ಭಾರತ ಹುಣ್ಣಿಮೆ
ಓಂ ಶ್ರೀ ರೇಣುಕಾ ದೇವಿ ನಮಃ
ಮಾಘ ಮಾಸದ ಹುಣ್ಣಿಮೆಯನ್ನು ಭಾರತ ಹುಣ್ಣಿಮೆ ಎಂದು ಕರೆಯಲಾಗಿದೆ.ಏಕೆಂದರೆ,ಈ ಹುಣ್ಣಿಮೆಯು ಸವದತ್ತಿಯಲ್ಲಿ ನೆಲೆಸಿರುವ ಶ್ರೀ ರೇಣುಕಾದೇವಿಯವರಿಗೆ ಅರ್ಪಿತ ವಾಗಿದೆ.ರೇಣುಕಾದೇವಿಯನ್ನು ಪ್ರಮುಖವಾಗಿ ಮಹಾರಾಷ್ಟ್ರ,ಕರ್ನಾಟಕ,ಆಂಧ್ರ ಪ್ರದೇಶ, ತೆಲಂಗಾಣ,ತಮಿಳು ನಾಡು ಮತ್ತು ಹಿಮಾಚಲ ಪ್ರದೇಶ ಗಳಲ್ಲಿ ಆರಾಧಿಸುತ್ತಾರೆ.ಮಹಾರಾಷ್ಟ್ರದ ಮಹುರ್ ನಲ್ಲಿ ಇರುವ ಮಂದಿರವು ಈ ದೇವತೆಗೆ ಅಂಕಿತವಾಗಿದೆ.ಈ ಮಂದಿರವೂ ಸಹಾ ಒಂದು ಶಕ್ತಿ ಪೀಠವಾಗಿದೆ.ಕರ್ನಾಟಕದ
ಬೆಳಗಾವಿ ಜಿಲ್ಲೆಯ ಸೌಂದತ್ತಿಯಿಂದ 5 ಕಿ.ಮಿ ದೂರದಲ್ಲಿ ಇರುವ ಎಲ್ಲಮನ ಗುಡ್ಡದಲ್ಲಿ ನೆಲೆಸಿರುವ ಮಾತೆಯ ದರ್ಶನಕ್ಕಾಗಿ ಸುತ್ತ ಮುತ್ತಲ ರಾಜ್ಯಗಳಿಂದ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಇಂದು ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರ
ರಾಗುತ್ತಾರೆ
ಎಲ್ಲಮ್ಮ ಮಾತೆಯು ಕಾಳಿಯ ಅವತಾರವೆಂದು ತಿಳಿಯಲಾ
ಗಿದೆ.ಈ ಮಂದಿರವು ರೇಣುಕಾ ದೇವಿಗೆ ಅಂಕಿತವಾಗಿದೆ.
ರೇಣು ಎಂದರೆ ಅತಿ ಸೂಕ್ಷ್ಮವಾದ ಅಣು ಅಥವ ವಿಶ್ವ ಮಾತೆ ಎಂದು ಅರ್ಥ.ಈ ದೇವಾಲಯವನ್ನು ಚಾಲುಕ್ಯ ಮತ್ತು ರಾಷ್ಟ್ರಕೂಟ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಇಲ್ಲಿಯ ವಾಸ್ತು ಶಿಲ್ಪವು ಜೈನರ ಕಾಲವನ್ನ ಹೋಲುತ್ತದೆ.ಈ
ಈ ಮಂದಿರದ ಆವರಣದಲ್ಲಿ ಶ್ರೀ ಗಣಪತಿ,ಮಲ್ಲಿಕಾರ್ಜುನ
ಪರುಷರಾಮ, ಏಕನಾಥ ಸಿದ್ದೇಶ್ವರ ಮುಂತಾದ ದೇವರು ಗಳು ಇವೆ.ಇಂದು ಈ ಕ್ಷೇತ್ರದಲ್ಲಿ ಜಾತ್ರೆ ನಡೆಯುವುದು ಮತ್ತು ಭಕ್ತಾದಿಗಳು ತಮ್ಮ ಹರಕೆಯನ್ನು ಸಲ್ಲಿಸುತ್ತಾರೆ.
ಪೌರಾಣಿಕ ವೃತ್ತಾಂತ
ಮಾತೆ ರೇಣುಕಾ ಕುಭಜ್ ದೇಶದ ರಾಜನ ಮಗಳು.ಈಕೆ ಕೋಪಿಷ್ಠ ಜಮದಗ್ನಿ ಮಹರ್ಷಿಗಳನ್ನು.ವಿವಾಹವಾಗುತ್ತಾಳೆ.
ಆಶ್ರಮದ ಕಾರ್ಯಗಳಲ್ಲಿ ಪತಿಗೆ ನೆರವಾಗುತ್ತ,ಇರಲು ಪತಿಯ ಅಪ್ಪಣೆಯಂತೆ ಮರಳಿನಿಂದ ಮಾಡಿದ ಮಡಿಕೆ ಯಲ್ಲಿ ನೀರು ತರುವುದು ವಿಳಂಬವಾಗುವುದು.ಅಂದು ತನ್ನ ಮನಸ್ಸು ಬೇರೆ ವಿಷಯದಲ್ಲಿ ಮಗ್ನವಾದುದರಿಂದ ಮರಳಿ ನಿಂದ ಮಡಕೆ ಮಾಡಿ ನೀರು ತರದೆ ಬರಿ ಕೈಯಲ್ಲಿ ಆಶ್ರಮಕ್ಕೆ ವಾಪಸ್ಸು ಆಗುತ್ತಾಳೆ. ಇದನ್ನು ಕಂಡ ಮಹರ್ಷಿಗಳು ಕೋಪ
ಗೊಂಡು ತನ್ನ 5 ಮಕ್ಕಳಲ್ಲಿ ಯಾರು ತಾಯಿಯ ತಲೆಯನ್ನು ಕತ್ತರಿಸುವರೆಂದು ಆಜ್ಞಾಪಿಸಲು 4 ಮಕ್ಕಳು ಒಪ್ಪುವುದಿಲ್ಲ.
ಪರುಷರಾಮರು ತಾಯಿಯ ತಲೆಯನ್ನು ಕತ್ತರಿಸಲಾಗಿ ತಲೆಯು ನೂರಾರು ಹೋಳುಗಳಾಗಿ ವಿವಿದ ದಿಕ್ಕುಗಳಿಗೆ ಹೊರಟವು.
ಈ ಘಟನೆಯಿಂದ ಈ ಕ್ಷೇತ್ರವು ಒಂದು ಶಕ್ತಿ ಪೀಠ ವಾಯಿತು
ಈ ಮಾತೆಯನ್ನು ಭಕ್ತಾದಿಗಳು ವರ್ಷದ ಎಲ್ಲಾ ದಿನಗಳಲ್ಲೂ ಭೇಟಿ ನೀಡಿ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ.
ನಾವುಗಳೂ ಸಹಾ ಈ ಜಗನ್ಮಾತೆಯನ್ನು ನಮಸ್ಕರಿಸಿ
ಮಾತೆಯ ಕೃಪೆಗೆ ಪತ್ರಾರಾಗೋಣ.
ಓಂ ಶ್ರೀ ರೇಣುಕಾದೇವಿ ನಮಃ.
ಪ್ರಸನ್ನ ಆಲಂಪಲ್ಲಿ
ಆಲಂಪಲ್ಲಿ ಪ್ರತಿಷ್ಠಾನ
ರಾಯಚೂರು