನ ಪ್ರಾಧಾನ್ಯತೆ, ಸಾಕಣೆ, ಉಪಯುಕ್ತತೆ, ಅನಿವಾರ್ಯತೆ – ವೇದ ವಿಜ್ಞಾನ

ಗೋವೋ ವಿಶ್ವಸ್ಯ ಮಾತರಃ

ಗೋವಿನ ಪ್ರಾಧಾನ್ಯತೆ, ಸಾಕಣೆ, ಉಪಯುಕ್ತತೆ, ಅನಿವಾರ್ಯತೆಗಳನ್ನು ನಾವು ಅನ್ವೇಷಿಸುತ್ತಾ ಹೋದಲ್ಲಿ ನಮಗೆ ವಿಪುಲ ಆಧಾರಗಳು, ಸಾಕ್ಷಿಗಳು ಸಿಗುವುದು ವೇದದಲ್ಲಿ. ಪರಮ ಸತ್ಯವಾದ ವೇದದಲ್ಲಿ ಗೋವಿನ ಅಗತ್ಯತೆ ಮಾನವೀಯ ಜೀವನದಲ್ಲಿ ಎಷ್ಟು ಆವರಿಸಿವೆ ? ಅವು ನಮಗೆ ಎಷ್ಟು ರಕ್ಷಣಾತ್ಮಕವಾಗಿವೆ ? ಎಂದು ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯ. ಆದರೆ ವೇದದ ಉದಾಹರಣೆಯೊಂದಿಗೆ ತುಲನಾತ್ಮಕ ಸಂಶೋಧನೆ ಮಾಡಿದಲ್ಲಿ ಗೋ ಸಾಕಣೆಯಲ್ಲಿರತಕ್ಕ ಉಪಯುಕ್ತತೆ ಸದೃಢ ಸಮಾಜಕ್ಕೆ ಎಷ್ಟು ಎಂಬುದು ಅರ್ಥವಾಗುತ್ತದೆ. ಮನುಷ್ಯಮಾತ್ರರಾದ ನಾವು ಈ ಜೀವನ ಯಾತ್ರೆಯ ಪರಿಪೂರ್ಣ ರಕ್ಷಕಿಯಾದ ಗೋ ಸಾಕಣೆಯಲ್ಲಿ ,ಎಷ್ಟು ಸಫಲರು ? ಎಷ್ಟು ಅರ್ಹರು ? ಎಷ್ಟು ಸಮರ್ಥವಾಗಿ ಸಾಕಬಲ್ಲೆವು ? ಎಂದು ಅಥರ್ವದ ಒಂದು ಮಂತ್ರ ಹೇಳುತ್ತದೆ ಗಮನಿಸಿ.

ಓಂ|| ಕಃ ಪೃಶ್ನಿಂ ಧೇನುಂ ವರುಣೇನ ದತ್ತಾಮಥರ್ವಣೇ ಸುದುಘಾಂ ನಿತ್ಯವತ್ಸಾಂ |
ಬೃಹಸ್ಪತಿನಾ ಸಖ್ಯಂ ಜುಷಾಣೋ ಯಥಾ ವಶಂ ತನ್ನಃ ಕಲ್ಪಯಾತಿ || ಅ ೭-೧೦೪ ||

ಹೇ ಗೋಮಾತೆಯೇ, ನಾವು ಕೊಡುವ ಈ ಅಲ್ಪ ಆಹಾರದಿಂದಲೇ ನೀನು ತೃಪ್ತಳಾಗು. ನಮ್ಮನ್ನು ರಕ್ಷಿಸು. ನಾವು ಅಶಕ್ತರು. ನಿನ್ನನ್ನು ಪ್ರಜಾಪತಿಯೂ ಕೂಡಾ ಸಮರ್ಥವಾಗಿ ತೃಪ್ತಿ ಪಡಿಸುತ್ತಾನೆ ಎಂದು ಹೇಳಲಾರೆ. ಆದರೆ ನೀನು ನಿತ್ಯತೃಪ್ತಳು, ಅಲ್ಪತೃಪ್ತಳು. ಹಾಗಾಗಿ ನಾವು ಕೊಡುವ ಈ ಅಲ್ಪಾಹಾರದಿಂದಲೇ ತೃಪ್ತಳಾಗಿ ಈ ಅಮೃತೋಪಮವಾದ ಹಾಲನ್ನು ನೀನು ಕರುಣೆಯಿಂದ ನೀಡುತ್ತಿದ್ದೀಯಾ. ಇದರಿಂದ ನಮ್ಮಲ್ಲಿ ಸಹಜ ಜ್ಞಾನ ವೃದ್ಧಿಯಾಗುತ್ತದೆ. ಸಕಲ ಸಂಪತ್ತು ಲಭಿಸುತ್ತದೆ. ಏಕೆಂದರೆ ಸಕಲೈಶ್ವರ್ಯ ರೂಪಿಯಾದ ನೀನು ಎಲ್ಲಾ ಸಂಪತ್ತನ್ನೂ ನಮಗೆ ಕೊಡುತ್ತಿದ್ದಿಯಾ. ಆದರೆ ಅದಕ್ಕೆ ಪೂರಕವಾಗಿ ನಾವೇನು ಕೊಡಬಲ್ಲೆವು ? ನಮ್ಮ ಮೇಲೆ ಕರುಣೆಯಿರಲಿ.

ವೇದಕಾಲದಲ್ಲಿ ಒಬ್ಬನ ಅರ್ಹತೆ ಸಂಪತ್ತುಗಳನ್ನು ಗುರುತಿಸುತ್ತಿದ್ದುದು ಗೋ ಸಂಖ್ಯೆಯಿಂದ. ಎಷ್ಟು ಗೋ ಸಾಕಣೆ ಮಾಡತ್ತಿದ್ದ ಎಂಬುದರಿಂದ ಅವನು ಎಷ್ಟು ಆರ್ಥಿಕ ಸಬಲ ಎಂದು ಗುರುತಿಸುತ್ತಿದ್ದರು. ವಿನಿಮಯವೂ ಕೂಡಾ ಗೋವಿನ ಮುಖೇನವೇ ನಡೆಯುತ್ತಿತ್ತು ಎಂದು ಕಂಡು ಬರುತ್ತದೆ. ಒಬ್ಬ ಶ್ರೇಷ್ಠನನ್ನೋ, ಜ್ಞಾನಿಯನ್ನೋ ಗುರುತಿಸಿ ಗೌರವಿಸುವಾಗ ಗೌರವರೂಪದ ಕಾಣಿಕೆಯಾಗಿ ಕೊಡುತ್ತಿದ್ದುದು ಗೋವನ್ನು, ಈಗಿನ ಹಿತ್ತಾಳೆಯ ಸ್ಮರಣಿಕೆಯನ್ನಲ್ಲ. ಈ ಸ್ಮರಣಿಕೆಗಳು ನಾಶವಾಗುತ್ತವೆ. ಆದರೆ ಗೋ ವೃದ್ಧಿಯಾಗುತ್ತದೆ, ಶಾಶ್ವತವಾಗಿ ಉಳಿಯುತ್ತದೆ. ಗೋ ಎಂದಾಗ ಬರೇ ಹಾಲು ಕರೆಯುವ ಹಸು ಮಾತ್ರವಲ್ಲ ಎಂಬುದು ಅಗತ್ಯವಾಗಿ ತಿಳಿದಿರಬೇಕು. ರುದ್ರಾಧ್ಯಾಯ ಭಾಗದಲ್ಲಿ ಒಂದು ಕಡೆ ಉದಾಹರಿಸಲ್ಪಟ್ಟಿದೆ – “ಸವತ್ಸಾಃ ಸಪಯಸಃ ಋಷಭಃ”. ಅಂದರೆ ಕರುವಿದ್ದು, ಹಾಲು ಕೊಡುವ ಸಾಮರ್ಥ್ಯವೂ ಇದ್ದು, ಪುನರುತ್ಪಾದನಾ ಶಕ್ತಿಯನ್ನು ಹೊಂದಲು ಬೇಕಾದ ಎತ್ತು ಕೂಡಿರಲಿ ಎಂದೇ ಅರ್ಥ. ಅಂದರೆ ಸಪರಿವಾರ ಗೋ ಸಾಕಣೆ ಮಾಡಬೇಕು ಎಂದು ಭಾವ. ನೈಜವಾಗಿ ಸಾಕಣೆಯಲ್ಲಿ ನಮ್ಮ ಅಸಮರ್ಥತೆಯನ್ನು ಗುರುತಿಸಿ, ವೇದದಲ್ಲಿ ಯಜಮಾನಸ್ಯ ಪಶೂನ್ ಪಾಹಿ ಅಂದರೆ ತನ್ನ ಅಸಮರ್ಥತೆಯಿಂದ ನಿನ್ನ ಸಂಪತ್ತಿಗೆ ತೊಂದರೆಯಾಗದಿರಲಿ. ಇಲ್ಲಿ ವಿಶಾಲಾರ್ಥವಿದೆ. ಪಶು ಎಂದರೆ ಗೋ ಮಾತ್ರವಲ್ಲ, ಸರ್ವಸಂಪತ್ತು, ಸಪರಿವಾರವೆಲ್ಲಾ ಪಶುವೆಂದು ಉದಾಹರಿಸಲ್ಪಟ್ಟಿದೆ. ಪತ್ನಿ, ಪುತ್ರ ಹೊರತಾದ ತನ್ನದ್ದಾದ ಸಕಲವೂ ಪಶು, ಎಂದರೆ ಪಾಲಿಸಿಕೊಳ್ಳಬೇಕಾದ ಅಗತ್ಯತೆ ಮತ್ತು ಬದ್ಧತೆ ಇರತಕ್ಕದ್ದು ಎಂದು ಅರ್ಥ. ಹಾಗಾಗಿಯೇ ಹಿಂದೆ ಉದಾಹರಿಸಿದ ಮಂತ್ರದಲ್ಲಿ ಪ್ರಜಾಪತಿಯಾದವನೇ ನಿನ್ನನ್ನು ಅಂದರೆ ಗೋವನ್ನು ಎಷ್ಟು ಪೋಷಿಸಬಲ್ಲ ? ಎಷ್ಟು ಸಮರ್ಥ ? ನಿನ್ನ ಸತ್ಸಂಗದಿಂದ ಸಾಮಾನ್ಯರೂ ಬ್ರಹ್ಮಜ್ಞಾನಗಳನ್ನು ಹೊಂದಲು ಸಾಧ್ಯ. ಮಹಾಜ್ಞಾನಿಗಳು ನಿನ್ನ ಸಖ್ಯದಿಂದಲೇ ಮಹಾಜ್ಞಾನಿಗಳೆನಿಸಿಕೊಂಡಿದ್ದಾರೆ ಎಂದು ಘೋಷಿಸಿದೆ.

  ಕೂರ್ಮ ಪುರಾಣ ಏನು ಹೇಳುತ್ತದೆ?

ಅಥರ್ವವೇದ ಕಾಂಡ ೯, ವೃಷಭ ಸೂಕ್ತ ೪, ೩೨ ಮಂತ್ರಗಳು ವೃಷಭಗಳ ಸಾಕಣೆ, ಅವುಗಳಿಂದಾಗುವ ಪರಿಣಾಮ, ವಾತಾವರಣ ಶುದ್ಧತೆ, ಮಾನಸಿಕ ಬಲ-ಭದ್ರತೆ, ಆರ್ಥಿಕ ಸಬಲತೆಗೆ ಪ್ರಾಪಂಚಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಎಷ್ಟು ಪೂರಕ ಆಲೋಚಿಸಿ ? ಗೋವೃಷಭಗಳು ಒಟ್ಟಾರೆ ಮಾನವ ಜೀವನದ ಭದ್ರತೆಗೆ ಆಧಾರಸ್ತಂಭ ಎನ್ನುವುದು ಈ ಮಂತ್ರಗಳಿಂದ ಅರ್ಥವಾಗುತ್ತದೆ.

೧. ಸಾಹಸ್ರತ್ವೇಷಃ ಋಷಭಃ ಪಯಸ್ವಾನ್ ವಿಶ್ವಾ ರೂಪಾಣಿ ವಕ್ಷಣಾಸು ಬಿಭ್ರತ್ |
ಭದ್ರಂ ದಾತ್ರೇ ಯಜಮಾನಾಯ ಶಿಕ್ಷನ್ ಬಾರ್ಹಸ್ಪತ್ಯ ಉಸ್ರಿಯಸ್ತಂತು ಮಾತಾನ್ ||
ಮಹಾಶಕ್ತಿಶಾಲಿಯಾದ, ಸದೃಢವಾದ, ಪುನರುತ್ಪಾದನಾ ಶಕ್ತಿಯನ್ನು ಹೊಂದಿದ ಒಂದು ಎತ್ತು ಯಜಮಾನನಿಗೆ ಸದಾ ಮಂಗಳಕರವಾಗಿರುತ್ತದೆ. ಮಂಗಳವನ್ನುಂಟು ಮಾಡುತ್ತದೆ. ಮಂತ್ರ ವಿವರಿಸುತ್ತಾ ಸಾಕ್ಷಾತ್ ಪರಮಾತ್ಮ ಸ್ವರೂಪಿಯೇ ವೃಷಭ ಎಂದು ಹೇಳುತ್ತಾ, ಯಜಮಾನನ ಭಾಗ್ಯಸೂತ್ರವನ್ನು ಈ ಗೋವೃಷಭಗಳು ಎಳೆಎಳೆಯಾಗಿ ವಿವರಿಸುತ್ತವೆ ಗಮನಿಸಿ.

೨. ಅಪಾಂ ಯೋ ಅಗ್ರೇ ಪ್ರತಿಮಾ ಬಭೂವ ಪ್ರಭೂ ಸರ್ವಸ್ಮೈ ಪೃಥಿವೀವ ದೇವೀ |
ಪಿತಾ ವತ್ಸಾನಾಂ ಪತಿರಘ್ನ್ಯಾನಾಂ ಸಾಹಸ್ರೇ ಪೋಷೇ ಅಪಿ ನಃ ಕೃಣೋತು ||
ಋಷಭರೂಪೀ ಭಗವಂತನೂ, ಮಾತೃರೂಪೀ ಹಸುವೂ ಹೇಗೆ ಪ್ರಪಂಚಧಾರಣೆ ಮಾಡುತ್ತದೆ ? ಹೇಗೆ ಪ್ರಕೃತಿಯ ಸಮಸ್ತ ಚೈತನ್ಯ ಸಾರಸರ್ವಸ್ವ ಅಡಕಗೊಂಡು ಅಧೀನತ್ವ ಹೊಂದಿದೆ ? ಜೀವನ ನಿರ್ವಹಣೆಯ ಇಲ್ಲಿ ಮಾನವನಿಗೆ ಹೇಗೆ ಸಹಕಾರಿ ಎಂದು ವರ್ಣಿಸಿದೆ.

  ಗರುಡ ಪುರಾಣದ ಪ್ರಕಾರ ಆರು ವಿಧದ ಶುದ್ಧೀಕರಣ ಸ್ನಾನ

೩. ಪುಮಾನಂತರ್ವಾಂತಸ್ಥವಿರಃ ಪಯಸ್ವಾನ್ ವಸೋಃ ಕಬಂಧಮೃಷಭೋ ಬಿಭರ್ತಿ |
ತಮಿಂದ್ರಾಯ ಪಥಿಭಿರ್ದೇವಯಾನೈರ್ಹುತಮಗ್ನಿರ್ವಹತು ಜಾತವೇದಾಃ ||
ಮಾನವ ಜೀವನದ ಸಹಕಾರಿಯಾಗಿ ತನ್ನೆಲ್ಲಾ ಶಕ್ತಿಸಂಪನ್ನತೆಯನ್ನು ಮಾನವರಿಗೆ ಧಾರೆಯೆರೆಯುತ್ತಾ ದೇವಯಜ್ಞವನ್ನು ನಿರ್ವಹಿಸುತ್ತಿವೆ. ಈ ವೃಷಭದಂಪತಿಗಳು ಆತ್ಮೋನ್ನತಿಗೆ ಸಹಕಾರಿಯಾಗುತ್ತಿವೆ.

೪. ಪಿತಾ ವತ್ಸಾನಾಂ ಪತಿರಘ್ನ್ಯಾನಾಮಥೋ ಪಿತಾ ಮಹತಾಂ ಗರ್ಗರಾಣಾಂ |
ವತ್ಸೋ ಜರಾಯು ಪ್ರತಿಧುಕ್ ಪೀಯೂಷ ಆಮಿಕ್ಷಾ ಘೃತಂ ತದ್ ವಸ್ಯ ರೇತಃ ||

  ಹಸುವು ತನ್ನೆಲ್ಲಾ ಶಕ್ತಿಯನ್ನು ಬಸಿದು ಪೌಷ್ಟಿಕವಾದ ಜೀವಜಗತ್ತಿನ ಮೊದಲ ಆಹಾರ ಹಾಲನ್ನು ಕೊಟ್ಟು ಪ್ರಪಂಚವನ್ನು ಪೋಷಿಸುತ್ತದೆ. ಎತ್ತು ತನ್ನೆಲ್ಲಾ ಶಕ್ತಿಯನ್ನು ಧಾರೆ ಎರೆದು ಕೃಷಿವಾಣಿಜ್ಯಗಳ ಉತ್ಪನ್ನಕ್ಕೆ ಸಹಕಾರಿಯಾಗಿ ತನ್ನ ಯಜಮಾನನ ರಕ್ಷಣೆ ಮಾಡುವ ಪರಮಾತ್ಮನಂತಿದೆ. ನಮ್ಮ ಜಾನಪದೀಯ ಪದ್ಧತಿಯಲ್ಲಿ ಎತ್ತನ್ನು ಅಲಂಕರಿಸಿಕೊಂಡು ಮನೆ ಮನೆಗೆ ಹೋಗಿ ಪೂಜಿಸುವ ಪದ್ಧತಿಯಿದೆ ಗಮನಿಸಿ.

೫. ದೇವಾನಾಂ ಭಾಗ ಉಪನಾಹ ಏಷೋ ೩ ಪಾಂ ರಸ ಓಷಧೀನಾಂ ಘೃತಸ್ಯ |
ಸೋಮಸ್ಯ ಭಕ್ಷಮವೃಣೀತ ಶಕ್ರೋ ಬೃಹನ್ನದ್ರಿರಬವದ್ ಯಚ್ಛರೀರಂ ||
ಈ ಮಂತ್ರಭಾಗದ ಅರ್ಥ ಗಮನಿಸಿ. ಋಷಭದಂಪತಿಗಳು ಮನುಷ್ಯನ ಆಹಾರಶಕ್ತಿಗೆ ಮಾತ್ರವಲ್ಲ ಆರೋಗ್ಯಕ್ಕೆ ಪೂರಕವಾದ ಔಷಧಿಸಸ್ಯಗಳ ಬೆಳವಣಿಗೆಗೂ, ಅಂತಃಸತ್ವಕ್ಕೂ ಸಹಾಯಕವಾಗಿದೆ. ಅವುಗಳೆಲ್ಲಾ ಶುಕ್ರವೃದ್ಧಿಗೆ ಅಂದರೆ ಔಷಧಿಗಳ ಮೂಲಶಕ್ತಿಗೆ ಹಸುವಿನ ಗಂಜಲ, ಸೆಗಣಿಗೊಬ್ಬರಗಳು ಸಹಾಯಕ ಎನ್ನುವ ಸತ್ಯ ಎಲ್ಲರಿಗೂ ತಿಳಿದದ್ದೆ. ಎಲ್ಲಾ ಅನ್ನಾದಿಗಳಿಗೂ ಜಲ, ಸಸ್ಯರಾಶಿಗಳಿಗೆ ಶಕ್ತಿಯೂ, ಪಾವಿತ್ರ್ಯತೆ ಅವುಗಳಿಂದಲ ಪೂರೈಕೆಯಾಗುತ್ತಿವೆ ಎಂಬುದು ಎಷ್ಟು ಸತ್ಯ? ಗೋವೃಷಭಗಳ ಈ ಸಹಕಾರ್ಯ ಮನುಜಕುಲಕ್ಕೆ ವರದಾನವೆಂಬುದರಲ್ಲಿ ಎರಡು ಮಾತಿಲ್ಲ.

೬. ಸೋಮೇನ ಪೂರ್ಣಂ ಕಲಶಂ ಬಿಭರ್ಷಿ ತ್ವಷ್ಟಾ ರೂಪಾಣಾಂ ಜನಿತಾ ಪಶೂನಾಂ |
ಶಿವಾಸ್ತೇ ಸಂತು ಪ್ರಜನ್ವ ಇಹ ಯಾ ಇಮಾ ನ್ಯ೧ ಸ್ಮಭ್ಯಂ ಸ್ವಧಿತೇ ಯಚ್ಛ ಯಾ ಅಮೂಃ ||

ಹೇ ಋಷಭನೇ ನೀನು ಮಹಾಶಕ್ತಿಶಾಲಿಯೂ, ಧೀಮಂತನೂ, ಕರುಣಾಳುವೂ ಆಗಿದ್ದೀಯೆ. ಈ ಜಗತ್ತಿನ ಬಾಧೆಗಳಿಂದ ದೂರಮಡುವ ಶಕ್ತಿಸಂಪನ್ನನಾಗಿದ್ದೀಯೆ. ನೀನು ಎಲ್ಲರಿಗೂ ಶುಭಕಾರಿಯಾದ್ದರಿಂದ ನಿನ್ನನ್ನು ಶಿವನೆಂದು ಉದಾಹರಿಸುತ್ತಾರೆ. ಪಶುಪತಿಯೂ ನೀನಾಗಿದ್ದೀಯೆ.

  ಸರ್ದಾರ್ ವಲ್ಲಭಭಾಯಿ ಪಟೇಲ್

೭. ಆಜ್ಯಂ ಬಿಭರ್ತಿಘೃತಮಸ್ಯ ರೇತಃ ಸಾಹಸ್ರಃ ಪೋಷಸ್ತಮು ಯಜ್ಞಮಾಹುಃ |
ಇಂದ್ರಸ್ಯ ರೂಪಮೃಷಭೋ ವಸಾನಃ ಸೋ ಅಸ್ಮಾನ್ ದೇವಾಃ ಶಿವ ಐತು ದತ್ತಃ ||
ದೇವತಾ ಆಹಾರವಾದ ಆಜ್ಯವಾಗಲೀ, ಪಾರ್ಥಿವ ಶಕ್ತಿಯಾಗಲೀ, ರೇತಸ್ಸಾಗಲೀ ಎರಡೂ ನಿನ್ನಿಂದಲೇ ಉತ್ಪನ್ನವಾಗುತ್ತವೆ. ಆಜ್ಯಭೋಕ್ತೃವಾದ ದೇವತೆಗಳು ಯಜ್ಞರೂಪದಲ್ಲಿ ಅದನ್ನು ಸ್ವೀಕರಿಸಿ ಸಂತೃಪ್ತರಾಗುತ್ತಾರೆ. ಪಾರ್ಥಿವರು ಅವರಿಂದ ಅನುಗ್ರಹಿಸಲ್ಪಟ್ಟ ರೇತಸ್ಸನ್ನು ಪಡೆದು ಆಮೋದದಿಂದ ವಿಹರಿಸುತ್ತಾರೆ. ಅದನ್ನೇ ಶಕ್ತಿ ಅಥವಾ ಇಂದ್ರ ಎಂದು ಕರೆಯುತ್ತಾರೆ. ಆದರೆ ಎರಡರ ಉತ್ಪತ್ತಿಗೂ ನೀನೇ ಕಾರಣವೆಂಬುದು ಅರಿತ ನಾವು ನಿನ್ನನ್ನು ಗೌರವಿಸುತ್ತೇವೆ, ಪೂಜಿಸುತ್ತೇವೆ. ದಾನಶೀಲನಾದ ನೀನು ಪ್ರಪಂಚಕ್ಕೆ ಮಂಗಳಕಾರಕನೂ, ಜ್ಞಾನದಾಯಕನೂ ಆಗಿ ನಮ್ಮನ್ನು ಅನುಗ್ರಹಿಸು.

೮. ಇಂದ್ರಸ್ಯೌಜೋ ವರುಣಸ್ಯ ಬಾಹೂ ಅಶ್ವಿನೋರಂಸೌ ಮರುತಾಮಿಯಂ ಕಕುತ್ |
ಬೃಹಸ್ಪತಿಂ ಸಂಭೃತಮೇತಮಾಹುರ್ಯೇ ಧೀರಾಸಃ ಕವಯೋ ಯೇ ಮನೀಷಿಣಃ ||
ನಿನ್ನಿಂದ ಕೊಡಲ್ಪಡುವ ಆ ಐದು ಅಮೃತಸಮಾನವಾದ ಔಷಧಿಗಳಿಂದ ನಾವು ಸದೃಢರಾಗುತ್ತೇವೆ ಅನುಗ್ರಹಿಸು.

೧. ಬೃಹಸ್ಪತಿ = ಹಾಲು; ನಮಗೆ ಪೌಷ್ಠಿಕವೂ, ಜ್ಞಾನಪ್ರದವೂ ಆಗಿರಲಿ.
೨. ವರುಣ = ಮೊಸರು; ದೃಢಮನಸ್ಕತೆಯನ್ನೂ, ಪ್ರಾಪಂಚಿಕ ಬಂಧ ವಿಮೋಚನೆಯನ್ನೂ ಅನುಗ್ರಹಿಸಲಿ.
೩. ಇಂದ್ರ = ತುಪ್ಪ; ಅದು ನಮ್ಮನ್ನು ಶಕ್ತಿಶಾಲಿಗಳನ್ನಾಗಿ ಮಾಡಲಿ.
೪. ಅಶ್ವಿನಿ = ಗೋಮೂತ್ರ; ಅದು ನಮ್ಮನ್ನು ನಿರೋಗಿಯನ್ನಾಗಿಯೂ, ಸದೃಢನನ್ನಾಗಿಯೂ ಇಡಲಿ.
೫. ಮರುತ್ = ಸಗಣಿ; ಈ ಪೃಥ್ವಿಯ ಎಲ್ಲಾ ರೀತಿಯ ಬಾಧಕಕಾರೀ ವಿಷಯುಕ್ತ ಕ್ರಿಮಿ ಜಂತುಗಳಿಂದ ನಮ್ಮನ್ನು ದೂರ ಇಡಲಿ.

ಈ ರೀತಿಯ ನಿನ್ನ ರಕ್ಷಣೆಯನ್ನು ಹೊಂದಿ ಪಾರ್ಥಿವ ಶರೀರಿಗಳಾದ ನಾವು ನಿನ್ನಿಂದ ಪ್ರಾಣಶಕ್ತಿಯನ್ನು ಪಡೆಯುತ್ತಿದ್ದೇವೆ ಎಂಬ ಅರಿವಿದೆ ನಮಗೆ.

ಕೃಪೆ : ವೇದ ವಿಜ್ಞಾನ.

Leave a Reply

Your email address will not be published. Required fields are marked *

Translate »