ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರಿ ಹರಿ ಪ್ರಾರ್ಥನಾ ಶ್ಲೋಕ ಅರ್ಥ ಸಹಿತ

🔯 ಆಧ್ಯಾತ್ಮಿಕ ವಿಚಾರ.🔯

ಶನಿವಾರ ಶ್ರೀ ಶ್ರೀನಿವಾಸ ನ ಅನುಗ್ರಹ ಪಡೆಯಲು
|| ಶ್ರೀ ಹರಿ ಪ್ರಾರ್ಥನಾ ಶ್ಲೋಕಮ್ ||


ನಿತ್ಯೋತ್ಸವೋ ನಿತ್ಯದಾನಂ ನಿತ್ಯ ಶ್ರೀರ್ನಿತ್ಯತೋ ಜಯ: |
ಯೇಷಾಂ ಹೃದಿಸ್ತೋ ಭಗವಾನ್ ಮಂಗಲಾಯತನೋ ಹರಿ: ||೧||

ಭಾವಾರ್ಥ:-ಸಮಸ್ತ ಸುಲಕ್ಷಣಗಳಿಗೆ ಆಶ್ರಯದಾತನಾದ ಭಗವಾನ್ ಶ್ರೀಹರಿಯನ್ನು ಅನುದಿನವೂ ಹೃದಯದಲ್ಲಿ ಧಾರಣೆ ಮಾಡಿಕೊಂಡವರಿಗೆ ಪ್ರತಿ ದಿವಸವೂ ಉತ್ಸವವು,ಪ್ರತಿದಿವಸವೂ ದಾನವು,ಶಾಶ್ವತವಾದ ಸಂಪದವು,ಪ್ರತಿ ದಿವಸವೂ ಗೆಲುವಿನ ಅನುಭವವಾಗುವವು.

ಆಸೀನಸ್ಯ ಶಯಾನಸ್ಯ ತಿಷ್ಠತೋ ವ್ರಜತೋsಪಿ ವಾ |
ರಮಸ್ವ ಪುಂಡರೀಕಾಕ್ಷ ಹೃದಯೇ ಮಮ ಸರ್ವದಾ ||೨||

ಭಾವಾರ್ಥ:-ಹೇ!ಪುಂಡರೀಕಾಕ್ಷನೇ, ಮಲಗಿರುವ,ಎದ್ದಿರುವ, ಕುಳಿತಿರುವ, ನಿಂತಿರುವ,ನಡೆಯುತ್ತಲಿರುವ, ನನ್ನ ಹೃತ್ಕಮಲದಲ್ಲಿ ಸದಾಕಾಲವೂ ನೀನು ವಿಹರಿಸುತ್ತಿರು.

  ಸರ್ಪ ಸಂಸ್ಕಾರ

ಸರ್ವತಶ್ಚೈವ ಸರ್ವಾತ್ಮನ್ ಸರ್ವಾವಸ್ಥಾಸು ಚಾಚ್ಯುತ |
ರಮಸ್ವ ಪುಂಡರೀಕಾಕ್ಷ ನೃಸಿಂಹ ಹೃದಯೇ ಮಮ ||೩||

ಭಾವಾರ್ಥ:-ಕಮಲನಯನನಾಗಿರುವ ನರಹರಿಯೇ,ಸಮ್ಸತರೊಳಗಿರುವ ಅವಿನಾಶಿಯೇ,ನನ್ನ ಎಲ್ಲಾ ತೊಂದರೆಗಳಲ್ಲಿ ಕೂಡಾ ನೀನು ಎಲ್ಲಾ ರೀತಿಯಿಂದ ನನ್ನ ಎದೆಯೊಳಗೆ ವಿಹರಿಸುತ್ತಿರು.

ಕರಾವಲಂಬನಂ ದೇಹಿ ನೃಸಿಂಹ ಕಮಲೇಕ್ಷಣ |
ಭವ ಪಂಕಾರ್ಣವೇ ಘೋರೇ ಮಜ್ಜತೋ ಮಮ ಶಾಶ್ವತ ||೪||

ಭಾವಾರ್ಥ:-ಕಮಲವನ್ನು ಹೋಲುವ ನಯನಗಳನ್ನು ಹೊಂದಿರುವ ನರಹರಿಯೇ;ನಾಶರಹಿತನೇ,ಸಂಸಾರವೆಂಬ ಘೋರ ರಾಡಿಯ ಕೂಪದಲ್ಲಿ ಮುಳುಗುತ್ತಿರುವ ನನಗೆ ನಿನ್ನ ಹಸ್ತದಾಸರೆಯನ್ನು ಕೊಟ್ಟು ಉದ್ದರಿಸು ಸ್ವಾಮೀ.

ತ್ರಾಹಿ ತ್ರಾಹಿ ಜಗನ್ನಾಥ ನರಸಿಂಹಾಚ್ಯುತಾವ್ಯಯ |
ಉದ್ಧರಾಸ್ಮಾನ್ ಮುರಾರೇ ತ್ವಂ ದು:ಖ ಸಂಸಾರಸಾಗರಾತ್ ||೫||

  ಶ್ರೀ ಅನಂತೇಶ್ವರ ದೇವಸ್ಥಾನ ಹಿನ್ನಲೆ ಕಥೆ - ಉಡುಪಿ

ಭಾವಾರ್ಥ:-ಜಗದೊಡೆಯನೇ,ನರಹರಿಯೇ,ನಾಶವಿಲ್ಲದವನೇ,ಪತನವಿಲ್ಲದಾತನೇ,
ಮುರಾಂತಕನೇ, ದು:ಖಮಯವಾದ ಈ ಸಂಸಾರ ಎನ್ನುವ ಸಾಗರದಿಂದ ನಮ್ಮನ್ನು ಹಿಡಿದೆತ್ತಿ ಉದ್ಧರಿಸು ಸ್ವಾಮೀ.

ಯ: ಸರ್ವ ಗುಣ ಸಂಪೂರ್ಣ: ಸರ್ವದೋಷ ವಿವರ್ಜಿತ: |
ಪ್ರೀಯತಾಂ ಗುರುದೇವೋಯಂ ನೃಸಿಂಹ: ಪರಮ: ಸುಹೃತ್ ||೬||

ಭಾವಾರ್ಥ:-ಸಮಸ್ತ ಗುಣಗಳಿಂದ ತುಂಬಿದವನಾದ,ಯಾವುದೊಂದೂ ದೊಷಗಳಿಲ್ಲದಿರುವ,ಚಿರಕಾಲೀನ ಆಪ್ತಗೆಳೆಯನೂ ಆಗಿರುವ ಗುರುದೇವನಾಗಿರುವ ನರಹರಿಯು ಸದಾಪರಮ ಸಂತುಷ್ಟನಾಗಿರಲಿ.

ಮಂಗಲಮ್ ಭಗವಾನ್ ವಿಷ್ಣು: ಮಂಗಲಂ ಮಧುಸೂದನ: |
ಮಂಗಲಮ್ ದೇವಕೀ ಪುತ್ರೋ ಮಂಗಲಮ್ ಗರುಡ ಧ್ವಜ: ||೭||

ಭಾವಾರ್ಥ:-ಭಗವಾನ್ ವಿಷ್ಣುವು ಮಂಗಲವನ್ನು ಕರುಣಿಸಲಿ. ಮಧುವೆಂಬ ಅಸುರನನ್ನು ಹತ್ಯೆ ಗೈದವನು ಶುಭವನ್ನು ನೀಡಲಿ.ದೇವಕೀತನಯನು ಆನಂದವನ್ನು ದಯಪಾಲಿಸಲಿ.ಗರುಡ ಧ್ವಜನಾದ ಶ್ರೀ ಹರಿಯು ಅದೃಷ್ಟವನ್ನು ತರಲಿ.

  ಕೃಷ್ಣ ಸುಧಾಮ ನ ಅವಲಕ್ಕಿ ಹಿಂದಿನ ಕಥೆ

             || ಇತಿ ಶ್ರೀ ಹರಿ ಪ್ರಾರ್ಥನಾ ಶ್ಲೋಕಮ್ ||  
  || ಈ ರೀತಿಯಾಗಿ ಶ್ರೀ ಹರಿ ಪ್ರಾರ್ಥನಾ ಶ್ಲೋಕಗಳ ಭಾವಾರ್ಥವು ||

Leave a Reply

Your email address will not be published. Required fields are marked *

Translate »