ತೊಂಡೆಕಾಯಿಯಲ್ಲಿದೆ ಬಾಯಿ ಹುಣ್ಣು, ಕಣ್ಣು ಹುರಿ, ಕಫದ ಸಮಸ್ಯೆ ಮುಂತಾದ ಬೇನೆಗಳನ್ನು ನಿವಾರಿಸುವ ಗುಣ.! thondekai health benefits
ತೊಂಡೆಕಾಯಿಯಲ್ಲಿದೆ ಬಾಯಿ ಹುಣ್ಣು, ಕಣ್ಣು ಹುರಿ, ಕಫದ ಸಮಸ್ಯೆ ಮುಂತಾದ ಬೇನೆಗಳನ್ನು ನಿವಾರಿಸುವ ಗುಣ.!
ಸಾಮಾನ್ಯವಾಗಿ ತೊಂಡೆಕಾಯಿಯ ಪರಿಚಯ ಎಲ್ಲರಿಗು ಇದ್ದೆ ಇರುತ್ತದೆ, ನೈಸರ್ಗಿಕವಾಗಿ ಸಿಗುವಂತ ಈ ತೊಂಡೆಕಾಯಿ ಮನುಷ್ಯನ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿದೆ.
ಇದರಲ್ಲಿರುವ ವಿಶೇಷತೆ ಏನು.?
ವಿಟಮಿನ್ ‘ಸಿ’ ಮತ್ತು ಬೀಟಾ ಕೆರೋಟಿನ್ ಅಂಶ ಹೊಂದಿರುವಂತ ತೊಂಡೆಕಾಯಿ ವಿಟಮಿನ್ ‘ಬಿ2’, ವಿಟಮಿನ್ ‘ಬಿ 3’ ಹೇರಳವಾಗಿ ಹೊಂದಿದೆ.
ಇದರ ಉಪಯೋಗಗಳೇನು.?
ಪೋಷಕಾಂಶಗಳನ್ನು ಹೊಂದಿರುವಂತ ತೊಂಡೆಕಾಯಿ ಮನುಷ್ಯನ ದೇಹಕ್ಕೆ ಹೆಚ್ಚು ಸಹಕಾರಿಯಾಗಿದೆ, ಹಾಗು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ.
ಬಾಯಿ ಹುಣ್ಣು ನಿವಾರಿಸುತ್ತದೆ:
ನೈಸರ್ಗಿಕವಾಗಿ ಸಿಗುವಂತ ಈ ಎಳೆಯ ತೊಂಡೆ ಕಾಯಿಯನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
ಕಪಧ ಸಮಸ್ಯೆ ನಿವಾರಣೆ :
ತೊಂಡೆಕಾಯಿ ಸೇವನೆಯಿಂದ ಕಫದ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ.
ಕಣ್ಣು ಹುರಿ ನಿವಾರಣೆ:
ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ನೀರಿಗೆ ಬೆರಸಿ ಅದನ್ನು ಒಂದು ಲೋಟ ರಸ ಆಗೋವರೆಗೂ ಕುದಿಸಿ, ತಯಾರಿಸಿದ ಆ ರಸವನ್ನು ದಿನಕ್ಕೆ 2-3 ಬಾರಿ ಸೇವನೆ ಮಾಡಿದ್ರೆ ಪರಿಹಾರ ಕಂಡುಕೊಳ್ಳಬಹುದು.
ಮಲಬದ್ಧತೆಯ ಜೊತೆಗೆ ಮಲ ವಿಸರ್ಜನೆಗೆ ಸಂಬಂದಿಸಿದ ಯಾವುದೇ ಸಮಸ್ಯೆ ಇದ್ರೆ ತೊಂಡೆಕಾಯಿಯಲ್ಲಿರುವ ಬೀಜಗಳು ನಿವಾರಣೆಯನ್ನು ಮಾಡುತ್ತವೆ.