ಕಾಮಾಲೆ, ಚರ್ಮ ರೋಗ, ಹೀಗೆ ಸರ್ವರೋಗಗಳಿಗೂ ರಾಮಬಾಣವಾಗಿದೆ ಈ ಮೂಡುಗಟ್ಟಿನ ಗಿಡ ಇದು ನಿಮಗೆ ಗೊತ್ತಾ….
ಈ ಮೂಲಿಕೆಯು ಭತ್ತ ಕೊಯ್ಲಾದ ಮೇಲೆ ಗದ್ದೆಯಲ್ಲಿ ಕಳೆಯಾಗಿ ಬೆಳೆಯುತ್ತದೆ.ಇದು ಕೆರೆಯಂಗಳದಲ್ಲಿ, ಕಾಲುವೆಯಂಚಿನಲಿ ಮತ್ತು ಒದ್ದೆ ಭೂಮಿಯಲ್ಲಿ ಹುಲುಸಾಗಿ ಬೆಳೆಯುತ್ತದೆ.ಮೂಲಿಕೆಯ ಮೇಲೆ ಗ್ರಂಥಿ ರೋಮಗಳಿರುವುದರಿಂದ ಮುಟ್ಟಲು ಅಂಟು ಅಂಟಾಗಿರುತ್ತದೆ.ಜೊತೆಗೆ ವಾಸನೆಯೂ ಇರುತ್ತದೆ.ಕಾಂಡವು ಹರಡಿಕೊಂಡು ಬೆಳೆಯುತ್ತದೆ.ಚಿಕ್ಕ ತೊಟ್ಟಿನ ಎಲೆಗಳು ಅಂಡಾಕಾರವಾಗಿರುತ್ತವೆ ಮತ್ತು ಕಾಂಡದ ಮೇಲೆ ಪರ್ಯಾಯವಾಗಿ ಜೋಡಣೆಯಾಗಿರುತ್ತವೆ.ಎಲೆಗಳ ಅಂಚು ಹಲ್ಲಿನಂತೆ ಇಲ್ಲವೆ ಗರಗಸದ ಹಲ್ಲಿನಂತಿರುತ್ತದೆ.ಎಲೆಯ ಕಂಕುಳದಲ್ಲಿ ಅಥವಾ ಅಭಿಮುಖವಾಗಿ ಹೂವಿನ ಚಂಡಿರುತ್ತದೆ.ಹೂವಿನ ಚಂಡಿನಲ್ಲಿ ನೀಲಿ ಮಿಶ್ರಿತ ಕೆಂಪು ಹೂಗಳಿರುತ್ತವೆ.
ಉಪಯೋಗಗಳು:
ಬೇರಿನ ತೊಗಟೆಯನ್ನು ಅರೆದು ಮಜ್ಜಿಗೆಯೊಡನೆ ಕುಡಿಸುವುದರಿಂದ ರಕ್ತ ಮೂಲವ್ಯಾಧಿ ಗುಣವಾಗುತ್ತದೆ.ಇದೇ ಗಂಧವನ್ನು ಮೂಲವ್ಯಾಧಿಯ ಮೊಳಕೆಗಳ ಮೇಲೆ ಹೊರಲೇಪನವಾಗಿ ಸಹ ಉಪಯೋಗಿಸಬಹುದು.
ಬೇರನ್ನು ನೀರಿನೊಡನೆ ಚೆನ್ನಾಗಿ ಅರೆದು ರಸ ಹಿಂಡಿಕೊಳ್ಳಬೇಕು ಈ ರಸದ ೧/೨ ಭಾಗದಷ್ಟು ಎಳ್ಳೆಣ್ಣೆ ಸೇರಿಸಿ ಕಾಯಿಸಿ ಎಣ್ಣೆ ಉಳಿಸಿಕೊಂಡು ಸಂಗ್ರಹಿಸಿಟ್ಟುಕೊಳ್ಳಬೇಕು.೨ಡ್ರಾಂ (೧೦ ಮಿ.ಲೀ.ನಷ್ಟು) ಎಣ್ಣೆಯನ್ನು ಬರಿಹೊಟ್ಟೆಗೆ ಪ್ರತಿದಿವಸ ಬೆಳಗ್ಗೆ ೪೧ ದಿವಸ ಸೇವಿಸುವುದರಿಂದ ಪುರಷತ್ವ ವೃದ್ಧಿಯಾಗುತ್ತದೆ.
ಬೇರನ್ನು ಒಣಗಿಸಿ ಚೂರ್ಣ ಮಾಡಿಕೊಂಡು ದಿವಸಕ್ಕೆ ಸುಮಾರು ೨-೫ಗ್ರಾಂನಷ್ಟು ಸೇವಿಸುವುದರಿಂದ ಹೊಟ್ಟೆನೋವು ವಾಸಿಯಾಗುತ್ತದೆ.ಹೊಟ್ಟೆಯಲ್ಲಿ ಜಂತುಹುಳುಗಳಿದ್ದರೆ ಬಿದ್ದುಹೋಗುತ್ತವೆ.ಬೀಜವನ್ನು ಸೇವಿಸಿದರೂ ಇದೇ ಗುಣ ಕಂಡುಬರುತ್ತದೆ.
ಪಾತಾಳಯಂತ್ರದ ಸಹಾಯದಿಂದ ಮೂಡುಗಟ್ಟಿನ ಬೇರಿನ ತೈಲವನ್ನು ತಯಾರಿಸಿಕೊಂಡು ಕೆಲವು ಕಾಲ ಸೇವಿಸುವುದರಿಂದ ಬಲವೀರ್ಯ ವೃದ್ಧಿಯಾಗುತ್ತದೆ.
ಮೂಡುಗಟ್ಟಿನ ಗಿಡದ ಸಮೂಲದ ಚೂರ್ಣವನ್ನು ಜೇನುತುಪ್ಪ ಮತ್ತು ತುಪ್ಪದೊಡನೆ ಸೇವಿಸುವುದರಿಂದ ಅಂಗುಲಿವಾತ ಗುಣವಾಗುತ್ತದೆ.
ಮೂಡುಗಟ್ತಿನ ಗಿಡದ ಸಮೂಲದ ಚೂರ್ಣವನ್ನು ಹಾಲಿನಲ್ಲಿ ಸೇವಿಸಿದರೆ ಮಂದದೃಷ್ಟಿ ನಿವಾರಣೆಯಾಗುತ್ತದೆ.
ಗಿಡದ ಸ್ವರಸ ಸೇವನೆಯಿಂದ ಕಾಮಾಲೆ,ಅಜೀರ್ಣ,ಹೊಟ್ತೆನೋವು,ಪಿತ್ತಕೋಶ ಮತ್ತು ಮೇದೋಜೀರಕ ಗ್ರಂಥಿಗಳ ಊತ ಗುಣವಾಗುತ್ತದೆ.
ಗಿಡದ ಸಮೂಲವನ್ನು ನೆರಳಿನಲ್ಲಿ ಒಣಗಿಸಿ ಚೂರ್ಣಮಾಡಿಟ್ಟುಕೊಂಡು ಹಸುವಿನ ಹಾಲಿನೊಡನೆ ಸುಮಾರು ೧೦ಗ್ರಾಂನಷ್ಟು ಸೇವಿಸುವುದರಿಂದ ಸರ್ವರೋಗಗಳು ಗುಣವಾಗುತ್ತವೆ.
ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಚೂರ್ಣಮಾಡಿ ೨೦ಗ್ರಾಂನಷ್ಟು ಚೂರ್ಣವನ್ನು ದಿವಸಕ್ಕೆರೆಡು ಬಾರಿ ಸೇವಿಸುವುದರಿಂದ ಚರ್ಮದ ಕಾಯಿಲೆಗಳು ವಾಸಿಯಾಗುತ್ತವೆ.ಜೊತೆಗೆ ನರಗಳಿಗೆ ಬಲವುಂಟಾಗುತ್ತದೆ.
ಎಲೆಯ ರಸಕ್ಕೆ ಕರಿ ಮೆಣಸಿನಪುಡಿ ಸೇರಿಸಿ ಸೇವಿಸುವುದರಿಂದ ಸೂರ್ಯಾವರ್ತ ತಲೆನೋವು (Hemicrania-day time headache) ಮತ್ತು ಅಪಸ್ಮಾರ ಗುಣವಾಗುತ್ತದೆ.
ಹೂವಿನ ಚೆಂಡನ್ನು ಸೇವಿಸುವುದರಿಂದ ರಕ್ತ ಶುದ್ಧಿಯಾಗಿತ್ತದೆ ಮತ್ತು ಚರ್ಮವ್ಯಾಧಿಗಳು ದೂರವಾಗುತ್ತವೆ.