ಮೇಷಶೃಂಗೀ (ಮಧುನಾಶಿನಿ)
ಮಧುನಾಸಿನಿ,ಕಡಸಿಗೆ ಸೊಪ್ಪು, ಪೊಡಪತ್ರಿ, ಪುಟ್ಟಭದ್ರ, ಗುಣಮಾರ,ಅಜಶೃಂಗಿ, ಸರ್ಪದಾರಿಷ್ಟಿಕಂ, ಗ್ರಿಹಿದ್ರುಮ, ಸಿರಿಕುರುಂಜಾಲ್ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಕಾಡುಗಳಲ್ಲಿ,ಕೆರೆಕಟ್ಟೆಗಳ ಮೇಲೆ, ರಸ್ತೆಗಳ ಪಕ್ಕ ಬೀಳು ಭೂಮಿ, ಹೊಲಗಳ ಬೇಲಿಗಳ ಮೇಲೆ ಗಿಡ ಮರಗಳಿಗೆ ಬಳ್ಳಿಯಂತೆ ಹಬ್ಬಿ ಬೆಳೆಯುತ್ತೆ.
ಮಧುನಾಶಿನಿ ಗಿಡದ ಎಲೆ, ಹೂವು,ಕಾಯಿ, ಕಾಂಡ, ಬೇರು ಸಹಿತ ಎಲ್ಲವು ಔಷಧೀಯ ಗುಣಗಳಿಂದ ಕೂಡಿದೆ.ನಮ್ಮ ಪೂರ್ವಿಕರು ಬಹಳ ಹಿಂದಿನಿಂದಲೂ ಈ ಗಿಡವನ್ನು ಔಷಧೀಯವಾಗಿ ಬಳಸುತ್ತಾ ಬಂದಿದ್ದಾರೆ.ಇದು ಮಧುಮೇಹ ಅತೋಟಿಗೆ ತರಲು ರಾಮಬಾಣದಂತೆ ಕೆಲಸ ಮಾಡುತ್ತೆ.
ಮಧುನಾಶಿನಿಯ ಎರಡು ಮೂರು ಎಲೆಗಳನ್ನು ಜಗೆದು ಉಗಳಿ ನಂತರ ಬಾಯಿಗೆ ಬೆಲ್ಲ, ಸಕ್ಕರೆ, ಇತರೆ ಯಾವುದೇ ಸಿಹಿ ಪದಾರ್ಥಗಳನ್ನು ಹಾಕಿಕೊಂಡರೂ 1-2 ಗಂಟೆ ಸಿಹಿ ರುಚಿ ಗೊತ್ತಾಗುವುದಿಲ್ಲ.ಅಷ್ಟೊಂದು ಶಕ್ತಿ ದಾಯಕ ಈ ಸಸ್ಯ.ಇದನ್ನು "sweet destroyer" ಎಂತಲೂ ಕರೆಯುತ್ತಾರೆ.
ಮಧುನಾಶಿನಿ ಎಲೆಗಳನ್ನು ತಂದು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ, ವಸ್ತ್ರಗಾಲಿತ ಚೂರ್ಣ ಮಾಡಿಟ್ಟುಕೊಂಡು,ಉಗರು ಬೆಚ್ಚಗಿನ 1/ 2 ಲೋಟ ನೀರಿಗೆ 1 ಚಮಚ ಚೂರ್ಣ ಕಲಸಿ, ಊಟಕ್ಕೆ 1/2 ಗಂಟೆ ಮೊದಲು ಕುಡಿಯಬೇಕು.ಬೆಳಿಗ್ಗೆ-ಸಂಜೆ ತೆಗೆದುಕೊಳ್ಳುತ್ತಾ ಬಂದರೆ ಮಧುಮೇಹ ಶೀಘ್ರ ನಿಯಂತ್ರಣಕ್ಕೆ ಬರುತ್ತೆ.
ಮಧುನಾಶಿನಿ ಗಿಡದ ಎಲೆಗಳ ಚೂರ್ಣ 100 ಗ್ರಾಂ, ನೇರಳೆ ಬೀಜದ ಚೂರ್ಣ 100 ಗ್ರಾಂ,ಮೆಂತ್ಯದ ಕಾಳು ಚೂರ್ಣ 100 ಗ್ರಾಂ, ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಗಾಜಿನ ಸೀಸೆಯಲ್ಲಿ ಭದ್ರ ಪಡಿಸಿಟ್ಟುಕೊಂಡು, ಊಟಕ್ಕೆ 1/2 ಗಂಟೆ ಮೊದಲು 1/2 ರಿಂದ 1 ಚಮಚ ಚೂರ್ಣವನ್ನು 1/2 ಲೋಟ ಉಗರು ಬೆಚ್ಚಗಿನ ನೀರಲ್ಲಿ ಕಲಸಿ ಕುಡಿಯುತ್ತಿದ್ದರೆ, ಮಧುಮೇಹ ಅತೋಟಿಗೆ ಬರುತ್ತೆ.
ಮಧುನಾಶಿನಿ ಎಲೆಗಳು ಅಥವಾ ಬೇರಿನಿಂದ ಕಷಾಯ ಮಾಡಿ ಸೇವಿಸಿದರು ಮಧುಮೇಹ ನಿಯಂತ್ರಣಕ್ಕೆ ಬರುತ್ತೆ.
ಮಧುನಾಶಿನಿ ಎಲೆಗಳ ಅಥವಾ ಬೇರಿನ ಚೂರ್ಣ 1ಚಮಚಕ್ಕೆ 1 ಚಮಚ ಚಮಚ ಜೇನುತುಪ್ಪ ರಂಗಳಿಸಿ ನೆಕ್ಕಿದರೆ, ಜ್ವರ, ಕೆಮ್ಮು, ಕಫ ವಾಸಿಯಾಗುತ್ತೆ.(ಈಗೆ ಮೂರ್ನಾಲ್ಕು ದಿನ ಮಾಡಬೇಕು)
ಇದರ ಮೂರ್ನಾಲ್ಕು ಎಲೆಗಳ ಜೊತೆಗೆ ನಾಲ್ಕು ಕಾಳು ಮೆಣಸು ಸೇರಿಸಿ ಜಗೆದು ತಿಂದರೆ,ಚೇಳು, ಜೇನು, ಕ್ರಿಮಿಗಳು ಕಚ್ಚಿದ ವಿಷ ನಿವಾರಣೆಯಾಗುತ್ತೆ.
ಎಲೆಗಳಿಗೆ ಚಿಟಿಕೆ ಅರಸಿಣ ಸೇರಿಸಿ ಅರೆದು ಹುಣ್ಣು, ಬಾವು, ಗಾಯದ ಮೇಲೆ ಲೇಪನ ಮಾಡುವುದರಿಂದ
ನೋವು ಶಮನವಾಗಿ,ಬೇಗ ವಾಸಿಯಾಗುತ್ತೆ.
ಮಧುನಾಶಿನಿ ಎಲೆಗಳನ್ನು ಹೆಸರುಬೇಳೆ ಜೊತೆಗೆ ಬೇಯಿಸಿ ಅರೆದು ಅದಕ್ಕೆ ಹಸುವಿನ ತುಪ್ಪ ಸೇರಿಸಿ ತಿಂದರೆ ಬಾಯಿ, ಕರಳು, ಜಠರದ ಹುಣ್ಣು ಗುಣವಾಗುತ್ತೆ.ಹೊಟ್ಟೆಯಲ್ಲಿನ ಹುಳುಗಳು ಸಾಯುತ್ತವೆ.
ಇದರ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ವಾಸಿಯಾಗಿ, ಬಾಯಿ ದುರ್ವಾಸನೆ ದೂರವಾಗುತ್ತೆ.
ಒಂದು ಚಮಚ ಮಧುನಾಶಿನಿ ಚೂರ್ಣಕ್ಕೆ ಒಂದು ಚಮಚ ಅತಿಮಧುರ ಚೂರ್ಣ ಚಿಟಿಕೆ ಅರಸಿಣ ಪುಡಿ ಸೇರಿಸಿ ಕಷಾಯ ಮಾಡಿ ಕುಡಿಯುತ್ತಿದ್ದರೆ ಜ್ವರ, ನೆಗಡಿ, ಕೆಮ್ಮು, ಗಂಟಲ ನೋವು ಗುಣವಾಗುತ್ತೆ.
ಮಧುನಾಶನಿಯ ಔಷಧೀಯ ಗುಣಗಳು ಅಪಾರ.