ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇವರು ಎಲ್ಲಿದ್ದಾನೆ ?

ಶ್ರೀ ಶ್ರೀಧರ ಸ್ವಾಮಿಗಳವರ ಪ್ರವಚನ . ಬಹಳ ಚೆನ್ನಾಗಿದೆ
ಮರೆಯದೆ ಶೇರ್ ಮಾಡಿ ಎಲ್ಲರಿಗೂ ಓದುವ ಭಾಗ್ಯ ಒದಗಿಸಿ.

🙏🌹 🌹🙏

ದೇವರು ಎಲ್ಲಿದ್ದಾನೆ ? ನಮಗೆಲ್ಲರಿಗೂ ಏಕೆ ಕಾಣುವುದಿಲ್ಲ ಮತ್ತು ಅವನನ್ನು ಕಾಣುವ ಉಪಾಯವೇನು ?

1949 ರಲ್ಲಿ ಮೈಸೂರಿನ ಸುಬ್ರಾಯ ರಾಜ ಅರಸರ ಮನೆಯ ಪಕ್ಕದ ಮನೆಯಲ್ಲಿ ಶ್ರೀ ಶ್ರೀಧರಸ್ವಾಮಿಗಳ ವಾಸ್ತವ್ಯವಿತ್ತು . ಆ ಸಂದರ್ಭದಲ್ಲಿ ನಾಸ್ತಿಕರಾಗಿದ್ದ ವಕೀಲರು ದೇವರು ಎಲ್ಲಿದ್ದಾನೆ , ನಮಗೆಲ್ಲರಿಗೂ ಏಕೆ ಕಾಣುವುದಿಲ್ಲ ಎಂಬ ಪ್ರೆಶ್ನೆಗೆ ಗುರುಗಳು ನೀಡಿದ ಪ್ರವಚನ .

ದೇವರು ಎಲ್ಲಿದ್ದಾನೆ , ನಮಗೆಲ್ಲರಿಗೂ ಏಕೆ ಕಾಣುವುದಿಲ್ಲ ಮತ್ತು ಅವನನ್ನು ಕಾಣುವ ಹೊಂದುವ ಉಪಾಯವೇನು ? ಮುಂತಾದ ಪ್ರೆಶ್ನೆಗಳು ಉದ್ಭವಿಸುತ್ತದೆ . ನಿನ್ನ ಮನಸ್ಸಿನಲ್ಲಿಯೂ ಬಂದಿರಬಹುದು .

ಜಗತ್ತಿನ ಸ್ವಭಾವವನ್ನು ಸ್ವಲ್ಪ ವಿಚಾರ ಮಾಡಿ ನೋಡಿರಿ . ಒಂದು ದೇಶದ ಭಾಗದಲ್ಲಿ ಬೆಳೆಯುವಂತಹ ಬೆಳೆಗಳು ಇನೊಂದು ದೇಶಭಾಗದಲ್ಲಿ ಬೆಳೆಯುವುದಿಲ್ಲ . ಭೂಮಿಯೆಂಬುದು ಒಂದೇ ಆದರೂ ಒಂದು ಮಣ್ಣಿನಲ್ಲಿ ಬೆಳೆಯುವ ವಸ್ತು ಇನ್ನೊಂದು ಮಣ್ಣಿನಲ್ಲಿ ಆಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ . ಇದರಿಂದ ದೇಶವೂ ಒಂದು ನಿಯಮದಲ್ಲಿ ಒಳವಟ್ಟಿರುವಂತೆ ಕಾಣುವುದಿಲ್ಲವೇ ? ಆಯಾಯ ಗಿಡ ,ಮರ ,ಬಳ್ಳಿಗಳಲ್ಲಿ ಹೂವು ಹಣ್ಣುಗಳಾಗುವುದು ನಿಯಮಿತ ಕಾಲದಲ್ಲಿಯೆ ಸರಿ . ವಸಂತಾದಿ ಋತುಗಳು ಒಂದರ ಹಿಂದೊಂದು ಬಂದ ಕೂಡಲೇ ಜಗತ್ತಿನ ಪ್ರಕೃತಿಯಲ್ಲಿ ಅಗುವ ಬದಲಾವಣೆಗಳು ನಮಗೆ ಕಾಣುತ್ತವೆಯಲ್ಲವೇ ?. ಅಂತೆಯೇ ಹಗಲಿರುಳು ಸಹ ನಿಯಮಕ್ಕೊಳಪಟ್ಟಂತೆಯೇ ಸಾಗುತ್ತಿರುವುದು . ಬೆಂಕಿಯು ಬಿಸಿಯಾಗಿರುವುದು , ನೀರು ತಣ್ಣಗಿರುವುದು ಮತ್ತು ಕಲ್ಲುಗಳು ಘನವಾಗಿರುವುದು ಒಂದು ನಿಯಮಕ್ಕೊಳಪಟ್ಟಿರುವುದು ಸ್ವಷ್ಟವಾಗುವುದು . ಹೀಗೆ ಜಗತ್ತಿನಲ್ಲಿ ಎಲ್ಲಿ ನೋಡಿದರು ಎಡೆಬಿಡದೆ ಒಂದು ನಿಯಮವು ಇದ್ದೇ ಇರುವಂತೆ ಕಾಣುವುದರಿಂದ ಇವಲ್ಲಕ್ಕೂ ಒಬ್ಬ ನಿಯಾಮಕನಿರಬೇಕೆಂದು ಒಪ್ಪಿಕೊಳ್ಳದಿದ್ದರೆ ಗತ್ಯಂತರವೇ ಇಲ್ಲ . ಈ ನಿಯಾಮಕನಾದವನಿಗೆ ದೇವರೆಂದು ಹೆಸರು . ಸೂರ್ಯ ಚಂದ್ರ ನಕ್ಷತ್ರಾದಿಗಳಲ್ಲಿ ಪ್ರಕಾಶವನ್ನು ತುಂಬಿದವರಾರು ? ಕಣ್ಣಿನಲ್ಲಿ ಬೆಳಕನ್ನಿಟ್ಟವರಾರು ? ಅವುಗಳಿಗೆ ನೋಡುವ ಶಕ್ತಿಯು ಯಾರಿಂದ ಬಂದಿರುವುದು ? ಬಣ್ಣ ಬಣ್ಣದ ಹೂವು ಗಿಡಗಳು , ಪಕ್ಷಿಗಳು , ಪ್ರಾಣಿಗಳೂ ಇವುಗಳಿಗೆ ಬಣ್ಣ ಬರೆದವರಾರು ? ಪಕ್ಷಿಗಳಿಗೆ ಆಕಾಶದಲ್ಲಿ ಹಾರುವ ಶಕ್ತಿ ಕೊಟ್ಟವರಾರು ? ಇವನ್ನೆಲ್ಲಾ ನೋಡಿದರೆ ಇವಕ್ಕೆಲ್ಲಾ ಅಧಿಪತಿಯಾದ ಒಬ್ಬ ಕಾರಣ ಪುರುಷನಿರಬೇಕೆಂದು ಮನದಟ್ಟಾಗುವುದಿಲ್ಲವೇ ? ಈ ಆಶ್ಚರ್ಯಕರವಾದ ಕಾರ್ಯಗಳು ಯಾರ ಸಹಜ ಲೀಲೆಯಾಗಿರುವುದೊ ಅವನೇ ದೇವರು . ದೇವರು ,ಪರಮಾತ್ಮನು ಎಲ್ಲಿದ್ದಾನೆ ಎಂದರೆ ಆತನು ಅಲ್ಲಿ ಇಲ್ಲಿ ಎಂದಿಲ್ಲ . ಸರ್ವವ್ಯಾಪಿಯಗಿದ್ದಾನೆ .

  ಅನಂತಪದ್ಮನಾಭ ಸ್ವಾಮಿಯ ಕೆಲವು ದೇವಸ್ಥಾನಗಳು

‘ ಸರ್ವತಃ ಪಾಣಿಪಾದಂ ತತ್ಸರ್ವತೋಕ್ಷಿಶಿರೋ ಮುಖುಮಂ l
ಸರ್ವತಃ ಶ್ರುತಿ ಮಲ್ಲೋಕೇ ಸರ್ವಮಾವೃತ್ಯ ತಿಷ್ಥತಿ’ ll

ಆ ಪರಮಾತ್ಮನು ಎಲ್ಲಾ ಜಾಗದಲ್ಲಿಯೂ ಕಾಲು ಕೈಗಳುಳ್ಳವನು , ಎಲ್ಲಾ ಜಾಗದಲ್ಲಿ ತಲೆ ಮತ್ತು ಮುಖಗಳುಳ್ಳವನು , ಬ್ರಹ್ಮಾಂಡವನ್ನೂ ಅವನು ಆವರಿಸಿರುವನು . ಅವನಿಲ್ಲದ ಸ್ಥಳವೇ ಇಲ್ಲ .

ಉದಾಹರಣೆಗೆ , ಬೆಣ್ಣೆ ಎಲ್ಲಿಂದ ಸಿಗುವುದು ಎಂದು ಕೇಳಿದರೆ ಹಾಲಿನಿಂದ ಎಂಬುದು ಎಲ್ಲರಿಗೂ ತಿಳಿದಿರುವುದು . ಅಂದರೆ ಹಾಲಿನಲ್ಲಿ ಬೆಣ್ಣೆಯಿದೆ ಎಂಬುದು ಸ್ಪಷ್ಟವಾಗಿ ತಿಳಿದ ಸಂಗತಿ . ಹಾಲಿನಲ್ಲಿ ಬೆಣ್ಣೆ ಎಲ್ಲಿದೆ ? ಹೇಗಿದೆ ? ಎಂದು ಕೇಳಿದರೆ ಹಾಲಿನಲ್ಲಿ ಅದು ಇಲ್ಲ ಎಂಬುದಿಲ್ಲ . ಹಾಲಿನಲೆಲ್ಲಾ ಬೆಣ್ಣೆಯು ವ್ಯಾಪಿಸಿಕೊಂಡಿದೆ ಅಲ್ಲವೆ ? ಹಾಲಿನಲ್ಲಿ ಬೆಣ್ಣೆಯು ಕಣ್ಣಿಗೆ ಕಾಣುವುದಿಲ್ಲವೆಂದು , ಹಾಲಿನಲ್ಲಿ ಬೆಣ್ಣೆಯಿಲ್ಲವೆಂದು ಹೇಳಿದರೆ ಸರಿಯಾಗುವುದೆ ? ಹಾಗದರೆ ಬೆಣ್ಣೆ ಕಾಣಬೇಕಾದರೆ ಏನು ಮಾಡಬೇಕು? ಹಾಲನ್ನು ಕಾಯಿಸಿ ತಣಿಸಿ,ಹೆಪ್ಪು ಹಾಕಿ ಮೊಸರಾದಾಗ ಆದನ್ನು ಕಡೆಯಬೇಕು . ಆವಾಗ ಬೆಣ್ಣೆಯ ದರ್ಶನವಾಗುವುದು ಅಲ್ಲವೆ ? ಹಾಗೆಯೇ ದೇವರು ಸರ್ವವ್ಯಾಪಿಯಾಗಿದ್ದರೂ ಕಣ್ಣಿಗೆ ಕಾಣಿಸಿವುದಿಲ್ಲ . ಶಾಸ್ತ್ರೊಕ್ತ ಕಾಮ್ಯಕರ್ಮವನ್ನು ಮಾಡಿ ಆನಂತರ ಕಾಮನೆಯ ತ್ಯಾಗ ಅಂದರೆ ನಿಷ್ಕಾಮ ಕರ್ಮವನ್ನು ಮಾಡಿ , ಭಕ್ತಿ – ಉಪಾಸನೆಯೆಂಬ ಹೆಪ್ಪು ಹಾಕಿ ಆಮೇಲೆ ಜ್ಞಾನವೆಂಬ ಕಡಗೋಲಿನಿಂದ ಮಥಿಸಲು ಆ ಪರಮಾತ್ಮನ ಸಾಕ್ಷಾತ್ಕಾರವಾಗುವುದು ಎಂದ ಶ್ರೀಗಳವರ ಅಮೃತ ನುಡಿಗಳಿಂದ ವಕೀಲರು ಮತ್ತು ಅಲ್ಲಿದ್ದ ಎಲ್ಲರೂ ಸಮಾಧಾನ ಹೊಂದಿದರು.

  ಗೋವಿಂದ ದಾಮೋದರ ಸ್ತೋತ್ರಂ

ಸಂಗ್ರಹ : ಶ್ರೀಧರ ಸಂದೇಶ ಪತ್ರಿಕೆಯಿಂದ.

Leave a Reply

Your email address will not be published. Required fields are marked *

Translate »