ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶನಿ ದೇವರನ್ನು ಗೆದ್ದ ಗಣಪತಿಯ ರೋಚಕ ಕಥೆ

*ಶನಿ ದೇವರನ್ನು ಗೆದ್ದ ಗಣಪತಿಯ ರೋಚಕ ಕಥೆ* ಸಗಣಿ ಮತ್ತು ಗರಿಕೆಯ ಮಹತ್ವ

*ಎಲ್ಲರ ರಾಶಿಗೆ ಪ್ರವೇಶ ಪಡೆದು*
*ಕಷ್ಟ ಸುಖಗಳನ್ನು  ನೀಡಿದ ಶನಿದೇವರಿಗೆ ಗಣೇಶನನ್ನು ಕಾಡಲು ಸಾಧ್ಯವಾಗಲಿಲ್ಲ ಏಕೆ.?*

*ಓದಿ ಈ ಪೌರಾಣಿಕ ಕಥೆ.*

*🔸ಒಮ್ಮೆ ವಿಹಾರಕ್ಕೆಂದು ಹೊರಟ ಗಣೇಶನಿಗೆ ಆಕಸ್ಮಿಕವಾಗಿ ಎದುರಾಗಿದ್ದು ಈ ಶನಿರಾಜ. ಮುದ್ದು ಮುದ್ದಾಗಿ ಕಾಣುತ್ತಿದ್ದ ಗಣಪತಿಯನ್ನು ನೋಡಿದ ಶನಿರಾಜನಿಗೆ ಗಣಪತಿಯನ್ನೊಮ್ಮೆ ಹಿಡಿಯುವ ಮನಸ್ಸಾಗಿ ಗಣಪತಿಯ ಕಡೆ ಹೊರಟ.* *ಶನಿದೇವರು ತನ್ನ ಕಡೆಯೆ ಬರುತ್ತಿರುವುದನ್ನು ನೋಡಿ ನಡುಗಿಹೋದ ಗಣೇಶ.* * *ಈ ಮಹಾನುಭಾವ ನನ್ನನ್ನೇನಾದರೂ ಹಿಡಿದು ಬಿಟ್ಟರೆ ಏನು ಗತಿ ಎಂದು ಚಿಂತಿಸಿದ.* *ಈತನಿಗೆ ಸಿಗಲೇಬಾರದು ಎಂದು ಕೊಂಡು ಅಲ್ಲಿಂದ ಓಡತೊಡಗಿದ.*

  ವಿಷ್ಣು ಸಹಸ್ರನಾಮ ಹುಟ್ಟಿದ ಕಥೆ - ಭೀಷ್ಮಾಚಾರ್ಯರು ದೇಹತ್ಯಾಗ ಮಾಡಿದ ದಿನ

*🔸ಹಾಗೆ ಓಡುತ್ತಿದ್ದ ಗಣೇಶನನ್ನು ಕೂಗಿದ ಶನಿದೇವರು ನಿಲ್ಲುವಂತೆ ಹೇಳಿ ನಾನೇನು ನಿನಗೆ ತೊಂದರೆ ಮಾಡುವುದಿಲ್ಲ, ಒಂದೇ ಒಂದು ಕ್ಷಣ ನಿನ್ನ ಜನ್ಮರಾಶಿ ಪ್ರವೇಶಿಸಿ ಹೋರಟು ಹೋಗುತ್ತೆನೆ ಎಂದನು. ಇದಕೊಪ್ಪದ ಗಣೇಶ ನಿನ್ನ ಸಹವಾಸವೇ ಬೇಡ ಎಂದು ಹೇಳಿ ಮತ್ತೆ ಓಡತೊಡಗಿದ. ಗಣೇಶನ ಮಾತಿನಿಂದ ಕೆರಳಿದ ಶನಿದೇವರು ಏನಾದಾರಾಗಲಿ ಈತನನ್ನು ಹಿಡಿಯದೆ ಬಿಡುವುದಿಲ್ಲವೆಂದು ತಿರ್ಮಾನಿಸಿ ಗಣೇಶನ ಬೆನ್ನುಹತ್ತಿದ.*

*🔸ಗಣೇಶ ಇನ್ನೂ ಜೋರಾಗಿ ಓಡತೊಡಗಿದ. ಅದರೂ ನಮ್ಮ ಡೊಳ್ಳುಹೊಟ್ಟೆಯ ಗಣೇಶನಿಗೆ ಓಡಲು ಕಷ್ಟವಾಗಿ ನಿಂತುಬಿಟ್ಟ.* *ಇದನ್ನು ಕಂಡು ಖುಷಿಗೊಂಡ ಶನಿದೇವರು ನಗುತ್ತಲೆ ಗಣೇಶನ ಕಡೆ ಬರತೊಡಗಿದರು.* *ಆಗ ನಮ್ಮ ಬುದ್ಧಿವಂತ ಗಣಪ, ಅಲ್ಲಿಯೆ ಪಕ್ಕದಲ್ಲಿ ಮೆಯ್ಯುತ್ತಿದ್ದ ಹಸುವನ್ನು ಕಂಡು ಅದರ ಮುಂದೆ ಹುಲ್ಲಿನ ಗರಿಕೆಯಾಗಿಬಿಟ್ಟ.*

  ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 6 ಪುರಾಣ ಪ್ರಸಿದ್ಧ ಗಣೇಶ ದೇವಾಲಯಗಳು

*🔸ಆ ಗರಿಕೆಯನ್ನು ಹಸು ತಿಂದು ಬಿಟ್ಟಿತು. ಇದನ್ನು ಗಮನಿಸಿದ ಶನಿದೇವರು ಸಹ ಹಸುವಿನ ಮುಂದೆ ಗರಿಕೆಯಾದಾಗ ಹಸು ಅದನ್ನೂ ತಿಂದುಬಿಟ್ಟಿತು. ಈಗ ಗಣೇಶನಿಗೆ ಫಜಿತಿಗಿಟ್ಟುಕೊಂಡಿತು.* *ಎತ್ತಹೋಗುವುದೆಂದು ತಿಳಿಯದೆ “ಹಸುವಿನ ಸಗಣಿಯ ರೂಪದಲ್ಲಿ ಆಚೆ ಬಂದ”. ಗಣೇಶ ಹಸುವಿನ ಸಗಣಿಯಜೊತೆ ಹೊರ ಹೋಗಿದ್ದನ್ನು ನೋಡಿದ ಶನಿದೇವರು ಅಸಹ್ಯಪಟ್ಟುಕೊಂಡು ಹೊರಟು ಹೋದರು.*

*🔸ಅಂದಿನಿಂದ ಯಾವುದೇ ಶುಭ ಕಾರ್ಯಮಾಡುವಾಗ ಶನಿಯ ವಕ್ರದೃಷ್ಟಿ ಬೀಳದಿರಲೆಂದು, ಸಗಣಿ ಮತ್ತು ಗರಿಕೆಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆ ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸುತ್ತಾರೆ.*

  ಕೌಶಿಕ ಮುನಿ ಮತ್ತು ಅಹಂಕಾರದ ಕಥೆ

*🔸ಆದ್ದರಿಂದ ಎಲ್ಲಾ ಶುಭ ಕಾರ್ಯಗಳಲ್ಲಿ ಗಣೇಶನ ಪ್ರತಿಮೆ ಅಥವಾ ಪ್ರಥಮ ಪೂಜೆ ಗಣಪನಿಗೇ ಸಲ್ಲಿಸುತ್ತಾರೆ. ಇದು ಸಗಣಿಯ ಮಹತ್ವ ತಿಳಿಸುವ ಒಂದು ಪೌರಾಣಿಕ ಕಥೆ.*

Leave a Reply

Your email address will not be published. Required fields are marked *

Translate »