ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕೃಷ್ಣನ ಕೊಳಲಿನ ಕಥೆ

ಇಂದಿನ ದಿನಕ್ಕೊಂದು ಕಥೆಯಲ್ಲಿ ಕೃಷನ್ನ ಕೊಳಲಿನ ಕಥೆ , ಓದಿ ತಿಳಿಯಿರಿ ದೇವರ ಸಂಪೂರ್ಣ ಶರಣಾಗತಿಯ ರಹಸ್ಯ.

ಕೃಷ್ಣನ ಕೊಳಲಿನ ಕಥೆ

ದಿನಕ್ಕೆ 24 ಗಂಟೆಗಳ ಕಾಲ ಕೊಳಲು ಕೃಷ್ಣನ ಒಡನಾಟದೊಂದಿಗೆ ಇತ್ತು. ಗೋಪಿಕೇಯರು ಸಹ ಕೊಳಲೀನಾ ಬಗ್ಗೆ ಅಸೂಯೆ ಹೊಂದಿದ್ದರು.
ಅವರು ಕೊಳಲಿಗೆ ಹೇಳಿದರು, “ನೋಡಿ, ಕೃಷ್ಣ ನಮ್ಮ ಕರ್ತನು, ಆದರೆ ನಾವು ಆತನೊಂದಿಗೆ ಕೇವಲ ಸ್ವಲ್ಪ ಸಮಯವನ್ನು ಕಳೆಯುತ್ತೇವೆ. ಆದರೆ ಅವನು ನಿನ್ನೊಂದಿಗೆ ಎಚ್ಚರಗೊಳ್ಳುತ್ತಾನೆ, ಅವನು ನಿದ್ದೆ ಮಾಡುವಗಲೂ ನಿನ್ನೊಂದಿಗೆ ಇರುತ್ತಾನೆ , ಪ್ರತಿ ಕ್ಷಣದಲ್ಲೂ ಅವನ ಜೊತೆ ಇರುವ ಸೌಭಾಗ್ಯ ಕೇವಲ ನಿನಗೆ ಮಾತ್ರ .”
ನಂತರ ಗೋಪಿಕೇಯರು ಬಿದಿರನ್ನು ಕೇಳಿದರು , “ನಮಗೆ ನಿನ್ನ ರಹಸ್ಯ ಹೇಳಿ ಕೊಡು. ನಿನ್ನಲ್ಲಿ ಯಾವ ರಹಸ್ಯವಿದೆ? ಕೃಷನು ಯಾವಾಗಲು ನಿನ್ನನ್ನು ಜೊತೆಗಿಟ್ಟುಕೊಳ್ಳುತ್ತನಲ್ಲ? “

ಆಗ ಬಿದಿರು ಮಾರುತ್ತರಿಸಿತು “ರಹಸ್ಯವೆಂದರೆ ನಾನು ನನ್ನನ್ನು ಕೃಷ್ಣನಿಗೆ ಸಮರ್ಪಿಸಿಕೊಂಡು ಬಿಟ್ಟೆ , ಮತ್ತು ಅವನು ನನಗೆ ಸರಿಯಾದದ್ದನ್ನು ಮಾಡಿದನು, ಅವನ ಮನ್ವಂತರದ ಪ್ರಕ್ರಿಯೆಯಲ್ಲಿ ನಾನು ಬಹಳಷ್ಟು ನೋವನ್ನು ಅನುಭವಿಸಬೇಕಾಗಿತ್ತು. ಆದರೆ ನನಗೆ ಈಗ ಅವನ ಜೊತೆಯೇ ಇರುವ ಸೌಭಾಗ್ಯವನ್ನು ಕೊಟ್ಟಿದೆ”. ಎಂದು ಹೇಳಿ ತನ್ನ ಜೀವನದ ಹುಟ್ಟಿನ ರಹಸ್ಯದ ಕಥೆಯನ್ನು ಹೇಳಲು ಶುರುಮಾಡಿತು.

  ರಥ ಸಪ್ತಮಿ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ

ಪ್ರತಿದಿನ ಕೃಷ್ಣನು ಬೃಂದಾವನದಲ್ಲಿರುವ ಉದ್ಯಾನವನಕ್ಕೆ ಭೇಟಿ ನೀಡುತ್ತಿರುತ್ತಾನೆ ಮತ್ತು “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಎಲ್ಲ ಸಸ್ಯಗಳಿಗೆ ಹೇಳುತ್ತಿರುತ್ತಾನೆ. ಸಸ್ಯಗಳು ಕೂಡ ಬಹಳ ಸಂತೋಷದಿಂದ “ಕೃಷ್ಣ, ನಾವು ನಿನ್ನನ್ನೂ ಪ್ರೀತಿಸುತ್ತೇವೆ” ಎಂದು ಪ್ರತಿಕ್ರಿಯಿಸುತ್ತಿದ್ದವು.
ಒಂದು ದಿನ ಕೃಷ್ಣ ಗಲಿಬಿಲಿಯಲ್ಲಿ ಬಹಳ ಬೇಗ ಉದ್ಯಾನವನಕ್ಕೆ ಬರುತ್ತಾನೆ. ಕೃಷನು ಬಿದಿರು ಸಸ್ಯದ ಬಳಿ ತೆರಳಿದಾಗ, ಬಿದಿರು ಸಸ್ಯ “ಕೃಷ್ಣ, ಏಕೆ ಗಲಿಬಿಲಿಯಲ್ಲಿರುವೆ , ಏನಾದರೂ ತಪ್ಪು ನಡೆಯಿತೇ ಅಥವಾ ನಡೆಯುವುದೇ ?” ಎಂದು ಕೇಳಿತು. ಕೃಷ್ಣನು “ನಾನು ನಿನ್ನ ಬಳಿ ಏನೋ ಕೇಳಬೇಕೆಂದುಕೊಂಡಿರುವೇ , ಆದರೆ ಇದು ತುಂಬಾ ಕಷ್ಟ ಮತ್ತು ದುಃಖದ ವಿಷಯ ” ಎಂದು ಹೇಳಿದನು.

  9 ಬಗೆಯ ಕಾರ್ಕೊಟಕ ( ನವಪಾಷಾಣ ) ವಿಷದಿಂದ ನಿರ್ಮಿತವಾದ ವಿಗ್ರಹ

ಬಿದಿರು : “ಹೇಳಿ ಸಾಧ್ಯವಾದರೆ,ಎಷ್ಟೇ ಕಷ್ಟವಾದರೂ, ನಾನು ಅದನ್ನು ನಿಮಗೆ ಕೊಡುತ್ತೇನೆ” ಎಂದು ಹೇಳಿತು. ಆಗ ಕೃಷ್ಣನು “ನನಗೆ ನಿನ್ನ ಜೀವ ಬೇಕು. ನಾನು ನಿನ್ನನ್ನು ಕತ್ತರಿಸಬೇಕಾಗಿದೆ ” ಎಂದು ಹೇಳಿದನು.

ಸ್ವಲ್ಪ ಸಮಯ ಬಿದಿರು ಯೋಚನೆ ಮಾಡಿ ನಂತರ ಹೇಳಿತು “ನಿನಗೆ ಬೇರೆ ಯಾವುದೇ ಆಯ್ಕೆ ಇಲ್ಲವೇ ? . ನಿಮಗೆ ಬೇರೆ ಯಾವುದೇ ಮಾರ್ಗಗಳಿಲ್ಲವೇ? ”
“ಇಲ್ಲ, ಬೇರೆ ಯಾವುದೇ ಮಾರ್ಗವಿಲ್ಲ” ಎಂದು ಕೃಷ್ಣ ಉತ್ತರಿಸಿದನು.
” ಹಾಗದರೆ ಸರಿ, ನೀವು ನನ್ನ ಜೀವವನ್ನು ತೆಗೆದುಕೊಳ್ಳಬಹುದು ” ಎಂದು ಹೇಳಿ ಬಿದಿರು ತನ್ನ ಜೀವವನ್ನು ಕೃಷ್ಣನಿಗೆ ಸಮರ್ಪಿಸಿಕೊಂಡಿತು.
ಕೃಷ್ಣನು ಬಿದಿರನ್ನು ಕತ್ತರಿಸಿ ಅದರಲ್ಲಿ ರಂಧ್ರಗಳನ್ನು ಮಾಡಿದನು ಮತ್ತು ಪ್ರತಿ ಬಾರಿಯೂ ರಂಧ್ರಗಳನ್ನು ಕೆತ್ತುವಾಗಲು , ಬಿದಿರು ನೋವಿನಿಂದ ಕೂಗುತ್ತಿತ್ತ …
ಕೃಷ್ಣನು ಅದರಲ್ಲಿ ಒಂದು ಸುಂದರವಾದ ಕೊಳಲನ್ನು ಮಾಡಿದನು ಮತ್ತು ಈ ಕೊಳಲು ಸಾರ್ವಕಾಲಿಕವಾಗಿ ಅವನ ಜೊತೆಯಲ್ಲೇ ಇತ್ತು.

  ಅಪ್ಪ ಮಗನ ಜಗಳದ ಕಥೆ

ಇದು ದೇವರಿಗೆ ಸಂಪೂರ್ಣ ಶರಣಾಗತಿಯಾಗುವುದು , ದೇವರು ಬಯಸಿದಂತೆ ಒಪ್ಪಿ ನಡೆಯಿರಿ , ಅವನು ನಿಮ್ಮೊಂದಿಗೆ ಏನೇನು ಬಯಸುತ್ತಾನೋ ಅದರಂತೆ ನಡೆಯಿರಿ.
ಸಂಪೂರ್ಣವಾಗಿ ಅವನನ್ನು ನಂಬಿ ಮತ್ತು ಅವನ ಮೇಲೆ ನಂಬಿಕೆ ಇಡಿ ಮತ್ತು ಯಾವಾಗಲೂ ತಿಳಿಯಿರಿ .. ನೀವು ಅವನ ಕೈಯಲ್ಲಿದ್ದರೆ , ಏನು ತಪ್ಪು ನಡೆಯುವುದಿಲ್ಲವೆಂದು.
ಇದೇ ಶರಣಾಗತಿ.

Leave a Reply

Your email address will not be published. Required fields are marked *

Translate »