ಸ್ತ್ರೀಯರ ಕೂದಲಿನ ಬೈತಲೆ ಹೇಗಿರಬೇಕು?
ಸ್ತ್ರೀಯರು ಕೇಶರಚನೆಯನ್ನು ಮಾಡುವಾಗ ತಮ್ಮ ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆದು ಅದರಿಂದ ಅಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಪಡೆಯಬೇಕು !
ಕೆಲವು ಸ್ತ್ರೀಯರು ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯದೇ ಅದನ್ನು ಎಡ ಅಥವಾ ಬಲ ಭಾಗಕ್ಕೆ ತೆಗೆಯುತ್ತಾರೆ. ಕೆಲವು ಸ್ತ್ರೀಯರು ಆಕರ್ಷಕ ಕೇಶರಚನೆಗಾಗಿ ಸ್ವಲ್ಪ ದೂರದ ವರೆಗೆ ನೇರವಾಗಿ ಬೈತಲೆಯನ್ನು ತೆಗೆಯುತ್ತಾರೆ. ನಂತರ ಬೈತಲೆಯ ದಿಕ್ಕನ್ನು ಬದಲಿಸುತ್ತಾರೆ. ಕೆಲವೊಮ್ಮೆ ಕೂದಲಿನ ಬೈತಲೆಯನ್ನು ಸರಿಯಾಗಿ ಮತ್ತು ಮಧ್ಯದಲ್ಲಿ ತೆಗೆಯದ ಕಾರಣ ಅದು ಕೊನೆಗೆ ನೇರವಾಗಿರದೆ ಓರೆಯಾಗುತ್ತದೆ. ಈ ರೀತಿಯಾಗಿ ಬೈತಲೆ ತೆಗೆದು ಕೇಶರಚನೆಯನ್ನು ಮಾಡುವುದರಿಂದ ಸ್ತ್ರೀಯರಲ್ಲಿನ ರಜ-ತಮ ಗುಣಗಳು ಹೆಚ್ಚಾಗುತ್ತವೆ ಮತ್ತು ಸ್ತ್ರೀಯರ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಗಳ ಆವರಣವು ಬರುತ್ತದೆ. ಕೆಲವೊಮ್ಮೆ ಸ್ತ್ರೀಯರು ಕೆಟ್ಟ ಶಕ್ತಿಗಳ ಆಕ್ರಮಣಕ್ಕೂ ತುತ್ತಾಗಬಹುದು.
ಹಿಂದೂ ಧರ್ಮವು ಪ್ರಾಚೀನ ಕಾಲದಿಂದಲೂ ಕೂದಲಿನ ಸಾತ್ತ್ವಿಕ ರಚನೆಯನ್ನು ಮಾಡಲು ಕಲಿಸಿದೆ. ಮಧ್ಯದಲ್ಲಿ ಬೈತಲೆಯನ್ನು ತೆಗೆದು ಕೂದಲಿನ ಸಾತ್ತ್ವಿಕ ರಚನೆಯನ್ನು ಮಾಡಿದ ಸ್ತ್ರೀಯರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭಗಳು ಖಂಡಿತ ಆಗುತ್ತವೆ, ಅಲ್ಲದೇ ಆ ಕೇಶ ರಚನೆಯಿಂದ ಸಾತ್ತ್ವಿಕ ಲಹರಿಗಳು ಪ್ರಕ್ಷೇಪಿತವಾಗಿರುವುದರಿಂದ ಆ ಕೇಶ ರಚನೆಯನ್ನು ನೋಡುವವರ ಮನಸ್ಸಿನ ಮೇಲೆಯೂ ಒಳ್ಳೆಯ ಪರಿಣಾಮವಾಗುತ್ತದೆ.
ಸ್ತ್ರೀಯರು ಕೇಶರಚನೆಯನ್ನು ಮಾಡುವಾಗ ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯುವುದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಮುಂದಿನ ಲಾಭಗಳಾಗಬಹುದು.
೧. ಈಶ್ವರಿ ಚೈತನ್ಯವು ಗ್ರಹಿಸುವಂತಾಗಿ ಸಹಸ್ರಾರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ದೂರವಾಗುವುದು.
೨. ಈಶ್ವರಿ ಚೈತನ್ಯವು ಗ್ರಸಿಸುವುದರಿಂದ ಕುಂಡಲಿನಿಚಕ್ರವು ಜಾಗೃತವಾಗಲು ಸಹಾಯವಾಗುತ್ತದೆ.
೩. ಈಶ್ವರಿ ಚೈತನ್ಯದಿಂದ ಅಂತರ್ಮುಖತೆಯು ನಿರ್ಮಾಣ ವಾಗುವುದು.
ಆದುದರಿಂದ ಸ್ತ್ರೀಯರು ಕೇವಲ ಬಾಹ್ಯ ಸೌಂದರ್ಯದ ವಿಚಾರವನ್ನು ಮಾಡದೆ ತಮ್ಮ ಕೇಶ ರಚನೆಯ ಆಧ್ಯಾತ್ಮಿಕ ಸ್ತರದಲ್ಲಿ ವಿಚಾರವನ್ನು ಮಾಡಬೇಕು. ‘ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯುವುದು’, ಇದು ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರುವುದರಿಂದ ಸ್ತ್ರೀಯರು ಕೂದಲಿನ ಮಧ್ಯಭಾಗದಲ್ಲಿ ಬೈತಲೆಯನ್ನು ತೆಗೆಯಬೇಕು. ಕೂದಲಿನ ಬೈತಲೆ ಸಾತ್ತ್ವಿಕ ಸ್ಪಂದನಗಳ ದೃಷ್ಟಿಯಿಂದ ‘ಮಧ್ಯಭಾಗದಲ್ಲಿ ಮತ್ತು ನೇರವಾಗಿ ಕೊನೆಯವರೆಗೂ ಬರುವಂತೆ’, ನೋಡಬೇಕು.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!